ರಶ್ಮಿಕಾ ಬ್ರೇಕಪ್ ಬಗ್ಗೆ ವಿಷಾದವಿದೆ… ವಿಜಯ್ ದೇವರಕೊಂಡ ಹೇಳಿಕೆ
Team Udayavani, Oct 4, 2018, 5:24 PM IST
ರಕ್ಷಿತ್ ಶೆಟ್ಟಿ ಹಾಗೂ ರಶ್ಮಿಕಾ ಮಂದಣ್ಣ ನಡುವಿನ ಬ್ರೇಕಪ್ ಸುದ್ದಿ ಜೋರು ಸದ್ದು ಮಾಡಿದ್ದು ಗೊತ್ತೇ ಇದೆ. ರಕ್ಷಿತ್ ಅಭಿಮಾನಿಗಳು ಕಾಮೆಂಟ್ ಮೂಲಕ ತಮ್ಮ ನೋವನ್ನು ತೋಡಿಕೊಂಡಿದ್ದರು. ಅನೇಕರು ತೆಲುಗು ನಟ ವಿಜಯ್ ದೇವರಕೊಂಡ ವಿರುದ್ಧ ಮುನಿಸಿಕೊಂಡಿದ್ದರು. ಅದಕ್ಕೆ ಕಾರಣ “ಗೀತಾ ಗೋವಿಂದಂ’ ಚಿತ್ರ. ರಶ್ಮಿಕಾ ಹಾಗೂ ವಿಜಯ್ ದೇವರಕೊಂಡ ನಟಿಸಿರುವ ಈ ಚಿತ್ರದಲ್ಲಿನ ಕಿಸ್ಸಿಂಗ್ ಸೀನ್ ಚಿತ್ರ ಬಿಡುಗಡೆಗೆ ಮುನ್ನವೇ ಲೀಕ್ ಆಗಿ, ಬ್ರೇಕಪ್ “ಬೆಂಕಿ’ಗೆ ತುಪ್ಪ ಸುರಿದಂತಾಯಿತು. ಈ ನಡುವೆಯೇ ರಕ್ಷಿತ್ ಹಾಗೂ ರಶ್ಮಿಕಾ ನಡುವಿನ ಬ್ರೇಕಪ್ ಬಗ್ಗೆ ವಿಜಯ್ ದೇವರಕೊಂಡ ಏನನ್ನುತ್ತಾರೆಂಬ ಕುತೂಹಲ ಅನೇಕರಿಗಿತ್ತು. “ಅವರ ಬ್ರೇಕಪ್ ಬಗ್ಗೆ ನನಗೆ ವಿಷಾದವಿದೆ’ ಎಂದಷ್ಟೇ ಹೇಳಿ ವಿಜಯ್ ದೇವರಕೊಂಡ ವಿವಾದದಿಂದ ದೂರ ಉಳಿದುಕೊಂಡಿದ್ದಾರೆ.
ಬುಧವಾರ ತಮ್ಮ “ನೋಟ’ ಚಿತ್ರದ ಪ್ರಚಾರಾರ್ಥ ಬೆಂಗಳೂರಿಗೆ ಆಗಮಿಸಿದ್ದ ವಿಜಯ್ ದೇವರಕೊಂಡ ಮಾಧ್ಯಮಗಳ ಪ್ರಶ್ನೆಗೆ ಉತ್ತರಿಸುತ್ತಾ, “ರಶ್ಮಿಕಾ ಬ್ರೇಕಪ್ ಬಗ್ಗೆ ನನಗೆ ವಿಷಾದವಿದೆ. ಅದಕ್ಕಿಂತ ಹೆಚ್ಚಾಗಿ ನಾನು ಏನೂ ಹೇಳಲ್ಲ. ಅದು ಅವರವರ ವೈಯಕ್ತಿಕ ವಿಚಾರ. ನಾನು ಮೂರನೇ ವ್ಯಕ್ತಿಯಾಗಿ ಆ ಬಗ್ಗೆ ಮಾತನಾಡಬಾರದು. ಒಬ್ಬ ಸಹನಟಿಯಾಗಿ ನನಗೆ ರಶ್ಮಿಕಾ ಬಗ್ಗೆ ಗೌರವವಿದೆ. ಅದು ಬಿಟ್ಟು ರಶ್ಮಿಕಾ ಹಾಗೂ ರಕ್ಷಿತ್ ಸಂಬಂಧದ ಬಗ್ಗೆ ನಾನು ಏನೂ ಮಾತನಾಡಲಾರೆ. ಇಬ್ಬರ ಬಗ್ಗೆಯೂ ನನಗೆ ಗೌರವವಿದೆ’ ಎಂದಷ್ಟೇ ಹೇಳಿದರು.
“ಗೀತಾ ಗೋವಿಂದಂ’ ಚಿತ್ರದ ಕಿಸ್ಸಿಂಗ್ ದೃಶ್ಯ ಬಿಡುಗಡೆಗೆ ಮುನ್ನವೇ ಹೊರಬಂದ ಬಗ್ಗೆ ಮಾತನಾಡಿದ ವಿಜಯ್, “ನಮಗೂ ಅದು ತುಂಬಾ ಶಾಕಿಂಗ್ ಆಗಿತ್ತು. ಅದು ಅನಿರೀಕ್ಷಿತವಾಗಿ ಆಗಿರೋದು. ಆ ಬಗ್ಗೆ ನನಗೂ ಬೇಸರವಿದೆ’ ಎಂದರು.
ಇನ್ನು, ವಿಜಯ್ ದೇವರಕೊಂಡ ಕನ್ನಡದಲ್ಲಿ ಒಳ್ಳೆಯ ಅವಕಾಶ ಸಿಕ್ಕರೆ ನಟಿಸುತ್ತಾರಂತೆ.”ಕನ್ನಡ ಸಿನಿಮಾದಲ್ಲಿ ನಟಿಸುವ ಆಸೆ ನನಗೂ ಇದೆ. ಕನ್ನಡ ಕೂಡಾ ಕಲಿಯುತ್ತೇನೆ. ಆದರೆ, ನನ್ನ ಕನ್ನಡವನ್ನು ಶಿವರಾಜಕುಮಾರ್ ತಿದ್ದಬೇಕು’ ಎಂದರು. ಪಕ್ಕದಲ್ಲಿದ್ದ ಶಿವಣ್ಣ ನಗುವಲ್ಲೇ ಸಮ್ಮತಿಸಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.