ಲೀಕ್ ಆಯ್ತು ಶಂಕರ್ ನಿರ್ದೇಶನದ ‘ಇಂಡಿಯನ್ 2’ನಲ್ಲಿ ಕಮಲಹಾಸನ್ ಲುಕ್
Team Udayavani, Oct 23, 2019, 10:16 PM IST
ಚೆನ್ನೈ: ದಕ್ಷಿಣ ಭಾರತದ ಖ್ಯಾತ ನಿರ್ದೇಶಕ ಶಂಕರ್ ನಿರ್ದೇಶನದಲ್ಲಿ ತಯಾರಾಗುತ್ತಿರುವ ‘ಇಂಡಿಯನ್ 2’ ಚಿತ್ರದಲ್ಲಿ ಕಮಲಹಾಸನ್ ಪಾತ್ರದ ಸ್ವರೂಪ ಹೇಗಿರುತ್ತದೆ ಎಂಬ ಕುತೂಹಲ ಚಿತ್ರಪ್ರೇಮಿಗಳಲ್ಲಿ ತುಂಬಿಕೊಂಡಿರುವಂತೆ ಆ ಚಿತ್ರದಲ್ಲಿ ಕಮಲ್ ಪಾತ್ರಕ್ಕೆ ಮೇಕಪ್ ಮಾಡುತ್ತಿರುವ ಫೊಟೋ ಒಂದು ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.
INDIAN 2 is one SEQUEL I m waiting too badly to see @ikamalhaasan as a nonagenarian vigilante. World needs such vigilantes to end corruption.
INDIAN 2- 2021 release. pic.twitter.com/7upeUTrMWB
— Annttonn (@an10ANTON) October 23, 2019
ಇಂಡಿಯನ್ 2 ಚಿತ್ರದ ಚಿತ್ರೀಕರಣ ಸೆಟ್ ನಲ್ಲಿ ಕಮಲಹಾಸನ್ ಅವರು ಸೇನಾಪತಿ ಗೆಟಪ್ ನಲ್ಲಿರುವ ಈ ಫೊಟೋವನ್ನು ಟ್ವಿಟ್ಟರ್ ಮತ್ತು ಇನ್ ಸ್ಟಾಗ್ರಾಂ ಬಳಕೆದಾರರು ಶೇರ್ ಮಾಡುತ್ತಿದ್ದಾರೆ. 1996ರಲ್ಲಿ ತರೆಕಂಡಿದ್ದ ‘ಇಂಡಿಯನ್’ ಚಿತ್ರದ ಮುಂದುವರಿದ ಭಾಗವಾಗಿರುವ ಈ ಚಿತ್ರವನ್ನು ಭೌಮಿಕ್ ಗೊಂಡಾಲಿಯಾ ಹಾಗೂ ಸುಭಾಸ್ಕರನ್ ಅಲ್ಲಿರಾಜಾ ಅವರು ನಿರ್ಮಿಸುತ್ತಿದ್ದಾರೆ.
ಕಮಲಹಾಸನ್ ಹಾಗೂ ಹಿರಿಯ ನಟ ನೆಡುಮುಡಿ ವೇಣು ಅವರು ‘ಇಂಡಿಯನ್’ ಚಿತ್ರದಲ್ಲಿದ್ದಂತೆ ಈ ಚಿತ್ರದಲ್ಲಿಯೂ ಕ್ರಮವಾಗಿ ಸೇನಾಪತಿ ಹಾಗೂ ಕೃಷ್ಣಸ್ವಾಮಿ ಪಾತ್ರಗಳನ್ನು ನಿರ್ವಹಿಸುತ್ತಿದ್ದಾರೆ.
ಇನ್ನುಳಿದಂತೆ ಕಾಜಲ್ ಅಗರ್ವಾಲ್, ಸಿದ್ದಾರ್ಥ್, ರಕುಲ್ ಪ್ರೀತ್ ಸಿಂಗ್, ವಿವೇಕ್ ಮತ್ತು ಪ್ರಿಯಾ ಭವಾನಿ ಶಂಕರ್ ಅವರು ಬಹುನಿರೀಕ್ಷಿತ ಈ ಚಿತ್ರದಲ್ಲಿ ಇನ್ನುಳಿದ ಪ್ರಮುಖ ಪಾತ್ರಗಳನ್ನು ನಿಭಾಯಿಸಲಿದ್ದಾರೆ ಹಾಗೂ ಆ್ಯಕ್ಷನ್ ಸ್ಟಾರ್ ವಿದ್ಯುತ್ ಜಮ್ವಾಲ್ ಅವರು ಈ ಚಿತ್ರದಲ್ಲಿ ನೆಗೆಟಿವ್ ರೋಲ್ ನಲ್ಲಿ ಕಾಣಿಸಿಕೊಳ್ಳುವ ಸಾಧ್ಯತೆಗಳಿವೆ.
ಸುಮಾರು 200 ಕೋಟಿ ರೂಪಾಯಿ ಬಜೆಟ್ ನಲ್ಲಿ ನಿರ್ಮಾಣಗೊಳ್ಳುತ್ತಿರುವ ‘ಇಂಡಿಯನ್ 2’ ಚಿತ್ರ 2021ರ ಎಪ್ರಿಲ್ 14ರಂದು ವಿಶ್ವಾದ್ಯಂತ ತೆರೆ ಕಾಣುವ ನಿರೀಕ್ಷೆ ಇದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Max Movie: ಸಖತ್ ರೆಸ್ಪಾನ್ಸ್ ಪಡೆದ ಕಿಚ್ಚನ ʼಮ್ಯಾಕ್ಸ್ʼ ಮೊದಲ ದಿನ ಗಳಿಸಿದ್ದೆಷ್ಟು?
Actor Health: ಸ್ವಲ್ಪ ಜರುಗಿದ ದರ್ಶನ್ ಬೆನ್ನುಮೂಳೆ; ತುರ್ತಾಗಿ ಆಪರೇಷನ್ ಇಲ್ಲ: ವೈದ್ಯರು
Prashanth Neel: ಸಲಾರ್‌ಗೆ ನಾನು ಇನ್ನಷ್ಟು ಶ್ರಮ ಹಾಕಬೇಕಿತ್ತು; ಪ್ರಶಾಂತ್ ನೀಲ್
UI Movie: ಉಪ್ಪಿ ಯುಐ ಮೆಚ್ಚಿದ ಯಶ್
Shivaraj Kumar: ಶಿವರಾಜ್ ಕುಮಾರ್ ಅವರ ಆಪರೇಷನ್ ಯಶಸ್ವಿಯಾಗಿದೆ – ಪತ್ನಿ ಗೀತಾ ಮಾಹಿತಿ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.