Upendra Birthday: ಉಪೇಂದ್ರ ಬರ್ತ್‌ಡೇಗೆ ʼಯುಐʼನಿಂದ ಬಂತು ಹೊಸ ಪೋಸ್ಟರ್
Team Udayavani, Sep 18, 2024, 10:58 AM IST
ಬೆಂಗಳೂರು: ನಟ ಉಪೇಂದ್ರ (Actor Upendra) ಅವರಿಗೆ ಇಂದು ಹುಟ್ಟುಹಬ್ಬದ ಸಂಭ್ರಮ. ಈ “ಬುದ್ಧಿವಂತ’ನ ಹುಟ್ಟುಹಬ್ಬವನ್ನು ಆಚರಿಸಲು ಅಭಿಮಾನಿಗಳು ಕಾಯುತ್ತಿದ್ದಾರೆ. ಉಪ್ಪಿ ಕೂಡಾ ಕತ್ರಿಗುಪ್ಪೆಯ ತಮ್ಮ ಮನೆಯಲ್ಲಿ ಅಭಿಮಾನಿಗಳ ಜೊತೆಗೆ ಬರ್ತ್‌ಡೇ ಆಚರಿಸಲಿದ್ದಾರೆ.
ಈ ನಡುವೆಯೇ ಉಪೇಂದ್ರ ಅವರ “ಯುಐ’ (UI MOVIE) ಸಿನಿಮಾ ಬಿಡುಗಡೆಯ ಹಂತಕ್ಕೆ ಬಂದಿದ್ದು, ಆ ಕುರಿತಾದ ಅಪ್ ಡೇಟ್ ಕೂಡಾ ಹೊರಬಿದ್ದಿದೆ. ಕೊಂಬು ಇರುವ ಕುದುರೆ ಮೇಲೆ ಕೂತಿರುವ ಹೊಸ ಪೋಸ್ಟರ್ ರಿಲೀಸ್ ಮಾಡಿ ಸಿನಿಮಾದ ಬಗ್ಗೆ ಮತ್ತಷ್ಟು ಕುತೂಹಲವನ್ನು ಹೆಚ್ಚಿಸಿದ್ದಾರೆ ಉಪ್ಪಿ. ಇದೇ ಅಕ್ಟೋಬರ್ ತಿಂಗಳಿನಲ್ಲಿ ಸಿನಿಮಾ ರಿಲೀಸ್ ಆಗಲಿದೆ ಎಂದು ಚಿತ್ರತಂಡ ಹೇಳಿದೆ.
ಉಪೇಂದ್ರ ನಿರ್ದೇಶನದ ಸಿನಿಮಾ ಎಂದರೆ ಅಲ್ಲಿ ತಲೆಗೆ ಹುಳ ಬಿಡಲಾಗುತ್ತದೆ, ಮೊದಲ ವೀಕ್ಷಣೆಗೆ ಸಿನಿಮಾ ಅರ್ಥವಾಗಲ್ಲ, ತುಂಬಾ ಕನ್‌ಫ್ಯೂಸ್ ಮಾಡುತ್ತಾರೆ ಎಂಬುದು ಹಳೆಯ ವಾದ. ಆದರೆ, “ಯು-ಐ’ ವಿಚಾರದಲ್ಲಿ ಉಪೇಂದ್ರ ಬದಲಾಗಿದ್ದಾರೆ. ಹೊಸದೇನೋ ತೋರಿಸಲು ಹೊರಟಿದ್ದಾರೆ.
ಈ ಬಾರಿ ನೋ ಕನ್‌ಫ್ಯೂಸ್, ಕೇವಲ ಕನ್ವಿನ್ಸ್ ಎನ್ನಲಾಗುತ್ತಿದೆ. ಈ ಹಿಂದೆ ಉಪೇಂದ್ರ ಹೇಳಿದಂತೆ, “ನಾನು ಯಾವತ್ತೂ ಕನ್ವಿನ್ಸ್ ಮಾಡೋಕೇ ಚಿತ್ರ ಮಾಡೋದು. ಅದರೆ, ಕನ್‌ಫ್ಯೂ ಸ್ ಮಾಡ್ತೀನಿ ಅಂದುಕೊಳ್ಳುತ್ತಾರೆ. ಸತ್ಯನೇ ಗೊಂದಲ ಆಗಿಬಿಟ್ಟಿದೆ ನಮ್ಮ ಜನಕ್ಕೆ. ಅದು ಯಾರ ತಪ್ಪು. ಕನ್ವಿನ್ಸ್ ಆಗುವವರಿಗೆ ಕನ್ವಿನ್ಸ್ ಮಾಡುತ್ತೇನೆ. ಕನ್ ಫ್ಯೂಸ್ ಆಗುವವರು ಯಾವಾಗಲೂ ಕನ್‌ಫ್ಯೂಸ್ ಆಗಿಯೇ ಇರುತ್ತಾರೆ. ಸಿನಿಮಾ ದೃಶ್ಯ ಮಾಧ್ಯಮ. ದೃಶ್ಯ ನೋಡಿ ಕಲ್ಪನೆ ಮಾಡಿಕೊಳ್ಳಬೇಕು. ಒಬ್ಬ ಚಿತ್ರ ಕಲಾವಿದ ಒಂದು ಚಿತ್ರ ಬರೆಯುತ್ತಾನೆ. ಅದನ್ನು ಅವನೇ ಚೆನ್ನಾಗಿದೆ ಎಂದರೆ ಚೆನ್ನಾಗಿರುತ್ತದಾ? ನೀವು ನೋಡಿ ಹೇಳಿದರೆ ಅದಕ್ಕೊಂದು ಬೆಲೆ ಇರುತ್ತದೆ’ ಎನ್ನುವುದು ಉಪ್ಪಿ ಮಾತು.
Wishing the man who’s been a ray of light breaking path defining norms – Real Star #Upendra a very Happy Birthday ❤️🔥❤️🔥
He’s blazing a path of glory set to redefine cinema once again this October 💥💥#HBDUpendra ❤️
– Team #UiTheMovie #UppiDirects #Upendra @nimmaupendra… pic.twitter.com/PmmVs1WqBf— Lahari Music (@LahariMusic) September 18, 2024
ಪ್ರೇಕ್ಷಕರಿಗೆ ಹೊಸದೇನೋ ನೀಡಬೇಕೆಂದು ಚಿತ್ರತಂಡ ಪ್ರಯತ್ನಿಸುತ್ತಿದ್ದು, ಅದರ ಮೊದಲ ಹಂತವಾಗಿ ಹಾಡುಗಳ ಲೈವ್ ರೆಕಾರ್ಡಿಂಗ್‌ಗೆ ಹಂಗೇರಿಯಾದ ಬುಡಾಪೆಸ್ಟ್‌ಗೆ ತೆರಳಿದೆ. ಹಂಗೆರಿಯ ಪ್ರಮುಖ ನಗರ ಬುಡಾಪೆಸ್ಟ್ ನಲ್ಲಿ ಹಾಡಿನ ರೆಕಾರ್ಡ್ ಮಾಡಿದೆ. 90-ಪೀಸ್ ಆರ್ಕೆಸ್ಟ್ರಾ ಬಳಸಿ ಸಂಗೀತವನ್ನು ರೆಕಾರ್ಡ್ ಮಾಡುವ ಮೂಲಕ ಹಾಡಲ್ಲಿ ಹೊಸ ಫೀಲ್ ಸಿಗಲಿದೆ.
ಉಪೇಂದ್ರ ನಿರ್ದೇಶನದ ʼಯುಐʼ ಸಿನಿಮಾಕ್ಕೆ ಕೆ.ಪಿ ಶ್ರೀಕಾಂತ್, ಜಿ.ಮನೋಹರನ್ ಬಂಡವಾಳ ಹಾಕಿದ್ದಾರೆ. ರೀಷ್ಮಾ ನಾಣಯ್ಯ ನಾಯಕಿಯಾಗಿ ಕಾಣಿಸಿಕೊಳ್ಳಲಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Nodidavaru Enanthare Movie: ನವೀನ್ ಶಂಕರ್ ಚಿತ್ರದ ಟೀಸರ್ ಬಂತು
BBK11: ಸತತ ಮೂರನೇ ವಾರವೂ ಕಳಪೆ ಪಟ್ಟಿ: ಖುಷಿಯಿಂದಲೇ ಜೈಲು ಸೇರಿದ ಚೈತ್ರಾ
Dhruva-Prem: ಡಿ.24ಕ್ಕೆ ʼಕೆಡಿʼ ಶಿವ ಶಿವ ಹಾಡು ರಿಲೀಸ್
Dhruva Sarja: ಪ್ರತಿ ಸಿನಿಮಾವೂ ನನಗೆ ಹೊಸ ಪಾಠ…: ಧ್ರುವ ಹೇಳಿದ್ದೇನು
Kiccha Sudeepa; ತಾಯಿಯನ್ನು ಉಳಿಸಿಕೊಳ್ಳಲಾಗದ ಆ ಕ್ಷಣ ನಾನು ಯೂಸ್‌ಲೆಸ್ ಅನಿಸಿತು…
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Jayadeva Hospital ಉದ್ಘಾಟನಾ ಸಮಾರಂಭದಿಂದ ದೂರ ಉಳಿದ ಸಚಿವ ಪ್ರಿಯಾಂಕ್ ಖರ್ಗೆ
Kalaburagi; ಜಾಹೀರಾತು, ಫಲಕದಲ್ಲಿ ಹೆಸರಿಲ್ಲ: ಶಾಸಕ ಅಲ್ಲಮಪ್ರಭು ಬೆಂಬಲಿಗರಿಂದ ಪ್ರತಿಭಟನೆ
Viral: ಲಿಂಗ ಪರಿವರ್ತನೆ ಸರ್ಜರಿಗೆ ಒಳಗಾಗಿ ಪ್ರೀತಿಸಿದ ಯುವತಿ ಜತೆ ವಿವಾಹವಾದ ಮಹಿಳೆ.!
Kalaburagi: ವರದಿ ನಂತರ ತೊಗರಿ ಹಾನಿಗೆ ಪರಿಹಾರ ನಿರ್ಧಾರ: ಸಿಎಂ ಸಿದ್ದರಾಮಯ್ಯ
ಕೊಡುವುದರಿಂದ ಕೊರತೆಯಾಗದು!
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.