ಸುದೀಪ್ ಹಂಚಿಕೊಂಡ ವಿಡಿಯೊಗೆ ಅಸಮಾಧಾನ
Team Udayavani, Mar 24, 2020, 12:12 PM IST
ಕೋವಿಡ್ 19 ವೈರಸ್ ಕುರಿತ ವಿಡಿಯೊವೊಂದನ್ನು ನಟ ಸುದೀಪ್ ತಮ್ಮ ಟ್ವಿಟ್ಟರ್ ಖಾತೆಯಲ್ಲಿ ಹಂಚಿಕೊಂಡಿದ್ದರಿಂದ ಸಾಕಷ್ಟು ಜನ ಅದು ಅವೈಜ್ಞಾನಿಕ ಸಂಗತಿಯಾಗಿದ್ದು, ಹಂಚಿಕೊಂಡಿದ್ದು ಸರಿಯಲ್ಲ ಎಂದು ಅಸಮಾಧಾನ ಹೊರ ಹಾಕಿದ್ದಾರೆ.
ಅಷ್ಟಕ್ಕೂ ಸುದೀಪ್ ಅವರು ಹಂಚಿಕೊಂಡಿರುವ ವಿಡಿಯೊದಲ್ಲಿ “ಚಪ್ಪಾಳೆ ತಟ್ಟುವುದರಿಂದ ವೈರಸ್ ಸಾಯಿಸಬಹುದು. ಈ ಸಂಗತಿಯನ್ನು ಹಗುರವಾಗಿ ತೆಗೆದುಕೊಳ್ಳಬೇಡಿ. ಹೆಚ್ಚು ಜನರು ಭಾಗವಹಿಸಿ, ಈ ಸಂದೇಶವನ್ನು ಹೆಚ್ಚು ಜನರಿಗೆ ತಲುಪಿಸಿ ಮೋದಿ ಅವರು ನಿಮ್ಮ ಮೂಲಕ ಎನರ್ಜಿ ಮೆಡಿಸಿನ್ ಅನ್ನು ಸೃಷ್ಟಿಸುತ್ತಿದ್ದಾರೆ. ಅವರು ನಿಮ್ಮನ್ನು ಎಲ್ಲಿಗೂ ಕೊಂಡೊಯ್ಯುತ್ತಿಲ್ಲ. ನಿಮ್ಮ ಬಾಲ್ಕನಿಗೆ ಮಾತ್ರ ಬರುವಂತೆ ಹೇಳುತ್ತಿದ್ದಾರೆ. ಹೀಗಾಗಿ ಐದು ನಿಮಿಷ ಚಪ್ಪಾಳೆ ತಟ್ಟಿ ಹೆಚ್ಚು ಸದ್ದು ಮಾಡಿ ‘ ಎಂದು ಮಹಿಳೆಯೊಬ್ಬರು ಹೇಳುವ ವಿಡಿಯೊವನ್ನು ಸುದೀಪ್ ಶೇರ್ ಮಾಡಿದ್ದರು.
ಜೊತೆಗೆ ಸುದೀಪ್ ಕೂಡ “ಇದನ್ನು ಕೇಳಿ, ದಯವಿಟ್ಟು ಭಾಗವಹಿಸಿ, ನಾವು ಏನನ್ನಾದರೂ ಕಳೆದುಕೊಳ್ಳುತ್ತೇವೆಯೇ? ಇಲ್ಲ, ನಾವು ಏನನ್ನಾದರೂ ಪಡೆದುಕೊಳ್ಳುತ್ತೇವೆಯೇ? ಆದರೆ ಕಡೇ ಪಕ್ಷ ಪ್ರಯತ್ನಿಸೋಣ. ಇಷ್ಟಕ್ಕೂ ಮಿಗಿಲಾಗಿ ಇದು ನಮ್ಮದೇ ಬದುಕಿಗಾಗಿ’ ಎಂದು ಸುದೀಪ್ ಹೇಳಿದ್ದರು. ಈ ಮಾತು ಕೇಳಿದ ಅನೇಕರು ಟೀಕಿಸಿದ್ದಾರೆ.
ನಟ “ಆ ದಿನಗಳು’ ಚೇತನ್ ಕೂಡ ಸುದೀಪ್ ಅವರ ವಿಡಿಯೋಗೆ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ನಮ್ಮ ಚಿತ್ರರಂಗದಲ್ಲಿನ ನಿಮ್ಮ ಕಾರ್ಯವನ್ನು ನಾನು ಗೌರವಿಸುತ್ತೇನೆ. ಇಬ್ಬರು ವೈದ್ಯರ ಮಗನಾಗಿ ನಾನು, ನಮ್ಮ ವೈದ್ಯಕೀಯ ಸಿಬ್ಬಂದಿಯನ್ನು ಶ್ಲಾಘಿಸಬೇಕು ಎಂಬುದನ್ನು ಒಪ್ಪುತ್ತೇನೆ. ಆದರೆ, ಇಂತಹ ಎನರ್ಜಿ ಮೆಡಿಸಿನ್ ಸಿದ್ಧಾಂತಗಳನ್ನು ಹರಡುವುದು ತಪ್ಪು ಮಾಹಿತಿ ನೀಡುತ್ತದೆ. ಮತ್ತು ಅತೀಂದ್ರೀಯ ಶಕ್ತಿಗಳ ನಂಬಿಕೆಗೆ ಎಡೆಮಾಡಿಕೊಡುತ್ತದೆ. ಕೊರೊನಾ ವಿರುದ್ಧ ವೈಜ್ಞಾನಿಕವಾಗಿ ಹೋರಾಡೋಣ’ ಎಂದಿದ್ದಾರೆ. ಹಾಗೆಯೇ ಅನೇಕರು ಕೂಡ ಅಸಮಾಧಾನ ಹೊರಹಾಕಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Gurunandan: ಡಿ.27ಕ್ಕೆ ತೆರೆಗೆ ಬರುತ್ತಿಲ್ಲ ʼರಾಜು ಜೇಮ್ಸ್ ಬಾಂಡ್’ ಚಿತ್ರ
Nodidavaru Enanthare Movie: ನವೀನ್ ಶಂಕರ್ ಚಿತ್ರದ ಟೀಸರ್ ಬಂತು
BBK11: ಸತತ ಮೂರನೇ ವಾರವೂ ಕಳಪೆ ಪಟ್ಟಿ: ಖುಷಿಯಿಂದಲೇ ಜೈಲು ಸೇರಿದ ಚೈತ್ರಾ
Dhruva-Prem: ಡಿ.24ಕ್ಕೆ ʼಕೆಡಿʼ ಶಿವ ಶಿವ ಹಾಡು ರಿಲೀಸ್
Dhruva Sarja: ಪ್ರತಿ ಸಿನಿಮಾವೂ ನನಗೆ ಹೊಸ ಪಾಠ…: ಧ್ರುವ ಹೇಳಿದ್ದೇನು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Malpe: ಮನೆ ಮನೆಗಳಲ್ಲಿ ಕ್ಯಾರೋಲ್ ಗಾಯನ
Turkey: ಟೇಕ್ ಆಫ್ ವೇಳೆ ಆಂಬ್ಯುಲೆನ್ಸ್ ಹೆಲಿಕಾಪ್ಟರ್ ಪತನ; ನಾಲ್ವರು ಮೃ*ತ್ಯು
87th Kannada Sahitya Sammelana: ದೃಶ್ಯರಂಗ ತಂಡದವರಿಂದ ಸಿನಿಮಾಗಾಗಿ “ನಿಧಿ ’ ಮಾರಾಟ!
Mangaluru: ಕ್ರಿಸ್ಮಸ್ ಸಂಭ್ರಮ; ‘ಮಿನುಗು ತಾರೆ’ಗಳ ಮೆರುಗು
Health: ಶೀಘ್ರ ಕ್ಯಾನ್ಸರ್ ಪತ್ತೆ, ಶಸ್ತ್ರಚಿಕಿತ್ಸೆ ತಿಳಿವಳಿಕೆ ಯಾಕೆ ಮುಖ್ಯ?
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.