ಉಪೇಂದ್ರ ಹೊಸ ಚಿತ್ರ “ಉಪ್ಪಿರುಪಿ’
Team Udayavani, Jan 3, 2017, 11:07 AM IST
ನೋಟ್ ಬ್ಯಾನ್ ಸಮಯದಲ್ಲಿ ಉಪೇಂದ್ರ ಸಹ ಸುದ್ದಿಯಾದರು. ಅದಕ್ಕೆ ಕಾರಣ ಅವರ ತಲೆಯಲ್ಲೂ ಇಂತಹ ಒಂದು ಆಲೋಚನೆ ಇತ್ತು. ಸಂದರ್ಶನವೊಂದರಲ್ಲಿ ನೋಟುಗಳನ್ನು ಬ್ಯಾನ್ ಮಾಡುವ ಹಾಗೂ ಪ್ಲಾಸ್ಟಿಕ್ ನೋಟುಗಳನ್ನು ತರುವ ಬಗ್ಗೆ ಮಾತನಾಡಿದ್ದರು. ಇಂತಿಪ್ಪ ಉಪ್ಪಿ ಈಗ ರುಪಿ ಜೊತೆಗಿದ್ದಾರೆ! ಏನಿದು ಎಂದು ಕನ್ಫ್ಯೂಸ್ ಆಗಬೇಡಿ. ಇದು ಉಪೇಂದ್ರ ಅವರ ಹೊಸ ಸಿನಿಮಾದ ಸುದ್ದಿ.
ಹೌದು, ಉಪೇಂದ್ರ ಅವರ ಹೊಸ ಸಿನಿಮಾಕ್ಕೆ ಇತ್ತೀಚೆಗೆ ಮುಹೂರ್ತ ನಡೆದಿರೋದು ನಿಮಗೆ ಗೊತ್ತೇ ಇದೆ. ಮಾದೇಶ ನಿರ್ದೇಶನದ ಈ ಚಿತ್ರಕ್ಕೆ ಟೈಟಲ್ ಆಗಿರಲಿಲ್ಲ. ಈಗ ಚಿತ್ರಕ್ಕೆ ಟೈಟಲ್ ಅಂತಿಮವಾಗಿದೆ. ಅದು “ಉಪ್ಪಿರುಪಿ’. “ಉಪ್ಪಿರುಪಿ’ ಎಂದರೆ ಏನು? ಚಿತ್ರದ ಕಥೆಗೂ ಟೈಟಲ್ಗೂ ಏನು ಸಂಬಂಧ ಎಂದು ನೀವು ಕೇಳಿದರೆ ಅದಕ್ಕೆ ಉತ್ತರವಿಲ್ಲ.
ಏಕೆಂದರೆ ನಿರ್ದೇಶಕ ಮಾದೇಶ ಚಿತ್ರದ ಕಥೆಯ ಬಗ್ಗೆ ಯಾವುದೇ ಮಾಹಿತಿ ಬಿಟ್ಟುಕೊಡುವುದಿಲ್ಲ. ಆದರೆ, ಟೈಟಲ್ನ ಸುತ್ತ ಹಳೆಯ ಒಂದು ಸಾವಿರ ಹಾಗೂ ಹೊಸ ಎರಡು ಸಾವಿರ ರೂಪಾಯಿ ನೋಟುಗಳನ್ನು ಕೂಡಾ ಇಟ್ಟಿದ್ದು, ಏನಿರಬಹುದೆಂಬ ಕುತೂಹಲವಂತೂ ಅನೇಕರಿಗಿದೆ. ಇದು ವಿಜಯಲಕ್ಷ್ಮೀ ಅರಸ್ ಅವರ ಕಥೆ. ಕಥೆಯ ಜೊತೆಗೆ ನಿರ್ಮಾಣ ಕೂಡಾ ಅವರದ್ದೇ.
ಉಪೇಂದ್ರ ಅವರ ಶೈಲಿಗೆ ಹೊಂದಿಕೆಯಾಗುವಂತಹ ಕಥೆಯಾಗಿದ್ದು, ಆ ಕಥೆಗೆ “ಉಪ್ಪಿರುಪಿ’ ಟೈಟಲ್ ಕೂಡಾ ಹೊಂದುತ್ತದೆಂಬ ಕಾರಣಕ್ಕೆ ಇಡಲಾಗಿದೆ. ಕಥೆಯಲ್ಲಿ ಇಂದಿನ ಕಾಲಘಟ್ಟಕ್ಕೆ ಹೊಂದಿಕೆಯಾಗುವಂತಹ ಸಾಕಷ್ಟು ಅಂಶಗಳಿವೆಯಂತೆ. ಅಂದಹಾಗೆ, ಈ ಚಿತ್ರದಲ್ಲಿ ಉಪೇಂದ್ರ ಜೊತೆ ರಚಿತಾ ರಾಮ್ ನಾಯಕಿಯಾಗಿ ನಟಿಸುತ್ತಿದ್ದಾರೆ. ಚಿತ್ರದ ನಿರ್ಮಾಪಕರು ಸೌಮ್ಯ ಸ್ವಭಾವದ ನಾಯಕಿಯ ಪಾತ್ರಕ್ಕೆ ಹುಡುಕಾಟ ನಡೆಸುತ್ತಿದ್ದಾಗ ಕಣ್ಣಿಗೆ ಬಿದ್ದಿದ್ದು ರಚಿತಾ ರಾಮ್ ಅಂತೆ.
ಚಿತ್ರವನ್ನು ವೆಸ್ಟ್ಇಂಡೀಸ್ನಲ್ಲಿ ಚಿತ್ರೀಕರಿಸುವ ಯೋಚನೆಯೂ ನಿರ್ಮಾಪಕರಿಗಿದೆ. ಚಿತ್ರಕ್ಕೆ ಸಾಧುಕೋಕಿಲ ಸಂಗೀತ, ರಾಜೇಶ್ ಕಟ್ಟ ಛಾಯಾಗ್ರಹಣವಿದೆ. ಅಂದಹಾಗೆ, ಉಪೇಂದ್ರ ಅವರ ಮತ್ತೂಂದು ಚಿತ್ರ “ಕನ್ನೇಶ್ವರ’ಕ್ಕೂ ಇತ್ತೀಚೆಗೆ ಮುಹೂರ್ತ ನಡೆದಿದ್ದು, ಕೆಲ ದಿನಗಳ ಚಿತ್ರೀಕರಣ ಕೂಡಾ ನಡೆದಿದೆ. ಈ ನಡುವೆಯೇ ಉಪ್ಪಿಯ “ಉಪೇಂದ್ರ ಹುಟ್ಟಿ ಬಾ’ ಚಿತ್ರ ಬಿಡುಗಡೆಯ ಹಂತಕ್ಕೆ ಬಂದಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Sathish Ninasam: ಅಶೋಕನಿಗೆ ನೀನಾಸಂ ಸತೀಶ್ ಸಾಥ್
Sandalwood: ಉಪ್ಪಿ ʼಯುಐʼ ಓಟಿಟಿ ರಿಲೀಸ್ ಯಾವಾಗ?; ಚಿತ್ರತಂಡದಿಂದ ಸಿಕ್ತು ಸ್ಪಷ್ಟನೆ
Sandalwood: ಸ್ಪಾನ್ಸರ್ಸ್ ಇದಿದ್ರೆ ನಾನ್ಯಾಕೆ 12 ವರ್ಷ ಕಷ್ಟಪಡಬೇಕಿತ್ತು: ರಚಿತಾ ರಾಮ್
ಒಳ್ಳೆಯ ಸ್ಕ್ರಿಪ್ಟ್ ಗಾಗಿ ಎದುರು ನೋಡುತ್ತಿದ್ದೇನೆ – ಕಂಬ್ಯಾಕ್ ಬಗ್ಗೆ ರಮ್ಯಾ ಮಾತು
Toxic Movie: ಫ್ಯಾನ್ಸ್ ನಶೆಯೇರಿಸಿದ ಯಶ್; ಹಾಲಿವುಡ್ ರೇಂಜ್ನಲ್ಲಿ ಮಿಂಚಿದ ರಾಕಿಭಾಯ್.!
MUST WATCH
ಹೊಸ ಸೇರ್ಪಡೆ
Google Map: ಗೂಗಲ್ ಮ್ಯಾಪ್ ನಂಬಿ ಗಡಿ ದಾಟಿದ ಪೊಲೀಸರನ್ನೇ ಹಿಡಿದು ಹಾಕಿದ ಗ್ರಾಮಸ್ಥರು
Pritish Nandy: ಖ್ಯಾತ ಕವಿ, ಚಲನಚಿತ್ರ ನಿರ್ಮಾಪಕ ಪ್ರಿತೀಶ್ ನಂದಿ ನಿಧನ
Wrong Spelling: ಅಪಹರಣದ ಪತ್ರದಲ್ಲಿ ಅಕ್ಷರ ತಪ್ಪು ಬರೆದು ಸಿಕ್ಕಿಬಿದ್ದ ಭೂಪ!
Hubballi: ಸಂಪೂರ್ಣ ಬಂದ್… ರಸ್ತೆಗಿಳಿದ ವಾಹನಗಳ ಚಕ್ರದ ಗಾಳಿ ತೆಗೆದು ಪ್ರತಿಭಟನೆ
ಚಂದ್ರಯಾನ, ಗಗನಯಾನ: ಇಸ್ರೋದ ಮಹತ್ವದ ಪ್ಲಾನ್: ವಿ.ನಾರಾಯಣನ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.