ಮತ್ತೆ ಬಂದ ಉಮಾಶ್ರೀ
ನಟನೆ ನನ್ನುಸಿರು- ಪುಟ್ಮಲ್ಲಿ ಮಾತು
Team Udayavani, Dec 21, 2019, 7:01 AM IST
ಹಿರಿಯ ನಟಿ ಉಮಾಶ್ರೀ ಮತ್ತೆ ಸುದ್ದಿಯಾಗಿದ್ದಾರೆ. ಹೌದು, ಇಷ್ಟು ದಿನ ರಾಜಕೀಯ ರಂಗದಲ್ಲಿ ಬಿಝಿಯಾಗಿದ್ದ ಅವರೀಗ ನಟನೆಯತ್ತ ವಾಲಿದ್ದಾರೆ. ಬಹಳ ಗ್ಯಾಪ್ ಬಳಿಕ ಉಮಾಶ್ರೀ ಕಿರುತೆರೆಗೆ ಎಂಟ್ರಿಯಾಗಿದ್ದಾರೆ. “ಆರತಿಗೊಬ್ಬ ಕೀರ್ತಿಗೊಬ್ಬ’ ಧಾರಾವಾಹಿಯಲ್ಲಿ ಅಮ್ಮನ ಪಾತ್ರ ನಿರ್ವಹಿಸುತ್ತಿರುವ ಉಮಾಶ್ರೀ, ಈಗ ಬರುತ್ತಿರುವ ಅವಕಾಶಗಳನ್ನು ಒಪ್ಪಿಕೊಳ್ಳುತ್ತಿದ್ದಾರೆ. ಸದ್ಯಕ್ಕೆ ಅವರು ರಂಗಭೂಮಿಯಲ್ಲೂ ಸಕ್ರಿಯರಾಗುತ್ತಿದ್ದು, ಏಕಪಾತ್ರಾಭಿನಯ ಇರುವ ನಾಟಕವೊಂದರಲ್ಲಿ ನಟಿಸುವ ತಯಾರಿ ಮಾಡಿಕೊಳ್ಳುತ್ತಿದ್ದಾರೆ.
ಅದಕ್ಕಾಗಿಯೇ ಸ್ಕ್ರಿಪ್ಟ್ ಕೂಡ ನಡೆಯುತ್ತಿದೆ ಎಂಬುದು ಅವರ ಮಾತು. ರಾಜಕೀಯದಲ್ಲಿ ಬಿಝಿಯಾಗಿದ್ದ ಅವರಿಗೆ ನಟಿಸುವ ಅವಕಾಶ ಬಂದಿದ್ದರೂ, ನಿರಾಕರಿಸಿದ್ದರು. ಕಾರಣ, ಸಿನಿಮಾ ಒಪ್ಪಿಕೊಂಡು ಹೇಳಿದ ಸಮಯಕ್ಕೆ ಹೋಗದಿದ್ದರೆ, ನಿರ್ಮಾಣ ಸಂಸ್ಥೆಗೆ ಸಮಸ್ಯೆಯಾಗುತ್ತೆ, ಉಳಿದ ಕಲಾವಿದರಿಗೂ ತೊಂದರೆ ಆಗುತ್ತೆ ಎಂಬ ಕಾರಣಕ್ಕೆ ಅವರು ಒಪ್ಪಿರಲಿಲ್ಲವಂತೆ. ಈಗ ನಟನೆಯತ್ತ ತಮ್ಮ ಚಿತ್ತ ಹರಿಸಿದ್ದು, ಕಿರುತೆರೆ ಮೂಲಕ ನಟನೆ ಯಾನ ಶುರು ಮಾಡಿದ್ದಾರೆ.
“ನಟನೆ ನನ್ನುಸಿರು’ ಒಳ್ಳೆಯ ಪಾತ್ರ, ಕಥೆ ಸಿಕ್ಕರೆ, ಹಿರಿತೆರೆ, ಕಿರುತೆರೆ ಯಾವುದೇ ಇರಲಿ ಕೆಲಸ ಮಾಡುವುದಾಗಿ ಹೇಳಿದ್ದಾರೆ. ಅವರಿಗೆ ರಾಜಕೀಯ ರಂಗದಲ್ಲಿರುವಾಗಲೇ ಒಂದಷ್ಟು ಅವಕಾಶ ಬಂದಿದ್ದುಂಟು. ಆದರೆ, ಸರ್ಕಾರದ ಕೆಲಸದ ಒತ್ತಡದಿಂದಾಗಿ ನಟಿಸಲು ಸಾಧ್ಯವಾಗಿರಲಿಲ್ಲವಂತೆ. ಈ ಹಿಂದೆ ಕೂಡ ಉಮಾಶ್ರೀ ಅವರು, “ಅಮ್ಮ’ ಎಂಬ ಧಾರಾವಾಹಿಯಲ್ಲಿ ನಟಿಸಿದ್ದರು. ಈಗ ಪುನಃ ಕಿರುತರೆ ಪ್ರವೇಶಿಸಿದ್ದಾರೆ. ಬೇರೆ ಧಾರಾವಾಹಿಯಲ್ಲಿ ಅವಕಾಶ ಬಂದರೂ, ಸಮಯ ಹೊಂದಿಸಿಕೊಂಡು ಕೆಲಸ ಮಾಡುವ ನಿರ್ಧಾರ ಮಾಡಿದ್ದಾರೆ.
ಇನ್ನು, ಇದರೊಂದಿಗೆ ವಾಹಿನಿಯೊಂದರಲ್ಲಿ ಮಕ್ಕಳ ರಿಯಾಲಿಟಿ ಶೋನಲ್ಲೂ ಕಾಣಿಸಿಕೊಳ್ಳುತ್ತಿದ್ದಾರಂತೆ. ಇಷ್ಟು ದಿನ ರಾಜಕೀಯದ ಕೆಲಸಗಳ ನಡುವೆ ಅವರು ಸಿನಿಮಾ, ರಂಗಭೂಮಿಯಿಂದ ತುಸು ದೂರವಿದ್ದರು. ಅಷ್ಟೇ ಅಲ್ಲ, ಮನೆ, ಮಕ್ಕಳು, ಮೊಮ್ಮಕ್ಕಳ ಜೊತೆಗೂ ಕಾಲ ಕಳೆಯಲು ಸಮಯ ಸಿಕ್ಕಿರಲಿಲ್ಲ. ಈಗ ಅವರು, ನಟನೆಯ ಜೊತೆ ಜೊತೆಗೆ ಮನೆ, ಮಕ್ಕಳು, ಮೊಮ್ಮಕ್ಕಳ ಜೊತೆ ಸಮಯ ಕಳೆಯಲು ನಿರ್ಧರಿಸಿದ್ದಾರಂತೆ. ಅದೇನೆ ಇರಲಿ, ಪುಟ್ಮಲ್ಲಿ ಎಂದೇ ಕರೆಸಿಕೊಳ್ಳುವ ಉಮಾಶ್ರೀ ಅವರೀಗ ನಟನೆಯತ್ತ ಗಮನಹರಿಸಿರುವುದು ಚಿತ್ರರಂಗದ ಮಂದಿ ಮೊಗದಲ್ಲಂತೂ ಖುಷಿ ತಂದಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Sudeep: ʼಮ್ಯಾಕ್ಸ್ʼ ರಿಲೀಸ್ ದಿನ ಫಿಕ್ಸ್: ಕಿಚ್ಚನ ಸಿಟ್ಟಿಗೆ ಎಚ್ಚೆತ್ತ ನಿರ್ಮಾಣ ಸಂಸ್ಥೆ
BBK11: ಕಣ್ಣೀರುಡುತ್ತಲೇ ಬಿಗ್ ಬಾಸ್ ಮನೆಯಿಂದ ಆಚೆ ಬಂದ ಧರ್ಮ ಕೀರ್ತಿರಾಜ್
Kannada Cinema: ‘ರುದ್ರಾಭಿಷೇಕಂ’ನಲ್ಲಿ ವಿಜಯ್ ರಾಘವೇಂದ್ರ
Health Issue: ಸರ್ಜರಿಗಾಗಿ ಮುಂದಿನ ತಿಂಗಳು ಅಮೆರಿಕಕ್ಕೆ ಹೋಗುವೆ: ನಟ ಶಿವರಾಜ್‌ಕುಮಾರ್
BBK11: ಚೈತ್ರಾ ಅವರೇ ನನ್ನ ಬಾಸ್.. ಅವರ ಹೆಜ್ಜೆ ಫಾಲೋ ಮಾಡ್ತೇನೆ ಎಂದ ರಜತ್
MUST WATCH
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಹೊಸ ಸೇರ್ಪಡೆ
Kundapura: ಮೋಜಿನ ತಾಣಗಳಾಗುತ್ತಿರುವ ಬೀಚ್‌ಗಳು-ಕಡಲಾಮೆಗೆ ಅಪಾಯ!
Vijayapura: ಅಪಹರಿಸಿದ ಮಗು ಮರಳಿಸಿದ ಅಪರಿಚಿತ!: ಕಂದಮ್ಮನ ಕಿಡ್ನ್ಯಾಪ್ ಕೇಸ್ ಸುಖಾಂತ್ಯ
BBK11: ಧರ್ಮ ಬಿಗ್ ಬಾಸ್ ಆಟಕ್ಕೆ ತೊಡಕಾದ ಅಂಶಗಳೇನು? ʼಚಾಕ್ಲೇಟ್ ಹೀರೋʼ ಎಡವಿದ್ದೆಲ್ಲಿ?
Maharashtra: ಕಾಂಗ್ರೆಸ್ ಗೆ ಕೇವಲ 16 ಸ್ಥಾನ; ಕೈ ಅಧ್ಯಕ್ಷ ಸ್ಥಾನಕ್ಕೆ ಪಟೋಲೆ ರಾಜೀನಾಮೆ
Politics: ಫಡ್ನವೀಸ್ ಗೆ ಬೆಂಬಲ ನೀಡಿದ ಅಜಿತ್; ಮಹಾರಾಷ್ಟ್ರದಲ್ಲಿ ಮುಗಿಯದ ಸಿಎಂ ತಿಕ್ಕಾಟ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.