ಟ್ರೆಂಡಿಂಗ್‍ನಲ್ಲಿ “ಸೀತಾರಾಮ ಕಲ್ಯಾಣ’ ಟ್ರೈಲರ್: Watch
Team Udayavani, Jan 20, 2019, 9:46 AM IST
ಯುವರಾಜ ನಿಖಿಲ್ ಕುಮಾರ್, ಡಿಂಪಲ್ ಕ್ವೀನ್ ರಚಿತಾ ರಾಮ್ ಅಭಿನಯದ “ಸೀತಾರಾಮ ಕಲ್ಯಾಣ’ ಚಿತ್ರದ ಟ್ರೈಲರ್, ಹಾಡುಗಳು ಬಿಡುಗಡೆಯಾಗಿ ಈಗಾಗಲೇ ಸಾಮಾಜಿಕ ಜಾಲತಾಣದಲ್ಲಿ ಸದ್ದು ಮಾಡುತ್ತಿದ್ದರೆ, ಇತ್ತ ಚಿತ್ತತಂಡ ಚಿತ್ರದ ಮತ್ತೊಂದು ಟ್ರೈಲರನ್ನು ಬಿಡುಗಡೆ ಮಾಡಿದೆ. ಹೌದು, ಶನಿವಾರ ಸಂಜೆ ಮೈಸೂರಿನ ಬನ್ನಿಮಂಟಪದ ಮೈದಾನದಲ್ಲಿ ಅದ್ಧೂರಿಯಾಗಿ “ಸೀತಾರಾಮ ಕಲ್ಯಾಣ’ದ ಟ್ರೈಲರ್ ಬಿಡುಗಡೆಯಾಗಿದೆ.
ಟ್ರೈಲರ್ ನಲ್ಲಿ ತುಂಟತನ ಪ್ರೀತಿ, ಕುಟುಂಬದವರ ನಡುವಿನ ಬಾಂಧವ್ಯ ತುಂಬಿದೆ. ಜೊತೆಗೆ ನಿಖಿಲ್ ಅವರ ಮಾಸ್ ಫೈಟ್ ಇದ್ದು, ಇದು ಪಕ್ಕಾ ಒಂದು ಸಾಂಪ್ರದಾಯಕ ಚಿತ್ರವಾಗಿದೆ. ಅಲ್ಲದೇ ಟ್ರೈಲರ್ ನಲ್ಲಿ ತಂದೆಯ ಪ್ರೀತಿಗೆ ನೀಡಿರುವ ಗೌರವ ಸಿನಿಮಾದ ವಿಶೇಷತೆ ಎಂದು ಹೇಳಬಹುದಾಗಿದೆ. ಈಗಾಗಲೇ ಟ್ರೈಲರ್ ಯುಟ್ಯೂಬ್ನಲ್ಲಿ ಸಿಕ್ಕಾಪಟ್ಟೇ ಸದ್ದು ಮಾಡುತ್ತಿದ್ದು, ಟ್ರೆಂಡಿಂಗ್‍ನಲ್ಲಿದೆ.
ಇನ್ನು ಸಮಾರಂಭಕ್ಕೆ ಸ್ಯಾಂಡಲ್‍ವುಡ್ ತಾರೆಯರ ಭರ್ಜರಿ ಡ್ಯಾನ್ಸ್, ನಾಯಕ ನಿಖಿಲ್ ಕುಮಾರ್, ಚಿತ್ರದ ನಾಯಕಿ ರಚಿತ್ ರಾಮ್, ರಾಗಿಣಿ, ಆಶಿಕಾ ರಂಗನಾಥ್ ಸೇರಿದಂತೆ ಹಲವರು ಮಸ್ತ್ ಮಸ್ತ್ ಡ್ಯಾನ್ಸ್ ಮಾಡಿದ್ದಾರೆ. ಟ್ರೈಲರ್ ಬಿಡುಗಡೆ ಸಮಾರಂಭಕ್ಕೆ ಅಭಿಮಾನಿಗಳ ದಂಡೆ ಹರಿದು ಬಂದಿತ್ತು. ಹಲವು ನಟ-ನಟಿಯರು ಹಾಗೂ ಜೆಡಿಎಸ್ ಶಾಸಕರು ಸಾಕ್ಷಿಯಾಗಿದ್ದು, ಕಾರ್ಯಕ್ರಮದಲ್ಲಿ ಮಾತನಾಡಿದ ಸಿಎಂ ಎಚ್.ಡಿ. ಕುಮಾರಸ್ವಾಮಿ, ಚಿತ್ರ ಅದ್ಧೂರಿಯಾಗಿ ಮೂಡಿ ಬಂದಿದ್ದು, ಒಂದೊಳ್ಳೆಯ ಕೌಟುಂಬಿಕ ಚಿತ್ರವನ್ನು ನಿರ್ಮಿಸಿದ ತೃಪ್ತಿ ಇದೆ ಎಂದು ಹೇಳಿದ್ದಾರೆ.
ಚೆನ್ನಾಂಬಿಕ ಫಿಲಂಸ್ ಬ್ಯಾನರ್‌ನಲ್ಲಿ ಶ್ರೀಮತಿ ಅನಿತಾ ಕುಮಾರಸ್ವಾಮಿ ನಿರ್ಮಾಣದ ಈ ಚಿತ್ರಕ್ಕೆ ಹರ್ಷ ಆ್ಯಕ್ಷನ್ ಕಟ್ ಹೇಳಿದ್ದಾರೆ. ರವಿಶಂಕರ್, ಶರತ್ ಕುಮಾರ್, ಮಧುಬಾಲಾ, ಆದಿತ್ಯ ಮೆನನ್, ಚಿಕ್ಕಣ್ಣ, ಸಾಧು ಕೋಕಿಲ, ನಯನಾ, ಗಿರಿಜಾ ಲೋಕೇಶ್, ಚೇತನ್ ಸೇರಿದಂತೆ ಹಲವರು ನಟಿಸಿದ್ದಾರೆ. ಸ್ವಾಮಿ ಛಾಯಾಗ್ರಹಣ, ಸುನೀಲ್ ಗೌಡ ಸಹ ನಿರ್ಮಾಣ, ಪ್ರಶಾಂತ್ ರಾಜಪ್ಪ, ಹಾಗೂ ರಘು ನಿಡುವಳ್ಳಿ ಸಂಭಾಷಣೆ ಚಿತ್ರಕ್ಕಿದೆ. ಅಂದಹಾಗೆ ಜನವರಿ 25 ರಂದು “ಸೀತಾರಾಮ ಕಲ್ಯಾಣ’ 400 ಚಿತ್ರ ಮಂದಿರಗಳಲ್ಲಿ ಬಿಡುಗಡೆಯಾಗಲಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Mogilaiah: ಪದ್ಮಶ್ರೀ ಪುರಸ್ಕೃತ, ಜಾನಪದ ಕಲಾವಿದ ಬಳಗಂ ಚಿತ್ರ ಖ್ಯಾತಿಯ ಮೊಗಿಲಯ್ಯ ನಿಧನ
Bantwala: ಚಾಲಕನ ನಿಯಂತ್ರಣ ತಪ್ಪಿ ಪಲ್ಟಿಯಾದ ಟೆಂಪೋ ಟ್ರಾವೆಲ್
Betting App; ಬಾಲಿವುಡ್ ನಟಿಯರು ಪ್ರಚಾರ ಮಾಡಿದ್ದ ಬೆಟ್ಟಿಂಗ್ ಆ್ಯಪ್ ಮಾಲಕ ಪಾಕಿಸ್ತಾನಿ!
Dharwad: ಜಿಲ್ಲಾಧಿಕಾರಿ ಕಚೇರಿಯಲ್ಲಿ ಬ್ಯಾಟರಿ ಕಳ್ಳತನ
K.V.Narayana: ವಿಮರ್ಶಕ ಪ್ರೊ.ಕೆ.ವಿ.ನಾರಾಯಣಗೆ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.