ಸಿಎಂಗೆ ಉಪ್ಪಿ ನೀಡಿದ ಸಲಹೆಗಳು
Team Udayavani, Apr 11, 2020, 11:07 AM IST
ಸರ್ಕಾರ ಲಾಕ್ ಡೌನ್ ಹಾಕಿದ್ದರೂ ಸಹ ಜನ ಹಾಲು, ದಿನಸಿ ಸೇರಿ ಅಗತ್ಯ ವಸ್ತುಗಳ ಖರೀದೆಗೆ ಹೊರಬರುವುದು ನಿಂತಿಲ್ಲ. ಇದರಿಂದ ಜನ ತರಕಾರಿ ಮಾರುಕಟ್ಟೆ, ಅಂಗಡಿಗಳ ಮುಂದೆ ಗುಂಪು ಸೇರುತ್ತಾರೆ. ಈ ಗುಂಪು ಸೇರುವುದನ್ನು ತಡೆಯಲು ಸೂಕ್ತ ಮಾರ್ಗ ಅನುಸರಿಸಬೇಕು ಎಂದ ಉಪೇಂದ್ರ ಎರಡು ಸಲಹೆಗಳನ್ನು ಕೊಟ್ಟಿದ್ದಾರೆ.
ಈ ಕುರಿತು ಟ್ವೀಟ್ ಮಾಡಿದ್ದು ಅದನ್ನು ಸಿಎಂ ಅವರಿಗೆ ಟ್ಯಾಗ್ ಮಾಡಿರುವ ಉಪೇಂದ್ರ, ‘ಮಾನ್ಯ ಮುಖ್ಯಮಂತ್ರಿಯವರಲ್ಲಿ ವಿನಂತಿ… ಎರಡರಲ್ಲಿ ಯಾವುದಾದರೂ ಒಂದನ್ನು ಮಾಡಿ’ ಎಂದು ಎರಡು ಸಲಹೆಗಳನ್ನು ನೀಡಿದ್ದಾರೆ.
ಉಪೇಂದ್ರ ನೀಡಿರುವ ಆ ಎರಡು ಸಲಹೆಗಳು ಹೀಗಿದೆ- :
- ಶೇಕಡ ನೂರಕ್ಕೆ ನೂರು ಲಾಕ್‌ಡೌನ್: ಸಂಪೂರ್ಣ ಸರ್ಕಾರಿ ವ್ಯವಸ್ಥೆಯನ್ನು ಪೂರ್ಣ ಪ್ರಮಾಣದ ಯೋಜನೆ ಬಳಸಿಕೊಂಡು ಅಗತ್ಯ ವಸ್ತುಗಳನ್ನು ಮನೆಮನೆಗೆ ತಲುಪಿಸಿ ಹಾಲು, ತರಕಾರಿ, ಧಾನ್ಯಗಳನ್ನು ಒಂದು ಜಾಗದಲ್ಲಿ ಕೊಳ್ಳಲು ಬಿಟ್ಟರೆ ಜನ ಸೇರುತ್ತಾರೆ. ಬೇಕರಿ, ದಿನಸಿ ಮತ್ತು ಅಗತ್ಯ ವಸ್ತುಗಳಿಗಾಗಿ ಸಂತೆ, ಅಂಗಡಿ ತೆರೆದರೆ ಅಲ್ಲೂ ಜನ ಸೇರುತ್ತಾರೆ.
- ಜನರಿಗೆ ಜವಾಬ್ದಾರಿ ಕೊಟ್ಟು ಸಂಪೂರ್ಣವಾಗಿ ಲಾಕ್ ಡೌನ್ ತೆರೆಯಿರಿ: ಅಂದರೆ ಅವರವರೇ ಜವಾಬ್ದಾರಿ ತೆಗೆದುಕೊಂಡು ಅಂತರ ಕಾಯ್ದುಕೊಂಡು ಮಾಸ್ಕ್ ಧರಿಸಿ ಅವರವರ ವ್ಯವಹಾರಗಳನ್ನು ಮುಂದುವರಿಸುವುದು. ಜನರನ್ನು ಜನರು ಎಷ್ಟೇ ಮೂರ್ಖರು ಅಂದುಕೊಂಡರು (ಹೀಗೆನಾಯಕರೇ ಮಾಡಿಬಿಟ್ಟಿದ್ದಾರೆ) ಅವರವರ ಪ್ರಾಣಕ್ಕೆ ಅವರ ಮಕ್ಕಳ ಪ್ರಾಣಕ್ಕೆ ಬೆಲೆ ಕೊಟ್ಟೇ ಕೊಡುತ್ತಾರೆ ಎಂಬ ನಂಬಿಕೆಯಿಂದ ಹೇಳುತ್ತಿದ್ದೇನೆ. ಲಾಕ್‌ಡೌನ್ ಮಾಡಿ ಜನರನ್ನು ಹಾಲು, ರೇಷನ್ ಖರೀದಿಸುವುದಕ್ಕೆ ಬಿಟ್ಟು ಜನ ಗುಂಪು ಸೇರಿದಾಗ ಜನರನ್ನು ಬೈಯ್ಯುವುದು ಎಷ್ಟು ಸರಿ? ಇಷ್ಟು ಮಾತ್ರವಲ್ಲದೆ, ಇಷ್ಟೆಲ್ಲಾ ಲಾಕ್ ಡೌನ್ ಮಾಡಿಯೇ ನಮ್ಮ ದಡ್ಡ ಜನರು ಹೀಗೆ. ಇನ್ನು ಲಾಕ್ ಡೌನ್ ತೆಗೆದ್ರೆ ರೋಡ್ ರೋಡಲ್ಲಿ ಹೆಣ ಬೀಳುತ್ತೆ ಅಂತ ಹೇಳುವವರಿಗೆ (ಹೆದರುವವರಿಗೆ) ಒಂದು ಕಿವಿ ಮಾತು. ಹೀಗೆ ಲಾಕ್‌ಡೌನ್ ಮುಂದುವರಿಸಿದ್ರೂ ಅದೇ ಪರಿಸ್ಥಿತಿ ಬರಬಹುದು ಯೋಚನೆ ಮಾಡಿ. ಮಲಗಿದ್ರೆ-ಸಾವು, ಕೂತಿದ್ರೆ – ರೋಗ, ನಡೀತಿದ್ರೆ ಜೀವನ ಎಂದು ಹೇಳಿದ್ದಾರೆ.
ಉಪೇಂದ್ರ ಈಗ ರೈತ : ಉಪೇಂದ್ರ ಅವರು ಮೈಸೂರು ರಸ್ತೆ ಸಮೀಪ ಇರುವ ರಾಮೋಹಳ್ಳಿ ಯಲ್ಲಿರುವ ತಮ್ಮ ಜಮೀನಿನಲ್ಲಿ ಕೃಷಿ ಚಟುವಟಿಕೆಯಲ್ಲಿ ತೊಡಗಿದ್ದಾರೆ. ತಮ್ಮ ಜಮೀನಿನಲ್ಲಿ ಈಗ ಟೊಮೊಟೋ, ಬಾಳೆ ಸೇರಿದಂತೆ ಇತರೆ ಬೆಳೆಗಳನ್ನು ಸಾವಯವ ಕೃಷಿ ಮಾದರಿಯಲ್ಲಿ ನಾಟಿ ಮಾಡಿದ್ದಾರೆ. ಇನ್ನು, ಜಮೀನಿನಲ್ಲಿ ಹಲವು ಕಡೆ ಹಣ್ಣಿನ ಸಸಿಗಳನ್ನೂ ನೆಟ್ಟಿದ್ದಾರೆ. ಕೃಷಿ ಬಗ್ಗೆ ಹೆಚ್ಚು ಆಸಕ್ತಿ ಹೊಂದಿರುವ ಅವರು, ಕೃಷಿಗೆ ನೀರನ್ನು ಹೇಗೆ ಸಮರ್ಪಕವಾಗಿ ಬಳಸಬಹುದು ಎಂಬ ಕುರಿತು ಪ್ರಯೋಗ ಮಾಡಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Belagavi: ದೂರು ಕೊಟ್ಟವರ ಮೊದಲು ಬಂಧಿಸಿ ಬಳಿಕ ನೈಜ ದರೋಡೆಕೋರರ ಸೆರೆ ಹಿಡಿದ ಪೊಲೀಸರು!
Udupi: ಆರೆಸ್ಸೆಸ್ ಹಿರಿಯ ಪ್ರಚಾರಕ್ ಭಯ್ಯಾಜಿ ಜೋಷಿ ಶ್ರೀಕೃಷ್ಣಮಠಕ್ಕೆ ಭೇಟಿ
Bagalakote: ಪ್ರೇಯಸಿ ಗೆಳತಿ ಹ*ತ್ಯೆಗೆ ಸಂಚು; ಕೊನೆಗೆ ಕೈ ಕಳೆದುಕೊಂಡಿದ್ದು ಪ್ರೇಮಿಯೇ!
Udupi: ಕೋಟಿ ಗೀತಾ ಲೇಖನ ಯಜ್ಞ: 500ಕ್ಕೂ ಹೆಚ್ಚು ವಿದ್ಯಾರ್ಥಿಗಳು, ಸಿಬ್ಬಂದಿಯಿಂದ ದೀಕ್ಷೆ
Karnataka HC; ನಾಲ್ಕನೇ ಪ್ರಕರಣದಲ್ಲೂ ಪ್ರಜ್ವಲ್ ರೇವಣ್ಣ ನಿರೀಕ್ಷಣಾ ಜಾಮೀನು ಅರ್ಜಿ ವಜಾ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.