ಕಾಲಚಕ್ರದೊಳಗೆ ವಸಿಷ್ಠ: ಸಿಂಹನ ಎರಡು ಮುಖ
Team Udayavani, Feb 5, 2018, 11:24 AM IST
ಸಾಮಾನ್ಯವಾಗಿ ಸಿನಿಮಾ ನಟರು ಅದೆಷ್ಟೋ ಚಿತ್ರಗಳಲ್ಲಿ ನಟಿಸಿದರೂ ಕೆಲವು ಕಥೆ ಮತ್ತು ಪಾತ್ರಗಳು ಮಾತ್ರ ಕಾಡುವುದು ಸಹಜ. ಅದು ನಟ ವಸಿಷ್ಠ ಸಿಂಹ ಅವರಿಗೂ ಆಗಿದೆ. ಹೌದು, ಈಗಷ್ಟೇ ವಸಿಷ್ಠ ಸಿಂಹ ಅವರನ್ನು ತರಹೇವಾರಿ ಕಥೆಗಳು, ಪಾತ್ರಗಳು ಹುಡುಕಿ ಬರುತ್ತಿವೆ. ಅವರು ಇದುವರೆಗೆ ಒಂದಷ್ಟು ಚಿತ್ರಗಳಲ್ಲಿ ನಟಿಸಿದ್ದಾರೆ.
ನಟಿಸಿದ ಎಲ್ಲಾ ಚಿತ್ರಗಳಲ್ಲೂ ಅವರು ಗುರುತಿಸಿಕೊಂಡಿದ್ದಾರೆ. ಆದರೆ, ಅವರಿಗೆ ಬಹಳ ಕಾಡಿದ ಕಥೆ ಮತ್ತು ಪಾತ್ರ ಯಾವುದು? ಉತ್ತರ “ಕಾಲಚಕ್ರ’ ಚಿತ್ರ. ಹೌದು, ಇದು “ನಾನಿ’ ನಿರ್ದೇಶಕ ಸುಮಂತ್ ಕ್ರಾಂತಿ ನಿರ್ದೇಶನದ ಎರಡನೇ ಚಿತ್ರ. ವಸಿಷ್ಠ ಸಿಂಹ ಅವರಿಲ್ಲಿ ಎರಡು ಶೇಡ್ ಇರುವ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ.
ಇಲ್ಲಿರು ಪೋಸ್ಟರ್ ನೋಡಿದರೆ, ಅದೊಂದು ವಿಭಿನ್ನ ಪ್ರಯೋಗದ ಸಿನಿಮಾ ಅನ್ನುವುದು ಗೊತ್ತಾಗುತ್ತೆ. ವಸಿಷ್ಠ ಸಿಂಹ ಅವರಿಗೂ ಈ ಚಿತ್ರದ ಕಥೆ ಹಾಗು ಪಾತ್ರ ಎರಡೂ ಸಾಕಷ್ಟು ಕಾಡಿದೆಯಂತೆ. ಇತ್ತೀಚೆಗೆ “ಕಾಲಚಕ್ರ’ ಚಿತ್ರದ ಮೊದಲ ಪೋಸ್ಟರ್ ಬಿಡುಗಡೆಯಾಗಿದೆ. ಪೋಸ್ಟರ್‌ನಲ್ಲಿ ವಸಿಷ್ಠ ವಿಭಿನ್ನವಾಗಿ ಕಾಣುತ್ತಾರೆ. ಒಂದು ಬದಿಯಲ್ಲಿ ಯುವಕ, ಇನ್ನೊಂದು ಬದಿಯಲ್ಲಿ ವಯಸ್ಸಾದ ವ್ಯಕ್ತಿಯ ಚಿತ್ರಣ.
ಇಲ್ಲಿ ಎರಡು ಶೇಡ್ ಇರುವುದರಿಂದ ವಸಿಷ್ಠ ಅವರಿಗೆ ಸಹಜವಾಗಿಯೇ ಚಿತ್ರದ ಮೇಲೆ ನಂಬಿಕೆ ಇದೆ. ಹೇಳಿಕೇಳಿ ವಸಿಷ್ಠ ಸಿಂಹ ಅವರ ಧ್ವನಿಯೇ ಅವರನ್ನು ಇನ್ನಷ್ಟು ಗುರುತಿಸಿಕೊಳ್ಳುವಂತೆ ಮಾಡಿದೆ. ಇಲ್ಲಿ ಎರಡು ರೀತಿಯ ಪಾತ್ರಗಳಿರುವುದರಿಂದ, ಎರಡಕ್ಕೂ ಒಂದೇ ಧ್ವನಿಯನ್ನು ಬಳಸಲಾಗಿದೆಯೇ ಎಂದರೆ, ಖಂಡಿತ ಇಲ್ಲ ಅನ್ನುತ್ತಾರೆ ವಸಿಷ್ಠ ಸಿಂಹ. ಅವರಿಲ್ಲಿ ಹೊಸದೊಂದು ಪ್ರಯೋಗ ಮಾಡಿದ್ದಾರಂತೆ.
“ಆಪ್ತರಕ್ಷಕ’ ಚಿತ್ರದಲ್ಲಿ ವಿಷ್ಣುವರ್ಧನ್ ಅವರು ಎರಡು ಪಾತ್ರ ನಿರ್ವಹಿಸಿರುವುದರಿಂದ ಒಂದು ಪಾತ್ರಕ್ಕೆ ಬೇರೆ ರೀತಿಯ ಧ್ವನಿ ಕೊಡಬೇಕು ಎಂಬ ಉದ್ದೇಶದಿಂದ ಡಬ್ಬಿಂಗ್ ವೇಳೆ, ಕುತ್ತಿಗೆಗೆ ಕರ್ಚೀಫ್ ಕಟ್ಟಿಕೊಂಡು ಧ್ವನಿಯನ್ನು ಬದಲಿಸಿ ಆ ಪಾತ್ರಕ್ಕೆ ಕೊಡುವ ಮೂಲಕ ಜೀವ ತುಂಬಿದ್ದರಂತೆ. ಅದನ್ನು ಅರಿತುಕೊಂಡ ವಸಿಷ್ಠ ಅವರೂ ಸಹ, ಡಬ್ಬಿಂಗ್ ವೇಳೆ ವಯಸ್ಸಾದ ಪಾತ್ರಕ್ಕೆ ಬೇರೆ ಧ್ವನಿ ಕೊಡಬೇಕು ಎಂಬ ಉದ್ದೇಶದಿಂದ ಕುತ್ತಿಗೆಗೆ ಕರ್ಚೀಫ್ ಕಟ್ಟಿಕೊಂಡೇ ಬೇರೆ ಧ್ವನಿ ಕೊಡುವ ಪ್ರಯತ್ನ ಮಾಡಿದ್ದಾರೆ.
ಅಂದಹಾಗೆ, ವಸಿಷ್ಠ ತಮ್ಮ ಪಾತ್ರಗಳಿಗೆ ಕೇವಲ ಅರ್ಧ ದಿನ ಇಲ್ಲವೇ ಒಂದು ದಿನದಲ್ಲಿ ಡಬ್ಬಿಂಗ್ ಮಾಡುತ್ತಾರೆ. ಆದರೆ, “ಕಾಲಚಕ್ರ’ ಚಿತ್ರಕ್ಕೆ, ಆ ವಿಶೇಷ ಪಾತ್ರಕ್ಕೆ ಧ್ವನಿ ವಿಭಿನ್ನವಾಗಿ ಮೂಡಿಬರಬೇಕು ಎಂಬ ಉದ್ದೇಶದಿಂದಲೇ ಅವರು ಐದು ದಿನಗಳ ಕಾಲ ಸಮಯ ತೆಗೆದುಕೊಂಡು ಡಬ್ಬಿಂಗ್ ಮಾಡಿದ್ದಾರಂತೆ. ಅದೇನೆ ಇರಲಿ, ಕಾಲಚಕ್ರದೊಳಗೆ ಅವಿತಿರುವ ವಸಿಷ್ಠ ಇಲ್ಲಿ ತನ್ನ ಎರಡು ಮುಖಗಳನ್ನು ತೋರಿಸೋಕೆ ಸಜ್ಜಾಗಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.