ವೈಷ್ಣವಿ-ವೈಭವಿ ಈಗ ನವ ನವೀನ!
Team Udayavani, Feb 15, 2022, 3:15 PM IST
ಕರ್ನಾಟಕ ಚಲನಚಿತ್ರರಂಗದಲ್ಲಿ ಪ್ರದರ್ಶಕರಾಗಿ, ನಿರ್ಮಾಪಕರಾಗಿ ಗುರುತಿಸಿಕೊಂಡಿರುವ ನರಸಿಂಹಲು ಅವರ ಮಾಲೀಕತ್ವದ ವೈಷ್ಣವಿ-ವೈಭವಿ ಚಿತ್ರಮಂದಿರ ಉತ್ತರಹಳ್ಳಿಯಲ್ಲಿದೆ. ಈ ಚಿತ್ರಮಂದಿರ ಈಗ ನವೀನ ತಂತ್ರಜ್ಞಾನದೊಂದಿಗೆ ನವೀಕರಣಗೊಂಡಿದೆ. ಇತ್ತೀಚೆಗೆ ಜೋಗಿ ಪ್ರೇಮ್ ಈ ಚಿತ್ರಮಂದಿರವನ್ನು ಉದ್ಘಾಟಿಸಿದರು.
“ನಾನು ಈ ಚಿತ್ರಮಂದಿರದಲ್ಲಿ ನಮ್ಮ ಚಿತ್ರದ ಹಾಡುಗಳನ್ನು ನೋಡಿದೆ. ಸೌಂಡ್ ಸಿಸ್ಟಮ್ ಉತ್ತಮ ಗುಣಮಟ್ಟದಿಂದ ಕೂಡಿದೆ. ಯಾವ ಮಲ್ಟಿಪ್ಲೆಕ್ಸ್ ಗೂ ಕಡಿಮೆ ಇಲ್ಲ. ನರಸಿಂಹಲು ಅವರ ಈ ಪ್ರಯತ್ನಕ್ಕೆ ಒಳಿತಾಗಲಿ’ ಎಂದರು ಪ್ರೇಮ್.
“ಹದಿನೈದು ವರ್ಷದಲ್ಲಿ ಮೂರು ಬಾರಿ ನವೀಕರಿಸಿದ್ದೇನೆ. ಈಗಿನ ಕಾಲಕ್ಕೆ ತಕ್ಕಂತೆ ನಾವು ಬದಲಾಯಿಸುತ್ತಿರಬೇಕು. ಉತ್ತಮ ಗುಣಮಟ್ಟವಿರುವ ಚಿತ್ರಮಂದಿರವಾದರೆ ಜನ ಖಂಡಿತಾ ಬರುತ್ತಾರೆ’ ಎಂಬುದು ಚಿತ್ರಮಂದಿರದ ಮಾಲೀಕ ನರಸಿಂಹಲು ಮಾತು.
“ನಾವು ಕೆಲವು ಸಂಸ್ಥೆಗಳ ಜೊತೆ ಕೈ ಜೋಡಿಸಿ ಉತ್ತಮ ರೀತಿಯಲ್ಲಿ ಯಾವುದಕ್ಕೂ ಕಡಿಮೆ ಇಲ್ಲದಂತೆ ಈ ಚಿತ್ರಮಂದಿರವನ್ನು ನವೀಕರಣ ಮಾಡಿದ್ದೇವೆ. ಆದರೆ ಬೆಲೆ ಮಾತ್ರ ಏರಿಕೆ ಮಾಡಿಲ್ಲ. ಮೊದಲಿನಷ್ಟೇ ಇರುತ್ತದೆ. 465 ಸಾಮರ್ಥ್ಯವುಳ್ಳ ಉತ್ತಮ ಆಸನ, ಸೌಂಡ್ ವ್ಯವಸ್ಥೆ ಹಾಗೂ ತಿಂಡಿ, ತಿನಿಸುಗಳು ಎಲ್ಲಾ ಉತ್ತಮವಾಗಿದೆ. ಟಿಕೆಟ್ ಹಾಗೂ ಆಹಾರದ ಬೆಲೆ ಜನಸಾಮಾನ್ಯರಿಗೆ ಹೊರೆಯಾಗುವುದಿಲ್ಲ. ಸಿಂಗಲ್ ಥಿಯೇಟರ್‌ಗಳನ್ನು ಉಳಿಸಿಕೊಳ್ಳುವುದೇ ನಮ್ಮ ಉದ್ದೇಶ’ ಎಂದು ನರಸಿಂಹಲು ಪುತ್ರ ಕಿಶೋರ್ ಹೇಳಿದರು.
ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಮಾಜಿ ಅಧ್ಯಕ್ಷರಾದ ಸಾ.ರಾ.ಗೋವಿಂದು, ಪ್ರದರ್ಶಕರ ಸಂಘದ ಅಧ್ಯಕ್ಷರಾದ ಕೆ.ವಿ.ಚಂದ್ರಶೇಖರ್, ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಯ ಕಾರ್ಯದರ್ಶಿ ಎನ್.ಎಂ.ಸುರೇಶ್, ವಿತರಕ ಭಾಷಾ, ನಾಗಣ್ಣ “ಏಕ್ ಲವ್ ಯಾ’ ಚಿತ್ರದ ನಾಯಕ ರಾಣಾ, ನಾಯಕಿ ಮುಂತಾದ ಗಣ್ಯರು ಈ ಸಮಾರಂಭಕ್ಕೆ ಆಗಮಿಸಿ ನರಸಿಂಹಲು ಹಾಗೂ ಕುಟುಂಬದವರಿಗೆ ಶುಭ ಕೋರಿದರು
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Upendra: ʼಯುಐʼಗೆ ಸ್ಯಾಂಡಲ್‌ವುಡ್ ಸಾಥ್; ಉಪೇಂದ್ರ ಚಿತ್ರ ನೋಡಲು ಕಾತುರ
Shiva Rajkumar: ಚಿಕಿತ್ಸೆಗಾಗಿ ಅಮೆರಿಕದತ್ತ ಶಿವಣ್ಣ; ಚಿತ್ರರಂಗದ ಶುಭ ಹಾರೈಕೆ
BBK11: ಟಾಸ್ಕ್ ವಿಚಾರದಲ್ಲಿ ಫೈಯರ್ ಚೈತ್ರಾ ಠುಸ್.. ಮನೆಮಂದಿ ಸುಸ್ತು
BBK11: ಮತ್ತೆ ಬಿಗ್ ಬಾಸ್ ಮನೆಗೆ ಗೋಲ್ಡ್ ಸುರೇಶ್..? ವಿಡಿಯೋದಲ್ಲಿ ಸುಳಿವು
Sandalwood: ಕಣ್ಣಾ ಮುಚ್ಚೆ ಕಾಡೇ ಗೂಡೇ ತೆರೆಗೆ ಸಿದ್ಧ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.