Spandana: ಎದೆಗೊತ್ತಿ ಪ್ರೀತಿಸುವೆ.. ವಿವಾಹ ವಾರ್ಷಿಕ ದಿನ ಪತ್ನಿ ನೆನೆದು ರಾಘು ಭಾವುಕ
Team Udayavani, Aug 26, 2023, 3:11 PM IST
ಬೆಂಗಳೂರು: ನಟ ವಿಜಯ್ ರಾಘವೇಂದ್ರ ಅವರು ಪತ್ನಿ ಸ್ಪಂದನಾ ಅವರನ್ನು ಕಳೆದುಕೊಂಡ ನೋವಿನಲ್ಲಿದ್ದಾರೆ. ಎಂದೂ ಮುಗಿಯದ ದುಃಖದಲ್ಲಿರುವ ವಿಜಯ್ ರಾಘವೇಂದ್ರ ಅವರೊಂದಿಗೆ ಒಂದು ವೇಳೆ ಪತ್ನಿ ಸ್ಪಂದನಾ ಇಂದು ಜೊತೆಯಲ್ಲಿದಿದ್ದರೆ 16ನೇ ವಿವಾಹ ವಾರ್ಷಿಕೋತ್ಸವದ ಸಂಭ್ರಮದಲ್ಲಿರುತ್ತಿದ್ದರು.
ಇಂದು (ಆಗಸ್ಟ್ 26 ರಂದು,ಶನಿವಾರ) ವಿಜಯ್ ರಾಘವೇಂದ್ರ ಹಾಗೂ ಸ್ಪಂದನಾ ಅವರ 16ನೇ ವಿವಾಹ ವಾರ್ಷಿಕೋತ್ಸವ. ಇಷ್ಟು ವರ್ಷ ವೈವಾಹಿಕ ದಿನಕ್ಕೆ ಜೊತೆಯಾಗಿರುತ್ತಿದ್ದ ಮಡದಿ ಅವರೊಂದಿಗೆ ಇನ್ನು ಮುಂದೆ ನೆನಪಾಗಿ ಮಾತ್ರ ಉಳಿದಿದ್ದಾರೆ. ಥೈಲ್ಯಾಂಡ್ ನಲ್ಲಿ ಆಗಸ್ಟ್ 6 ರಂದು ಹೃದಯಾಘಾತದಿಂದ ʼರಾಘುʼ ಪತ್ನಿ ಸ್ಪಂದನಾ ನಿಧನರಾದರು.
ತನ್ನ ಬದುಕಿನಲ್ಲಿ ಅತೀ ಹೆಚ್ಚು ಪ್ರೀತಿಸುತ್ತಿದ್ದ ಜೀವವನ್ನು ಕಳೆದುಕೊಂಡ ಮೇಲೆ ವಿಜಯ್ ರಾಘವೇಂದ್ರ ಅವರು ದುಃಖದ ಒಂಟಿತನದಲ್ಲಿ ಕುಗ್ಗಿದ್ದಾರೆ. ಪತ್ನಿ ಸ್ಪಂದನಾ ನೆನಪು ಅವರನ್ನು ಕಾಡುತ್ತಿದೆ. ಇತ್ತೀಚೆಗೆ ಪತ್ನಿ ಸ್ಪಂದನಾ ಅವರನ್ನು ನೆನೆದು “ನಿನ್ನನ್ನೇ ಉಸಿರಾಡುತ್ತಿದ್ದೇನೆ ಚಿನ್ನಾ..” ಎನ್ನುವ ಕೆಲ ಸಾಲುಗಳನ್ನು ಹಂಚಿಕೊಂಡಿದ್ದರು.
ಇದೀಗ ಇಂದು (ಆ.26 ರಂದು) ವಿವಾಹ ವಾರ್ಷಿಕ ದಿನದಂದು ಚಿನ್ನಾರಿ ಮುತ್ತ ಭಾವುಕ ಸಾಲುಗಳನ್ನು ಹಂಚಿಕೊಂಡಿದ್ದಾರೆ.
ʻʻಚಿನ್ನಾ ಇಣುಕು ನೋಟ ಬೀರಿ ಹೋದೆ ಬದುಕಿನ ಅಂಗಳದಲಿ… ಎಲ್ಲೆ ಮೀರಿ ಒಲವ ನೀಡಿದೆ ಎದೆಯ ಅಂತರಾಳದಲಿ… ಬದುಕನ್ನು ಕಟ್ಟಿ ಸರ್ವಸ್ವವಾದೆ. ಉಸಿರಲ್ಲಿ ಬೆರೆತು ಜೀವಂತವಾದೆ. ಮುದ್ದಾದ ನಗುವಿನಲ್ಲಿದ್ದಿದ್ದ ಶಕ್ತಿ ಪರ್ವತದಷ್ಟು. ಮರೆಯದೆ.. ತೊರೆಯದೆ ಎದೆಗೊತ್ತಿ ಪ್ರೀತಿಸುವೆ. ಶೌರ್ಯನಲ್ಲಿ ನಾನಿನ್ನ ಬಿಗಿದಪ್ಪುವಷ್ಟುʼʼ ಎಂದು ಪತ್ನಿ ಹಾಗೂ ಮಗ ಶೌರ್ಯನೊಂದಿಗಿನ ಫೋಟೋವೊಂದನ್ನು ಹಾಕಿ ಓದುವ ಸಾಲುಗಳನ್ನು ಹಂಚಿಕೊಂಡಿದ್ದಾರೆ.
ಕಾಫಿ ಡೇ ಒಂದರಲ್ಲಿ ಸ್ಪಂದನಾ ಹಾಗೂ ವಿಜಯ್ ರಾಘವೇಂದ್ರ ಮೊದಲ ಬಾರಿ ಭೇಟಿಯಾಗಿದ್ದರು. ಆ ಭೇಟಿಯ ಬಳಿಕ ನಂತರದ ಭೇಟಿಯಲ್ಲಿ ಇಬ್ಬರಲ್ಲಿ ಪ್ರೇಮ ಹುಟ್ಟಿತ್ತು. 2007 ರಲ್ಲಿ ಆ.26 ರಂದು ಇಬ್ಬರು ಹಿರಿಯರ ಸಮ್ಮುಖದಲ್ಲಿ ವಿವಾಹವಾಗಿದ್ದರು.
View this post on Instagram
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.