Toxic Movie: ಇಂದಿನಿಂದ ʼಟಾಕ್ಸಿಕ್ʼ ಶೂಟಿಂಗ್ ಆರಂಭ; ʼThe journey beginsʼ ಎಂದ ಯಶ್
Team Udayavani, Aug 8, 2024, 10:21 AM IST
ಬೆಂಗಳೂರು: ಇಂದಿನಿಂದ ರಾಕಿಂಗ್ ಸ್ಟಾರ್ ಯಶ್(Actor Yash) ಅವರ ಪ್ಯಾನ್ ಇಂಡಿಯಾ ಪ್ರಾಜೆಕ್ಟ್ ʼಟಾಕ್ಸಿಕ್ʼ (Toxic Movie) ಶೂಟಿಂಗ್ ಆರಂಭಗೊಳ್ಳಲಿದೆ.
ಇತ್ತೀಚೆಗೆ ಸಿನಿಮಾ ಶೂಟಿಂಗ್ ಆರಂಭಕ್ಕೂ ಮುನ್ನ ಯಶ್ ತಮ್ಮ ಕುಟುಂಬದೊಂದಿಗೆ ಧರ್ಮಸ್ಥಳಕ್ಕೆ ಭೇಟಿ ನೀಡಿ ದೇವರ ದರ್ಶನ ಪಡೆದಿದ್ದರು. ಇವರ ಜೊತೆಗೆ “ಟಾಕ್ಸಿಕ್’ ನಿರ್ಮಾಪಕರಾದ ವೆಂಕಟ್ ಗೌಡ(Venkat Gowda) ಕೂಡಾ ಜೊತೆಗಿದ್ದರು.
ಇದನ್ನೂ ಓದಿ: Naga Chaitanya-Sobhita Dhulipala: ಇಂದು ಪ್ರೇಯಸಿ ಜತೆ ಸಮಂತಾ ಮಾಜಿ ಪತಿ ಎಂಗೇಜ್‌ಮೆಂಟ್?
ಗುರುವಾರ (ಆ.8ರಂದು) ಟಾಕ್ಸಿಕ್ ಶೂಟಿಂಗ್ ಆರಂಭವಾಗಲಿದ್ದು, ಯಶ್ ನಿರ್ಮಾಪಕ ವೆಂಕಟ್ ಗೌಡ ಅವರೊಂದಿಗಿನ ಫೋಟೋವನ್ನು ಹಂಚಿಕೊಂಡು ʼಜರ್ನಿ ಬಿಗೆನ್ಸ್ʼ ಎಂದು ಬರೆದುಕೊಂಡಿದ್ದಾರೆ.
ಅವರ ಫೋಟೋಗೆ ಅನೇಕರು ಮೆಚ್ಚುಗೆ ಕೊಟ್ಟಿದ್ದು, ʼಟಾಕ್ಸಿಕ್ʼ ಗೆ ಶುಭಕೋರಿದ್ದಾರೆ.
ಲಕ್ಕಿ ನಂಬರ್ 8 ಮೇಲೆ ಕಣ್ಣು:
ಅಂದಹಾಗೆ, ಯಶ್ ಆಗಸ್ಟ್ 8ರಂದು ಚಿತ್ರೀಕರಣ ಆರಂಭಿಸಲು ಕಾರಣ 8 ಅವರಿಗೆ ಲಕ್ಕಿ ನಂಬರ್ ಅಂತೆ. ಈ ತರಹದ ಒಂದು ಸುದ್ದಿ ಓಡಾಡುತ್ತಿದೆ. ಯಶ್ ಅವರ ಹುಟ್ಟುಹಬ್ಬ ಜನವರಿ 8. ಇನ್ನು “ಟಾಕ್ಸಿಕ್’ ಸಿನಿಮಾದ ಅನೌನ್ಸ್‌ಮೆಂಟ್ ಅನ್ನು ಕೂಡಾ ಯಶ್ ಡಿಸೆಂಬರ್ 8ರಂದು ಮಾಡಿದ್ದರು. ಹೀಗಾಗಿ ನಂಬರ್ 8ರ ಮೇಲೆ ಯಶ್‌ಗೆ ಒಲವು ಹೆಚ್ಚಿದೆ ಎನ್ನಲಾಗಿದೆ.
View this post on Instagram
ಟಾಕ್ಸಿಕ್ ಸಿನಿಮಾವನ್ನು ಮಲಯಾಳಂನ ಗೀತು ಮೋಹನ್‌ದಾಸ್ (Geethu Mohandas) ನಿರ್ದೇಶನ ಮಾಡುತ್ತಿದ್ದಾರೆ. ಸಿನಿಮಾವನ್ನು ಕೆವಿಎನ್ ಪ್ರೊಡಕ್ಷನ್ಸ್ ನಿರ್ಮಾಣ ಮಾಡುತ್ತಿದೆ. ಸಿನಿಮಾಕ್ಕಾಗಿ ಕೆಲವು ಹಾಲಿವುಡ್ ತಂತ್ರಜ್ಞರು ಕೆಲಸ ಮಾಡುತ್ತಿದ್ದಾರೆ. ಇನ್ನು, ಈ ಸಿನಿಮಾದಲ್ಲಿ ನಯನಾತಾರಾ ಕೂಡಾ ಪ್ರಮುಖ ಪಾತ್ರ ಮಾಡುತ್ತಿದ್ದಾರೆ ಎನ್ನಲಾಗಿದೆ.
ಇನ್ನು ಸುಮಾರು ಎರಡೂವರೆ ವರ್ಷಗಳ ಬಳಿಕ ಯಶ್ ಸಿನಿಮಾ ಚಿತ್ರೀಕರಣವಾಗುತ್ತಿದೆ. ಈಗಾಗಲೇ ಬೆಂಗಳೂರು ಹೊರವಲಯದಲ್ಲಿ ಈ ಚಿತ್ರಕ್ಕಾಗಿ ಬೃಹತ್ ಸೆಟ್ ಹಾಕಲಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Gurunandan: ಡಿ.27ಕ್ಕೆ ತೆರೆಗೆ ಬರುತ್ತಿಲ್ಲ ʼರಾಜು ಜೇಮ್ಸ್ ಬಾಂಡ್’ ಚಿತ್ರ
Nodidavaru Enanthare Movie: ನವೀನ್ ಶಂಕರ್ ಚಿತ್ರದ ಟೀಸರ್ ಬಂತು
BBK11: ಸತತ ಮೂರನೇ ವಾರವೂ ಕಳಪೆ ಪಟ್ಟಿ: ಖುಷಿಯಿಂದಲೇ ಜೈಲು ಸೇರಿದ ಚೈತ್ರಾ
Dhruva-Prem: ಡಿ.24ಕ್ಕೆ ʼಕೆಡಿʼ ಶಿವ ಶಿವ ಹಾಡು ರಿಲೀಸ್
Dhruva Sarja: ಪ್ರತಿ ಸಿನಿಮಾವೂ ನನಗೆ ಹೊಸ ಪಾಠ…: ಧ್ರುವ ಹೇಳಿದ್ದೇನು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
ಕಲಬುರಗಿ- ಮೈಸೂರಲ್ಲಿ ನಿಮ್ಹಾನ್ಸ್ ಮತ್ತು ಡಯಾಬಿಟಾಲಜಿ ಘಟಕ ಸ್ಥಾಪನೆಗೆ ಕ್ರಮ: ಸಿಎಂ ಭರವಸೆ
Harapanahalli: ಪ್ರತಿಷ್ಠೆಯ ಕಣವಾದ ಬಿ90 ಸೊಸೈಟಿ ಚುನಾವಣೆ
Nagpur: ʼಪುಷ್ಪ-2ʼ ನೋಡುತ್ತಿದ್ದಾಗಲೇ ಥಿಯೇಟರ್‌ಗೆ ಪೊಲೀಸರ ಎಂಟ್ರಿ; ಸ್ಮಗ್ಲರ್ ಬಂಧನ
Hysteroscopy: ಸಂತಾನಹೀನತೆಯ ಪತ್ತೆ ಮತ್ತು ಚಿಕಿತ್ಸೆಗೆ ಒಂದು ಅತ್ಯವಶ್ಯಕ ಕಾರ್ಯವಿಧಾನ
ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಬಗ್ಗೆ ಅವಹೇಳನಕಾರಿ ಪದಬಳಕೆ: ಪ್ರಸಾದ್ ರಾಜ್ ಕಾಂಚನ್ ಖಂಡನೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.