ಆಟೋ, ಕ್ಯಾಬ್ ಚಾಲಕರಿಂದ ‘ರೂಪಾಯಿ’ ಚಿತ್ರದ ಟ್ರೇಲರ್ ರಿಲೀಸ್
Team Udayavani, Feb 2, 2023, 10:23 AM IST
ವಿಜಯ್ ಜಗದಾಲ್ ನಾಯಕನಾಗಿ ನಟಿಸಿ, ನಿರ್ದೇಶಿಸಿರುವ ಹಾಗೂ ವಿವಿಧ್ ಸಿನಿಮಾಸ್ ಲಾಂಛನದಲ್ಲಿ ಮಂಜುನಾಥ್ ಎಂ, ಹರೀಶ್ ಬಿ.ಕೆ ಹಾಗೂ ವಿನೋದ್ ಎನ್ ನಿರ್ಮಿಸಿರುವ “ರೂಪಾಯಿ” ಚಿತ್ರದ ಟ್ರೇಲರ್ ಆನಂದ್ ಆಡಿಯೋ ಯೂಟ್ಯೂಬ್ ಚಾನಲ್ ನಲ್ಲಿ ಬಿಡುಗಡೆಯಾಗಿದೆ. ಟ್ರೇಲರ್ ಗೆ ಎಲ್ಲಾ ಕಡೆ ಮೆಚ್ಚುಗೆ ಹರಿದು ಬರುತ್ತಿದೆ.
ಆಟೋ, ಕ್ಯಾಬ್ ಚಾಲಕರು, ವಿದ್ಯಾರ್ಥಿಗಳು ಹಾಗೂ ಹೋಟೆಲ್ ಮಾಲಿಗಳು ವೀರೇಶ ಚಿತ್ರಮಂದಿರದಲ್ಲಿ ಈ ಚಿತ್ರದ ಟ್ರೇಲರ್ ಬಿಡುಗಡೆ ಮಾಡಿದ್ದು ವಿಶೇಷ.
ಇದನ್ನೂ ಓದಿ:‘ವಿದ್ಯಾರ್ಥಿ ಭವನ್’ ವೈಟರ್ ಸಾಹಸಕ್ಕೆ ಆನಂದ್ ಮಹೀಂದ್ರ ಫುಲ್ ಖುಷ್; ಇಲ್ಲಿದೆ ವಿಡಿಯೋ
ಯಾವುದೇ ಚಿತ್ರ ಬಿಡುಗಡೆಯಾದರೂ ಮೊದಲ ಸಾಲಿನಲ್ಲಿ ನಿಂತು ಟಿಕೆಟ್ ಪಡೆದು ತಮ್ಮ ಅಭಿಮಾನವನ್ನು ಪ್ರದರ್ಶಿಸುವ ಆಟೋ, ಕ್ಯಾಬ್ ಚಾಲಕರು, ವಿದ್ಯಾರ್ಥಿಗಳು ಹಾಗೂ ಹೋಟೆಲ್ ಮಾಣಿಗಳಿಗೆ “ರೂಪಾಯಿ” ತಂಡ ವಿಶೇಷ ಧನ್ಯವಾದ ತಿಳಿಸಿದೆ.
ಕಾಮಿಡಿ, ಆಕ್ಷನ್, ಲವ್, ಸೆಂಟಿಮೆಂಟ್, ಥ್ರಿಲ್ಲಿಂಗ್ ಎಲ್ಲಾ ಕಮರ್ಷಿಯಲ್ ಹೀಗೆ ಎಲ್ಲಾ ಅಂಶಗಳನ್ನೊಳಗೊಂಡಿರುವ ‘ರೂಪಾಯಿ’ ಚಿತ್ರ ಫೆಬ್ರವರಿ 10ರಂದು ರಾಜ್ಯಾದ್ಯಂತ ಬಿಡುಗಡೆಯಾಗುತ್ತಿದೆ.
ವಿಜಯ್ ಜಗದಾಲ್, ಕೃಷಿ ತಾಪಂಡ, ಚಂದನ ರಾಘವೇಂದ್ರ, ಮೈತ್ರಿ ಜಗದೀಶ್, ರಾಮ್ ಚಂದನ್, ಪ್ರಮೋದ್ ಶೆಟ್ಟಿ, ಅನಿಲ್ ಕುಮಾರ್ ಮುಂತಾದವರು ತಾರಾಬಳಗದಲ್ಲಿದ್ದಾರೆ
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.