Venkatesaya Namaha: ವೆಂಕಟೇಶನ ನಂಬಿ ಬಂದವರು
Team Udayavani, Jan 11, 2025, 3:13 PM IST
ಹರೀಶ್ ರಾಜ್ ಅವರ ನಟನೆ, ನಿರ್ದೇಶನದಲ್ಲಿ “ವೆಂಕಟೇಶಾಯ ನಮಃ’ ಎಂಬ ಹೊಸ ಸಿನಿಮಾವೊಂದು ನಿರ್ಮಾಣವಾಗುತ್ತಿದೆ. ಈಗಾಗಲೇ ಚಿತ್ರತಂಡ ಮೊದಲ ಹಂತದ ಶೂಟಿಂಗ್ ಪೂರ್ಣಗೊಳಿಸಿದ್ದು, ಚಿತ್ರದ ಬಗ್ಗೆ ಮಾಹಿತಿ ಹಂಚಿಕೊಳ್ಳಲು ಇತ್ತೀಚೆಗೆ ಮಾಧ್ಯಮದೆದುರು ಬಂದಿತ್ತು.
ಚಿತ್ರದ ಬಗ್ಗೆ ಹರೀಶ್ ರಾಜ್ ಮಾತನಾಡುತ್ತ, “ವೆಂಕಟೇಶಾಯ ನಮಃ ಚಿತ್ರಕ್ಕೆ, ನಾನು ಹಿಂದೆ ನಟಿಸಿದ್ದ “ಗೋವಿಂದಾಯ ನಮಃ’ ಚಿತ್ರ ಸ್ಪೂರ್ತಿ. ಹಾಗಾಗಿ “ಮತ್ತೆ ಪ್ಯಾರ್‌ಗೆ ಆಗ್ಬಿಟ್ಟೈತೆ…’ ಎಂಬ ಅಡಿಬರ ಇಟ್ಟಿದ್ದೇವೆ. ಆ ಟ್ಯೂನ್ ಕೂಡ ಮತ್ತೆ ಬಳಸಿಕೊಳ್ಳುವ ಉದ್ದೇಶವಿದ್ದು, ಅದರ ಪ್ರಯತ್ನದಲ್ಲಿದ್ದೇವೆ. ಇದೊಂದು ಲವ್ ಸ್ಟೋರಿ, ವೆಂಕಟೇಶ್ ಎಂಬ ಪಾತ್ರದ ಸುತ್ತ ನಡೆಯುವ ಕಥೆಯನ್ನು ಹಾಸ್ಯ ಮಿಶ್ರಣದೊಂದಿಗೆ ಹೇಳುತ್ತಿದ್ದೇವೆ. ಈ ಚಿತ್ರದಲ್ಲಿ ಎಂಟು ಹೀರೋಯಿನ್‌ಗಳು ಅಭಿನಯಿಸುತ್ತಿದ್ದು, ಇಬ್ಬರು ನಾಯಕಿಯರು ಪ್ರಮುಖವಾಗಿ ಕಾಣಿಸಿಕೊಳ್ಳುತ್ತಿದ್ದಾರೆ’ ಎಂದರು.
ಶ್ರೀ ಲಕ್ಷ್ಮೀ ಜನಾರ್ದನ ಮೂವೀಸ್ ಬ್ಯಾನರ್‌ನಡಿ ಪಿ. ಜನಾರ್ದನ ಈ ಚಿತ್ರದ ನಿರ್ಮಾಪಕರು. “ನಿರ್ದೇಶಕರು ಈ ಕಾಮಿಡಿ ಸಬ್ಜೆಕ್ಟ್ ಹೇಳಿದ್ರು, ಬಹಳ ಇಷ್ಟವಾಗಿ ಚಿತ್ರವನ್ನು ಆರಂಭಿಸಿದ್ದೇವೆ, ಮೊದಲ ಹಂತದ ಚಿತ್ರೀಕರಣ ಮುಗಿದಿದೆ’ ಎಂದರು ನಿರ್ಮಾಪಕ ಪಿ. ಜನಾರ್ದನ್.
ಚಿತ್ರದಲ್ಲಿ ಉಮಾಶ್ರೀ, ಅಶೋಕ್, ಉಮೇಶ್, ತಬಲಾ ನಾಣಿ, ಪ್ರಕೃತಿ, ಆರಾಧನಾ, ಚಿತ್ಕಲ್ ಬಿರಾದಾರ್, ರಘು ರಾಮನಕೊಪ್ಪ ಇದ್ದಾರೆ.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.