![1-congress](https://www.udayavani.com/wp-content/uploads/2025/02/1-congress-415x299.jpg)
![1-congress](https://www.udayavani.com/wp-content/uploads/2025/02/1-congress-415x299.jpg)
Team Udayavani, Feb 20, 2023, 2:57 PM IST
ಹ್ಯಾಟ್ರಿಕ್ ಹೀರೋ ಶಿವರಾಜಕುಮಾರ್ ಅಭಿನಯದ ”ವೇದ’ ಸಿನಿಮಾ ಬಿಡುಗಡೆಯಾಗಿ ಇತ್ತೀಚೆಗೆ ಐವತ್ತು ದಿನಗಳನ್ನು ಯಶಸ್ವಿಯಾಗಿ ಪೂರ್ಣಗೊಳಿಸಿದೆ. ಇದೇ ವೇಳೆ ಸಿನಿಮಾದ ಯಶಸ್ಸಿಗೆ ಕಾರಣರಾದ ಪ್ರೇಕ್ಷಕರು, ವಿತರಕರು, ಪ್ರದರ್ಶಕರಿಗೆ ಚಿತ್ರತಂಡ ಧನ್ಯವಾದಗಳನ್ನು ಸಮರ್ಪಿಸಿತು.
ನಾಗವಾರದಲ್ಲಿರುವ ನಟ ಶಿವರಾಜಕುಮಾರ್ ಅವರ ಸ್ವಗೃಹದಲ್ಲಿ ನಡೆದ “ವೇದ’ ಸಿನಿಮಾದ ಐವತ್ತು ದಿನಗಳ ಸಕ್ಸಸ್ ಸಂಭ್ರಮದಲ್ಲಿ ಚಿತ್ರದ ಕಲಾವಿದರು, ತಂತ್ರಜ್ಞರು ಭಾಗಿಯಾಗಿದ್ದರು. “ವೇದ’ ಸಿನಿಮಾದಲ್ಲಿ ಕೆಲಸ ಮಾಡಿದ ಪ್ರತಿ ಕಲಾವಿದರು ಮತ್ತು ತಂತ್ರಜ್ಞರಿಗೆ ನಿರ್ಮಾಪಕಿ ಗೀತಾ ಶಿವರಾಜಕುಮಾರ್ ಮತ್ತು ಶಿವರಾಜಕುಮಾರ್ ದಂಪತಿ, ಪುತ್ರಿ ನಿವೇದಿತಾ ಶಿವರಾಜಕುಮಾರ್ ಹಾಜರಿದ್ದು ಸ್ಮರಣಿಕೆ ನೀಡಿ ಅಭಿನಂದಿಸಿದರು.
“ಆನಂದ್’ ಸಿನಿಮಾದಿಂದ “ವೇದ’ ಸಿನಿಮಾದವರೆಗೆ ಸುಮಾರು 37 ವರ್ಷಗಳಾಯಿತು. ಮೊದಲ ಸಿನಿಮಾದಿಂದ ಇಲ್ಲಿಯವರೆಗೆ ಜನ ಅದೇ ಪ್ರೀತಿ ಕೊಡುತ್ತಿದ್ದಾರೆ. ಜನ ಎಲ್ಲಿಯವರೆಗೆ ಪ್ರೀತಿ ಕೊಡುತ್ತಿರುತ್ತಾರೋ, ಅಲ್ಲಿಯವರೆಗೂ ಅಭಿನಯಿಸುತ್ತಲೇ ಇರುತ್ತೇನೆ. ಇವತ್ತು “ವೇದ’ ಸಿನಿಮಾ ನೋಡಿದ ಪ್ರತಿಯೊಬ್ಬರೂ ಅದರ ಬಗ್ಗೆ ಮಾತನಾಡುತ್ತಿದ್ದಾರೆ ಅಂದರೆ, ಅದಕ್ಕೆ ಕಾರಣ ಇಡೀ ಚಿತ್ರತಂಡದ ಪರಿಶ್ರಮ. ಪ್ರತಿಯೊಬ್ಬರೂ, ನಮ್ಮ ಮನೆಯ ಸಿನಿಮಾ ಅಂತ ಕೆಲಸ ಮಾಡಿದ್ದಾರೆ. ಹಾಗಾಗಿ “ವೇದ’ ಸಿನಿಮಾಕ್ಕೆ ಇಂಥದ್ದೊಂದು ಸಕ್ಸಸ್ ಸಿಗೋದಕ್ಕೆ ಕಾರಣವಾಯಿತು.
– ಶಿವರಾಜಕುಮಾರ್, ನಟ
ಶಿವಣ್ಣ ಅವರ ಹೊಸ ಲುಕ್, ಹೊಸಥರದ ಪಾತ್ರ ಅಭಿಮಾನಿಗಳಿಗೆ ಇಷ್ಟವಾಗಿದೆ. ಕನ್ನಡದಲ್ಲಿ ಮಾತ್ರವಲ್ಲದೆ, ಇತ್ತೀಚೆಗೆ “ವೇದ’ ತೆಲುಗಿನಲ್ಲೂ ತೆರೆಕಂಡಿದ್ದು, ಅಲ್ಲೂ ಬಿಗ್ ರೆಸ್ಪಾನ್ಸ್ ಸಿಗುತ್ತಿದೆ. ಸಿನಿಮಾ ಐವತ್ತು ದಿನಗಳನ್ನು ಪೂರೈಸಿರುವುದು ಇಡೀ ಚಿತ್ರತಂಡಕ್ಕೆ ಖುಷಿ ತಂದಿದೆ.;
-ಹರ್ಷ, “ವೇದ’ ಸಿನಿಮಾದ ನಿರ್ದೇಕ
ಇಡೀ ಸಿನಿಮಾಕ್ಕೆ ಎಲ್ಲ ಕಡೆಗಳಿಂದ ಬಿಗ್ ರೆಸ್ಪಾನ್ಸ್ ಸಿಗುತ್ತಿದೆ. ಮೊದಲ ಬಾರಿಗೆ ಶಿವರಾಜಕುಮಾರ್ ಅವರಂಥ ದೊಡ್ಡ ನಟರ ಜೊತೆಗೆ ಅಭಿನಯಿಸಿದ್ದು, “ಗೀತಾ ಪಿಕ್ಚರ್ಸ್’ ಬ್ಯಾನರಿನಲ್ಲಿ ಕೆಲಸ ಮಾಡಿದ್ದು ಮರೆಯಲಾರದ ಅನುಭವ. ಸಿನಿಮಾದ ಯಶಸ್ಸಿಗೆ ಕಾರಣರಾದ ಪ್ರತಿಯೊಬ್ಬರಿಗೂ ಧನ್ಯವಾದಗಳು.
– ಗಾನವಿ, “ವೇದ’ ಸಿನಿಮಾದ ನಾಯಕಿ.
Actor Darshan: ಪ್ರೇಮ್ – ದರ್ಶನ್ ಸಿನಿಮಾ ಬರುವುದು ಪಕ್ಕಾ.. ಸ್ಪೆಷೆಲ್ ಪೋಸ್ಟರ್ ಔಟ್
Mallu Jamkhandi: ʼವಿದ್ಯಾ ಗಣೇಶʼ ನಂಬಿ ಬಂದವರು
Sandalwood: ʼನಾಗವಲ್ಲಿ ಬಂಗಲೆ’ಯಿಂದ ಹಾಡು ಬಂತು
ದಾಂಪತ್ಯ ಜೀವನಕ್ಕೆ ಕಾಲಿಟ್ಟ ಧನಂಜಯ – ಧನ್ಯತಾ: ಮದುವೆ ಬಳಿಕ ನವ ಜೋಡಿ ಹೇಳಿದ್ದೇನು?
Devil Teaser: ಚಾಲೆಂಜ್.. ಹೂಂ.. ಟೀಸರ್‌ನಲ್ಲೇ ʼಡೆವಿಲ್’ ಲುಕ್ ಕೊಟ್ಟ ʼದಾಸʼ
You seem to have an Ad Blocker on.
To continue reading, please turn it off or whitelist Udayavani.