ಸಾರಿಗೆ ಸಚಿವರೀಗ ಮುಖ್ಯಮಂತ್ರಿಗಳು!
Team Udayavani, Oct 19, 2017, 6:12 PM IST
“ಇಲ್ಲಿ ಸಿಎಂ ಪಾತ್ರಕ್ಕೆ ವಿಶೇಷ ವ್ಯಕ್ತಿ ಜತೆ ಮಾತುಕತೆ ನಡೆಯುತ್ತಿದೆ …’ ಎಂದು “ಎಂಎಲ್ಎ’ ಚಿತ್ರದ ಪತ್ರಿಕಾಗೋಷ್ಠಿಯಲ್ಲಿ ಪ್ರಥಮ್ ಹೇಳಿದ್ದರು. ಈಗ ಆ ವಿಶೇಷ ವ್ಯಕ್ತಿ ಸಿಕ್ಕಿದ್ದಾರೆ. ಅವರು ಬೇರಾರು ಅಲ್ಲ, ಸಚಿವ ಹೆಚ್.ಎಂ.ರೇವಣ್ಣ. ಹೌದು, ಪ್ರಥಮ್ ನಟಿಸುತ್ತಿರುವ “ಎಂಎಲ್ಎ’ ಚಿತ್ರದಲ್ಲಿ ಸಚಿವ ಎಚ್.ಎಂ.ರೇವಣ್ಣ ಅವರು ಮುಖ್ಯಮಂತ್ರಿಯಾಗಿ ನಟಿಸಿದ್ದಾರೆ. ಅವರ ಭಾಗದ ಚಿತ್ರೀಕರಣವನ್ನು ಗುರುವಾರ ಚಿತ್ರೀಕರಿಸಿಕೊಳ್ಳಲಾಗಿದೆ.
ಈ ಮೂಲಕ ತಮ್ಮ ಸಿನಿಮಾದಲ್ಲಿ ದೊಡ್ಡ ವ್ಯಕ್ತಿಯೊಬ್ಬರು ನಟಿಸಲಿದ್ದಾರೆಂದು ಹಲವು ದಿನಗಳಿಂದ ಹೇಳಿಕೊಂಡು ಓಡಾಡುತ್ತಿದ್ದ ಪ್ರಥಮ್ ಆಸೆಯನ್ನು ರೇವಣ್ಣ ಈಡೇರಿಸಿದ್ದಾರೆ. ಪ್ರಸ್ತುತ ಹೆಚ್.ಎಂ.ರೇವಣ್ಣ ಅವರ ಸಾರಿಗೆ ಸಚಿವರಾಗಿದ್ದಾರೆ. ಅಂದಹಾಗೆ, ಹೆಚ್.ಎಂ.ರೇವಣ್ಣ ಅವರ ಪುತ್ರ ಅನೂಪ್ ಈಗಾಗಲೇ ನಾಯಕರಾಗಿ ಎಂಟ್ರಿಕೊಟ್ಟಿರೋದು ಗೊತ್ತೇ ಇದೆ.
ಈಗ ಮೊದಲ ಬಾರಿಗೆ ಹೆಚ್.ಎಂ.ರೇವಣ್ಣ ಕೂಡಾ ಸಿನಿಮಾದ ಅತಿಥಿ ಪಾತ್ರಕ್ಕಾಗಿ ಬಣ್ಣ ಹಚ್ಚಿದ್ದಾರೆ. ಪ್ರಥಮ್ಗೆ ರಾಜಕಾರಣಿಗಳ ಬಗ್ಗೆ ಏನೋ ಒಂದು ಕ್ರೇಜ್. ಈ ಹಿಂದೆ ತಮ್ಮ ಚಿತ್ರದ ಮುಹೂರ್ತಗಳಿಗೆ ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ ಹಾಗೂ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಕರೆಸಿದ್ದರು. ಈಗ ತಮ್ಮ ಸಿನಿಮಾದಲ್ಲಿ ರಾಜಕಾರಣಿಯೊಬ್ಬರು ಗೆಸ್ಟ್ ಅಪಿಯರೆನ್ಸ್ ಮಾಡುವ ಮೂಲಕ ಪ್ರಥಮ್ ಖುಷಿಯಾಗಿದ್ದಾರೆ.
ಮೌರ್ಯ ಎನ್ನುವವರು ಈ ಚಿತ್ರದ ನಿರ್ದೇಶಕರು. “ರಾಮಕೃಷ್ಣ ಪರಮಹಂಸ’ರ ಒಂದು ಕಥೆ ಇಟ್ಟುಕೊಂಡು ಈ ಚಿತ್ರ ಮಾಡುತ್ತಿದ್ದಾರಂತೆ. ಆಸೆ ಇದ್ದರೆ ಮನುಷ್ಯ ಏನಾಗುತ್ತಾನೆ ಎಂಬ ಸಣ್ಣ ಕಥೆಯೇ ಈ ಸಿನಿಮಾಗೆ ಸ್ಫೂರ್ತಿಯಂತೆ. ವೆಂಕಟೇಶ್ ರೆಡ್ಡಿ ಚಿತ್ರದ ನಿರ್ಮಾಪಕರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.