ರಾಜಕೀಯಕ್ಕೆ ವೆಂಕಟ್‌ ಎಂಟ್ರಿ!


Team Udayavani, Mar 28, 2017, 11:16 AM IST

Venkat-(22).jpg

ನಟ, ನಿರ್ದೇಶಕ, ನಿರ್ಮಾಪಕ ವೆಂಕಟ್‌ ಈಗ ಇನ್ನೊಂದು ಸುದ್ದಿಯಲ್ಲಿದ್ದಾರೆ! ಅರೆ, ಮತ್ಯಾರ ಮೇಲೆ ಕೈ ಮಾಡಿ ಸುದ್ದಿಯಾಗಿದ್ದಾರೆ ಅಂತೆಲ್ಲಾ ಕಲ್ಪನೆ ಬೇಡ. ವಿಷಯವಿಷ್ಟೇ. ವೆಂಕಟ್‌ ಈಗ ಹೊಸದೊಂದು ರಾಜಕೀಯ ಪಕ್ಷ ಕಟ್ಟುತ್ತಿದ್ದಾರೆ. ಮುಂಬರುವ ಚುನಾವಣೆಯಲ್ಲಿ ಆ ಪಕ್ಷದ ಕಾರ್ಯಕರ್ತರನ್ನೇ ಸ್ಪರ್ಧಿಗಳನ್ನಾಗಿಸಲು ತಯಾರಿ ನಡೆಸುತ್ತಿದ್ದಾರೆ. ಹೌದು, ಈ ಮಾತು ಸುಳ್ಳಲ್ಲ. ದೇವರಾಣೆಗೂ ವೆಂಕಟ್‌ ಅವರ ಬಾಯಲ್ಲೇ ಬಂದ ಸತ್ಯವಿದು.

ಹುಚ್ಚ ವೆಂಕಟ್‌ ಸೇನೆಗೆ ನಾಲ್ಕು ವರ್ಷ ಪೂರ್ಣಗೊಂಡಿದೆ. ಆ ಖುಷಿಯಲ್ಲಿ ವೆಂಕಟ್‌ ಈಗ ಸೇನೆ ಹುಡುಗರನ್ನೊಳಗೊಂಡ “ಹುಚ್ಚ ವೆಂಕಟ್‌ ಪಾರ್ಟಿ’ ಎಂದು ನಾಮಕರಣ ಮಾಡಿ ಇಷ್ಟರಲ್ಲೇ ಚುನಾವಣೆಗೂ ಸ್ಪರ್ಧಿಸಲು ರೆಡಿಯಾಗಿದ್ದಾರೆ. 2018 ರಲ್ಲಿ ನಡೆಯಲಿರುವ ವಿಧಾನಸಭೆ ಚುನಾವಣೆಯಲ್ಲಿ ಅವರ ಪಾರ್ಟಿಯೂ ಸ್ಪರ್ಧಿಸಲಿದೆ. ವೆಂಕಟ್‌ ಪರ ಕೆಲಸ ಮಾಡುವ ಹುಡುಗರನ್ನೇ ಆಯ್ಕೆ ಮಾಡಿ, ಪ್ರತಿ ಕ್ಷೇತ್ರದಲ್ಲೂ ಸ್ಪರ್ಧಿಯನ್ನಾಗಿಸಲಿದ್ದಾರೆ.

ಅವರನ್ನು ಗೆಲ್ಲಿಸುವ ಜವಾಬ್ದಾರಿ ಹೊತ್ತಿರುವ ವೆಂಕಟ್‌, ರಾಜ್ಯದೆಲ್ಲೆಡೆ ಸಂಚರಿಸಿ ಪಕ್ಷ ಸಂಘಟನೆ ಮಾಡಲಿದ್ದಾರಂತೆ. ಆದರೆ, ಅವರು ಮಾತ್ರ ಚುನಾವಣೆಗೆ ಸ್ಪರ್ಧಿಸುವುದಿಲ್ಲ ಎಂಬುದು ಸ್ಪಷ್ಟ. ಅವರ ಸೇನೆ ಹುಡುಗರು ಸ್ಪರ್ಧಿಗಳಾಗಲಿದ್ದು, ಯಾರು ಸ್ಪರ್ಧೆಗೆ ನಿಲ್ಲುತ್ತಾರೋ ಅವರೇ ತಮ್ಮ ಚುನಾವಣೆಯ ಖರ್ಚು ವೆಚ್ಚಗಳನ್ನು ನೋಡಿಕೊಳ್ಳಬೇಕು ಎಂಬುದು ವೆಂಕಟ್‌ ಮಾತು. ಆದರೆ, ಅವರ ಪಾಲಿಸಿಯನ್ನೇ ಎಲ್ಲರೂ ಫಾಲೋ ಮಾಡಬೇಕೆಂಬುದು ಅವರ ಉದ್ದೇಶ.

ಅವರಿಗೆ ಒಂದೇ ಒಂದು ಸ್ಥಾನ ಗೆದ್ದರೂ ಪಕ್ಷ ಕಟ್ಟಿದ್ದಕ್ಕೂ ಸಾರ್ಥಕವಂತೆ. ಹಾಗೊಂದು ವೇಳೆ ಚುನಾವಣೆಯಲ್ಲಿ ಸೋತರೆ, ಅದು ಬದಲಾವಣೆ ಮಾಡಿಕೊಳ್ಳಲು ಸಿಕ್ಕ ಅವಕಾಶ ಎಂದು ಭಾವಿಸಲಿದ್ದಾರಂತೆ. ಮುಂದಿನ ಒಂದು ತಿಂಗಳಲ್ಲಿ “ಹುಚ್ಚ ವೆಂಕಟ್‌ ಪಾರ್ಟಿ’ ಎಂದು ನಾಮಕರಣ ಮಾಡಿ ಮುಂದಿನ ಚುನಾವಣೆಗೆ ತಯಾರು ಮಾಡಿಕೊಳ್ಳಲಿದ್ದಾರಂತೆ. ಅಂತೂ ರಾಜಕೀಯಕ್ಕೂ ಎಂಟ್ರಿ ಕೊಡುವ ಮನಸ್ಸು ಮಾಡಿರುವ ಹುಚ್ಚವೆಂಕಟ್‌, ತಮ್ಮ ಮದುವೆ ಬಗ್ಗೆಯೂ ಮನಸ್ಸು ಮಾಡಿದ್ದಾರೆ.

ಅವರು ಮದುವೆ ಆಗುವುದು ಪಕ್ಕಾ ಅಂತ ಸ್ಪಷ್ಟಪಡಿಸಿದ್ದು, ಈಗಾಗಲೇ ಒಂದು ಹುಡುಗಿಯನ್ನು ನೋಡಿದ್ದು, ಅವರನ್ನೇ ಮದುವೆ ಮಾಡಿಕೊಳ್ಳಲಿದ್ದಾರಂತೆ. ಇನ್ನೂ ಒಂದೂವರೆ ವರ್ಷದವರೆಗೆ ಮದುವೆ ಸುದ್ದಿ ಇಲ್ಲ. ಅಲ್ಲಿಯವರೆಗೆ ಪ್ರೀತಿ ಮಾಡಿಕಂಡಿದ್ದು, ಆ ಬಳಿಕ ಮದುವೆ ಬಗ್ಗೆ ಯೋಚನೆ ಮಾಡಲಿದ್ದಾರಂತೆ. ಇನ್ನು, ಅವರ “ಪೊರ್ಕಿ ಹುಚ್ಚ ವೆಂಕಟ್‌’ಗೆ ಯು/ಎ ಸಟಿಫಿಕೆಟ್‌ ಸಿಕ್ಕಿದ್ದು, ಶೀಘ್ರವೇ ಬಿಡುಗಡೆ ಮಾಡಲಿದ್ದಾರಂತೆ.

ಸಿನಿಮಾದಲ್ಲಿ ಪ್ರೀತಿ, ತಾಯಿ ಸೆಂಟಿಮೆಂಟ್‌, ವಿಷ್ಣುವರ್ಧನ್‌ ಅವರ ತತ್ವಾದರ್ಶಗಳು, ರೈತಪರ ಕಾಳಜಿ, ಅತ್ಯಾಚಾರಿಗಳಿಗೆ ಗಲ್ಲು ಶಿಕ್ಷೆ ಆಗಬೇಕು, ಐಟಂ ಸಾಂಗ್‌ ಬ್ಯಾನ್‌ ಮಾಡಬೇಕು ಎಂಬ ವಿಷಯಗಳಿವೆಯಂತೆ. ಇಷ್ಟು ದಿನ ಅವರು “ನನ್‌ ಮಗಂದ್‌’, “ನನ್‌ ಎಕ್ಕಡ’ ಅಂತ ಯಾಕೆ ಹೇಳುತ್ತಿದ್ದರು ಎಂಬುದಕ್ಕೆ ಈ ಚಿತ್ರದಲ್ಲಿ ಉತ್ತರ ಕೊಟ್ಟಿದ್ದಾರಂತೆ. ಅಂದಹಾಗೆ, ವೆಂಕಟ್‌ಗೆ ಈ ಚಿತ್ರದಲ್ಲಿ  ಸೌಮ್ಯ ಮತ್ತು ರಚನಾ ಎಂಬ ನಾಯಕಿಯರಿದ್ದಾರೆ.

ಟಾಪ್ ನ್ಯೂಸ್

Khadri–cm

Gift: ಶಿಗ್ಗಾವಿಯಲ್ಲಿ ನಾಮಪತ್ರ ವಾಪಸ್‌ ಪಡೆದ ಖಾದ್ರಿಗೆ ಹೆಸ್ಕಾಂ ಅಧ್ಯಕ್ಷಗಿರಿ ಹುದ್ದೆ!

DVG-Tagaru

Davanagere: ʼಸೋಲಿಲ್ಲದ ಸರದಾರʼ ಎನಿಸಿದ್ದ ʼಬೆಳ್ಳೂಡಿ ಕಾಳಿʼ ಟಗರು ಅನಾರೋಗ್ಯದಿಂದ ನಿಧನ

1-IFFI

IFFI 2024; ಫಿಲ್ಮ್ ಬಜಾರ್: ಮತ್ತೊಂದು ಯಶಸ್ವಿ ಮುನ್ನುಡಿಯೊಂದಿಗೆ ಉತ್ಸವ ಸಮಾಪನ

1-ree

IPL Mega Auction:1.1 ಕೋಟಿ ರೂ.ಗೆ ಹರಾಜಾದ 13ರ ಬಾಲಕ !!

isrel netanyahu

Israel; ಹೆಜ್ಬುಲ್ಲಾ ಜತೆ ‘ತಾತ್ವಿಕವಾಗಿ’ ಕದನ ವಿರಾಮ ಒಪ್ಪಂದ :ವರದಿ

Madikeri-1

Madikeri: ರೈಲ್ವೆ ಕಂಬಿಯ ಬೇಲಿಗೆ ಸಿಲುಕಿದ ಕಾಡಾನೆಯ ರಕ್ಷಣೆ

Kharge

JPC on Adani issue;ನಿಯಮ 267 ಅಡಿಯಲ್ಲಿ ಪ್ರಸ್ತಾಪಿಸಲು ಅವಕಾಶ ನೀಡದ್ದಕ್ಕೆ ಖರ್ಗೆ ಆಕ್ರೋಶ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

kiran raj’s Megha movie

‌Megha Movie: ನಾನು ಎಂಟು ಸಾರಿ ಕೇಳಿದ ಕಥೆಯಿದು…: ಕಿರಣ್‌ ರಾಜ್

Sudeep: ‘Max’ release date fixed: Production company wakes up to Kichchan’s anger

Sudeep: ʼಮ್ಯಾಕ್ಸ್‌ʼ ರಿಲೀಸ್‌ ದಿನ ಫಿಕ್ಸ್: ಕಿಚ್ಚನ ಸಿಟ್ಟಿಗೆ ಎಚ್ಚೆತ್ತ ನಿರ್ಮಾಣ ಸಂಸ್ಥೆ

BBK11: ಕಣ್ಣೀರುಡುತ್ತಲೇ ಬಿಗ್ ಬಾಸ್ ಮನೆಯಿಂದ ಆಚೆ ಬಂದ ಧರ್ಮ ಕೀರ್ತಿರಾಜ್

BBK11: ಕಣ್ಣೀರುಡುತ್ತಲೇ ಬಿಗ್ ಬಾಸ್ ಮನೆಯಿಂದ ಆಚೆ ಬಂದ ಧರ್ಮ ಕೀರ್ತಿರಾಜ್

Vijay Raghavendra is in Rudrabhishekam Movie

Kannada Cinema: ‘ರುದ್ರಾಭಿಷೇಕಂ’ನಲ್ಲಿ ವಿಜಯ್‌ ರಾಘವೇಂದ್ರ

Shivaraj-Kumar

Health Issue: ಸರ್ಜರಿಗಾಗಿ ಮುಂದಿನ ತಿಂಗಳು ಅಮೆರಿಕಕ್ಕೆ ಹೋಗುವೆ: ನಟ ಶಿವರಾಜ್‌ಕುಮಾರ್‌

MUST WATCH

udayavani youtube

ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು

udayavani youtube

ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು

udayavani youtube

ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?

udayavani youtube

ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್‌ |

udayavani youtube

ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್

ಹೊಸ ಸೇರ್ಪಡೆ

crime

Gangolli: ಬೈಕ್‌ಗೆ ಕಾರು ಢಿಕ್ಕಿ; ಇಬ್ಬರಿಗೆ ಗಾಯ

road-mishap

Udupi: ಪಿಕಪ್‌ ವಾಹನ ಢಿಕ್ಕಿ ಹೊಡೆದು ವ್ಯಕ್ತಿ ಗಾಯ

Khadri–cm

Gift: ಶಿಗ್ಗಾವಿಯಲ್ಲಿ ನಾಮಪತ್ರ ವಾಪಸ್‌ ಪಡೆದ ಖಾದ್ರಿಗೆ ಹೆಸ್ಕಾಂ ಅಧ್ಯಕ್ಷಗಿರಿ ಹುದ್ದೆ!

DVG-Tagaru

Davanagere: ʼಸೋಲಿಲ್ಲದ ಸರದಾರʼ ಎನಿಸಿದ್ದ ʼಬೆಳ್ಳೂಡಿ ಕಾಳಿʼ ಟಗರು ಅನಾರೋಗ್ಯದಿಂದ ನಿಧನ

1-IFFI

IFFI 2024; ಫಿಲ್ಮ್ ಬಜಾರ್: ಮತ್ತೊಂದು ಯಶಸ್ವಿ ಮುನ್ನುಡಿಯೊಂದಿಗೆ ಉತ್ಸವ ಸಮಾಪನ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.