ಸ್ಟಾರ್ ಸುವರ್ಣದಲ್ಲಿ ತ್ರಿವೇಣಿ ಸಂಗಮ: ಫೆ.6ರಿಂದ ರಾತ್ರಿ 7ಕ್ಕೆ
Team Udayavani, Feb 5, 2017, 12:25 PM IST
ಹೊಸ ಧಾರಾವಾಹಿ “ತ್ರಿವೇಣಿ ಸಂಗಮ’ ಈಗ ಪ್ರಸಾರದ ಹಂತಕ್ಕೆ ಬಂದು ನಿಂತಿದೆ. ರಾಜೇಶ್ ನಟರಂಗ, ಅನು ಪ್ರಭಾಕರ್ ಮುಂತಾದವರು ನಟಿಸಿರುವ ಈ “ತ್ರಿವೇಣಿ ಸಂಗಮ’ ಧಾರಾವಾಹಿಯು ಸ್ಟಾರ್ ಸುವರ್ಣದಲ್ಲಿ ಫೆಬ್ರವರಿ ಆರರಿಂದ ರಾತ್ರಿ ಏಳಕ್ಕೆ ಪ್ರಸಾರವಾಗಲಿದೆ. ತಿಲಕ್ ಈ ಧಾರಾವಾಹಿಯನ್ನು ನಿರ್ದೇಶಿಸಿದರೆ, ಪಿ.ಎಲ್ ಸೋಮಶೇಖರ್ ಮತ್ತು ಸತೀಶ್ ರಾಜಣ್ಣ ಅವರು ಮೇದಿನಿ ಪ್ರೊಡಕ್ಷನ್ಸ್‌ನಡಿ ನಿರ್ಮಿಸುತ್ತಿದ್ದಾರೆ.
ರಾಜೇಶ್ ನಟರಂಗ ಹೇಳುವಂತೆ “ಮೊದಲು ಧಾರಾವಾಹಿ ಚೆನ್ನಾಗಿ ಶುರುವಾಗುತ್ತದೆ.ಒಂದು ಹಂತದಲ್ಲಿ ನಿಂತ ನೀರಾಗುತ್ತದೆ. ಯಾವುದೇ ಬದಲಾವಣೆ ಇರುವುದಿಲ್ಲ. 25 ಎಪಿಸೋಡುಗಳಾದರೂ ಕಥೆ ಮುಂದೆ ಹೋಗಿರುವುದಿಲ್ಲ. ನನ್ನ ಪ್ರಕಾರ ಕಥೆಗೆ ಒಂದು ಆದಿ, ಅಂತ್ಯ ಅಂತ ಇರಬೇಕು. ಗೊತ್ತು-ಗುರಿ ಇಲ್ಲದೆಯೇಹೋಗಬಾರದು. ಹಾಗಾಗಿಯೇ ನಾನು ಧಾರಾವಾಹಿಯಿಂದ ಸ್ವಲ್ಪ ದೂರವಿದ್ದೆ. ಇಲ್ಲಿ ಪಾತ್ರಕ್ಕೆ ಒಂದಿಷ್ಟು ಏರಿಳಿತಗಳಿವೆ. ಹಾಡುಗಾರನಾಗಬೇಕೆಂಬ ಕನಸಿರುವ ಒಬ್ಬ ಮನುಷ್ಯ ನಾನು. ಈಗ ಬರುತ್ತಿರುವ ಧಾರಾವಾಹಿಗಳಿಗಿಂಥ ಸ್ವಲ್ಪ ವಿಭಿನ್ನವಾಗಿರುವುದರಿಂದ ಒಪ್ಪಿಕೊಂಡೆ’ ಎನ್ನುತ್ತಾರೆ ರಾಜೇಶ್. ಅನು ಪ್ರಭಾಕರ್ ಅವರಿಗೂ ಇದೇ ತರಹದ ಕಾರಣಗಳಿದ್ದರೂ, ಕಥೆ ಮತ್ತು ಪಾತ್ರ ಚೆನ್ನಾಗಿದೆ ಎಂಬ ಕಾರಣಕ್ಕೆ ಒಪ್ಪಿಕೊಂಡಿದ್ದಾರಂತೆ.
ಮಧ್ಯವಯಸ್ಕರ ಲವ್‌ಸ್ಟೋರಿ ಎಂದರೆ ಗಂಭೀರ ಸಮಸ್ಯೆ ಎಂದು ಭಾವಿಸಬೇಕಿಲ್ಲ ಎನ್ನುತ್ತಾರೆ ನಿರ್ದೇಶಕ ತಿಲಕ್. “ಇಲ್ಲಿ ಇಬ್ಬರೂ ನಡುವಯಸ್ಸಿನವರಾದರೂ, ಅದರ ಬಗ್ಗೆ ಗಹನವಾದ ಚರ್ಚೆಯಾಗಲೀ ಸಮಸ್ಯೆ ಆಗಲೀ ಇಲ್ಲ. ಇಬ್ಬರೂ ಯಾವುದೋ ಸಮಸ್ಯೆಯಿಂದ ವೈರಾಗ್ಯ ಭಾವ ತೆಳೆದಿದ್ದಾರೆ ಎಂದರ್ಥವಲ್ಲ. ಪ್ರೀತಿಯಿಂದ ದೂರ ಉಳಿದ ಇಬ್ಬರು, ಸಂಗೀತದಿಂದ ಹೇಗೆ ಒಂದಾದರು ಎನ್ನುವುದೇ ಈ ಧಾರಾವಾಹಿಯ ಕಥೆ’ ಎನ್ನುತ್ತಾರೆ ನಿರ್ದೇಶಕ ತಿಲಕ್.
“ತ್ರಿವೇಣಿ ಸಂಗಮ’ದಲ್ಲಿ ರಾಜೇಶ್ ಮತ್ತು ಅನು ಪ್ರಭಾಕರ್ ಜೊತೆಗೆ ಅಪೇಕ್ಷ, ಶ್ರೀಧರ್ ಗುರು ಹೆಗಡೆ, ಮಾಲತಿಶ್ರೀ ಮೈಸೂರು, ಸುರೇಶ್ ರೈ, ಶಶಿಧರ ಕೋಟೆ ಮುಂತಾದವರು ನಟಿಸಿದ್ದಾರೆ. ಕೃಷ್ಣ ಪ್ರಸಾದ್ ಅವರ ಸಂಭಾಷಣೆ ಬರೆದಿದ್ದಾರೆ. ಧರಣಿ ಛಾಯಾಗ್ರಹಣ ಮಾಡಿದರೆ, ಕಾರ್ತಿಕ್ ಶರ್ಮ ಸಂಗೀತ ಸಂಯೋಜಿಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Dandeli: ಸಂಡೇ ಮಾರ್ಕೆಟ್ ಬಳಿ ಸರಣಿ ಕಳ್ಳತನ
Hubli: ಜನರ ಸಮಸ್ಯೆ ಆಲಿಸಿ ಸಭಾಪತಿಗೆ ವರದಿ: ಜೆಪಿಸಿ ಅಧ್ಯಕ್ಷ ಜಗದಂಬಿಕಾ ಪಾಲ್
Cancer: ಎಳೆಯ ಮಕ್ಕಳಲ್ಲಿ ಹೆಚ್ಚುತ್ತಿದೆ ಕ್ಯಾನ್ಸರ್ ಸಮಸ್ಯೆ
CCTV Footage: ಚಲಿಸುತ್ತಿದ್ದ ರೈಲು ಹತ್ತಲು ಹೋಗಿ ಅವಘಡ… ಯುವತಿ ಬದುಕುಳಿದಿದ್ದೇ ಪವಾಡ
Bengaluru: ರಸ್ತೆಯಲ್ಲಿ ಹೋಗುತ್ತಿದ್ದ ಯುವತಿಗೆ ಯುವಕನಿಂದ ಲೈಂಗಿಕ ಕಿರುಕುಳ; ದೂರು
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.