Sandalwood Movies: ಈ ವಾರ ತೆರೆಗೆ ಬರುತ್ತಿವೆ 6 ಸಿನಿಮಾ
Team Udayavani, Nov 1, 2023, 10:31 AM IST
ವರ್ಷದ ಕೊನೆ ಹತ್ತಿರವಾಗುತ್ತಿದ್ದಂತೆ, ಸ್ಯಾಂಡಲ್‌ವುಡ್‌ನಲ್ಲಿ ಸಿನಿಮಾಗಳ ಬಿಡುಗಡೆಯ ಸಂಖ್ಯೆಯೂ ವಾರದಿಂದ ವಾರಕ್ಕೆ ಹೆಚ್ಚಾಗುತ್ತಿದೆ. ನವೆಂಬರ್ ಮೊದಲ ಶುಕ್ರವಾರ (ನ. 3ಕ್ಕೆ) ಕನ್ನಡದಲ್ಲಿ ಸದ್ಯ ಆರು ಸಿನಿಮಾಗಳು ತಮ್ಮ ಬಿಡುಗಡೆಯನ್ನು ಅಧಿಕೃತವಾಗಿ ಘೋಷಿಸಿಕೊಂಡಿದ್ದು, ಈ ವಾರ ತೆರೆಗೆ ಬರುತ್ತಿವೆ. ಬಿಡುಗಡೆಗೆ ಸಿದ್ಧವಾಗಿರುವ ವಿಭಿನ್ನ ಶೈಲಿಯ ಬೇರೆ ಬೇರೆ ಸಿನಿಮಾಗಳ ಸಣ್ಣ ಹೈಲೈಟ್ಸ್ ಇಲ್ಲಿದೆ.
ಟಿ.ಆರ್.ಪಿ ರಾಮ: ಈಗಾಗಲೇ ಟ್ರೇಲರ್ ಮತ್ತು ಹಾಡುಗಳ ಮೂಲಕ ಭರ್ಜರಿ ಪ್ರಚಾರ ನಡೆಸುತ್ತಿರುವ “ಟಿ.ಆರ್.ಪಿ ರಾಮ’ ಸಿನಿಮಾ ಈ ವಾರ ತೆರೆಗೆ ಬರುತ್ತಿದೆ.
ಹಿರಿಯ ನಟಿ ಮಹಾಲಕ್ಷ್ಮೀ ಸುಮಾರು ಮೂವತ್ತು ವರ್ಷಗಳ ಬಳಿಕ “ಟಿ.ಆರ್.ಪಿ ರಾಮ’ ಸಿನಿಮಾದ ಮೂಲಕ ಮತ್ತೆ ಕನ್ನಡ ಚಿತ್ರರಂಗಕ್ಕೆ ಕಂ ಬ್ಯಾಕ್ ಆಗುತ್ತಿದ್ದಾರೆ. ನಿರ್ದೇಶಕ ರವಿ ಪ್ರಸಾದ್ “ಟಿ.ಆರ್.ಪಿ ರಾಮ’ ಸಿನಿಮಾವನ್ನು ನಿರ್ದೇಶನ ಮಾಡಿದ್ದು, ಜೊತೆಗೆ ನಾಯಕನಾಗಿಯೂ ತೆರೆಮೇಲೆ ಕಾಣಿಸಿಕೊಂಡಿದ್ದಾರೆ.
“ಅಶುತೋಶ್ ಪಿಕ್ಚರ್’ ಬ್ಯಾನರ್‌ನಲ್ಲಿ ನಿರ್ಮಾಣವಾಗಿರುವ “ಟಿ.ಆರ್.ಪಿ ರಾಮ’ ಸಿನಿಮಾದಲ್ಲಿ ಹಿರಿಯ ನಟಿ ಮಹಾಲಕ್ಷ್ಮೀ, ರವಿಪ್ರಸಾದ್ ಅವರೊಂದಿಗೆ ಗಾಯಕಿ ಸ್ಪರ್ಶ, ಪಲ್ಲವಿ ಪರ್ವ ಇತರ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ.
“ಟಿ.ಆರ್.ಪಿ ರಾಮ’ ಸಿನಿಮಾದ ಹಾಡುಗಳಿಗೆ ರಾಜ್ ಗುರು ಹೊಸಕೋಟೆ ಸಂಗೀತ ಸಂಯೋಜಿಸಿದ್ದು, ಗುರು ಪ್ರಸಾದ್ ಛಾಯಾಗ್ರಹಣ, ಸುನಿಲ್ ಕಶ್ಯಪ್ ಸಂಕಲನವಿದೆ. ರಾಕೇಶ್ ಆಚಾರ್ಯ ಹಿನ್ನೆಲೆ ಸಂಗೀತ, ಪ್ರವೀಣ್ ಸೂಡ ಸಂಭಾಷಣೆ ಈ ಚಿತ್ರಕ್ಕಿದೆ.
ಒಂದಷ್ಟು ನೈಜ ಘಟನೆಗಳನ್ನು ಆಧರಿಸಿ ಜೊತೆಗೊಂದಷ್ಟು ಕಮರ್ಷಿಯಲ್ ಎಂಟರ್‌ಟೈನ್ಮೆಂಟ್ ಅಂಶಗಳನ್ನು ಇಟ್ಟುಕೊಂಡು “ಟಿ.ಆರ್.ಪಿ ರಾಮ’ ತೆರೆಗೆ ಬರುತ್ತಿದೆ.
ಸೈಕಲ್ ಸವಾರಿ: ಸಂಪೂರ್ಣ ಉತ್ತರ ಕರ್ನಾಟಕ ಸೊಗಡಿನ ಭಾಷೆ ಮತ್ತು ಅಲ್ಲಿಯ ಕಥೆಯನ್ನು ಹೊಂದಿರುವ “ಸೈಕಲ್ ಸವಾರಿ’ ಸಿನಿಮಾ ಈ ವಾರ ಬಿಡುಗಡೆಯಾಗುತ್ತಿದೆ.
“ಸೈಕಲ್ ಸವಾರಿ’ ಸಿನಿಮಾಕ್ಕೆ ನಿರ್ದೇಶಕ ದೇವು ಕೆ. ಅಂಬಿಗ ಕಥೆ, ಚಿತ್ರಕಥೆ ಬರೆದು ಆ್ಯಕ್ಷನ್-ಕಟ್ ಹೇಳಿದ್ದು, ಅವರೇ ನಾಯಕನಾಗಿಯೂ ನಟಿಸಿದ್ದಾರೆ. ಬಿಜಾಪುರದ ದೀಕ್ಷಾ ಬೀಸೆ ನಾಯಕಿಯಾಗಿ ಕಾಣಿಸಿಕೊಂಡಿದ್ದಾರೆ.
ಹಳ್ಳಿಯಲ್ಲಿ ಮಿಠಾಯಿ ಮಾರಿಕೊಂಡು ಜೀವನ ನಡೆಸುತ್ತಿದ್ದ ಯುವಕನೊಬ್ಬನನ್ನು ಶ್ರೀಮಂತ ಮನೆತನದ ಯುವತಿಯು ಪ್ರೀತಿಸಿದಾಗ ಏನಾಗಬಹುದು ಎಂಬುದರ ಸುತ್ತ ಇಡೀ ಸಿನಿಮಾದ ಕಥಾಹಂದರ ಸಾಗುತ್ತದೆ. “ಕಲಾರಂಗ್ ಫಿಲಂ ಸ್ಟುಡಿಯೋ ಅಂಡ್ ಪೊ›ಡಕ್ಷನ್ಸ್’ ಬ್ಯಾನರ್‌ನಲ್ಲಿ ಸುರೇಶ್ ಶಿವೂರ ಹಾಗೂ ಲೋಕೇಶ್ ಸವದಿ ಈ ಚಿತ್ರವನ್ನು ನಿರ್ಮಿಸಿದ್ದಾರೆ. ಕಾವ್ಯ, ಶಿವಾಜಿ ಮೆಟಗಾರ್, ಗೀತಾ ರಾಘವೇಂದ್ರ ಮೊದಲಾದವರು “ಸೈಕಲ್ ಸವಾರಿ’ ಸಿನಿಮಾದ ಪ್ರಮುಖ ಪಾತ್ರಗಳಲ್ಲಿ ಅಭಿನಯಿಸಿದ್ದಾರೆ.
ಚಿತ್ರಕ್ಕೆ ರೋಹನ್ ಎಸ್. ದೇಸಾಯಿ ಸಂಗೀತ ಮತ್ತು ಛಾಯಾಗ್ರಹ ಕಾರ್ಯ ನಿರ್ವಹಿಸಿದ್ದಾರೆ. ಲವ್ ಕಂ ಸೆಂಟಿಮೆಂಟ್ ಕಥಾಹಂದರ ಹೊಂದಿರುವ “ಸೈಕಲ್ ಸವಾರಿ’ ಸಿನಿಮಾವನ್ನು ಬಹುತೇಕ ಉತ್ತರ ಕರ್ನಾಟಕ ಭಾಗದಲ್ಲೇ ಚಿತ್ರೀಕರಣ ಮಾಡಲಾಗಿದೆ.
ಭಾವಪೂರ್ಣ: ಈ ಹಿಂದೆ “ಮದಿಪು’, “ವರ್ಣಪಟಲ’ ಸಿನಿಮಾಗಳನ್ನು ನಿರ್ದೇಶಿಸಿದ್ದ ನಿರ್ದೇಶಕ ಚೇತನ್ ಮುಂಡಾಡಿ ಈ ಬಾರಿ “ಭಾವಪೂರ್ಣ’ ಎಂಬ ಮತ್ತೂಂದು ವಿಶೇಷ ಕಥನವನ್ನು ಪ್ರೇಕ್ಷಕರ ಮುಂದೆ ತರುವ ತಯಾರಿಯಲ್ಲಿದ್ದಾರೆ. ಈಗಾಗಲೇ ತನ್ನ ಟೈಟಲ್, ಟ್ರೇಲರ್ ಮತ್ತು ಹಾಡುಗಳ ಮೂಲಕ ಒಂದಷ್ಟು ಗಮನ ಸೆಳೆದಿರುವ “ಭಾವಪೂರ್ಣ’ ಸಿನಿಮಾ ಈ ವಾರ ರಾಜ್ಯಾದ್ಯಂತ ತೆರೆಗೆ ಬರುತ್ತಿದೆ.
“ಭಾವಪೂರ್ಣ’ ಸಿನಿಮಾದಲ್ಲಿ ಹಿರಿಯ ನಟ ರಮೇಶ್ ಪಂಡಿತ್ ಮುಖ್ಯ ಪಾತ್ರದಲ್ಲಿ ಅಭಿನಯಿಸಿದ್ದಾರೆ. ಉಳಿದಂತೆ ಅಥರ್ವ ಪ್ರಕಾಶ್, ಮಂಜುನಾಥ ಹೆಗ್ಡೆ, ಶೈಲಶ್ರೀ ಧರ್ಮೇಂದ್ರ ಅರಸ್, ವಿನ್ಯಾ ಚೇತನ್ ರೈ, ಮಂಗಳಾ, ಎಂ. ಕೆ ಮಠ, ನಾಗೇಂದ್ರ ಶಾ, ಶಿವಾಜಿರಾವ್ ಜಾಧವ್, ಪವನ ಮೊದಲಾದವರು ಸಿನಿಮಾದ ಪ್ರಮುಖ ಪಾತ್ರಗಳಲ್ಲಿ ಅಭಿನಯಿಸಿದ್ದಾರೆ.
“ಜಿ.ಎಲ್ ಮೋಶನ್ ಪಿಕ್ಚರ್’ ಬ್ಯಾನರಿನಲ್ಲಿ ಪ್ರಶಾಂತ್ ಅಂಜನಪ್ಪ ನಿರ್ಮಾಣದಲ್ಲಿ ಮೂಡಿಬರುತ್ತಿರುವ “ಭಾವಪೂರ್ಣ’ ಸಿನಿಮಾಕ್ಕೆ ಚೇತನ್ ಮುಂಡಾಡಿ ಕಥೆ, ಚಿತ್ರಕಥೆ ಬರೆದು ನಿರ್ದೇಶನ ಮಾಡಿದ್ದಾರೆ. ಚಿತ್ರದ ಹಾಡುಗಳಿಗೆ ವಿ. ಮನೋಹರ್ ಸಂಗೀತ ಸಂಯೋಜಿಸಿದ್ದು, ಅಕ್ಷಯ್ ಎಸ್. ರಿಷಭ್ ಹಿನ್ನೆಲೆ ಸಂಗೀತ ನೀಡಿದ್ದಾರೆ. ಚಿತ್ರಕ್ಕೆ ಪ್ರಸನ್ನ ಗೊರಲಕೆರೆ ಛಾಯಾಗ್ರಹಣ, ಕೀರ್ತಿರಾಜ್ ಡಿ. ಸಂಕಲನವಿದೆ. ಅಂಕೋಲ, ತಾಳಗುಪ್ಪ, ಸೌತಡ್ಕ ಸುತ್ತಮುತ್ತ “ಭಾವಪೂರ್ಣ’ ಸಿನಿಮಾದ ಚಿತ್ರೀಕರಣ ನಡೆಸಲಾಗಿದೆ.
ಗರುಡ ಪುರಾಣ: “27 ಫ್ರೆàಮ್ ಕ್ರಿಯೇಷನ್ಸ್’ ಬ್ಯಾನರಿನಲ್ಲಿ ಸಿಂಧು ಕೆ. ಎಂ ಮತ್ತು ಬಿ. ಎಲ್ ಯೋಗೇಶ್ ಕುಮಾರ್ ನಿರ್ಮಿಸಿರುವ, ಮಂಜುನಾಥ್ ಬಿ. ನಾಗಬಾ ಕಥೆ, ಚಿತ್ರಕಥೆ ಬರೆದು ಸಂಕಲನ ಮಾಡಿ ನಿರ್ದೇಶಿಸಿರುವ “ಗರುಡ ಪುರಾಣ’ ಸಿನಿಮಾ ಈ ವಾರ ತೆರೆಗೆ ಬರುತ್ತಿದೆ.
“ಕಾಂತಾರ’ ಸೇರಿದಂತೆ ಅನೇಕ ಚಿತ್ರಗಳಿಗೆ ಆನ್‌ಲೈನ್ ಎಡಿಟರ್ ಆಗಿ ಕೆಲಸ ಮಾಡಿರುವ ಮಂಜುನಾಥ್ ಬಿ. ನಾಗಬಾ ಈ “ಗರುಡ ಪುರಾಣ’ ಸಿನಿಮಾದ ಮೂಲಕ ಹೀರೋ ಆಗಿ ಚಿತ್ರರಂಗಕ್ಕೆ ಪರಿಚಯವಾಗುತ್ತಿದ್ದಾರೆ.
ಅಂದಹಾಗೆ, ಈ ಸಿನಿಮಾದ ಹೆಸರು “ಗರುಡ ಪುರಾಣ’ ಅಂತಿದ್ದರೂ ಈ ಸಿನಿಮಾ ಪುರಾಣ ಕಥೆಯನ್ನು ಹೊಂದಿರುವ ಸಿನಿಮಾವಲ್ಲ. ಸಿನಿಮಾದ ಕಥಾಹಂದರಕ್ಕೆ ಹೊಂದಿಕೆಯಾಗುತ್ತದೆ ಎಂಬ ಕಾರಣಕ್ಕೆ ಚಿತ್ರತಂಡ ತಮ್ಮ ಸಿನಿಮಾಕ್ಕೆ ಈ ಹೆಸರನ್ನಿಟ್ಟಿದೆ. ಸಸ್ಪೆನ್ಸ್ ಕಂ ಥ್ರಿಲ್ಲರ್ ಶೈಲಿಯಲ್ಲಿ ಮೂಡಿಬಂದಿರುವ ಈ ಸಿನಿಮಾದಲ್ಲಿ ನಿರ್ದೇಶಕ ಕಂ ನಾಯಕ ಮಂಜುನಾಥ್ ಬಿ. ನಾಗಬಾ ಅವರಿಗೆ ದಿಶಾ ಶೆಟ್ಟಿ ನಾಯಕಿಯಾಗಿ ಅಭಿನಯಿಸಿದ್ದಾರೆ.
ಉಳಿದಂತೆ ಚೆಲುವರಾಜು, ಸಂತೋಷ್ ಕರ್ಕಿ, ಕೆಂಚಣ್ಣ, ರಾಜಕುಮಾರ್, ಮಹೇಂದ್ರ ಗೌಡ ಮುಂತಾದವರು ಸಿನಿಮಾದ ಇತರ ಪ್ರಮುಖ ಪಾತ್ರಗಳಲ್ಲಿ ಅಭಿನಯಿಸಿದ್ದಾರೆ. “ಗರುಡ ಪುರಾಣ’ ಸಿನಿಮಾದ ಹಾಡುಗಳಿಗೆ ರಾಕೇಶ್ ಆಚಾರ್ಯ ಸಂಗೀತ ಸಂಯೋಜಿಸಿದ್ದು, ಪುನೀತ್ ಆರ್ಯ ಸಾಹಿತ್ಯವಿದೆ. ಚಿತ್ರಕ್ಕೆ ಸುನೀಲ್ ನರಸಿಂಹಮೂರ್ತಿ ಛಾಯಾಗ್ರಹಣವಿದೆ.
ಕ್ರೇಜಿ ಕೀರ್ತಿ: ಕೆಲ ತಿಂಗಳ ಹಿಂದಷ್ಟೇ ಟ್ರೇಲರ್ ಮೂಲಕ ಹೊರಬಂದಿರುವ “ಕ್ರೇಜಿ ಕೀರ್ತಿ’ ಸಿನಿಮಾ ಈ ವಾರ ತೆರೆಗೆ ಬರುತ್ತಿದೆ. ಬಾಲಾಜಿ ಮಾಧವ ಶೆಟ್ಟಿ ಈ ಸಿನಿ ಮಾವನ್ನು ನಿರ್ಮಿಸಿ, ಮೊದಲ ಬಾರಿಗೆ ನಿರ್ದೇಶಿಸಿದ್ದಾರೆ.
ಕಾಲೇಜಿನ ವಿದ್ಯಾರ್ಥಿಗಳ ಲೈಫ್ ಸ್ಟೈಲ್ ಮತ್ತು ರೊಮ್ಯಾಂಟಿಕ್ ಕಥಾಹಂದರ ಹೊಂದಿರುವ “ಕ್ರೇಜಿ ಕೀರ್ತಿ’ ಸಿನಿಮಾದಲ್ಲಿ ಚಿತ್ರದಲ್ಲಿ ಅಭಿಲಾಶ್ ನಾಯಕರಾಗಿ ನಟಿಸಿದ್ದಾರೆ. ಸಾರಿಕಾ ರಾವ್ ನಾಯಕಿಯಾಗಿ ಕಾಣಿಸಿಕೊಂಡಿದ್ದಾರೆ. ರಂಗಾಯಣ ರಘು, ಓಂ ಪ್ರಕಾಶ್ ರಾವ್, ಪದ್ಮಜಾ ರಾವ್, ಪ್ರಕಾಶ್ ಶೆಣೈ, ಆಶಾ ಸುಜಯ್ ಮತ್ತಿತರರು “ಕ್ರೇಜಿ ಕೀರ್ತಿ’ ಸಿನಿಮಾದ ಇತರ ಪ್ರಮುಖ ಪಾತ್ರಗಳಲ್ಲಿ ಅಭಿನಯಿಸಿದ್ದಾರೆ. ಮನೋಹರ ಛಾಯಾಗ್ರಹಣ ಮತ್ತು ಲಯ ಕೋಕಿಲ ಸಂಗೀತ ಈ ಸಿನಿಮಾಕ್ಕಿದೆ.
ಬಸ್ರಿಕಟ್ಟೆ : “ಬಸ್ರಿಕಟ್ಟೆ’ ಹೀಗೊಂದು ಸಿನಿಮಾ ಸದ್ದಿಲ್ಲದೇ ಚಿತ್ರೀಕರಣ ಮುಗಿಸಿದ್ದು, ಈ ವಾರ ಬಿಡು ಗ ಡೆಯಾಗಿ ತೆರೆಗೆ ಬರುತ್ತಿದೆ. ಇದೊಂದು ಹಾರರ್ ಕಂ ಸಸ್ಪೆನ್ಸ್ ಕಥಾಹಂದರದ “ಬಸ್ರಿಕಟ್ಟೆ’ ಸಿನಿಮಾವನ್ನು ನವ ನಿರ್ದೇ ಶಕ ವೈಭವ್ ಕಥೆ, ಚಿತ್ರಕಥೆ ಬರೆದು ನಿರ್ದೇಶನ ಮಾಡಿದ್ದಾರೆ.
ಅಂದ ಹಾಗೆ, “ಬಸ್ರಿಕಟ್ಟೆ’ ಊರಿಗೂ ಈ ಸಿನಿಮಾಕ್ಕೂ ಸಂಬಂಧವಿಲ್ಲ. “ಈ ಚಿತ್ರದಲ್ಲಿ ಸಿನಿಮ್ಯಾಟಿಕ್ ಫೀಲ್‌ಗಿಂತ ನ್ಯಾಚುರಲ್ ಆಗಿ ಮೂಡಿ ಬರಲಿ ಎಂಬ ಕಾರಣಕ್ಕೆ ರಿಯಲಿಸ್ಟಿಕ್ ಆಗಿಯೇ ಶೂಟಿಂಗ್ ಮಾಡಿದ್ದೇವೆ.
ಮಂಗಳೂರು, ಚಿಕ್ಕಮಗಳೂರು, ಮೂಡುಬಿದಿರೆ ಮೊದಲಾದ ಸ್ಥಳಗಳಲ್ಲಿ ಚಿತ್ರೀಕರಣ ನಡೆಸಲಾಗಿದೆ. ನಮ್ಮ ಚಿತ್ರದ ಟ್ರೇಲರ್ ನೋಡಿದವರು ಪ್ರಶಂಸೆ ವ್ಯಕ್ತಪಡಿಸಿದ್ದಾರೆ. ಟೆಕ್ನಿಕಲ್ ಆಗಿಯೂ ಸಿನಿಮಾ ತುಂಬಾ ಸ್ಟ್ರಾಂಗ್ ಆಗಿದೆ’ ಎಂಬುದು ವೈಭವ್ ಅನಿಸಿಕೆ. “ಗೀತಾಂಜಲಿ ಫಿಲಂಸ್’ ಬ್ಯಾನರ್ ಅಡಿಯಲ್ಲಿ ಪ್ರಶಾಂತ್ ಎನ್. ಪೈ ಈ ಚಿತ್ರವನ್ನು ನಿರ್ಮಿಸಿದ್ದಾರೆ.
ಕನ್ನಡದಲ್ಲಿ “ಕಿರಗೂರಿನ ಗಯ್ನಾಳಿಗಳು’, “ಕಾಫಿ ತೋಟ’ ಸೇರಿದಂತೆ ಮಲಯಾಳಂನ ಅನೇಕ ಸಿನಿಮಾಗಳಲ್ಲಿ ನಟಿಸಿರುವ ರಾಹುಲ್ ಮಾದೇವ್ ಈ ಸಿನಿಮಾದಲ್ಲಿ ನಾಯಕನಾಗಿ ಕಾಣಿಸಿಕೊಂಡಿದ್ದಾರೆ. “ಮುಂದಿನ ನಿಲ್ದಾಣ’ ಸಿನಿಮಾ ಖ್ಯಾತಿಯ ಅನನ್ಯಾ ಕಶ್ಯಪ್ ನಾಯಕಿಯಾಗಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Sandalwood: ಯಾರೋ ನಾ ಕಾಣೆ, ಚಂದಾಗೌಳೆ ಶಾಣೆ..: ಕಟ್ಲೆ ಹಾಡು ಬಂತು
Viral Photo: ಬಾಲಿವುಡ್ ನಟ ಆಮಿರ್ ಖಾನ್ ಭೇಟಿಯಾದ ಕಿಚ್ಚ ಸುದೀಪ್; ಫ್ಯಾನ್ಸ್ ಥ್ರಿಲ್
Renukaswamy Case: ದರ್ಶನ್ ಜಾಮೀನು ಅರ್ಜಿ ವಿಚಾರಣೆ ಮುಂದೂಡಿಕೆ
ZEBRA Movie: ಜೀಬ್ರಾ ಮೇಲೆ ಡಾಲಿ ಕಣ್ಣು
Drone Prathap: ಸಿನಿಮಾರಂಗಕ್ಕೆ ಡ್ರೋನ್ ಪ್ರತಾಪ್ ಎಂಟ್ರಿ; ಮೊದಲ ಚಿತ್ರದಲ್ಲೇ ಹೀರೋ
MUST WATCH
ಹೊಸ ಸೇರ್ಪಡೆ
AI world: ಕ್ರಿಮಿನಲ್‌ಗಳ ಜಾತಕವನ್ನೇ ಬಿಚ್ಚಿಡುವ ಎಐ ಆ್ಯಪ್!
ಹೊಸ ಟ್ರೆಂಡ್ ನ ಪ್ಯಾಂಟ್ ಧರಿಸಿದ ಯುವಕ;ಸ್ನೇಹಿತರಿಂದ ಅವಮಾನ, ನೊಂದ ಯುವಕ ಆತ್ಮಹತ್ಯೆಗೆ ಯತ್ನ
Perth Test: ಟೀಂ ಇಂಡಿಯಾಗಿಲ್ಲ ಶುಭಾರಂಭ: ಮೊದಲ ಸೆಶನ್ ನಲ್ಲೇ ಪರದಾಡಿದ ಬ್ಯಾಟರ್ ಗಳು
Siruguppa: ಜೋಡೆತ್ತಿನ ಬಂಡಿಗೆ ಡಿಕ್ಕಿ ಹೊಡೆದ ಬಸ್; ಎತ್ತು ಸಾವು
Tragedy: ಸ್ನೇಹಿತನ ಮದುವೆ ಮಂಟಪದಲ್ಲೇ ಕುಸಿದು ಬಿದ್ದು ಅಮೆಜಾನ್ ಉದ್ಯೋಗಿ ಮೃತ್ಯು
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.