Bheema; ಹೊಸ ವರ್ಷದಲ್ಲಿ ಮಾಸ್ ಸಿನಿಮಾ
Team Udayavani, Dec 22, 2023, 12:40 PM IST
“ಸಲಗ’ ಸಿನಿಮಾ ಮೂಲಕ ನಿರ್ದೇಶಕರಾಗಿಯೂ ಯಶಸ್ಸು ಕಂಡಿದ್ದ ವಿಜಯ್ “ಭೀಮ’ ಎಂಬ ಸಿನಿಮಾ ಮಾಡುತ್ತಿರುವ ವಿಚಾರ ನಿಮಗೆ ಗೊತ್ತೇ ಇದೆ. ಈಗ ಆ ಚಿತ್ರದ ಚಿತ್ರೀಕರಣ ಮುಗಿದಿದ್ದು, ಇತ್ತೀಚೆಗೆ ಬೆಂಗಳೂರಿನ ವಿನೋಬಾನಗರದ ಗಲ್ಲಿಗಳಲ್ಲಿ ಕೆಲವು ದೃಶ್ಯಗಳನ್ನು ಚಿತ್ರೀಕರಿಸಿಕೊಳ್ಳುವ ಮೂಲಕ ಚಿತ್ರಕ್ಕೆ ಕುಂಬಳಕಾಯಿ ಹೊಡೆಯಲಾಗಿದೆ. ಈ ಮೂಲಕ “ಭೀಮ’ ಚಿತ್ರೀಕರಣ ಪೂರ್ಣಗೊಳಿಸಿದೆ. ಚಿತ್ರವನ್ನು ನೈಜವಾಗಿ ಕಟ್ಟಿಕೊಡುವ ದೃಷ್ಟಿಯಿಂದ ನೈಜ ಲೊಕೇಶನ್ಗಳನ್ನೇ ಆಯ್ಕೆ ಮಾಡಲಾಗಿದೆ.
ಇನ್ನು, ದೀಪಾವಳಿ ಸಮಯದಲ್ಲಿ ಚಿತ್ರದ “ಸೈಕ್’ ಹಾಡು ಬಿಡುಗಡೆಯಾಗಿ ಹಿಟ್ಲಿಸ್ಟ್ ಸೇರಿತ್ತು. ಇತ್ತೀಚೆಗೆ ಚಿತ್ರದ ಡ್ಯುಯೆಟ್ ಸಾಂಗ್ವೊಂದು ಬಿಡುಗಡೆಯಾಗಿದ್ದು, ಅದು ಕೂಡಾ ಹಿಟ್ಲಿಸ್ಟ್ ಸೇರಿದೆ. “ಐ ಲವ್ ಯೂ ಕಣೇ..’ ಎಂಬ ಡ್ಯುಯೆಟ್ ಹಾಡು ಗುರುವಾರ ಬಿಡುಗಡೆಯಾಗಿದ್ದು, ಮೆಚ್ಚುಗೆ ವ್ಯಕ್ತವಾಗುತ್ತಿದೆ. ರೆಗ್ಯುಲರ್ ಶೈಲಿ ಬಿಟ್ಟು ತಯಾರಾಗಿರುವ ಈ ಹಾಡಿನ ಚಿತ್ರೀಕರಣವನ್ನು ವಿಭಿನ್ನವಾಗಿ ಮಾಡಲಾಗಿದೆ.
ಇನ್ನು, “ಭೀಮ’ ಚಿತ್ರದ ಮೇಲಿನ ನಿರೀಕ್ಷೆ ಹೆಚ್ಚಿದೆ ಈ ಹಿಂದೆ ಬಿಡುಗಡೆಯಾಗಿರುವ ಭೀಮ ಟೀಸರ್ನಲ್ಲಿರುವ ಮಾಸ್ ಡೈಲಾಗ್, ವಿಜಯ್ ಶೈಲಿ ಸಿನಿಮಾ ಮೇಲಿನ ಕುತೂಹಲ ಹೆಚ್ಚಿಸಿರುವುದು ಸುಳ್ಳಲ್ಲ. ಅಂದಹಾಗೆ, “ಭೀಮ’ ಇದು ಕೂಡಾ ಒಂದು ಗಂಭೀರ ಹಾಗೂ ಪ್ರೇಕ್ಷಕರಿಗೆ ಇಷ್ಟವಾಗುವ ವಿಷಯವನ್ನಿಟ್ಟುಕೊಂಡು ಮಾಡುತ್ತಿದ್ದಾರೆ. ಈ ಕಥೆಗಾಗಿ ಸುಮಾರು ಎಂಟು ತಿಂಗಳಿಗೂ ಹೆಚ್ಚು ತಮ್ಮನ್ನು ವಿಜಯ್ ತೊಡಗಿಸಿಕೊಂಡು, ಎಲ್ಲವನ್ನು ಪಕ್ಕಾ ಮಾಡಿಕೊಂಡು ಮಾಡಿರುವ ಸಿನಿಮಾವಿದು. “ಸಲಗ’ದಲ್ಲಿ ಸಿಕ್ಕ ದೊಡ್ಡ ಯಶಸ್ಸು “ಭೀಮ’ನಲ್ಲಿ ಮುಂದುವರೆಯುವ ವಿಶ್ವಾಸ ವಿಜಯ್ ಅವರಿಗಿದೆ.
ಅಂದಹಾಗೆ, ಈ ಚಿತ್ರವನ್ನು ಕೃಷ್ಣ ಸಾರ್ಥಕ್ ಹಾಗೂ ವಿತರಕ ಜಗದೀಶ್ ಗೌಡ ನಿರ್ಮಾಣ ಮಾಡುತ್ತಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Max Movie: ಸಖತ್ ರೆಸ್ಪಾನ್ಸ್ ಪಡೆದ ಕಿಚ್ಚನ ʼಮ್ಯಾಕ್ಸ್ʼ ಮೊದಲ ದಿನ ಗಳಿಸಿದ್ದೆಷ್ಟು?
Actor Health: ಸ್ವಲ್ಪ ಜರುಗಿದ ದರ್ಶನ್ ಬೆನ್ನುಮೂಳೆ; ತುರ್ತಾಗಿ ಆಪರೇಷನ್ ಇಲ್ಲ: ವೈದ್ಯರು
Prashanth Neel: ಸಲಾರ್ಗೆ ನಾನು ಇನ್ನಷ್ಟು ಶ್ರಮ ಹಾಕಬೇಕಿತ್ತು; ಪ್ರಶಾಂತ್ ನೀಲ್
UI Movie: ಉಪ್ಪಿ ಯುಐ ಮೆಚ್ಚಿದ ಯಶ್
Shivaraj Kumar: ಶಿವರಾಜ್ ಕುಮಾರ್ ಅವರ ಆಪರೇಷನ್ ಯಶಸ್ವಿಯಾಗಿದೆ – ಪತ್ನಿ ಗೀತಾ ಮಾಹಿತಿ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.