“ವಿಕ್ಟರಿ 2′ ಮನೆ ಸಾಂಗ್ ವೈರಲ್: Watch

Team Udayavani, Oct 15, 2018, 5:19 PM IST

victory.jpg

“ರ‍್ಯಾಂಬೋ’ 2 ಚಿತ್ರದ ನಂತರ ನಟ ಶರಣ್ ಅಭಿನಯದ “ವಿಕ್ಟರಿ 2′ ಚಿತ್ರದ ಟ್ರೈಲರ್ ಮತ್ತು ಹಾಡುಗಳು ಈಗಾಗಲೇ ಬಿಡುಗಡೆಯಾಗಿ ಸಾಮಾಜಿಕ ಜಾಲತಾಣದಲ್ಲಿ ಸದ್ದು ಮಾಡುತ್ತಿದ್ದರೆ, ಇತ್ತ ಚಿತ್ರತಂಡ ಚಿತ್ರದ “ನಾವ್​ ಮನೆಗ್ ಹೋಗೋದಿಲ್ಲ’ ಎಂಬ ಹಾಡನ್ನು ಬಿಡುಗಡೆ ಮಾಡಿದ್ದು, ಯೂಟ್ಯೂಬ್ ಟ್ರೆಂಡಿಂಗ್‍ನಲ್ಲಿದೆ. ಹಾಡಿಗೆ ಯೋಗರಾಜ್‌ ಭಟ್ಟರು ಸಾಹಿತ್ಯವನ್ನು ರಚಿಸಿದ್ದಾರೆ.

ಅಂದ ಹಾಗೆ ಯೋಗರಾಜ್‌ ಭಟ್ಟರು ಈವರೆಗೆ ಸಾಕಷ್ಟು ಹಾಡುಗಳನ್ನು ಬರೆದಿದ್ದಾರೆ. ಅದರಲ್ಲೂ ಕುಡಿತದ ಕುರಿತಾಗಿಯೂ ಒಂದಷ್ಟು ಹಾಡುಗಳನ್ನು ಬರೆದಿದ್ದಾರೆ. ಅದರಲ್ಲಿ ಕೆಲವು ದೊಡ್ಡ ಮಟ್ಟದಲ್ಲಿ ಸದ್ದು ಮಾಡಿವೆ. ಆ ತರಹ ಸದ್ದು ಮಾಡಿದ ಹಾಡಲ್ಲಿ “ಖಾಲಿ ಕ್ವಾಟ್ರು ಬಾಟ್ಲಿ ಹಂಗೆ ಲೈಫ‌ು’ ಹಾಡು ಕೂಡಾ ಒಂದು. ಶರಣ್‌ ನಾಯಕರಾಗಿರುವ “ವಿಕ್ಟರಿ’ ಚಿತ್ರದ ಈ ಹಾಡು ದೊಡ್ಡ ಮಟ್ಟದಲ್ಲಿ ಹಿಟ್‌ ಆಯಿತು.

ಈಗ “ವಿಕ್ಟರಿ-2′ ಬರುತ್ತಿದೆ. ಸಹಜವಾಗಿಯೇ ಒಂದು ಚಿತ್ರದ ಹಾಡು ಹಿಟ್‌ ಆಗಿರುವಾಗ, ಅದರ ಮುಂದುವರಿದ ಭಾಗದಲ್ಲೂ ಆ ತರಹದ ಹಾಡನ್ನು ಜನ ನಿರೀಕ್ಷಿಸುತ್ತಾರೆ. ಇದನ್ನು ಗಮನದಲ್ಲಿಟ್ಟುಕೊಂಡಿರುವ “ವಿಕ್ಟರಿ-2′ ತಂಡ ಆ ತರಹದ ಒಂದು ಮಾಸ್‌ ಸಾಂಗ್‌ ಅನ್ನು ಮಾಡಿದೆ. “ನಾವ್ ಮನೇಗ್‌ ಹೋಗೋದಿಲ್ಲ..’ ಎಂದು ಆರಂಭವಾಗುವ ಈ ಹಾಡನ್ನು ವಿಜಯ್ ಪ್ರಕಾಶ್ ತಮ್ಮ ಎಂದಿನ ಧ್ವನಿಗಿಂತ ವಿಭಿನ್ನವಾಗಿ ಹಾಡಿದ್ದಾರೆ. 

ಈ ಹಾಡಿಗೆ ಅರ್ಜುನ್ ಜನ್ಯಾ ಸಂಗೀತ ನೀಡಿದ್ದು, ಪುನೀತ್ ರಾಜ್​​ಕುಮಾರ್, ಶ್ರೀನಗರ ಕಿಟ್ಟಿ, ನೆನಪಿರಲಿ ಪ್ರೇಮ್​, ಪ್ರಜ್ವಲ್ ದೇವರಾಜ್​, ಯೋಗಿ, ರಿಷಭ್ ಶೆಟ್ಟಿ, ಉಪೇಂದ್ರ, ಚಿರಂಜೀವಿ ಸರ್ಜಾ, ಶ್ರೀ ಮುರಳಿ, ಯಶ್​​, ಅಜಯ್ ರಾವ್​, ಪವನ್ ಒಡೆಯರ್, ಸಿಂಪಲ್ ಸುನಿ ಹಾಗೂ ಇನ್ನಿತರರು ಈ ಹಾಡನ್ನು ಕೇಳಿ ಫಿದಾ ಆಗಿದ್ದಾರೆ. ಅಲ್ಲದೇ ಈ ಹಾಡು ಹಳೆಯ ಹಾಡುಗಳ ದಾಖಲೆಯನ್ನು ಮುರಿಯುವುದು ಗ್ಯಾರಂಟಿ ಎಂದು ಎಲ್ಲರೂ ವಿಶ್ವಾಸ ವ್ಯಕ್ತಪಡಿಸಿದ್ದಾರೆ. ಚಿತ್ರವು ಪಕ್ಕಾ ಕಾಮಿಡಿ ಎಂಟರ್​ಟ್ರೈನರ್ ಆಗಿದ್ದು, ಡಬಲ್ ಮಿನಿಂಗ್ ಡೈಲಾಗ್ ಅಬ್ಬರ ಜೋರಾಗಿದೆ.

ಶರಣ್ ಜತೆ ಸಾಧು ಕೋಕಿಲಾ ಹಾಗೂ ರವಿಶಂಕರ್ ವಿಶೇಷ ಗೆಟಪ್‍ನಲ್ಲಿ ಮಿಂಚಿರುವುದು ಮತ್ತಷ್ಟು ಹಾಸ್ಯಭರಿತವನ್ನಾಗಿಸಿದೆ. ಇನ್ನು ಶರಣ್ ಎದುರಿಗೆ ನಾಯಕಿಯರಾಗಿ ಅಸ್ಮಿತಾ ಸೂದ್‌ ಹಾಗೂ ಅಪೂರ್ವ ನಟಿಸಿದ್ದಾರೆ. ಚಿತ್ರವನ್ನು ತರುಣ್‌ ಶಿವಪ್ಪ ನಿರ್ಮಿಸುತ್ತಿದ್ದು, ತರುಣ್ ಸುಧೀರ್ ಅವರ ಕಥೆ ಇದೆ. ಬಹುತೇಕ “ವಿಕ್ಟರಿ’ ತಂಡವೇ ಇಲ್ಲೂ ಕೆಲಸ ಮಾಡಿದೆ. ಹರಿ ಸಂತೋಷ ನಿರ್ದೇಶನ, ಅರ್ಜುನ್ ಜನ್ಯ ಸಂಗೀತ ಚಿತ್ರಕ್ಕಿದ್ದು, ತಬಲಾ ನಾಣಿ, ನಾಸೀನ್, ಅವಿನಾಶ್, ಮಿತ್ರಾ, ಕಲ್ಯಾಣಿ, ಅರಸು ಮತ್ತು ಸಿದ್ದಿ ಸೇರಿದಂತೆ ದೊಡ್ಡ ತಾರಾಬಳಗವಿದೆ.

ಟಾಪ್ ನ್ಯೂಸ್

Sulya-Elephant

Sulya: ಆನೆಗುಂಡಿ: ಹೆದ್ದಾರಿ ಬದಿ ಎರಡು ಕಾಡಾನೆ ಸಂಚಾರ

Udupi: ಗೀತಾರ್ಥ ಚಿಂತನೆ-92: ಮಾನಸಿಕ ನಿದ್ದೆಯಿಂದ ಹೊರಬರಲು “ಉತ್ತಿಷ್ಠ’ ಕರೆ

Udupi: ಗೀತಾರ್ಥ ಚಿಂತನೆ-92: ಮಾನಸಿಕ ನಿದ್ದೆಯಿಂದ ಹೊರಬರಲು “ಉತ್ತಿಷ್ಠ’ ಕರೆ

America; ಮೈಸೂರು ಯೋಗ ಗುರು ಶರತ್‌ ಜೋಯಿಸ್‌ ನಿಧನ

America; ಮೈಸೂರು ಯೋಗ ಗುರು ಶರತ್‌ ಜೋಯಿಸ್‌ ನಿಧನ

Priyank Kharge: ಇ-ಸ್ವತ್ತು ಗೊಂದಲ ನಿವಾರಣೆಗೆ ಕಾರ್ಯಪಡೆ

Priyank Kharge: ಇ-ಸ್ವತ್ತು ಗೊಂದಲ ನಿವಾರಣೆಗೆ ಕಾರ್ಯಪಡೆ

JDS protest: ಎಚ್‌ಡಿಕೆ ಕರಿಯ: ಜಮೀರ್‌ ವಿರುದ್ಧ ಆಕ್ರೋಶ; ಸಂಪುಟದಿಂದ ಕೈಬಿಡಲು ಆಗ್ರಹ

JDS protest: ಎಚ್‌ಡಿಕೆ ಕರಿಯ: ಜಮೀರ್‌ ವಿರುದ್ಧ ಆಕ್ರೋಶ; ಸಂಪುಟದಿಂದ ಕೈಬಿಡಲು ಆಗ್ರಹ

ಚುನಾವಣೆ ಹೊತ್ತಲ್ಲೇ ಗೃಹಲಕ್ಷ್ಮಿ ಹಣ ಜಮೆ: ಬೊಮ್ಮಾಯಿ ಆಕ್ಷೇಪಚುನಾವಣೆ ಹೊತ್ತಲ್ಲೇ ಗೃಹಲಕ್ಷ್ಮಿ ಹಣ ಜಮೆ: ಬೊಮ್ಮಾಯಿ ಆಕ್ಷೇಪ

BY Election; ಹೊತ್ತಲ್ಲೇ ಗೃಹಲಕ್ಷ್ಮಿ ಹಣ ಜಮೆ: ಬೊಮ್ಮಾಯಿ ಆಕ್ಷೇಪ

Uddhav Thackeray’s bag inspection by election commission, controversy

Maha Election; ಚು.ಆಯೋಗದಿಂದ ಉದ್ಧವ್‌ ಠಾಕ್ರೆ ಬ್ಯಾಗ್‌ ಪರಿಶೀಲನೆ, ವಿವಾದ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

BBK11: ಅನುಷಾಳ ಮುನಿಸು ಶಮನಕ್ಕೆ ಧರ್ಮನ ಶತ ಪ್ರಯತ್ನ

BBK11: ಅನುಷಾಳ ಮುನಿಸು ಶಮನಕ್ಕೆ ಧರ್ಮನ ಶತ ಪ್ರಯತ್ನ

Sandalwood: ಪ್ಯಾನ್‌ ಇಂಡಿಯಾ ʼಪುಷ್ಪʼ ಜೊತೆ ರಿಲೀಸ್‌ ಆಗಲಿದೆ ಕನ್ನಡದ ʼಭಗತ್‌ʼ

Sandalwood: ಪ್ಯಾನ್‌ ಇಂಡಿಯಾ ʼಪುಷ್ಪʼ ಜೊತೆ ರಿಲೀಸ್‌ ಆಗಲಿದೆ ಕನ್ನಡದ ʼಭಗತ್‌ʼ

Sandalwood: ಡಿ.27ಕ್ಕೆ ‘ರಾಜು ಜೇಮ್ಸ್‌ ಬಾಂಡ್‌’ ರಿಲೀಸ್

Sandalwood: ಡಿ.27ಕ್ಕೆ ‘ರಾಜು ಜೇಮ್ಸ್‌ ಬಾಂಡ್‌’ ರಿಲೀಸ್

Toxic Movie: ಯಶ್‌ ʼಟಾಕ್ಸಿಕ್ʼ ಸಿನಿಮಾಕ್ಕಾಗಿ ಮರ ಕಡಿದ ಆರೋಪ; ಎಫ್‌ಐಆರ್‌ ದಾಖಲು

Toxic Movie: ಯಶ್‌ ʼಟಾಕ್ಸಿಕ್ʼ ಸಿನಿಮಾಕ್ಕಾಗಿ ಮರ ಕಡಿದ ಆರೋಪ; ಎಫ್‌ಐಆರ್‌ ದಾಖಲು

Abishek AmbarಅAbishek Ambareesh: ಗಂಡು ಮಗುವಿಗೆ ಜನ್ಮ ನೀಡಿದ ಅವಿವಾ; ಅಂಬಿ ಮನೆಯಲ್ಲಿ ಸಂಭ್ರಮeesh: ಗಂಡು ಮಗುವಿಗೆ ಜನ್ಮ ನೀಡಿದ ಅವಿವಾ; ಅಂಬಿ ಮನೆಯಲ್ಲಿ ಸಂಭ್ರಮ

Abishek Ambareesh: ಗಂಡು ಮಗುವಿಗೆ ಜನ್ಮ ನೀಡಿದ ಅವಿವಾ; ಅಂಬಿ ಮನೆಯಲ್ಲಿ ಸಂಭ್ರಮ

MUST WATCH

udayavani youtube

ಪುಂಗನೂರು ತಳಿಯ ಹಾಲು ಯಾವೆಲ್ಲ ಕಾಯಿಲೆಗಳನ್ನು ಗುಣಪಡಿಸುತ್ತದೆ ?

udayavani youtube

ಪುಸ್ತಕ ನೋಡುವುದಿಲ್ಲ, ಗುರುವಿಲ್ಲ ಆದರೂ ಕಲೆ ತಾನಾಗಿಯೇ ಒಲಿದು ಬಂತು

udayavani youtube

ನನ್ನ ಎದುರು ನೀನು ಬಚ್ಚ ! ಏಕವಚದಲ್ಲಿ ಕಿತ್ತಾಡಿಕೊಂಡ ಲಾಯರ್ ಜಗದೀಶ್ & ಕುಡುಪಲಿ ನಾಗರಾಜ್

udayavani youtube

ಗೋವಿನ ಪೂಜೆ ಯಾಕಾಗಿ ಮಾಡಬೇಕು?

udayavani youtube

ಮೇಲುಕೋಟೆಯಲ್ಲಿ ದೀಪಾವಳಿ ಆಚರಿಸುವುದಿಲ್ಲ ಎಂಬ ಮಾತು ನಿಜವೋ ಸುಳ್ಳೋ

ಹೊಸ ಸೇರ್ಪಡೆ

Sulya-Elephant

Sulya: ಆನೆಗುಂಡಿ: ಹೆದ್ದಾರಿ ಬದಿ ಎರಡು ಕಾಡಾನೆ ಸಂಚಾರ

Udupi: ಗೀತಾರ್ಥ ಚಿಂತನೆ-92: ಮಾನಸಿಕ ನಿದ್ದೆಯಿಂದ ಹೊರಬರಲು “ಉತ್ತಿಷ್ಠ’ ಕರೆ

Udupi: ಗೀತಾರ್ಥ ಚಿಂತನೆ-92: ಮಾನಸಿಕ ನಿದ್ದೆಯಿಂದ ಹೊರಬರಲು “ಉತ್ತಿಷ್ಠ’ ಕರೆ

America; ಮೈಸೂರು ಯೋಗ ಗುರು ಶರತ್‌ ಜೋಯಿಸ್‌ ನಿಧನ

America; ಮೈಸೂರು ಯೋಗ ಗುರು ಶರತ್‌ ಜೋಯಿಸ್‌ ನಿಧನ

Priyank Kharge: ಇ-ಸ್ವತ್ತು ಗೊಂದಲ ನಿವಾರಣೆಗೆ ಕಾರ್ಯಪಡೆ

Priyank Kharge: ಇ-ಸ್ವತ್ತು ಗೊಂದಲ ನಿವಾರಣೆಗೆ ಕಾರ್ಯಪಡೆ

Karnataka by-election: 3 ಕ್ಷೇತ್ರದಲ್ಲಿ 33.33 ಕೋ.ರೂ. ಮೌಲ್ಯದ ಅಕ್ರಮ ವಶ

Karnataka by-election: 3 ಕ್ಷೇತ್ರದಲ್ಲಿ 33.33 ಕೋ.ರೂ. ಮೌಲ್ಯದ ಅಕ್ರಮ ವಶ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.