Upendra: ಸೂಪರ್ ಸ್ಟಾರ್ ರಜಿನಿಕಾಂತ್ ʼಕೂಲಿʼ ಸಿನಿಮಾದಲ್ಲಿ ಬಣ್ಣ ಹಚ್ಚಲಿದ್ದಾರೆ ಉಪ್ಪಿ
Team Udayavani, Aug 24, 2024, 5:54 PM IST
ಬೆಂಗಳೂರು: ಸೂಪರ್ ಸ್ಟಾರ್ ರಜಿನಿಕಾಂತ್ (Rajinikanth) ಅವರ ʼವೆಟ್ಟೈಯನ್ʼ ಸಿನಿಮಾ ರಿಲೀಸ್ ಗೆ ರೆಡಿಯಾಗಿದೆ. ಈ ಖುಷಿಯಲ್ಲಿರುವ ಅವರ ಅಭಿಮಾನಿಗಳಿಗೆ ಅವರ ಮುಂದಿನ ಸಿನಿಮಾ ʼಕೂಲಿʼ (Coolie) ಬಗ್ಗೆಯೂ ಕುತೂಹಲ ಹೆಚ್ಚಾಗಿದೆ.
ಸೂಪರ್ ಸ್ಟಾರ್ ರಜಿನಿಕಾಂತ್ – ಲೋಕೇಶ್ ಕನಕರಾಜ್ ( Lokesh Kanagaraj) ಅವರ ʼಕೂಲಿʼ ಕಾಲಿವುಡ್ ನಲ್ಲಿ ಶೂಟಿಂಗ್ ಹಂತದಲ್ಲೇ ಜೋರಾಗಿ ಸದ್ದು ಮಾಡುತ್ತಿದೆ. ಪಾತ್ರ ವರ್ಗದ ಬಗ್ಗೆ ದಿನಕಳೆದಂತೆ ಲೇಟೆಸ್ಟ್ ಅಪ್ಡೇಟ್ ಗಳು ಹೊರಬೀಳುತ್ತಿದೆ.
ಇತ್ತೀಚೆಗೆ ಟಾಲಿವುಡ್ ಸೂಪರ್ ಸ್ಟಾರ್ ನಾಗಾರ್ಜುನ ಅಕ್ಕಿನೇನಿ (Nagarjuna Akkineni) ʼಕೂಲಿʼಗೆ ಸಿನಿಮಾದ ಭಾಗವಾಗಲಿದ್ದಾರೆ ಎಂದು ವರದಿ ಆಗಿತ್ತು.
ಇದೀಗ ಸಿನಿಮಾದ ಬಗ್ಗೆ ದೊಡ್ಡ ಅಪ್ಡೇಟ್ ವೊಂದು ಹೊರಬಿದ್ದಿದೆ. ಅದು ಪಾತ್ರವರ್ಗದ ಬಗ್ಗೆ ಸ್ಯಾಂಡಲ್ ವುಡ್ ನಟ, ನಿರ್ದೇಶಕ ಉಪೇಂದ್ರ (Upendra) ಸದ್ಯ ʼಯುಐʼ(UI Movie) ಸಿನಿಮಾದ ಪೋಸ್ಟ್ ಪ್ರೊಡಕ್ಷನ್ ಕೆಲಸದಲ್ಲಿ ನಿರತರಾಗಿದ್ದಾರೆ. ದಿನಕಳೆದಂತೆ ಸಿನಿಮಾದ ಬಗೆಗಿನ ಒಂದೊಂದೆ ಅಪ್ಡೇಟ್ ನೀಡುತ್ತಾ ಉಪ್ಪಿ ಪ್ರಚಾರದ ರೀತಿಯಲ್ಲೇ ಕುತೂಹಲ ಹೆಚ್ಚಾಗಿಸಿದ್ದಾರೆ.
ಈ ನಡುವೆ ಉಪ್ಪಿ ಕಾಲಿವುಡ್ ಸಿನಿಮಾದಲ್ಲಿ ನಟಿಸಲಿದ್ದಾರೆ ಎನ್ನುವ ಬಗೆಗಿನ ಸುದ್ದಿ ಹರಿದಾಡಿದೆ. ಸೂಪರ್ ಸ್ಟಾರ್ ರಜಿನಿಕಾಂತ್ ಅವರ ʼಕೂಲಿʼ ಸಿನಿಮಾದಲ್ಲಿ ಉಪೇಂದ್ರ ನೆಗೆಟಿವ್ ಲುಕ್‌ನಲ್ಲಿ ಅಬ್ಬರಿಸಲಿದ್ದಾರೆ ಎನ್ನಲಾಗಿದೆ.
ಈ ಕುರಿತ ಪೋಸ್ಟರ್ ಸೋಶಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿದೆ. ಸದ್ಯದ ವರದಿಗಳ ಪ್ರಕಾರ ಉಪ್ಪಿ ವಿಲನ್ ಅವತಾರದಲ್ಲಿ ಕಾಣಿಸಿಕೊಳ್ಳಲಿದ್ದಾರೆ ಎನ್ನಲಾಗಿದೆ. ಇನ್ನೊಂದೆಡೆ ಉಪ್ಪಿ ಅತಿಥಿ ಪಾತ್ರದಲ್ಲಿ ನಟಿಸಲಿದ್ದಾರೆ ಎನ್ನಲಾಗಿದೆ. ಈ ಬಗ್ಗೆ ಮುಂದಿನ ದಿನದಲ್ಲಿ ಅಧಿಕೃತ ಮಾಹಿತಿ ಬರುವ ಸಾಧ್ಯತೆಯಿದೆ.
ಕನ್ನಡದ ಉಪೇಂದ್ರ ಸೂಪರ್ ಸ್ಟಾರ್ ರಜಿನಿಕಾಂತ್ ಜತೆ ಕಾಣಿಸಿಕೊಳ್ಳುತ್ತಿರುವ ಸುದ್ದಿಯನ್ನು ಕೇಳಿ ಫ್ಯಾನ್ಸ್ ಗಳು ಸಖತ್ ಥ್ರಿಲ್ ಆಗಿದ್ದಾರೆ.
ಈ ಬಗ್ಗೆ ಉಪೇಂದ್ರ ಅವರು ರಜನಿಕಾಂತ್ ಅವರೊಂದಿಗಿನ ಫೋಟೋ ಹಂಚಿಕೊಂಡು, ʼಕೂಲಿʼಯಲ್ಲಿ ನಟಿಸುತ್ತಿರುವ ಬಗ್ಗೆ ಅಧಿಕೃತವಾಗಿ ಹೇಳಿದ್ದಾರೆ. “ನಿಮ್ಮ ಆಶೀರ್ವಾದದಿಂದ ನನ್ನ ಸೂಪರ್ ಸ್ಟಾರ್ ರಜಿನಿ ಸಾರ್ ಜೊತೆ ಕೂಲಿ ಚಿತ್ರದಲ್ಲಿ ಅಭಿನಯಿಸುತ್ತಿದ್ದೇನೆ” ಎಂದು ಬರೆದುಕೊಂಡಿದ್ದಾರೆ.
View this post on Instagram
ಕಾಲಿವುಡ್‌ಗೆ ಉಪ್ಪಿ ಎಂಟ್ರಿ ಆಗುತ್ತಿರುವುದು ಇದೇ ಮೊದಲಲ್ಲ. ಈ ಹಿಂದೆ 2008ರಲ್ಲಿ ಬಂದ ವಿಶಾಲ್ ಅಭಿನಯದ ʼಸತ್ಯಂʼ ಸಿನಿಮಾದಲ್ಲಿ ಉಪ್ಪಿ ನಟಿಸಿದ್ದರು.
ಅಂದಹಾಗೆ ʼಕೂಲಿʼ ಸಿನಿಮಾದಲ್ಲಿ ಮಲಯಾಳಂ ನಟರಾದ ಶೋಬನಾ ಮತ್ತು ಸೌಬಿನ್ ಶಾಹಿರ್ (Soubin Shahir) ಪ್ರಮುಖ ಪಾತ್ರಗಳಲ್ಲಿ ನಟಿಸಲಿದ್ದಾರೆ ಎನ್ನಲಾಗಿದೆ. ʼಕೂಲಿʼಯ ಸಿನಿಮಾದ ಸಂಪೂರ್ಣ ಪಾತ್ರವರ್ಗ ಇನ್ನಷ್ಟೇ ರಿವೀಲ್ ಆಗಬೇಕಿದೆ. ಸತ್ಯರಾಜ್ (Satyaraj) ಮತ್ತು ಶ್ರುತಿ ಹಾಸನ್ (Shruti Haasan) ಅವರು ಸಿನಿಮಾದ ಭಾಗವಾಗಲಿದ್ದಾರೆ ಎನ್ನುವುದು ಅಧಿಕೃತವಾಗಿದೆ.
ಇತ್ತ ರಜಿನಿಕಾಂತ್ ಅವರ ʼವೆಟ್ಟೈಯನ್ ʼ ಅಕ್ಟೋಬರ್ 10ರಂದು ರಿಲೀಸ್ ಆಗಲಿದೆ. ಉಪೇಂದ್ರ ʼಯುಐʼ ಸಿನಿಮಾದ ಹಾಡಿನ ಬಗ್ಗೆ ಅಪ್ಡೇಟ್ ಕೊಟ್ಟು ಫ್ಯಾನ್ಸ್ ಗಳನ್ನು ಖುಷ್ ಆಗಿಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Prashanth Neel: ಸಲಾರ್‌ಗೆ ನಾನು ಇನ್ನಷ್ಟು ಶ್ರಮ ಹಾಕಬೇಕಿತ್ತು; ಪ್ರಶಾಂತ್ ನೀಲ್
UI Movie: ಉಪ್ಪಿ ಯುಐ ಮೆಚ್ಚಿದ ಯಶ್
Shivaraj Kumar: ಶಿವರಾಜ್ ಕುಮಾರ್ ಅವರ ಆಪರೇಷನ್ ಯಶಸ್ವಿಯಾಗಿದೆ – ಪತ್ನಿ ಗೀತಾ ಮಾಹಿತಿ
Max: ಇಂದು ಸುದೀಪ್ ಮ್ಯಾಕ್ಸ್ ತೆರೆಗೆ; ಆ್ಯಕ್ಷನ್ ಅಡ್ಡದಲ್ಲಿ ಕಿಚ್ಚ ಮಿಂಚು
OTT Release Date: ಸೂಪರ್ ಹಿಟ್ ʼಭೈರತಿ ರಣಗಲ್ʼ ಓಟಿಟಿ ರಿಲೀಸ್‌ಗೆ ಡೇಟ್ ಫಿಕ್ಸ್
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.