ಬಾಲಿವುಡ್‌ನತ್ತ ಯು ಟರ್ನ್ ಪವನ್ ಚಿತ್ತ
Team Udayavani, Jul 24, 2019, 3:03 AM IST
ಕನ್ನಡದಲ್ಲಿ “ಲೂಸಿಯಾ’ ಹಾಗೂ “ಯು ಟರ್ನ್’ ಸಿನಿಮಾಗಳ ಮೂಲಕ ಗಮನಸೆಳೆದ ನಿರ್ದೇಶಕ ಪವನ್‌ಕುಮಾರ್, ತೆಲುಗು, ತಮಿಳು ಚಿತ್ರರಂಗಕ್ಕೂ ಎಂಟ್ರಿಕೊಟ್ಟಿದ್ದು ಗೊತ್ತೇ ಇದೆ. ಅವರು ಕನ್ನಡದಲ್ಲಿ ಮತ್ಯಾವ ಚಿತ್ರ ಮಾಡುತ್ತಿದ್ದಾರೆ ಎಂಬ ಪ್ರಶ್ನೆ ಎಲ್ಲರಲ್ಲೂ ಇತ್ತು. ಹಾಗಂತ, ಅವರೀಗ ಕನ್ನಡ ಸಿನಿಮಾಗೆ ಕೈ ಹಾಕುತ್ತಿಲ್ಲ. ಅದರ ಬದಲಾಗಿ, ಬಾಲಿವುಡ್‌ನತ್ತ ತಮ್ಮ ಚಿತ್ತ ಹರಿಸಿದ್ದಾರೆ.
ಈಗಾಗಲೇ ಹಿಂದಿ ವೆಬ್‌ಸೀರಿಸ್ ಮಾಡಿರುವ ಪವನ್, ಅಲ್ಲೊಂದು ಸಿನಿಮಾ ಮಾಡುವ ಉತ್ಸಾಹದಲ್ಲೂ ಇದ್ದಾರೆ. ಹೌದು, ಪವನ್‌ಕುಮಾರ್, ಸದ್ಯಕ್ಕೆ ಹಿಂದಿ ಸಿನಿಮಾ ಮಾಡುವ ತಯಾರಿಯಲ್ಲಿದ್ದಾರೆ. ಆ ಕುರಿತು ಪವನ್‌ಕುಮಾರ್ ಅವರನ್ನೇ ಕೇಳಿದಾಗ, ಅದಕ್ಕೆ ಅವರು ಉತ್ತರಿಸಿದ್ದು ಹೀಗೆ. “ಸದ್ಯಕ್ಕೆ ಹಿಂದಿ ಸಿನಿಮಾ ಮಾಡುವ ಕುರಿತು ಮಾತುಕತೆ ನಡೆಯುತ್ತಿರುವುದು ನಿಜ.
ಹಾಗಂತ, ನಾನು ಈಗಲೇ ಅದನ್ನು ಅನೌನ್ಸ್ ಮಾಡಲು ಸಾಧ್ಯವಿಲ್ಲ. ಆ ಕುರಿತು ವರ್ಕ್ ನಡೆಯುತ್ತಿದೆ. ಇಷ್ಟರಲ್ಲೇ ಆ ಬಗ್ಗೆ ಎಲ್ಲಾ ಮಾಹಿತಿ ಕೊಡುತ್ತೇನೆ. ಇನ್ನು, ಕನ್ನಡದಲ್ಲಿ ನಿರ್ದೇಶನ ಮಾಡುವ ಯೋಚನೆ ಸದ್ಯಕ್ಕಿಲ್ಲ. ಅದು ತುಂಬಾ ಲೇಟ್ ಆಗಲಿದೆ. ಒಂದು ವೇಳೆ, ಹಿಂದಿ ಸಿನಿಮಾ ಮಾತುಕತೆ ಬಳಿಕ ಅದೇನಾದರೂ ಲೇಟ್ ಆಗುತ್ತೆ ಅಂತ ಅನಿಸಿದರೆ, ಕನ್ನಡ ಸಿನಿಮಾ ಮಾಡುವ ಬಗ್ಗೆ ಗಮನಹರಿಸುತ್ತೇನೆ.
ಕನ್ನಡದಲ್ಲಿ ಯಾವ ಪ್ರಾಜೆಕ್ಟ್ ಮಾಡಬೇಕು ಎಂಬ ಬಗ್ಗೆ ಇನ್ನೂ ಯೋಚನೆ ಮಾಡಿಲ್ಲ ಎನ್ನುವ ಪವನ್‌ಕುಮಾರ್, ಸದ್ಯ “ನಿಕೋಟಿನ್’ ಕಥೆ ಬಾಲಿವುಡ್‌ನಲ್ಲಿ ಚರ್ಚೆಯಾಗುತ್ತಿದೆ. ಒಂದು ವೇಳೆ, ಅದು ಪಕ್ಕಾ ಆಗಿಬಿಟ್ಟರೆ, ಆ ಸಿನಿಮಾ ಮಾಡುತ್ತೇನೆ’ ಎಂದು ವಿವರ ಕೊಡುತ್ತಾರೆ ಪವನ್.
ಅಂದಹಾಗೆ, ಹಿಂದಿ ಸಿನಿಮಾಗೆ ಯಾರು ಹೀರೋ ಆಗಿರುತ್ತಾರೆ, ಯಾರೆಲ್ಲಾ ಕಾಣಿಸಿಕೊಳ್ಳುತ್ತಾರೆ, ತಂತ್ರಜ್ಞರು ಯಾರ್ಯಾರು ಇರುತ್ತಾರೆ ಎಂಬುದಕ್ಕೆ ಉತ್ತರವಿಲ್ಲ. ಸದ್ಯಕ್ಕೆ ಪ್ರೊಡಕ್ಷನ್ ಹೌಸ್ ಜೊತೆ ಮಾತುಕತೆ ನಡೆದಿದ್ದು, ಅಲ್ಲಿಂದ ಗ್ರೀನ್‌ಸಿಗ್ನಲ್ ಬಂದ ಬಳಿಕ ಎಲ್ಲವನ್ನೂ ತಿಳಿಸುವುದಾಗಿ ಹೇಳುತ್ತಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Actor Health: ಸ್ವಲ್ಪ ಜರುಗಿದ ದರ್ಶನ್ ಬೆನ್ನುಮೂಳೆ; ತುರ್ತಾಗಿ ಆಪರೇಷನ್ ಇಲ್ಲ: ವೈದ್ಯರು
Prashanth Neel: ಸಲಾರ್‌ಗೆ ನಾನು ಇನ್ನಷ್ಟು ಶ್ರಮ ಹಾಕಬೇಕಿತ್ತು; ಪ್ರಶಾಂತ್ ನೀಲ್
UI Movie: ಉಪ್ಪಿ ಯುಐ ಮೆಚ್ಚಿದ ಯಶ್
Shivaraj Kumar: ಶಿವರಾಜ್ ಕುಮಾರ್ ಅವರ ಆಪರೇಷನ್ ಯಶಸ್ವಿಯಾಗಿದೆ – ಪತ್ನಿ ಗೀತಾ ಮಾಹಿತಿ
Max: ಇಂದು ಸುದೀಪ್ ಮ್ಯಾಕ್ಸ್ ತೆರೆಗೆ; ಆ್ಯಕ್ಷನ್ ಅಡ್ಡದಲ್ಲಿ ಕಿಚ್ಚ ಮಿಂಚು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Negotiation: ಸಿ.ಟಿ.ರವಿ – ಸಚಿವೆ ಹೆಬ್ಬಾಳ್ಕರ್ ಸಂಧಾನಕ್ಕೆ ಸಭಾಪತಿ ಹೊರಟ್ಟಿ ಪ್ರಯತ್ನ?
Congress Session: ಬೆಳಗಾವಿಯಲ್ಲಿಂದು, ನಾಳೆ ಗಾಂಧಿ ಮಹಾಧಿವೇಶನ
Daily Horoscope: ಬೇರೆಯವರ ತಪ್ಪುಗಳನ್ನು ಹುಡುಕಬೇಡಿ, ಜವಾಬ್ದಾರಿ ಕೊಂಚ ಬದಲಾವಣೆ
Politics: ಕುಸುಮಾರನ್ನು ಎಂಎಲ್‌ಎ ಮಾಡಲು ಇಷ್ಟೆಲ್ಲ ಪ್ರಯತ್ನ: ಶಾಸಕ ಮುನಿರತ್ನ ಆರೋಪ
Actor Health: ಸ್ವಲ್ಪ ಜರುಗಿದ ದರ್ಶನ್ ಬೆನ್ನುಮೂಳೆ; ತುರ್ತಾಗಿ ಆಪರೇಷನ್ ಇಲ್ಲ: ವೈದ್ಯರು
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.