ದಾಸನ ಕಳಕಳಿಗೆ ಬುದ್ಧಿವಂತನ ಬೆಂಬಲ: ಆಫ್ರಿಕನ್ ಆನೆ ದತ್ತು ಪಡೆದ ಉಪೇಂದ್ರ
Team Udayavani, Jun 11, 2021, 1:12 PM IST
ಬೆಂಗಳೂರು: ಸಂಕಷ್ಟದಲ್ಲರುವ ಮೃಗಾಲಯದಲ್ಲಿರುವ ಪ್ರಾಣಿ,ಪಕ್ಷಿಗಳನ್ನು ದತ್ತು ಪಡೆಯಲು ನಟ ದರ್ಶನ್ ನೀಡಿದ ಕರೆಗೆ ಎಲ್ಲಡೆಯಿಂದ ಉತ್ತಮ ಸ್ಪಂದನೆ ಸಿಕ್ಕಿದೆ.
ಸ್ಯಾಂಡಲ್ವುಡ್ ಯಜಮಾನ ದಚ್ಚು ಕರೆಗೆ ಓಗೊಟ್ಟ ಅವರ ಅಭಿಮಾನಿಗಳು, ಚಿತ್ರರಂಗದ ಸ್ನೇಹಿತರು, ಆಪ್ತರು ನೆರವಿನ ಹಸ್ತ ಚಾಚಿದ್ದು, ರಾಜ್ಯದಲ್ಲಿರುವ 9 ಮೃಗಾಲಯದಲ್ಲಿರುವ ಪ್ರಾಣಿ-ಪಕ್ಷಿಗಳನ್ನು ದತ್ತ ಪಡೆದಿದ್ದಾರೆ. ಇದರಿಂದ ಪ್ರಾಣಿ ಸಂಗ್ರಹಾಲಯಗಳಿಗೆ ಸುಮಾರು ಒಂದು ಕೋಟಿ ರೂಪಾಯಿಯಷ್ಟು ಹಣ ಸಂಗ್ರಹಗೊಂಡಂತಾಗಿದೆ.
ಇದೀಗ ದಾಸನ ಮನವಿಗೆ ಚಂದನವನದ ಬುದ್ಧಿವಂತ ನಟ ನಿರ್ದೇಶಕ ಉಪೇಂದ್ರ ಅವರೂ ಕೈ ಜೋಡಿಸಿದ್ದಾರೆ. ಉಪ್ಪಿ ಮೈಸೂರು ಮೃಗಾಲಯದಲ್ಲಿನ ಆಫ್ರಿಕನ್ ಆನೆಯೊಂದನ್ನು ದತ್ತು ಪಡೆದಿದ್ದಾರೆ.
ಈ ಸಂಬಂಧ ಸಾಮಾಜಿಕ ಜಾಲತಾಣದಲ್ಲಿ ಆಫ್ರಿಕನ್ ಆನೆ ದತ್ತು ಪಡೆದ ಪ್ರಮಾಣ ಪತ್ರವನ್ನು ಅಪ್‌ಲೋಡ್ ಮಾಡಿರುವ ಉಪೇಂದ್ರ, ‘ಪ್ರಾಣಿಗಳೇ ಗುಣದಲಿ ಮೇಲು. ನನ್ನ ಮೆಚ್ಚಿನ ಚಾಲೆಂಜಿಂಗ್ ಸ್ಟಾರ್ ದರ್ಶನ್‌ರವರ ಕರೆಯಂತೆ ಮೈಸೂರಿನ ಶ್ರೀ ಜಯಚಾಮರಾಜೇಂದ್ರ ಮೃಗಾಲಯದಿಂದ ಆಫ್ರಿಕನ್ ಆನೆ ಒಂದನ್ನು ದತ್ತು ಪಡೆದು, ಈ ಮೂಲಕ ದರ್ಶನ್‌ರವರ ಮಹತ್ಕಾರ್ಯಕ್ಕೆ ಕೈಜೋಡಿಸಿದ್ದೇವೆ’ ಎಂದು ಉಲ್ಲೇಖಿಸಿದ್ದಾರೆ.
ಪ್ರಾಣಿಗಳೇ ಗುಣದಲಿ ಮೇಲು….
ಚಾಲೆಂಜಿಂಗ್ ಸ್ಟಾರ್ ದರ್ಶನ್ ರವರ ಕರೆಯಂತೆ ಮೈಸೂರಿನ ಶ್ರೀ ಜಯಚಾಮರಾಜೇಂದ್ರ ಮೃಘಾಲಯ ದಿಂದ ಆಫ್ರಿಕನ್ ಆನೆ ಒಂದನ್ನು ದತ್ತು ಪಡೆದು ಈ ಮೂಲಕ ದರ್ಶನ್ ರವರ ಮಹತ್ಕಾರ್ಯಕ್ಕೆ ಕೈಜೋಡಿಸಿದ್ದೇವೆ.
-ನಿಮ್ಮ ಉಪೇಂದ್ರ pic.twitter.com/RB2PhyNnhN— Upendra (@nimmaupendra) June 10, 2021
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Prashanth Neel: ಸಲಾರ್‌ಗೆ ನಾನು ಇನ್ನಷ್ಟು ಶ್ರಮ ಹಾಕಬೇಕಿತ್ತು; ಪ್ರಶಾಂತ್ ನೀಲ್
UI Movie: ಉಪ್ಪಿ ಯುಐ ಮೆಚ್ಚಿದ ಯಶ್
Shivaraj Kumar: ಶಿವರಾಜ್ ಕುಮಾರ್ ಅವರ ಆಪರೇಷನ್ ಯಶಸ್ವಿಯಾಗಿದೆ – ಪತ್ನಿ ಗೀತಾ ಮಾಹಿತಿ
Max: ಇಂದು ಸುದೀಪ್ ಮ್ಯಾಕ್ಸ್ ತೆರೆಗೆ; ಆ್ಯಕ್ಷನ್ ಅಡ್ಡದಲ್ಲಿ ಕಿಚ್ಚ ಮಿಂಚು
OTT Release Date: ಸೂಪರ್ ಹಿಟ್ ʼಭೈರತಿ ರಣಗಲ್ʼ ಓಟಿಟಿ ರಿಲೀಸ್‌ಗೆ ಡೇಟ್ ಫಿಕ್ಸ್
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.