ಉಡುಂಬಾನ ಎದುರಲ್ಲಿ ಅಬ್ಬರಿಸಿದರು ಶರತ್ ಲೋಹಿತಾಶ್ವ!
Team Udayavani, Aug 22, 2019, 3:18 PM IST
ಕರಾವಳಿ ತೀರದಲ್ಲಿ ಜರುಗುವ ಕಥೆ ಹಾಗೂ ಅದು ಈ ವರೆಗೆ ಎಲ್ಲಿಯೂ ಕಾಣಿಸದಂಥಾ ಹೊಸತನದ ಕುರುಹುಗಳೊಂದಿಗೆ ಉಡುಂಬಾ ಚಿತ್ರ ಥೇಟರಿನತ್ತ ಪಯಣ ಹೊರಟಿದೆ. ಯಶಸ್ವಿ ಸಿನಿಮಾವೊಂದು ಬಿಡುಗಡೆ ಪೂರ್ವದಲ್ಲಿ ಯಾವ ಥರದಲ್ಲಿ ಸುದ್ದಿಯಾಗಬೇಕೋ ಅದರಂತೆಯೇ ಟಾಕ್ ಕ್ರಿಯೇಟ್ ಮಾಡುತ್ತಿರೋ ಉಡುಂಬಾ ಈ ವಾರ ಅಂದರೆ 23ರಂದು ರಾಜ್ಯಾದ್ಯಂತ ಬಿಡುಗಡೆಯಾಗುತ್ತಿದೆ. ಬಹುತೇಕ ಎಲ್ಲ ವರ್ಗಗಳ ಪ್ರೇಕ್ಷಕರೂ ಈ ಸಿನಿಮಾ ನೋಡಲು ಕಾತರರಾಗಿರೋದೇ ಈ ಚಿತ್ರದ ಪ್ಲಸ್ ಪಾಯಿಂಟ್.
ಶಿವರಾಜ್ ನಿರ್ದೇಶನದ ಈ ಚಿತ್ರ ಮೇಲು ನೋಟಕ್ಕೆ ಆಕ್ಷನ್ ಮೂವಿ ಮಾತ್ರವಾಗಿ ಕಂಡರೂ ಅಷ್ಟು ಸಲೀಸಾಗಿ ಅಂದಾಜಿಸಲಾಗದಂಥಾ ಕಥೆಯನ್ನೊಳಗೊಂಡಿದೆ. ಇದೀಗ ಟ್ರೇಲರ್‍ನಲ್ಲಿ ಅಬ್ಬರಿಸಿರೋ ನಾಯಕ ಪವನ್ ಶೌರ್ಯಾರ ಪಾತ್ರವೇನು ಅನ್ನೋದರ ಸುತ್ತಾ ಒಂದಷ್ಟು ಕ್ಯೂರಿಯಾಸಿಟಿ ಇದೆ. ಇದೇ ಟ್ರೇಲರ್‍ನಲ್ಲಿಯೇ ಮತ್ತೊಂದಷ್ಟು ಪಾತ್ರಗಳನ್ನೂ ಕೂಡಾ ಕಾಣಿಸಲಾಗಿದೆ. ಅದರಲ್ಲಿ ನೋಡುಗರನ್ನೆಲ್ಲ ಬಹುವಾಗಿ ಕಾಡಿರೋದು ಶರತ್ ಲೋಹಿತಾಶ್ವರ ಪಾತ್ರ.
ಶರತ್ ಲೋಹಿತಾಶ್ವ ಅವರ ಕಂಠ, ಅದಕ್ಕೆ ತಕ್ಕುದಾದ ನಟನೆ ಮತ್ತು ಕಣ್ಣುಗಳಲ್ಲಿಯೇ ಕೆಂಡ ಉಗುಳೋ ಪರಿಗೆ ಫಿದಾ ಆಗದ ಪ್ರೇಕ್ಷಕರೇ ಸಿಗಲಿಕ್ಕಿಲ್ಲ. ಸುಮ್ಮನೆ ಕ್ಯಾಮೆರಾದೆದುರು ನಿಂತು ಒಂದೆರಡು ಎಕ್ಸ್‍ಪ್ರೆಷನ್ನುಗಳ ಮೂಲಕವೇ ಸಂಚಲನ ಮೂಡಿಸೋ ತಾಖತ್ತಿರುವ ಶರತರ್ ಲೋಹಿತಾಶ್ವಾ ಇಲ್ಲಿ ಮೀನುಗಾರರ ಸಮುದಾಯದ ಮುಖಡನ ಪಾತ್ರಕ್ಕೆ ಜೀವ ತುಂಬಿದ್ದಾರಾ, ಅವರು ಗ್ಯಾಂಗ್‍ಸ್ಟರ್ ಆಗಿ ನಟಿಸಿದ್ದಾರಾ ಎಂಬೆಲ್ಲ ಕುತೂಹಲಗಳು ಇದ್ದೇ ಇವೆ. ಒಟ್ಟಾರೆಯಾಗಿ ಅವರು ರಗಡ್ ಉಡುಂಬಾಗೆ ಎದುರಾಗಿ ಅವನಂತೆಯೇ ಅಬ್ಬರಿಸಿ ಪ್ರತಿರೋಧ ತೋರೋ ಪಾತ್ರದಲ್ಲಿ ನಟಿಸಿರೋದಂತೂ ನಿಜ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Anandpur: ಮುಂದುವರೆದ ಕಾಡಾನೆಗಳ ದಾಳಿ… ಇಲಾಖೆ ವಿರುದ್ಧ ರೈತರ ಆಕ್ರೋಶ
ನಾನು ಶೀಶಮಹಲ್ ಕಟ್ಟಿಲ್ಲ, ಜನರಿಗೆ ಮನೆ ಕಟ್ಟಿಸಿದ್ದೇನೆ: ಕೇಜ್ರಿವಾಲ್ ಗೆ ಮೋದಿ ಟಾಂಗ್
Venur; ಚಿರತೆ ಓಡಾಟ; ಸಾರ್ವಜನಿಕರಲ್ಲಿ ಆತಂಕ; ಅರಣ್ಯಾಧಿಕಾರಿ- ಸಾರ್ವಜನಿಕರ ಸಭೆ
Bengaluru:ಕುಡಿದ ಅಮಲಲ್ಲಿದ್ದ ಚಾಲಕ; ರಕ್ಷಣೆಗಾಗಿ ಚಲಿಸುತ್ತಿದ್ದ ರಿಕ್ಷಾದಿಂದ ಜಿಗಿದ ಮಹಿಳೆ
Governor: ಮಣಿಪುರದ 19 ನೇ ರಾಜ್ಯಪಾಲರಾಗಿ ಅಜಯ್ ಭಲ್ಲಾ ಪ್ರಮಾಣ ವಚನ ಸ್ವೀಕಾರ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.