Vijay Raghavendra; ನನ್ನ ಕಂಬನಿಯನ್ನು ಅವಳು ಸಹಿಸುತ್ತಿರಲಿಲ್ಲ: ಸ್ಪಂದನಾ ನೆನಪಲ್ಲಿ ರಾಘು
Team Udayavani, Aug 28, 2023, 12:54 PM IST
“ಇತ್ತೀಚೆಗೆ ನನ್ನ ಜೀವನದಲ್ಲಿ ನಡೆದ ಅನಿರೀಕ್ಷಿತ ಘಟನೆಗೆ ದೊಡ್ಡ ಆಘಾತವನ್ನೆ ತಂದಿದೆ. ಇಂಥ ಸಮಯದಲ್ಲಿ ನಮ್ಮ ಮನೆಯವರ ಥರ ತಾಯಿಯ ಸ್ಥಾನದಲ್ಲಿ ನಿಂತು ನನಗೆ ಧೈರ್ಯ ತುಂಬಿದ್ದೀರಿ. ನಮ್ಮ ಕುಟುಂಬದಲ್ಲಿ ನೀವು ಒಬ್ಬರಾಗಿರದಿದ್ದರೂ, ನಿಮ್ಮ ಕುಟುಂಬದಲ್ಲಿ ನನ್ನನ್ನು ಒಬ್ಬನಂತೆ ಕಂಡಿದ್ದೀರಿ. ಇಂಥದ್ದೊಂದು ಪ್ರೀತಿ, ಸಾಂತ್ವನ ಕೊಟ್ಟ ಎಲ್ಲರಿಗೂ ನನ್ನ ಹೃದಯಾಂತರಾಳದಿಂದ ಕೋಟಿ ಕೋಟಿ ನಮನಗಳು ಇದಕ್ಕಿಂತ ಹೆಚ್ಚಾಗಿ ಇನ್ನೇನು ಹೇಳಲಾರೆ’ ಹೀಗೆ ಹೇಳುತ್ತಾ ಮಾತಿಗಿಳಿದವರು ನಟ ವಿಜಯ ರಾಘವೇಂದ್ರ.
ಪತ್ನಿ ಸ್ಪಂದನಾ ಅಕಾಲಿಕ ನಿಧನದ ಬಳಿಕ ಎಲ್ಲೂ ಸಾರ್ವಜನಿಕವಾಗಿ ಕಾಣಿಸಿಕೊಂಡಿರದ ನಟ ವಿಜಯ ರಾಘವೇಂದ್ರ, ಇದೇ ಮೊದಲ ಬಾರಿಗೆ ತಮ್ಮ ಮುಂಬರುವ “ಕದ್ದ ಚಿತ್ರ’ ಸಿನಿಮಾದ ಟ್ರೇಲರ್ ಬಿಡುಗಡೆ ಸಮಾರಂಭದಲ್ಲಿ ಭಾಗಿಯಾಗಿದ್ದರು.
ಇದೇ ವೇಳೆ, ಕಂಬನಿ ತುಂಬಿದ ಕಣ್ಣುಗಳಲ್ಲೇ ಮಾತನಾಡಿದ ವಿಜಯ ರಾಘವೇಂದ್ರ, “ನನ್ನ ಕಣ್ಣುಗಳಲ್ಲಿ ನೀರು ಬರುವುದನ್ನು ಅವಳು (ಸ್ಪಂದನಾ) ಯಾವತ್ತೂ ಇಷ್ಟಪಡುತ್ತಿರಲಿಲ್ಲ. ಎಲ್ಲೂ ಇಂಥ ಘಟನೆ ನಡೆದಾಗ ನಮ್ಮೆಲ್ಲರ ಮನಸ್ಸು ಮಿಡಿಯುತ್ತದೆ. ಆದರೆ ನಮ್ಮ ಮನೆಯಲ್ಲೇ ಇಂಥ ಘಟನೆ ನಡೆದಾಗ ಅದನ್ನು ಎದುರಿಸುವುದು ತುಂಬಾ ಕಷ್ಟ. ಅಂಥ ಘಟನೆ ನಮ್ಮ ಮನೆಯಲ್ಲಿ, ನನ್ನ ಜೀವನದಲ್ಲಿ ನಡೆದು ಹೋಯಿತು. ಇಂಥ ಸಂದರ್ಭದಲ್ಲಿ ಪ್ರತಿಯೊಬ್ಬರು ನನಗೆ ಬೆಂಬಲವಾಗಿ ನಿಂತರು. ನನ್ನ ದುಃಖವನ್ನು ತಮ್ಮ ದುಃಖವೆಂದು ಹಂಚಿಕೊಂಡರು.
ನಿಮ್ಮೆಲ್ಲರ ಸಾಂತ್ವನ, ಬೆಂಬಲ, ಹಾರೈಕೆಯ ಮಾತುಗಳು ನನಗೂ, ನಮ್ಮ ಕುಟುಂಬಕ್ಕೂ ಒಂದಷ್ಟು ಶಕ್ತಿ ತುಂಬಿತು. ನನ್ನ ಕಷ್ಟದ ಸಮಯದಲ್ಲಿ ಜೊತೆಯಾಗಿ ನಿಂತು, ನೋವು ಹಂಚಿಕೊಂಡ ಪ್ರತಿಯೊಬ್ಬರಿಗೂ ಮನಃಪೂರ್ವಕವಾಗಿ ಕೃತಜ್ಞತೆಗಳನ್ನ ಬಿಟ್ಟು ಬೇರೇನೂ ಹೇಳಲಾರೆ. ನಿಮ್ಮ ಪ್ರೀತಿ, ಅಭಿಮಾನಕ್ಕೆ ಎಂದಿಗೂ ಬೆಲೆ ಕಟ್ಟಲಾಗದು’ ಎಂದರು
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Gurunandan: ಡಿ.27ಕ್ಕೆ ತೆರೆಗೆ ಬರುತ್ತಿಲ್ಲ ʼರಾಜು ಜೇಮ್ಸ್ ಬಾಂಡ್’ ಚಿತ್ರ
Nodidavaru Enanthare Movie: ನವೀನ್ ಶಂಕರ್ ಚಿತ್ರದ ಟೀಸರ್ ಬಂತು
BBK11: ಸತತ ಮೂರನೇ ವಾರವೂ ಕಳಪೆ ಪಟ್ಟಿ: ಖುಷಿಯಿಂದಲೇ ಜೈಲು ಸೇರಿದ ಚೈತ್ರಾ
Dhruva-Prem: ಡಿ.24ಕ್ಕೆ ʼಕೆಡಿʼ ಶಿವ ಶಿವ ಹಾಡು ರಿಲೀಸ್
Dhruva Sarja: ಪ್ರತಿ ಸಿನಿಮಾವೂ ನನಗೆ ಹೊಸ ಪಾಠ…: ಧ್ರುವ ಹೇಳಿದ್ದೇನು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
BBK11: ಬಾಯಿ ಮುಚ್ಕೊಂಡು ಇರು.. ಫೈಯರ್ ಬ್ರ್ಯಾಂಡ್ ಚೈತ್ರಾ ಕೋಪಕ್ಕೆ ಮನೆಮಂದಿ ಶಾಕ್.!
Kashmir cold: 34 ವರ್ಷಗಳಲ್ಲೇ ಕನಿಷ್ಠ ತಾಪಮಾನ ದಾಖಲು!
Natural Disaster: ಅನಿರೀಕ್ಷಿತ ಮಳೆಗೆ ಸೊರಗಿದ ವಿಶಿಷ್ಟ ಗುಣದ ಹೆಮ್ಮಾಡಿ ಸೇವಂತಿಗೆ
Rain Alert: ರಾಜ್ಯದಲ್ಲಿ ಕನಿಷ್ಠ ತಾಪಮಾನ 4 ಡಿ.ಸೆ ಏರಿಕೆ; ಹಲವೆಡೆ 24ರಂದು ಮಳೆ ಸಾಧ್ಯತೆ
Karnataka; ರಾಜ್ಯದ ಕಾಡಿಗೆ ಕೊಡಲಿ! ಮಾನವ-ವನ್ಯಜೀವಿ ಸಂಘರ್ಷ ಹೆಚ್ಚಳ?
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.