ಈ ವಾರ ತೆರೆಗೆ; ಕಾವಿ ಕಪಟಕ್ಕೆ ಕಣ್ಣಾಗಲಿದ್ದಾನಾ “ವೇಷಧಾರಿ”
ಶ್ರೀ ಸಾಯಿ ಭಗವಾನ್ ಕಂಬೈನ್ಸ್ ಬ್ಯಾನರಿನಡಿಯಲ್ಲಿ ಅನಿಲ್ ಎಚ್ ಅಂಬಿ ನಿರ್ಮಾಣ ಮಾಡಿರುವ ಚಿತ್ರ ವೇಷಧಾರಿ
Team Udayavani, Dec 31, 2019, 6:16 PM IST
ಬೆಂಗಳೂರು: ಸಿನಿಮಾ ಎಂಬುದು ಅನಕ್ಷರಸ್ಥರನ್ನೂ ತಲುಪಿಕೊಳ್ಳುವಂತ ಅತ್ಯಂತ ಪರಿಣಾಮಕಾರಿಯಾದ ಮಾಧ್ಯಮ ಎಂಬ ಹೆಗ್ಗಳಿಕೆ ಇದೆ. ಈ ಕಾರಣದಿಂದಲೇ ಸಿನಿಮಾಗಳಲ್ಲಿ ವಾಸ್ತವಕ್ಕೆ ಹತ್ತಿರವಾದ ಅಂಶಗಳೊಂದಿಗೆ ಸಮಾಜಮುಖಿ ವಿಚಾರಧಾರೆಗಳನ್ನೂ ಕೂಡಾ ಜನ ನಿರೀಕ್ಷಿಸುತ್ತಾರೆ.
ಆದರೆ ಹಾಗೆ ಸಮಾಜದ ಅವಗುಣಗಳಿಗೆ ಕಣ್ಣಾಗುವಂಥಾ ಕಥಾ ಹಂದರವನ್ನು ಚಿತ್ರೀಕರಿಸುವ ರಿಸ್ಕು ತೆಗೆದುಕೊಳ್ಳುವವರು ಕಡಿಮೆ. ಈ ವಾರ ಬಿಡುಗಡೆಗೊಳ್ಳಲಿರುವ ವೇಷಧಾರಿ ಚಿತ್ರದ ಮೂಲಕ ನಿರ್ದೇಶಕ ಶಿವಾನಂದ ಭೂಶಿ ಅಂಥಾದ್ದೊಂದು ಸಾಹಸಕ್ಕೆ ಕೈ ಹಾಕಿರುವಂತಿದೆ!
ಶ್ರೀ ಸಾಯಿ ಭಗವಾನ್ ಕಂಬೈನ್ಸ್ ಬ್ಯಾನರಿನಡಿಯಲ್ಲಿ ಅನಿಲ್ ಎಚ್ ಅಂಬಿ ನಿರ್ಮಾಣ ಮಾಡಿರುವ ಚಿತ್ರ ವೇಷಧಾರಿ. ಈ ಹಿಂದೆ ಟಿವಿ ವಾಹಿನಿಗಳಲ್ಲಿ ಕಾರ್ಯನಿರ್ವಹಿಸುತ್ತಾ ಪತ್ರಕರ್ತರಾಗಿಯೂ ಅನುಭವ ತುಂಬಿಕೊಂಡಿದ್ದ ಶಿವಾನಂದ ಭೂಶಿ ಆ ಕಾರಣದಿಂದಲೇ ಈ ಸಮಾಜದ ಆಗುಹೋಗುಗಳನ್ನೂ ಕೂಡಾ ಚಿಕಿತ್ಸಕ ದೃಷ್ಟಿಯಿಂದ ದಿಟ್ಟಿಸುತ್ತಾ ಬಂದಿದ್ದಾರೆ.
ಅದಿಲ್ಲದೇ ಹೋಗಿದ್ದರೆ ಅವರ ಕಾವಿ ಕಳ್ಳಾಟದ ಕಥಾನಕವನ್ನೊಳಗೊಂಡಿರುವ ಕಾದಂಬರಿಯನ್ನು ಬರೆಯೋದಾಗಲಿ, ಅದನ್ನು ಸಿನಿಮಾ ಮಾಡೋದಾಗಲಿ ಖಂಡಿತಾ ಸಾಧ್ಯವಾಗುತ್ತಿರಲಿಲ್ಲ. ಅಂಥಾದ್ದೊಂದು ಸೂಕ್ಷ್ಮವಾದ ಕಥೆಯನ್ನು ಪಕ್ಕಾ ಮನೋರಂಜನಾತ್ಮಕ ಸ್ವರೂಪದಲ್ಲಿ ನಿರ್ದೇಶಕ ಶಿವಾನಂದ ಭೂಶಿ ನಿರ್ದೇಶನ ಮಾಡಿದ್ದಾರೆ.
ಸನ್ಯಾಸವೆಂದರೆ ಸುಲಭಕ್ಕೆ ದಕ್ಕುವ ಸಂಗತಿಯಲ್ಲ. ಆದರೆ ನಿಜಕ್ಕೂ ಅರಿಷಡ್ವರ್ಗಗಳನ್ನು ನಿಗ್ರಹಿಸಿಕೊಂಡು ಬದುಕಲು ಸಾಧ್ಯವಾ? ಕಾಡುವ ವಾಂಛೆಗಳಿಂದ, ಲೌಕಿಕ ಬದುಕಿನ ಝಗಮಗದಿಂದ ತಪ್ಪಿಸಿಕೊಂಡು ಬದುಕಲು ಸಾಧ್ಯವಾಗುತ್ತದಾ? ಇಂಥ ಪ್ರಶ್ನೆಗಳಿಗೆ ಉತ್ತರ ಹುಡುಕ ಹೊರಡೋ ಪಾತ್ರದಲ್ಲಿ ನಾಯಕ ಆರ್ಯನ್ ನಟಿಸಿದ್ದಾರೆ. ಅವರ ಪಾತ್ರಕ್ಕಿಲ್ಲಿ ಹಲವಾರು ಶೇಡುಗಳಿದ್ದಾವಂತೆ. ಅದರಲ್ಲೊಂದಷ್ಟು ವಿಚಾರಗಳು ಟ್ರೇಲರ್ ಮೂಲಕವೇ ಜಾಹೀರಾಗಿವೆ. ಭರ್ಜರಿ ಕಾಮಿಡಿ ಕಚಗುಳಿಯೊಂದಿಗೆ ಗಹನವಾದ ವಿಚಾರವನ್ನು ಹೇಳ ಹೊರಟಿರುವ ವೇಷಧಾರಿ ಈ ವಾರವೇ ನಿಮ್ಮೆಲ್ಲರ ಮುಂದೆ ಪ್ರತ್ಯಕ್ಷವಾಗಲಿದ್ದಾನೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Gurunandan: ಡಿ.27ಕ್ಕೆ ತೆರೆಗೆ ಬರುತ್ತಿಲ್ಲ ʼರಾಜು ಜೇಮ್ಸ್ ಬಾಂಡ್’ ಚಿತ್ರ
Nodidavaru Enanthare Movie: ನವೀನ್ ಶಂಕರ್ ಚಿತ್ರದ ಟೀಸರ್ ಬಂತು
BBK11: ಸತತ ಮೂರನೇ ವಾರವೂ ಕಳಪೆ ಪಟ್ಟಿ: ಖುಷಿಯಿಂದಲೇ ಜೈಲು ಸೇರಿದ ಚೈತ್ರಾ
Dhruva-Prem: ಡಿ.24ಕ್ಕೆ ʼಕೆಡಿʼ ಶಿವ ಶಿವ ಹಾಡು ರಿಲೀಸ್
Dhruva Sarja: ಪ್ರತಿ ಸಿನಿಮಾವೂ ನನಗೆ ಹೊಸ ಪಾಠ…: ಧ್ರುವ ಹೇಳಿದ್ದೇನು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Mudigere: ಹೊರನಾಡು ದೇವರ ದರ್ಶನಕ್ಕೆ ಬರುತ್ತಿದ್ದವರ ವಾಹನ ಪಲ್ಟಿ… ನಾಲ್ವರಿಗೆ ಗಂಭೀರ ಗಾಯ
Trasi: ನಾಪತ್ತೆಯಾಗಿದ್ದ ಬೋಟ್ ರೈಡರ್ ಶವ 36 ಗಂಟೆಗಳ ಬಳಿಕ ಪತ್ತೆ
Shivamogga: ತಡರಾತ್ರಿ ಭೀಕರ ರಸ್ತೆ ಅಪಘಾತ… ಬೈಕ್ ನಲ್ಲಿದ್ದ ಇಬ್ಬರು ಯುವಕರು ಮೃ*ತ್ಯು
Plane Mishap: ಲಘು ವಿಮಾನ ಪತನ… ಬ್ರೆಜಿಲ್ ನ ಉದ್ಯಮಿ ಸೇರಿ ಹತ್ತು ಮಂದಿ ಮೃತ್ಯು
BBK11: ಬಾಯಿ ಮುಚ್ಕೊಂಡು ಇರು.. ಫೈಯರ್ ಬ್ರ್ಯಾಂಡ್ ಚೈತ್ರಾ ಕೋಪಕ್ಕೆ ಮನೆಮಂದಿ ಶಾಕ್.!
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.