ಸಾಯೋವರೆಗೂ ಪ್ರಯತ್ನ ಮಾಡ್ತೀನಿ
Team Udayavani, Nov 13, 2017, 10:48 AM IST
ಉಪೇಂದ್ರ ಹೊಸ ರಾಜಕೀಯ ಪಕ್ಷ ಹುಟ್ಟಿಹಾಕಿದ್ದು ಗೊತ್ತೇ ಇದೆ. ಮುಂದಿನ ವರ್ಷದ ವಿಧಾನಸಬೆ ಚುನಾವಣೆಗೆ ಉಪೇಂದ್ರ ಮತ್ತು ಅವರ ಪಕ್ಷ ದೊಡ್ಡ ಮಟ್ಟದಲ್ಲಿ ಎಂಟ್ರಿ ಕೊಡುವ ನಿರೀಕ್ಷೆ ಇದೆ. ಇದೆಲ್ಲದರ ಮಧ್ಯೆ ಬಹಳ ಜನರಿಗೆ ಇದೊಂದು ಪ್ರಶ್ನೆ ಇದ್ದೇ ಇದೆ. ಉಪೇಂದ್ರರಿಗೆ ಇವೆಲ್ಲಾ ಬೇಕಿತ್ತಾ ಮತ್ತು ಈ ವ್ಯವಸ್ಥೆಯಲ್ಲಿ ಉಪೇಂದ್ರ ಏನಾದರೂ ಮಾಡುವುದಕ್ಕೆ ಸಾಧ್ಯವಾ ಎಂದು?
ಈ ಕುರಿತು ಉಪೇಂದ್ರ ಅವರನ್ನು ಕೇಳಿದರೆ, “ಎಷ್ಟೋ ಜನ ನನಗೆ ಇದು ಬೇಕಿತ್ತಾ ಅಂತ ಕೇಳುತ್ತಾರೆ. ನಾನು ಬಹಳ ಕೆಳಮಟ್ಟದಿಂದ ಬಂದವನು. ಒಂದು ಹೊತ್ತಿನ ಊಟಕ್ಕೆ ಪರದಾಡುತ್ತಾ, ಕ್ರಮೇಣ ಲಕ್ಸುರಿ ಕಂಡವನು ನಾನು. ಸಿನಿಮಾ ಮಾಡಿದೆ, ಪಾರಿನ್ ಸುತ್ತಿದೆ, ನನ್ನದೇ ರೆಸಾರ್ಟ್ ಇದೆ… ಆದರೂ ಸುಖ ಸಿಗಲಿಲ್ಲ. ಏನೋ ಬೇರೆ ಕಾಡುತ್ತಿದೆ. ನಾನು ಹುಟ್ಟಿರೋದೇ ಬೇರೆ ಕಾರಣಕ್ಕೆ ಅಂತ ಅನಿಸುತಿತ್ತು.
ಎಲ್ಲರೂ ತಪ್ಪನ್ನು ಒಪ್ಪಿಕೊಂಡುಬಿಟ್ಟಿದ್ದಾರೆ. ಆ ತಪ್ಪನ್ನು ಸರಿ ಮಾಡಬೇಕೆಂದು ಹೊರಟಿದ್ದೇನೆ. ಇದರಲ್ಲಿ ಗೆಲ್ಲುತ್ತೀನಿ ಎನ್ನುವ ನಂಬಿಕೆ ಇದೆ. ಗೆದ್ದರೆ ಸಂತೋಷ. ಇಲ್ಲ ಸಾಯೋವರೆಗೂ ಪ್ರಯತ್ನ ಮಾಡುತ್ತಲೇ ಇರುತ್ತೀನಿ. ಪ್ರತಿ ಚುನಾವಣೆಯ ಆರು ತಿಂಗಳ ಮುಂಚೆ ಬಂದು ಪ್ರಯತ್ನ ಮಾಡುತ್ತಲೇ ಇರುತ್ತೀನಿ’ ಎನ್ನುತ್ತಾರೆ ಉಪೇಂದ್ರ.
ಇನ್ನು ಏನೋ ಮಾಡಬೇಕು ಎಂಬ ಕಲ್ಪನೆ ಉಪೇಂದ್ರ ಕಾಲೇಜು ಹೋಗುತ್ತಿದ್ದ ದಿನಗಳಿಂದ ಇತ್ತಂತೆ. “ನನ್ನ ಉದ್ದೇಶ ಸಿನಿಮಾ ಅಲ್ಲ, ಬೇರೇನೋ ಇದೆ ಅಂತ ಹೇಳುತ್ತಲೇ ಬಂದಿದ್ದೆ. ನಾನು ಪಿಯುಸಿಯಲ್ಲಿದ್ದಾಗಲೇ ಈ ಆಸೆ ಇತ್ತು. ಆಗ ಈ ದೇಶ ಎಂದರೇನು, ರಾಜ್ಯ ಎಂದರೇನು ಅಂತ ಯಾವುದೂ ಗೊತ್ತಿರಲಿಲ್ಲ. ಏನೋ ಮಾಡಬೇಕು ಅಂತ ಮಾತ್ರ ಆಸೆ ಇತ್ತು.
ಆಗ ನಾನು ಬೆಂಗಳೂರು ಹೈಸ್ಕೂಲ್‌ನಲ್ಲಿ ಓದುವಾಗ, ಒಬ್ಬರು ಎಜೆಆರ್ ಅಂತ ಇತಿಹಾಸದ ಮೇಷ್ಟ್ರಿದ್ದರು. ಅವರು ನಮ್ಮ ದೇಶದ ಇತಿಹಾಸ ಹೇಳ್ಳೋರು. ಈ ದೇಶವನ್ನ ಯಾರ್ಯಾರು ಆಳಿದರು, ಏನೆಲ್ಲಾ ಮಾಡಿದರು ಅಂತ ಪಾಠ ಮಾಡುತ್ತಿದ್ದರು. ಆಗಲೇ ನಾನೂ ಏನೋ ಮಾಡಬೇಕು ಅಂತ ಆಸೆ ಇತ್ತು. ಸಿನಿಮಾ ನಟನಾದರೆ, ಏನೋ ಮಾಡಬಹುದು ಅಂತ ಬಂದೆ.
ಮೊದಲ ಬಾರಿಗೆ ಮನ್ಮಥನ ಪಾತ್ರದಲ್ಲಿ ನನ್ನನ್ನ ನೋಡಿದಾಗ ಶಾಕ್ ಆಯ್ತು. ಸರಿ ನಟನೆ ಬೇಡ, ಇನ್ನೊಂದು ಮಾಡೋಣ ಅಂತ ನಿರ್ದೇಶನ ಮಾಡಿದೆ. ಕೊನೆಗೆ ಇನ್ನ್ಯಾರೋ ಹೀರೋ ವಾಡಿದರು. ಎಲ್ಲವೂ ಅದಾಗೇ ಆಗುತ್ತಲೇ ಹೋಯ್ತು. ಈಗ ಕೊನೆಗೂ ಅವಕಾಶ ಸಿಕ್ಕಿದೆ’ ಎನ್ನುತ್ತಾರೆ ಉಪೇಂದ್ರ.
ಎಲ್ಲಾ ಜನರ ಕೈಲಿದೆ!: ಉಪೇಂದ್ರ ಅಭಿನಯದ “ಉಪೇಂದ್ರ ಮತ್ತೆ ಬಾ’ ಚಿತ್ರ ಈ ಶುಕ್ರವಾರ ಬಿಡುಗಡೆಯಾಗುತ್ತಿದೆ. ಆ ನಂತರ ಚಿತ್ರಜೀವನದ ಅವರ ಪ್ಲಾನ್ ಏನು ಎಂದು ಕೇಳಿದರೆ, “ಎಲ್ಲಾ ಜನರ ಕೈಲಿದೆ’ ಎಂದು ಉತ್ತರಿಸುತ್ತಾರೆ ಅವರು. “ಎಲ್ಲಾ ಅವರ ಕೈಲಿದೆ. ಹಾಲಲ್ಲಿ ಹಾಕಿದರೆ ಹಾಲಲ್ಲಿ ಇರ್ತೀನಿ, ನೀರಲ್ಲಿ ಹಾಕಿದರೆ ನೀರಲ್ಲಿ ಇರ್ತೀನಿ.
ಈ ವಾರ “ಉಪೇಂದ್ರ ಮತ್ತೆ ಬಾ’ ಬಿಡುಗಡೆಯಾಗುತ್ತದೆ. ಆ ನಂತರ ತೆಲುಗು ನಿರ್ಮಾಪಕರ “ಹೋಮ್ ಮಿನಿಸ್ಟರ್’ ಚಿತ್ರ ಮುಗಿಸಬೇಕಿದೆ. ಇದಾದ ಮೇಲೆ ಚುನಾವಣೆಗಳು. ಚುನಾವಣೆಯ ನಂತರ ಏನಾಗುತ್ತದೋ ಇನ್ನೂ ಗೊತ್ತಿಲ್ಲ’ ಎನ್ನುತ್ತಾರೆ ಅವರು. ಈ ಮಧ್ಯೆ “ಉಪ್ಪಿ-ರುಪ್ಪಿ’ ಚಿತ್ರದ ಕಥೆಯೇನು ಎಂದರೆ, ಅದು ಸದ್ಯಕ್ಕಿಲ್ಲ ಆಮೇಲೆ ಎಂಬ ಉತ್ತರ ಅವರಿಂದ ಬರುತ್ತದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Megha Movie: ನಾನು ಎಂಟು ಸಾರಿ ಕೇಳಿದ ಕಥೆಯಿದು…: ಕಿರಣ್ ರಾಜ್
Sudeep: ʼಮ್ಯಾಕ್ಸ್ʼ ರಿಲೀಸ್ ದಿನ ಫಿಕ್ಸ್: ಕಿಚ್ಚನ ಸಿಟ್ಟಿಗೆ ಎಚ್ಚೆತ್ತ ನಿರ್ಮಾಣ ಸಂಸ್ಥೆ
BBK11: ಕಣ್ಣೀರುಡುತ್ತಲೇ ಬಿಗ್ ಬಾಸ್ ಮನೆಯಿಂದ ಆಚೆ ಬಂದ ಧರ್ಮ ಕೀರ್ತಿರಾಜ್
Kannada Cinema: ‘ರುದ್ರಾಭಿಷೇಕಂ’ನಲ್ಲಿ ವಿಜಯ್ ರಾಘವೇಂದ್ರ
Health Issue: ಸರ್ಜರಿಗಾಗಿ ಮುಂದಿನ ತಿಂಗಳು ಅಮೆರಿಕಕ್ಕೆ ಹೋಗುವೆ: ನಟ ಶಿವರಾಜ್‌ಕುಮಾರ್
MUST WATCH
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಹೊಸ ಸೇರ್ಪಡೆ
Election: ಶಿಂಧೆ ವಿರುದ್ಧ ಸೋತಿದ್ದ ಕಾಂಗ್ರೆಸ್ ಬಂಡಾಯ ಅಭ್ಯರ್ಥಿ ಶಿವಸೇನೆಗೆ
warrant: ಇಸ್ರೇಲಿ ನಾಯಕರಿಗೆ ವಾರಂಟ್ ಬೇಡ, ಗಲ್ಲು ವಿಧಿಸಿ: ಇರಾನ್
Gold Price Decline: ಚಿನ್ನದ ದರ ಮತ್ತೆ 1,000 ರೂ.ಇಳಿಕೆ: 10 ಗ್ರಾಂಗೆ 78,550 ರೂ.
Assembly Election: ನಾನು ಪ್ರಚಾರ ಮಾಡದ್ದಕ್ಕೆ ನೀನು ಶಾಸಕನಾದೆ: ಸಂಬಂಧಿಗೆ ಅಜಿತ್
Scheme: ದಿಲ್ಲಿಯಲ್ಲಿ ಆಮ್ ಆದ್ಮಿ ಸರಕಾರ-ಬಿಜೆಪಿ ಮಧ್ಯೆ ವೃದ್ಧಾಪ್ಯ ವೇತನ ಕದನ!
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.