ಚಿರು ಚಿತ್ರಕ್ಕೆ ಉದಯ್‌ಮೆಹ್ತಾ ನಿರ್ಮಾಪಕ
Team Udayavani, Oct 15, 2018, 11:36 AM IST
ಅಜೇಯ್‌ರಾವ್ ಅಭಿನಯದ “ಕೃಷ್ಣರುಕ್ಕು’ ಚಿತ್ರವನ್ನು ನಿರ್ಮಿಸಿದ್ದ ಉದಯ್‌ಮೆಹ್ತಾ, ಧ್ರುವಸರ್ಜಾ ಅವರಿಗೊಂದು ಚಿತ್ರ ನಿರ್ಮಿಸುವುದಾಗಿ ಹೇಳಿಕೊಂಡಿದ್ದರು. ಇನ್ನೇನು ಆ ಚಿತ್ರ ಇಷ್ಟರಲ್ಲೇ ಶುರುವಾಗುವ ಸಾಧ್ಯತೆಯೂ ಇದೆ. ಅದಕ್ಕೂ ಮುನ್ನ ಉದಯ್‌ಮೆಹ್ತಾ ಇನ್ನೊಂದು ಚಿತ್ರ ನಿರ್ಮಿಸುವುದಾಗಿ ಹೇಳಿಕೊಂಡಿದ್ದಾರೆ. ಅದು ಚಿರಂಜೀವಿ ಸರ್ಜಾ ಅವರಿಗೆ ಎನ್ನುವುದು ವಿಶೇಷ. ಹೌದು, ಧ್ರುವಸರ್ಜಾ ಅವರಿಗೆ ಉದಯ್ ಮೆಹ್ತಾ ಅವರು ಸಿನಿಮಾ ನಿರ್ಮಾಣ ಮಾಡುವುದು ಹಳೆಯ ಸುದ್ದಿ.
ಈಗ ಚಿರಂಜೀವಿ ಸರ್ಜಾ ಅವರಿಗೂ ಒಂದು ಸಿನಿಮಾ ನಿರ್ಮಾಣ ಮಾಡುತ್ತಿರುವುದು ಹೊಸ ಸುದ್ದಿ. ಈ ಕುರಿತು ಸ್ವತಃ ಮೆಹ್ತಾ ಅವರೇ ಸ್ಪಷ್ಟಪಡಿಸಿದ್ದಾರೆ. “ಕೃಷ್ಣರುಕ್ಕು’ ಚಿತ್ರದ ನಂತರ ಧ್ರುವ ಸರ್ಜಾ ಅವರಿಗೆ ಸಿನಿಮಾ ಮಾಡಬೇಕು ಅಂತ ಇಷ್ಟು ವರ್ಷ ಕಾದಿದ್ದು, ಅದಕ್ಕೊಂದು ಒಳ್ಳೆಯ ತಂಡವೂ ರೆಡಿಯಾಗಿದೆ. ಇಷ್ಟರಲ್ಲೇ ಆ ತಂಡ ಮತ್ತು ಸಿನಿಮಾ ಕುರಿತಂತೆ ವಿವರವಾಗಿ ಹೇಳುತ್ತೇನೆ.
ಇದರ ಮಧ್ಯೆ ಚಿರಂಜೀವಿ ಸರ್ಜಾ ಅವರಿಗೂ ಒಂದು ಸಿನಿಮಾ ನಿರ್ಮಿಸುತ್ತಿದ್ದೇನೆ. ಈಗಾಗಲೇ ಆ ಕುರಿತು ಮಾತುಕತೆ ಕೂಡ ನಡೆದಿದೆ. ಇಬ್ಬರು ಸಹೋದರರಿಗೆ ಸಿನಿಮಾ ನಿರ್ಮಾಣ ಮಾಡುತ್ತಿರುವುದು ಪಕ್ಕಾ ಆಗಿದೆ. ಇಬ್ಬರಿಗೂ ಸ್ವಮೇಕ್ ಕಥೆಗಳೇ ಚಿತ್ರವಾಗುತ್ತಿವೆ. ಅದರಲ್ಲೂ ಇಲ್ಲಿನ ಯಶಸ್ವಿ ನಿರ್ದೇಶಕರುಗಳೇ ಅವರಿಬ್ಬರ ಚಿತ್ರಗಳನ್ನು ನಿರ್ದೇಶನ ಮಾಡುತ್ತಿದ್ದಾರೆ. ಸದ್ಯಕ್ಕೆ ಯಾವಾಗ, ಏನು, ಎತ್ತ ಎಂಬುದಕ್ಕಿನ್ನೂ ಸಮಯವಿದೆ.
ಈಗ ಧ್ರುವಸರ್ಜಾ ಅವರು “ಪೊಗರು’ ಚಿತ್ರದಲ್ಲಿ ಬಿಝಿಯಾಗಿದ್ದಾರೆ. ಅತ್ತ ಚಿರಂಜೀವಿ ಸರ್ಜಾ ಅವರು ಸಹ ಬೇರೆ ಚಿತ್ರದ ಚಿತ್ರೀಕರಣದಲ್ಲಿದ್ದಾರೆ. ಇಬ್ಬರ ಡೇಟ್ ನೋಡಿಕೊಂಡು ಸಿನಿಮಾ ಅನೌನ್ಸ್ ಮಾಡುತ್ತೇನೆ. ಎರಡೂ ಚಿತ್ರಗಳು ಸಹ ಏಕಕಾಲದಲ್ಲೇ ಚಿತ್ರೀಕರಣ ನಡೆಯಲಿವೆ ಎಂದು ಹೇಳುವ ಉದಯ್ ಮೆಹ್ತಾ, ಇಷ್ಟರಲ್ಲೇ ಯಾರ ಸಿನಿಮಾಗೆ ಯಾರು ನಿರ್ದೇಶಕರು, ಯಾರೆಲ್ಲಾ ತಂತ್ರಜ್ಞರು ಇರುತ್ತಾರೆ,
ಚಿತ್ರದ ಟೈಟಲ್, ಕಥೆ ಎಲ್ಲವನ್ನೂ ವಿವರಿಸುವುದಾಗಿ ಹೇಳುತ್ತಾರೆ ಉದಯ್ ಮೆಹ್ತಾ. ಉದಯ್ ಮೆಹ್ತಾ ಅವರು ಶರಣ್ ಅವರಿಗೆ “ರಾಜರಾಜೇಂದ್ರ’ ಚಿತ್ರ ನಿರ್ಮಿಸಿದ್ದರು. ಅದಕ್ಕೂ ಮುನ್ನ ನೀನಾಸಂ ಸತೀಶ್ ನಟಿಸಿದ “ಲವ್ ಇನ್ ಮಂಡ್ಯ’ ಚಿತ್ರವನ್ನೂ ನಿರ್ಮಿಸಿದ್ದರು. ಈಗ ಧ್ರುವಸರ್ಜಾ ಮತ್ತು ಚಿರಂಜೀವಿ ಸರ್ಜಾ ಅವರಿಬ್ಬರಿಗೂ ತಲಾ ಒಂದೊಂದು ಚಿತ್ರ ನಿರ್ಮಾಣಕ್ಕೆ ಸಜ್ಜಾಗಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಉಡುಪಿ ಶ್ರೀ ಕೃಷ್ಣ ಮಠದಲ್ಲಿ ಬೃಹತ್ ಗೀತೋತ್ಸವಕ್ಕೆ ಅದ್ದೂರಿ ಚಾಲನೆ|
ಹೊಸ ಸೇರ್ಪಡೆ
Smart meters: ನೀರು ಸಂರಕ್ಷಿಸುವ ವಿಚಾರದಲ್ಲಿ ಕ್ರಾಂತಿ ಮಾಡಿದ ಸ್ಮಾರ್ಟ್ ವಾಟರ್ ಮೀಟರ್
Viral Pics: ಡೇಟಿಂಗ್ ರೂಮರ್ಸ್ ನಡುವೆ ವಿಜಯ್ – ರಶ್ಮಿಕಾ ಸೀಕ್ರೆಟ್ ಲಂಚ್ ಡೇಟ್
Lakkundi: ಹೊಸದಾಗಿ 5 ಬಾವಿ, 5 ಶಾಸನಗಳು, ಸಾವಿರಕ್ಕೂ ಹೆಚ್ಚು ಶಿಲ್ಪಕಲೆಗಳ ಅನ್ವೇಷಣೆ
Madikeri: ಹಾಡಹಗಲೇ ಹಾರ್ಡ್ ವೇರ್ ಅಂಗಡಿಗೆ ನುಗ್ಗಿ ಒಂಟಿ ಮಹಿಳೆಯ ಸರಗಳ್ಳತನ
Commissioner: ಗೂಂಡಾ ವರ್ತನೆ ತೋರಿದರೆ ಕ್ರಮ; ಕಮಿಷನರ್ ಎಚ್ಚರಿಕೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.