ವಿಜಯಲಕ್ಷ್ಮೀ ವಿನೋದ್‌ಗೆ ತಾಯಿ, ಫೈಟರ್ ಚಿತ್ರದಲ್ಲಿ ಜಿಲ್ಲಾಧಿಕಾರಿ
Team Udayavani, Jul 16, 2018, 3:38 PM IST
ಕೆಲವು ದಿನಗಳ ಹಿಂದಷ್ಟೇ, “ತಮಗೆ ಸಿನಿಮಾದಲ್ಲಿ ನಟಿಸಲು ಅವಕಾಶವೇ ಸಿಗುತ್ತಿಲ್ಲ. ನಾನೀಗ ಯಾವ ಪಾತ್ರವಿದ್ದರೂ ನಟಿಸೋಕೆ ರೆಡಿ. ಆದರೆ, ಯಾರೊಬ್ಬರೂ ಕರೆದು ಅವಕಾಶ ಕೊಡುತ್ತಿಲ್ಲ’ ಎಂದು ತಮ್ಮ ಅಳಲು ತೋಡಿಕೊಂಡಿದ್ದ ನಟಿ ವಿಜಯಲಕ್ಷ್ಮೀ ಅವರಿಗೀಗ ನಟಿಸುವ ಅವಕಾಶ ಸಿಕ್ಕಿದೆ. ಹೌದು, ವಿನೋದ್ ಪ್ರಭಾಕರ್ ಅಭಿನಯದ “ಫೈಟರ್’ ಚಿತ್ರದಲ್ಲಿ ವಿಜಯಲಕ್ಷ್ಮೀ ನಟಿಸುತ್ತಿದ್ದಾರೆ. ಅಂದಹಾಗೆ, ವಿಜಯಲಕ್ಷ್ಮೀ ಅವರಿಗೆ ಸಿಕ್ಕ ಪಾತ್ರ ಯಾವುದು ಗೊತ್ತಾ? ಅದು ತಾಯಿ ಪಾತ್ರ. ವಿನೋದ್‌ಪ್ರಭಾಕರ್ ಅವರ ತಾಯಿಯಾಗಿ ಇದೇ ಮೊದಲ ಸಲ ವಿಜಯಲಕ್ಷ್ಮೀ ಅವರು ಕಾಣಿಸಿಕೊಳ್ಳುತ್ತಿದ್ದಾರೆ.
ಈಗಾಗಲೇ ವಿಜಯಲಕ್ಷ್ಮೀ ಅವರ ಭಾಗದ ಚಿತ್ರೀಕರಣಕ್ಕೆ ಸಜ್ಜಾಗಿದ್ದು, ತಾಯಿ, ಮಗನ ಬಾಂಧವ್ಯದ ದೃಶ್ಯಗಳನ್ನು ಚಿತ್ರಿಸಲು ಚಿತ್ರತಂಡ ತಯಾರಿ ನಡೆಸಿದೆ. ವಿಜಯಲಕ್ಷ್ಮೀ ಅವರು ವಾಹಿನಿಯೊಂದರಲ್ಲಿ ತಮಗೆ ನಟಿಸಲು ಅವಕಾಶ ಸಿಗುತ್ತಿಲ್ಲ. ಇದರಿಂದಾಗಿ ಸಾಕಷ್ಟು ಸಮಸ್ಯೆಯಾಗಿದೆ ಎಂದು ತಮ್ಮ ನೋವು ಹಂಚಿಕೊಂಡಿದ್ದರಿಂದ ಒಂದಷ್ಟು ಚಿತ್ರಗಳಿಂದ ವಿಜಯಲಕ್ಷ್ಮೀ ಅವರಿಗೆ ಅವಕಾಶಗಳು ಹುಡುಕಿ ಬಂದವಾದರೂ, ಮೊದಲು ಅವಕಾಶ ಕೊಟ್ಟಿದ್ದು, “ಫೈಟರ್’ ಚಿತ್ರತಂಡ. ಒಂದು ದೊಡ್ಡ ಗ್ಯಾಪ್ ನಂತರ “ಫೈಟರ್’ ಮೂಲಕ ಹೊಸ ಇನ್ನಿಂಗ್ಸ್ ಶುರು ಮಾಡುತ್ತಿರುವ ವಿಜಯಲಕ್ಷ್ಮೀ ಇಲ್ಲಿ ವಿನೋದ್ ಪ್ರಭಾಕರ್ ಅವರ ತಾಯಿ ಮಾತ್ರವಲ್ಲ, ಅವರೊಬ್ಬ ದಕ್ಷ ಜಿಲ್ಲಾಧಿಕಾರಿಯಾಗಿ ನಟಿಸುತ್ತಿದ್ದಾರೆ. ನಿರ್ದೇಶಕ ನೂತನ್ ಉಮೇಶ್ ಅವರು ಆಗಸ್ಟ್ 6 ರಿಂದ ವಿಜಯಲಕ್ಷ್ಮೀ ಅವರ ಭಾಗದ ಚಿತ್ರೀಕರಣ ನಡೆಸಲು ರೆಡಿಯಾಗಿದ್ದಾರೆ.
“ಫೈಟರ್’ ಚಿತ್ರವನ್ನು ಸೋಮಶೇಖರ್ ನಿರ್ಮಿಸುತ್ತಿದ್ದಾರೆ. ಈ ಚಿತ್ರಕ್ಕೆ ಸುಜ್ಞಾನ್‌ಛಾಯಾಗ್ರಹಣವಿದೆ. ವಿನೋದ್ ಸಾಹಸ ನಿರ್ದೇಶನ ಮಾಡುತ್ತಿದ್ದಾರೆ. “ಫೈಟರ್’ ಚಿತ್ರದಲ್ಲಿ ಮೂರ್‍ನಾಲ್ಕು ಸಾಮಾಜಿಕ ವಿಷಯಗಳಿದ್ದು, ಅದಕ್ಕಾಗಿ ನಾಯಕ ಹೋರಾಡುವ ಅಂಶಗಳಿವೆ. ಬೆಂಗಳೂರು ಮತ್ತು ಉತ್ತರ ಕರ್ನಾಟಕದಲ್ಲಿ ಚಿತ್ರೀಕರಣ ನಡೆಯಲಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಹೊಸ ಸೇರ್ಪಡೆ
Rashmika Mandanna: ಸಾವಿರಾರು ಜನರ ಮುಂದೆ ಮದುವೆ ಆಗುವ ಹುಡುಗನ ಬಗ್ಗೆ ಮಾತನಾಡಿದ ರಶ್ಮಿಕಾ
Stock Market: ಷೇರುಪೇಟೆ ಸೂಚ್ಯಂಕ 1,300 ಅಂಕ ಜಿಗಿತ; ಅದಾನಿ ಗ್ರೂಪ್ ಷೇರು ಮೌಲ್ಯ ಏರಿಕೆ
Bidar: ವಕ್ಫ್ ಹೋರಾಟ ಆರಂಭಿಸಿದ ಯತ್ನಾಳ್- ಜಾರಕಿಹೊಳಿ ತಂಡ
ಮಕ್ಕಳನ್ನು ಶಾಲೆಗೆ ಸೇರಿಸೋದು ಮುಖ್ಯವಲ್ಲ, ನಿತ್ಯವೂ ಕಳುಹಿಸಿ… :ಸಚಿವ ಮಧು ಬಂಗಾರಪ್ಪ
Protest: ಡಿ.10 ರಂದು ಸುವರ್ಣಸೌಧಕ್ಕೆ 5 ಸಾವಿರ ಟ್ರ್ಯಾಕ್ಟರ್ ಮುತ್ತಿಗೆ; ಕೂಡಲಸಂಗಮ ಶ್ರೀ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.