ವೀರಾಧಿವೀರನ ಪ್ರೇಮಗೀತೆ
Team Udayavani, Nov 9, 2018, 10:54 AM IST
ಹಳೆಯ ಯಶಸ್ವಿ ಸಿನಿಮಾಗಳ ಶೀರ್ಷಿಕೆಗಳನ್ನಿಟ್ಟುಕೊಂಡು ಬರುತ್ತಿರುವ ಸಿನಿಮಾಗಳ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚುತ್ತಿದೆ. ಈಗಾಗಲೇ ಅನೇಕ ಸಿನಿಮಾಗಳು ಸೆಟ್ಟೇರಿದ್ದು, ಈಗ ಅದಕ್ಕೆ ಹೊಸ ಸೇರ್ಪಡೆ “ವೀರಾಧಿವೀರ’. ವಿಷ್ಣುವರ್ಧನ್ ಅವರು ನಟಿಸಿದ “ವೀರಾಧಿವೀರ’ ಚಿತ್ರದ ಟೈಟಲ್ ಇಟ್ಟುಕೊಂಡು ಈಗ ಹೊಸಬರ ಸಿನಿಮಾ ಸೆಟ್ಟೇರಿದೆ. ಎಲ್ಲಾ ಓಕೆ, ಈ ಸಿನಿಮಾಕ್ಕೆ “ವೀರಾಧಿವೀರ’ ಎಂದು ಟೈಟಲ್ ಇಡಲು ಕಾರಣವೇನೆಂದು ನೀವು ಕೇಳಬಹುದು. ಅದಕ್ಕೆ ಕಾರಣ ಅಭಿಮಾನ.
ಚಿತ್ರದ ನಿರ್ಮಾಪಕ ಮತ್ತು ನಾಯಕ ವಿಷ್ಣುವರ್ಧನ್ ಅವರ ಅಭಿಮಾನಿಯಾಗಿದ್ದರಿಂದ ಚಿತ್ರಕ್ಕೆ ಈ ಹೆಸರು ಇಡಲಾಗಿದೆಯಂತೆ. ಅಂದಹಾಗೆ, ಇದೊಂದು ಹಳ್ಳಿ ಸೊಗಡಿನ ಚಿತ್ರವಾಗಿದ್ದು, ಆರಂಭದಲ್ಲಿ ಸಣ್ಣಪುಟ್ಟ ಕಳ್ಳತನ ಮಾಡಿಕೊಂಡಿರುವ ನಾಯಕನ ಹೃದಯವನ್ನೇ ನಾಯಕಿ ಕದ್ದು ಬಿಡುತ್ತಾಳಂತೆ. ಆ ನಂತರ ಆಕೆಯನ್ನು ಉಳಿಸಿಕೊಳ್ಳಲು ನಾಯಕ ಏನೆಲ್ಲಾ ಕಸರತ್ತು ಮಾಡುತ್ತಾನೆ ಹಾಗೂ ಆ ನಂತರ ಏನಾಗುತ್ತಾನೆ ಎಂಬುದೇ ಸಿನಿಮಾದ ಹೈಲೈಟ್ ಎಂಬುದು ಚಿತ್ರತಂಡದ ಮಾತು.
ಚಿತ್ರದಲ್ಲಿ ಶಿವು ನಾಯಕರಾಗಿ ನಟಿಸಿದ್ದಾರೆ. ಇಲ್ಲಿ ಅವರಿಗೆ ಎರಡು ಶೇಡ್ ಇರುವ ಪಾತ್ರ ಸಿಕ್ಕಿದೆಯಂತೆ. ಚಿತ್ರದಲ್ಲಿ ಅಶ್ವಿನಿ ನಾಯಕಿಯಾಗಿ ನಟಿಸಿದ್ದಾರೆ. ಸತ್ಯ ಸಾಮ್ರಾಟ್ ಈ ಚಿತ್ರದ ನಿರ್ದೇಶಕರು. ಈ ಹಿಂದೆ ಎರಡು ಚಿತ್ರಗಳನ್ನು ನಿರ್ದೇಶಿಸಿದ ಅನುಭವದೊಂದಿಗೆ ಈ ಸಿನಿಮಾ ಮಾಡುತ್ತಿದ್ದಾರೆ. ಚಿತ್ರಕ್ಕೆ ಕರಣ್ ಮಹದೇವ ಸಂಗೀತವಿದೆ. ಶಿಕ್ಷಣ ಸಂಸ್ಥೆ ನಡೆಸುತ್ತಿರುವ ಜಯಾನಂದ.ಪಿ ಈ ಚಿತ್ರದ ನಿರ್ಮಾಪಕರು. ಜೊತೆಗೆ ನಾಯಕಿ ತಂದೆಯಾಗಿ ಮುಖ್ಯ ಖಳನಾಯಕನ ಪಾತ್ರದಲ್ಲೂ ನಟಿಸಿದ್ದಾರೆ. ಅಂದಹಾಗೆ, ಇತ್ತೀಚೆಗೆ ಚಿತ್ರದ ಆಡಿಯೋ ಬಿಡುಗಡೆಯಾಯಿತು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.