ಉಪೇಂದ್ರ ನಿರ್ದೇಶನದ ಹೊಸಚಿತ್ರ ‘ಯು’; ಪೋಸ್ಟರ್ ನಲ್ಲೇ ಟ್ವಿಸ್ಟ್ ನೀಡಿದ ಉಪ್ಪಿ


Team Udayavani, Mar 12, 2022, 8:50 AM IST

ಉಪೇಂದ್ರ ನಿರ್ದೇಶನದ ಹೊಸಚಿತ ‘ಯು’; ಪೋಸ್ಟರ್ ನಲ್ಲೇ ಟ್ವಿಸ್ಟ್ ನೀಡಿದ ಉಪ್ಪಿ

ನಟ ಕಂ ನಿರ್ದೇಶಕ ರಿಯಲ್‌ಸ್ಟಾರ್‌ ಉಪೇಂದ್ರ ಅವರ ಸಿನಿಮಾಗಳು ಅಂದರೇ ಸಹಜವಾಗಿಯೇ ಚಿತ್ರರಂಗದಲ್ಲಿ ಮತ್ತು ಪ್ರೇಕ್ಷಕರಲ್ಲಿ ಬೆಟ್ಟದಷ್ಟು ನಿರೀಕ್ಷೆ ಇರುತ್ತದೆ. ಅದರಲ್ಲೂ ಉಪ್ಪಿ ನಿರ್ದೇಶನ ಮಾಡುವ ಸಿನಿಮಾ ಅಂದರಂತೂ, ಅಭಿಮಾನಿಗಳಿಗೆ ಅದರ ಮೇಲೆ ನಿರೀಕ್ಷೆ ಮತ್ತು ಕುತೂಹಲ ಎರಡೂ ಡಬಲ್‌ ಆಗಿರುತ್ತದೆ. ತಮ್ಮ ಸಿನಿಮಾದ ಟೈಟಲ್‌ ಮೂಲಕವೇ ಸಿನಿಪ್ರಿಯರಲ್ಲಿ ಒಂದು ಕುತೂಹಲ ಸೃಷ್ಟಿಸಿ, ಅದೇ ಕುತೂಹಲದಿಂದ ಅವರನ್ನು ಥಿಯೇಟರ್‌ವರೆಗೆ ಕರೆತರುವಂತೆ ಮಾಡುವುದು ನಿರ್ದೇಶಕ ಉಪ್ಪಿ ಅವರ ಸ್ಟೈಲ್‌.

“ಉಪ್ಪಿ-2′ ಸಿನಿಮಾದ ಬಳಿಕ ಪ್ರಜಾಕೀಯ ಮತ್ತು ಅಭಿನಯ ಅಂಥ ಬಿಝಿಯಾಗಿದ್ದ ಉಪೇಂದ್ರ ಮತ್ತೆ ಯಾವಾಗ ಡೈರೆಕ್ಟರ್‌ ಕ್ಯಾಪ್‌ ಧರಿಸುತ್ತಾರೆ ಎಂದು ಅಭಿಮಾನಿಗಳು ಕೂಡ ಪ್ರಶ್ನಿಸುತ್ತಿದ್ದರು. ಶೀಘ್ರದಲ್ಲಿಯೇ ನಿರ್ದೇಶನದ ಬಗ್ಗೆ ಅಪ್ಡೆಟ್‌ ಕೊಡುತ್ತೇನೆ ಎಂದು ಹೇಳುತ್ತಿದ್ದ ಉಪ್ಪಿ, ಎರಡು ದಿನಗಳ ಹಿಂದಷ್ಟೇ ಈ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಬರೆದುಕೊಳ್ಳುವ ಮೂಲಕ ತಮ್ಮ ನಿರ್ದೇಶನದ ಹೊಸ ಸಿನಿಮಾ ಅನೌನ್ಸ್‌ ಮಾಡುವ ಬಗ್ಗೆ ಸುಳಿವನ್ನು ಬಿಟ್ಟುಕೊಟ್ಟಿದ್ದರು. ಅದರಂತೆ, ಶುಕ್ರವಾರ ಮಧ್ಯಾಹ್ನ ತಮ್ಮ ಟ್ವಿಟ್ಟರ್‌ನಲ್ಲಿ ಉಪ್ಪಿ ತಮ್ಮ ನಿರ್ದೇಶನದ ಹೊಸ ಸಿನಿಮಾದ ಟೈಟಲ್‌ ಅನೌನ್ಸ್‌ ಮಾಡಿದ್ದಾರೆ

ಕೊಂಬಿರುವ ಕುದುರೆಯಲ್ಲಿ ಸವಾರಿ!

ಇನ್ನು ಉಪ್ಪಿ ಟ್ವಿಟ್ಟರ್‌ನಲ್ಲಿ ರಿವೀಲ್‌ ಮಾಡಿರುವ ಟೈಟಲ್‌ನಲ್ಲಿ ಇಂಗ್ಲೀಷ್‌ ಭಾಷೆಯಲ್ಲಿ “ಯು’ ಎಂಬ ಚಿಹ್ನೆಯಿದ್ದು, ಕುದುರೆ ಲಾಳದಂತೆ ಕೂಡ ಕಾಣುತ್ತದೆ. ತಕ್ಷಣಕ್ಕೆ ನೋಡುವವರಿಗೆ ಧಾರ್ಮಿಕ ಚಿಹ್ನೆಯಂತೆಯೂ ಕಾಣುವ ಸಿನಿಮಾದ ಟೈಟಲ್‌  ಅನ್ನು “ಯು’ ಮತ್ತು ಐ’ ಎಂದೂ ಓದಿಕೊಳ್ಳಬಹುದು. ಹಾಗಾಗಿ ಈ ಟೈಟಲ್‌ ಅನ್ನು ಪ್ರೇಕ್ಷಕರೇ ತಮ್ಮಿಷ್ಟ ಬಂದಂತೆ ಹೇಳಿಕೊಳ್ಳಬಹುದಾಗಿದೆ! ಟೈಟಲ್‌ ಪೋಸ್ಟರ್‌ನಲ್ಲಿ ಕೊಂಬಿರುವ ಕುದುರೆ ಮೇಲೆ ವಾರಿಯರ್‌ ಗೆಟಪ್‌ನಲ್ಲಿ ಉಪೇಂದ್ರ ಕುಳಿತಿದ್ದರೆ, ಒಂದು ಕಡೆ ಬಾಹ್ಯಾಕಾಶ, ಉಪಗ್ರಹಗಳು ಕಾಣುತ್ತವೆ. ಮತ್ತೂಂದೆಡೆ, ಊರು, ರೈಲು ಗಾಡಿ ಮತ್ತು ಗುಡ್ಡ ಬೆಟ್ಟದ ಪ್ರದೇಶ ಕಾಣಿಸುತ್ತದೆ.

ಇದನ್ನೂ ಓದಿ:ಪ್ರೇಕ್ಷಕರನ್ನು ಸೆಳೆಯುತ್ತಿರುವ ಯಕ್ಷಗಾನ “ಕಾಲಮಿತಿ’ ಪ್ರಯೋಗ

ಇನ್ನು ಈ ಪೋಸ್ಟರ್‌ ಮೇಲೆ ಕನ್ನಡ, ತಮಿಳು, ತೆಲುಗು, ಹಿಂದಿ, ಮಲಯಾಳಂ, ಬೆಂಗಾಳಿ ಇಂಗ್ಲಿಷ್‌ ಪದಗಳನ್ನು ಜೋಡಿಸಿ ಸಾಲು ಬರೆಯಲಾಗಿದ್ದು, “ಇವನು ಯಾವಾಗ ಬರ್ತಾನೆ ಗೊತ್ತಿಲ್ಲ, ಆದರೆ ಖಂಡಿತಾವಾಗಿ ಬರುತ್ತಾನೆ’ ಎನ್ನುವ ಅರ್ಥ ಕೊಡುವಂತಿದೆ ಈ ಸಾಲುಗಳು. ಸುಮಾರು ಏಳು ಭಾಷೆಯಲ್ಲಿ ಈ ಸಿನಿಮಾ ಮೂಡಿ ಬರಬಹುದು ಎಂಬ ಸಣ್ಣ ಸುಳಿವನ್ನು ಕೂಡ ಉಪ್ಪಿ ಈ ಪೋಸ್ಟರ್‌ನಲ್ಲಿ ಬಿಟ್ಟುಕೊಟ್ಟಿದ್ದಾರೆ.

ತಮ್ಮ ನಿರ್ದೇಶನದ ಹೊಸಚಿತ್ರದ ಬಗ್ಗೆ ಟ್ವಿಟ್ಟರ್‌ನಲ್ಲಿ ಬರೆದುಕೊಂಡಿರುವ ಉಪೇಂದ್ರ, “ಚಿತ್ರರಂಗದಲ್ಲಿ ಉಪೇಂದ್ರ ಅನ್ನೋ ಕಥೆ ಮಾಡಿ 33 ವರ್ಷದ ಚಿತ್ರಕಥೆಯಲ್ಲಿ ಸಂಭಾಷಣೆ ಹೇಳಿಸಿ ಶಿಳ್ಳೆ ಚಪ್ಪಾಳೆಯಲ್ಲೇ ನಿರ್ದೇಶನ ಮಾಡಿದ ಎಲ್ಲಾ ಅಭಿಮಾನಿ ಪ್ರಜಾ ಪ್ರಭುಗಳಿಗೆ ಈ ಚಿತ್ರ ಅರ್ಪಿಸುತ್ತಿದ್ದೇನೆ’ ಎಂದು ಮಾರ್ಮಿಕವಾಗಿ ಹೇಳಿದ್ದಾರೆ.

ಇನ್ನು ಉಪೇಂದ್ರ ನಿರ್ದೇಶನದ ಈ ಹೊಸ ಸಿನಿಮಾವನ್ನು “ಲಹರಿ ಫಿಲಂಸ್‌’ ಮತ್ತು “ವೀನರ್‌ ಎಂಟರ್‌ ಟೈನರ್’ ಬ್ಯಾನರ್‌ನಲ್ಲಿ ಜಿ. ಮನೋಹರನ್‌ ಮತ್ತು ಕೆ. ಪಿ ಶ್ರೀಕಾಂತ್‌ ಜಂಟಿಯಾಗಿ ನಿರ್ಮಿಸುತ್ತಿದ್ದಾರೆ. ಒಟ್ಟಾರೆ ಸದ್ಯ ಉಪ್ಪಿ ನಿರ್ದೇಶನದ ಹೊಸ ಸಿನಿಮಾದ ಟೈಟಲ್‌ ಮಾತ್ರ ಅನೌನ್ಸ್‌ ಆಗಿದ್ದು, ಸುಮಾರು ಏಳು ವರ್ಷದ ಬಳಿಕ ಉಪ್ಪಿ ನಿರ್ದೇಶನ ಮಾಡುತ್ತಿರುವುದು ಖಾತ್ರಿಯಾಗಿದೆ. ಉಳಿದಂತೆ ಈ ಹೊಸ ಸಿನಿಮಾದ ಇತರ ಕಲಾವಿದರು, ತಂತ್ರಜ್ಞರು ಮತ್ತು ಚಿತ್ರೀಕರಣದ ಬಗ್ಗೆ ಹೆಚ್ಚಿನ ಮಾಹಿತಿ ಇನ್ನಷ್ಟೇ ಹೊರಬರಬೇಕಿದೆ.

ಟಾಪ್ ನ್ಯೂಸ್

DKSHi-4

Siddaramaiah ನಮ್ಮ ನಾಯಕ, ಹೆಸರು ದುರ್ಬಳಕೆ ಮಾಡಿಕೊಳ್ಳುವ ಅಗತ್ಯವಿಲ್ಲ: ಡಿಕೆಶಿ

Actor Darshan: ಪ್ರೇಮ್‌ – ದರ್ಶನ್‌ ಸಿನಿಮಾ ಬರುವುದು ಪಕ್ಕಾ.. ಸ್ಪೆಷೆಲ್‌ ಪೋಸ್ಟರ್‌ ಔಟ್

Actor Darshan: ಪ್ರೇಮ್‌ – ದರ್ಶನ್‌ ಸಿನಿಮಾ ಬರುವುದು ಪಕ್ಕಾ.. ಸ್ಪೆಷೆಲ್‌ ಪೋಸ್ಟರ್‌ ಔಟ್

Gambhir-Agarkar have differences of opinion on Pant-Rahul issue

Team India: ಪಂತ್-ರಾಹುಲ್‌ ವಿಚಾರದಲ್ಲಿ ಗಂಭೀರ್-‌ ಅಗರ್ಕರ್‌ ನಡುವೆ ಭಿನ್ನಾಭಿಪ್ರಾಯ

15-monalisa

Mahakumbh sensation: ಕೇರಳದಲ್ಲಿ ಕುಂಭಮೇಳದ ಮೊನಾಲಿಸಾ ಹವಾ

nagavalli bangale kannada movie

Sandalwood: ʼನಾಗವಲ್ಲಿ ಬಂಗಲೆ’ಯಿಂದ ಹಾಡು ಬಂತು

ಕಟಲ್‌ ಬೋನ್‌ನಲ್ಲಿ ಮೂಡಿಬಂದ ಕಲಾ ಮ್ಯಾಜಿಕ್

Namma Santhe: ಕಟಲ್‌ ಬೋನ್‌ನಲ್ಲಿ ಮೂಡಿಬಂದ ಕಲಾ ಮ್ಯಾಜಿಕ್

Tollywood: ಚಿತ್ರರಂಗಕ್ಕೆ N.T ರಾಮರಾವ್ ಪರಿಚಯಿಸಿದ್ದ ಹಿರಿಯ ನಟಿ ಕೃಷ್ಣವೇಣಿ ನಿಧನ

Tollywood: ಚಿತ್ರರಂಗಕ್ಕೆ N.T ರಾಮರಾವ್ ಪರಿಚಯಿಸಿದ್ದ ಹಿರಿಯ ನಟಿ ಕೃಷ್ಣವೇಣಿ ನಿಧನ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Actor Darshan: ಪ್ರೇಮ್‌ – ದರ್ಶನ್‌ ಸಿನಿಮಾ ಬರುವುದು ಪಕ್ಕಾ.. ಸ್ಪೆಷೆಲ್‌ ಪೋಸ್ಟರ್‌ ಔಟ್

Actor Darshan: ಪ್ರೇಮ್‌ – ದರ್ಶನ್‌ ಸಿನಿಮಾ ಬರುವುದು ಪಕ್ಕಾ.. ಸ್ಪೆಷೆಲ್‌ ಪೋಸ್ಟರ್‌ ಔಟ್

mallu jamkhandi vidya ganesh movie

Mallu Jamkhandi: ʼವಿದ್ಯಾ ಗಣೇಶʼ ನಂಬಿ ಬಂದವರು

nagavalli bangale kannada movie

Sandalwood: ʼನಾಗವಲ್ಲಿ ಬಂಗಲೆ’ಯಿಂದ ಹಾಡು ಬಂತು

ದಾಂಪತ್ಯ ಜೀವನಕ್ಕೆ ಕಾಲಿಟ್ಟ ಧನಂಜಯ – ಧನ್ಯತಾ: ಮದುವೆ ಬಳಿಕ ನವ ಜೋಡಿ ಹೇಳಿದ್ದೇನು?

ದಾಂಪತ್ಯ ಜೀವನಕ್ಕೆ ಕಾಲಿಟ್ಟ ಧನಂಜಯ – ಧನ್ಯತಾ: ಮದುವೆ ಬಳಿಕ ನವ ಜೋಡಿ ಹೇಳಿದ್ದೇನು?

‌Devil Teaser: ಚಾಲೆಂಜ್.. ಹೂಂ.. ಟೀಸರ್‌ನಲ್ಲೇ ʼಡೆವಿಲ್‌’ ಲುಕ್‌ ಕೊಟ್ಟ ʼದಾಸʼ

‌Devil Teaser: ಚಾಲೆಂಜ್.. ಹೂಂ.. ಟೀಸರ್‌ನಲ್ಲೇ ʼಡೆವಿಲ್‌’ ಲುಕ್‌ ಕೊಟ್ಟ ʼದಾಸʼ

MUST WATCH

udayavani youtube

ಭೀಕರ ಹಿಟ್ & ರನ್ ಸಂತ್ರಸ್ತರ ಪರ ನಿಂತ ಪುತ್ತೂರು ಶಾಸಕ ಅಶೋಕ್ ರೈ

udayavani youtube

ಶ್ರೀ ಬ್ರಹ್ಮಬೈದರ್ಕಳ ನೇಮೋತ್ಸವ, ಮಾಣಿಬಾಲೆ ನೇಮೋತ್ಸವ

udayavani youtube

ಸಾಹಿತ್ಯಾಸಕ್ತಿಯ ಚಹಾ ಅಂಗಡಿ

udayavani youtube

ಇಲ್ಲಿ ಪ್ರತಿಯೊಂದು ಗೋವುಗಳಿಗೂ ವಿಭಿನ್ನ ಹೆಸರಿದೆ

udayavani youtube

ಮುಕೇಶ್ ಅಂಬಾನಿ ಕುಟುಂಬದ ನಾಲ್ಕು ತಲೆಮಾರು ಮಹಾ ಕುಂಭಮೇಳದಲ್ಲಿ ಪವಿತ್ರ ಸ್ನಾನ

ಹೊಸ ಸೇರ್ಪಡೆ

18

Uv Fusion: ಗೆಳೆತನವೆಂಬ ನಿಸ್ವಾರ್ಥ ಬಾಂಧವ್ಯ

17

Uv Fusion: ಎಡವುದು ಕೂಡ ಒಳ್ಳೆಯದೇ ಒಮ್ಮೊಮ್ಮೆ…

DKSHi-4

Siddaramaiah ನಮ್ಮ ನಾಯಕ, ಹೆಸರು ದುರ್ಬಳಕೆ ಮಾಡಿಕೊಳ್ಳುವ ಅಗತ್ಯವಿಲ್ಲ: ಡಿಕೆಶಿ

Actor Darshan: ಪ್ರೇಮ್‌ – ದರ್ಶನ್‌ ಸಿನಿಮಾ ಬರುವುದು ಪಕ್ಕಾ.. ಸ್ಪೆಷೆಲ್‌ ಪೋಸ್ಟರ್‌ ಔಟ್

Actor Darshan: ಪ್ರೇಮ್‌ – ದರ್ಶನ್‌ ಸಿನಿಮಾ ಬರುವುದು ಪಕ್ಕಾ.. ಸ್ಪೆಷೆಲ್‌ ಪೋಸ್ಟರ್‌ ಔಟ್

16

Uv Fusion: ಪೆನ್ನಿಗೊಂದು ಕಥೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.