ಉಪೇಂದ್ರ ರಾಜಕೀಯ ಎಂಟ್ರಿ: ಟ್ವಿಟರ್‌ನಲ್ಲಿ ಸಲಹೆ ಸೂಚನೆ
Team Udayavani, Aug 14, 2017, 10:59 AM IST
ಉಪೇಂದ್ರ ಅವರು ರಾಜಕೀಯ ಪ್ರವೇಶಿಸುವ ನಿರ್ಧಾರ ಅವರ ಅಭಿಮಾನಿ ವರ್ಗದಲ್ಲಿ ತೀವ್ರ ಸಂಚಲನ ಮೂಡಿಸಿರುವುದಂತೂ ಸುಳ್ಳಲ್ಲ. ಬಹುತೇಕ ಅಭಿಮಾನಿಗಳು ಖುಷಿಯಾಗಿದ್ದರೆ, ಇನ್ನು ಕೆಲವರು ಸಿನಿಮಾದಿಂದ ಕಳೆದು ಹೋಗುತ್ತಿರುವ ಭಯ ಕೂಡಾ ವ್ಯಕ್ತಪಡಿಸಿದ್ದಾರೆ. ಬಹುತೇಕ ಮಂದಿ ಉಪ್ಪಿ ರಾಜಕೀಯ ಎಂಟ್ರಿಗೆ ಶುಭ ಕೋರಿ, ಬೆಂಬಲ, ಸಲಹೆ ಕೂಡಾ ನೀಡಿದ್ದಾರೆ.
ಈ ನಡುವೆಯೇ ಸೋಶಿಯಲ್ ಮೀಡಿಯಾಗಳಲ್ಲಿ ಉಪೇಂದ್ರ ರಾಜಕೀಯ ಎಂಟ್ರಿ ಬಗ್ಗೆ ನೆಗೆಟಿವ್ ಕೂಡಾ ಕೇಳಿಬರುತ್ತಿದೆ. ಅದೇನೇ ಆದರೂ ಉಪೇಂದ್ರ ಮಾತ್ರ ಸೋಶಿಯಲ್ ಮೀಡಿಯಾದಲ್ಲಿ ಆ್ಯಕ್ಟಿವ್ ಆಗಿದ್ದಾರೆ. ಸ್ಟೇಟಸ್ ಮೇಲೆ ಸ್ಟೇಟಸ್ ಹಾಕುತ್ತಾ “ಪ್ರಜಾಕಾರಣ’ ಮಾಡುತ್ತಿದ್ದಾರೆ. 15 ಸಾವಿರಕ್ಕೂ ಅಧಿಕ ಇಮೇಲ್‌ಗಳು ಅವರ ಇನ್‌ಬಾಕ್ಸ್‌ಗೆ ಬಂದಿರುವ ಖುಷಿ ಕೂಡಾ ಅವರಿಗಿದೆ. ಈ ನಡುವೆಯೇ ಉಪೇಂದ್ರ ಅವರ ರಾಜಕೀಯದ ಕುರಿತಾದ ಕೆಲವು ಟ್ವೀಟ್ ಇಲ್ಲಿವೆ.
ತಾಳ್ಮೆ, ಪ್ರಾಮಾಣಿಕತೆಯ ಎದುರು ರಾಜಕೀಯದ ಆಟ ನಡೆಯೋದಿಲ್ಲ. ನಮ್ಮ ಪ್ರಜಾಕೀಯಕ್ಕೆ ಒಳ್ಳೆಯದಾಗುತ್ತದೆ.
-ಪ್ರಿನ್ಸ್ ಪುಟ್ಟ
ಎಂಪಿ ಸೀಟ್‌ನ ಮಜಾ ತಗೋಳ್ಳೋಕ್ಕಾ. ಜನರ ಸಮಸ್ಯೆ ಏನು ಉಪ್ಪಿಟ್ಟು ಅಂದೊRಂಡಿದ್ದೀರಾ ರಾಜಕೀಯ ಮಾಡೋಕೆ?
-ಖಾದ್ರಿ ಪ್ರಕಾಶ್
ನಿಮ್ಮ ಸಿನಿಮಾದಲ್ಲಿ ಹೆಚ್ಚಾಗಿ ಇರುವ ಸಮಾಜವಾದಿ ಸಿದ್ಧಾಂತ ರಿಯಲ್ ವರ್ಲ್ಡ್ನಲ್ಲಿ ವಕೌìಟ್ ಆಗಲ್ಲ.
-ನಂದನ್
ಹೊಸ ಪಕ್ಷ ಬೇಡ, ಈಗಾಗಲೇ ಇರೋ ಒಂದು ಪಕ್ಷದ ಬೆಂಬಲಿತ ವಿಂಗ್ ಮಾಡಿ, ಆ ಮೂಲಕ ತಮ್ಮ ಕೆಲಸ ಆರಂಭಿಸಿ. ಹೊಸ ಪಕ್ಷ ಬೇಡವೇ ಬೇಡ.
-ರವಿರಾಜ್
ನೀವು ಪವನ್ ಕಲ್ಯಾಣ್ ಅವರ ತಂತ್ರಗಳನ್ನು ಫಾಲೋ ಮಾಡಿ.
-ನೇತಿ ನಾಗೇಶ್ವರ
ನಮ್ಮ ಜನರಿಗೆ ಡೈರೆಕ್ಟ್ ಆಗಿ ಹೇಳಿದ್ರೆ ಅರ್ಥ ಆಗಲ್ಲ, ಇನ್‌ಡೈರೆಕ್ಟ್ ಆಗಿ ಹೇಳಿದರೇನೇ ಅರ್ಥ ಆಗೋದು. ಆ ತರಹ ಹೇಳ್ಳೋಕೆ ಉಪ್ಪಿ ಸರ್ ಬೇಕು.
-ಯತೀಶ್ ನಾಯಕ್
ನಿಮ್ಮದು ರೆಸಾರ್ಟ್ ರಾಜಕೀಯ ಆಗದೇ, ಒಳ್ಳೆಯ ರಿಸಲ್ಟ್ ಪ್ರಜಾಕೀಯವಾಗಲಿ.
-ಶ್ರೀಕಾಂತ್ ಕೃಷ್ಣ
ಉಪೇಂದ್ರಗೆ ಏನಿಲ್ಲ, ಉಪ್ಪಿ(2)ಗೆ ಏನೇನಿಲ್ಲ. ರಾಜಕೀಯಕ್ಕೆ “ನಾನು’ ಸೂಕ್ತ, “ನೀನು’ ಅಲ್ಲ
-ಎಂಜಿ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Maharashtra Election: ಅಮಿತ್ ಶಾ ಅವರ ಬ್ಯಾಗ್ ಪರೀಕ್ಷಿಸಿದ ಚುನಾವಣಾ ಅಧಿಕಾರಿಗಳು
Bengaluru: ವೈದ್ಯೆಗೆ ಲೈಂಗಿಕ ಕಿರುಕುಳ: ಪಿಎಸ್‌ಐ ವಿರುದ್ದ ಪೊಲೀಸ್ ಆಯುಕ್ತರಿಗೆ ದೂರು
Bengaluru: ಆತ್ಮಹತ್ಯೆಗೆ ಯತ್ನಿಸಿದ ವ್ಯಕ್ತಿಯ ಜೀವ ಉಳಿಸಿದ ಸಂಚಾರ ಪೊಲೀಸರು
Anmol Buffalo:1500 ಕೆಜಿ ತೂಗುವ ಈ ಕೋಣದ ಬೆಲೆ ಬರೋಬ್ಬರಿ 23 ಕೋಟಿ ರೂ!
BBK11: ಅಸಲಿ ಆಟ ಶುರು ಮಾಡಿದ ಧನರಾಜ್: ಮೋಕ್ಷಿತಾಳಿಗೆ ಅಹಂಕಾರ ಇದೆ ಎಂದ ಸೈಲೆಂಟ್ ಕಿಲಾಡಿ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.