JOG 101; ಜೋಗದತ್ತ ವಿಜಯ ಪಯಣ: ಮಾರ್ಚ್7ಕ್ಕೆ ಸಿನಿಮಾ ಬಿಡುಗಡೆ
Team Udayavani, Mar 5, 2024, 4:16 PM IST
ವಿಜಯ ರಾಘವೇಂದ್ರ ನಟನೆಯ ಸಿನಿಮಾವೊಂದು ಬಿಡುಗಡೆಯ ಹಂತಕ್ಕೆ ಬಂದಿದೆ. ಅದು “ಜೋಗ್ 101′. ಈ ಚಿತ್ರ ಮಾರ್ಚ್ 7ರಂದು ತೆರೆಕಾಣುತ್ತಿದೆ. ಸೆವೆನ್ ಸ್ಟಾರ್ ಪಿಕ್ಚರ್ಸ್‌ನಡಿ ರಾಘು ಈ ಸಿನಿಮಾವನ್ನು ನಿರ್ಮಿಸಿದ್ದು, ವಿಜಯ್ ಕನ್ನಡಿಗ ನಿರ್ದೇಶಿಸಿದ್ದಾರೆ.
“ಜೋಗ್ 101 ಸಸ್ಪೆನ್ಸ್ ಥ್ರಿಲ್ಲರ್ ಚಿತ್ರ. ಈ ಚಿತ್ರದಲ್ಲಿ ಲವ್, ಕಾಮಿಡಿ ಹೀಗೆ ಎಲ್ಲಾ ಅಂಶಗಳು ಇದೆ. ಅವಿನಾಶ್ ಸಂಗೀತ ನೀಡಿರುವ ಎರಡು ಹಾಡುಗಳು ಈಗಾಗಲೇ ಬಿಡುಗಡೆಯಾಗಿದ್ದು, ಲಕ್ಷಾಂತರ ಜನರ ಮೆಚ್ಚುಗೆಗೆ ಪಾತ್ರವಾಗಿದೆ. ನನ್ನ ಚಿತ್ರಗಳಲ್ಲಿ ಒಂದೆರೆಡು ಹಿಟ್ ಹಾಡುಗಳು ಇರುತ್ತಿದ್ದವು. ಆದರೆ ಇತ್ತೀಚಿನ ನನ್ನ ಸಿನಿಮಾಗಳಲ್ಲಿ ಅಂತಹ ಹಿಟ್ ಹಾಡುಗಳು ಯಾವುದು ಇರಲಿಲ್ಲ. ಜೋಗ್ 101 ಚಿತ್ರದ ಹಾಡುಗಳು ಆ ಕೊರತೆಯನ್ನು ದೂರ ಮಾಡಿದೆ. ಈ ಚಿತ್ರದ ಹಾಡುಗಳು ಈಗಾಗಲೇ ಗೆದ್ದಿದೆ. ಇನ್ನು ನಿರ್ಮಾಪಕರ ಹೆಸರು ರಾಘವೇಂದ್ರ, ನಿರ್ದೇಶಕರ ಹೆಸರು ವಿಜಯ್ ಅವರಿಬ್ಬರ ಹೆಸರು ಸೇರಿಸಿದಾಗ ನನ್ನ ಹೆಸರು ವಿಜಯ್ ರಾಘವೇಂದ್ರ. ವಿಕ್ರಮ್ ನನ್ನ ಪಾತ್ರದ ಹೆಸರು. ಸುನೀತ್ ಹಲಗೇರಿ ಅವರ ಛಾಯಾಗ್ರಹಣದಲ್ಲಿ ಜೋಗ್ ನೋಡುವುದೆ ಒಂದು ಖುಷಿ. ಇದೇ ಮಾರ್ಚ್ 7 ನಮ್ಮ ಚಿತ್ರ ಬಿಡುಗಡೆಯಾಗುತ್ತಿದೆ. ನೋಡಿ ಹಾರೈಸಿ’ ಎನ್ನುವುದು ವಿಜಯ ರಾಘವೇಂದ್ರ ಅವರ ಮಾತು.
ಚಿತ್ರದ ಬಗ್ಗೆ ಮಾತನಾಡಿದ ನಿರ್ದೇಶಕ ವಿಜಯ್ ಕನ್ನಡಿಗ, “ಈ ಚಿತ್ರದ ಕಥೆ ಬರೆದು ನಿರ್ಮಾಪಕರ ಹತ್ತಿರ ಹೋದಾಗ ಕಥೆ ಮೆಚ್ಚಿಕೊಂಡು ಚಿತ್ರ ನಿರ್ಮಾಣಕ್ಕೆ ಮುಂದಾದರು. ಈ ಚಿತ್ರದ ಕಥೆಗೆ ವಿಜಯ್ ರಾಘವೇಂದ್ರ ಅವರೆ ಸೂಕ್ತ ಎಂದು ಅಂದುಕೊಂಡಿದ್ದೆವು. ವಿಜಯ್ ರಾಘವೇಂದ್ರ ಅವರು ಕಥೆ ಕೇಳಿ ನಟಿಸಲು ಒಪ್ಪಿಕೊಂಡರು. ಚಿತ್ರ ಮಾರ್ಚ್ 7ರಂದು ತಾರೀಖು ಬಿಡುಗಡೆಯಾಗುತ್ತಿದೆ’ ಎಂದರು. ನಿರ್ಮಾಪಕ ರಾಘು ಕೂಡಾ ಸಿನಿಮಾ ಬಗ್ಗೆ ಮಾತನಾಡಿದರು.
“ದಿಶಾ ನನ್ನ ಪಾತ್ರದ ಹೆಸರು. ಈ ಚಿತ್ರದಲ್ಲಿ ಮುಗ್ಧ ಹುಡುಗಿಯ ಪಾತ್ರ ನನ್ನದು’ ಎನ್ನುವುದು ನಾಯಕಿ ತೇಜಸ್ವಿನಿ ಮಾತು. ಸಂಗೀತ ನಿರ್ದೇಶಕ ಅವಿನಾಶ್ ಆರ್ ಬಾಸೂತ್ಕರ್, ಛಾಯಾಗ್ರಾಹಕ ಸುನೀತ್ ಹಲಗೇರಿ ಹಾಗೂ ನೃತ್ಯ ನಿರ್ದೇಶಕ ಕಲೈ ಸೇರಿದಂತೆ ಚಿತ್ರತಂಡದ ಸದಸ್ಯರು ಚಿತ್ರದ ಕುರಿತು ಮಾಹಿತಿ ನೀಡಿದರು. ಮೋಹನ್ ರಂಗಕಹಳೆ ಸಂಕಲನ ಹಾಗೂ ಥ್ರಿಲ್ಲರ್ ಮಂಜು ಅವರ ಸಾಹಸ ಈ ಚಿತ್ರಕ್ಕಿದೆ.
ವಿಜಯ ರಾಘವೇಂದ್ರ ಅವರಿಗೆ ನಾಯಕಿಯಾಗಿ ತೇಜಸ್ವಿನಿ ಶೇಖರ್ ನಟಿಸಿದ್ದಾರೆ. ಗೋವಿಂದೇ ಗೌಡ, ಕಡಿಪುಡಿ ಚಂದ್ರು, ರಾಜೇಶ್ ನಟರಂಗ, ತಿಲಕ್, ನಿರಂಜನ್ ದೇಶಪಾಂಡೆ, ಶಶಿಧರ್, ಪ್ರಸನ್ನ, ಸುಂದರಶ್ರೀ, ಹರ್ಷಿತಾ ಗೌಡ ಜೋಗ್ 101 ಚಿತ್ರದ ತಾರಾಬಳಗದಲ್ಲಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Pushpa2: ಅಲ್ಲು ಅರ್ಜುನ್ ‘ಪುಷ್ಪ-2’ ಐಟಂ ಹಾಡಿಗೆ ಹಜ್ಜೆ ಹಾಕಲಿದ್ದಾರೆ ಈ ಇಬ್ಬರು ನಟಿಯರು?
Owaisi; ತಿರುಪತಿಯಲ್ಲಿ ಮುಸ್ಲಿಂ ಸ್ಟಾಫ್ ಇಲ್ಲದಿರುವಾಗ ವಕ್ಫ್ ನಲ್ಲೇಕೆ ಹಿಂದೂಗಳು
Sparks Row; ಉಗ್ರರನ್ನು ಹ*ತ್ಯೆ ಮಾಡಬಾರದು…: ಫಾರೂಕ್ ಅಬ್ದುಲ್ಲಾ ಹೇಳಿಕೆ
Shivaji Satam: ಕ್ಯಾಷಿಯರ್ ಆಗಿದ್ದ ಹುಡುಗ ಟಿವಿ ಲೋಕದ ʼಸಿಐಡಿʼಯಾಗಿ ಬೆಳೆದು ಬಂದದ್ದೇಗೆ?
INDIA bloc; ಜಾರ್ಖಂಡ್ ಸೀಟು ಹಂಚಿಕೆ ಒಪ್ಪಂದ ಅಂತಿಮ: ಜೆಎಂಎಂಗೆ 43 ಸ್ಥಾನ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.