ಕಿಸ್ಸಿಂಗ್ ಸೀನ್ ಲೀಕ್ ಆಗಿದ್ದರಾ ಕುರಿತು ವಿಜಯ್ ನೋವು
Team Udayavani, Aug 13, 2018, 2:14 PM IST
ಚಮಕ್ ಬೆಡಗಿ ರಶ್ಮಿಕಾ ಮಂದಣ್ಣ ಮತ್ತು ವಿಜಯ್ ದೇವರಕೊಂಡ ಅಭಿನಯಿಸುತ್ತಿರುವ ತೆಲುಗಿನ “ಗೀತಾ ಗೋವಿಂದಂ’ ಸಿನಿಮಾದ ಟೀಸರ್ ಮತ್ತು ಹಾಡುಗಳು ಬಿಡುಗಡೆಗೊಂಡು ಈಗಾಗಲೇ ಸಾಮಾಜಿಕ ಜಾಲತಾಣದಲ್ಲಿ ಸದ್ದು ಮಾಡುತ್ತಿದ್ದರೆ, ಇತ್ತ ಅದೇ ಸಿನಿಮಾದ ಕಿಸ್ಸಿಂಗ್ ದೃಶ್ಯವೊಂದು ಲೀಕ್ ಆಗಿದೆ.
ಹೌದು! ರಶ್ಮಿಕಾ ಮತ್ತು ವಿಜಯ್ ಬಸ್ಸಿನಲ್ಲಿ ಪ್ರಯಾಣಿಸುತ್ತಿದ್ದು, ಈ ವೇಳೆ ರಶ್ಮಿಕಾ ವಿಜಯ್ ಅವರ ತೊಡೆ ಮೇಲೆ ಕುಳಿತು ಅವರಿಗೆ “ಲಿಪ್ ಟು ಲಿಪ್ ಕಿಸ್’ ಮಾಡಿದ ದೃಶ್ಯ ಲೀಕ್ ಆಗಿದ್ದು, ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ ಆಗಿದೆ.
“ಗೀತಾ ಗೋವಿಂದಂ’ ಚಿತ್ರದ ಟೀಸರ್ ಈಗಾಗಲೇ ಸಾಕಷ್ಟು ಚರ್ಚೆಗೆ ಗ್ರಾಸವಾಗಿತ್ತು. ಟೀಸರ್ ನಲ್ಲಿ ರಶ್ಮಿಕಾ ಮಂದಣ್ಣ ಅವರು ತೆಲುಗಿನಲ್ಲಿ ನಟ ವಿಜಯ್ ದೇವರಕೊಂಡ ಅವರ ರೊಮ್ಯಾಂಟಿಕ್ ದೃಶ್ಯಗಳು ಅಧಿಕವಾಗಿದ್ದವು. ಇದನ್ನು ನೋಡಿದ ಅಭಿಮಾನಿಗಳು ರಶ್ಮಿಕಾ ಅವರ ವಿರುದ್ಧ ತರಹೇವಾರಿ ಕಮೆಂಟ್ ಮಾಡುತ್ತಿದ್ದರು. ಈಗ ಇದರ ಬೆನ್ನಲ್ಲೆ ಇವರಿಬ್ಬರ ಕಿಸ್ಸಿಂಗ್ ದೃಶ್ಯವೊಂದು ಲೀಕ್ ಆಗಿದೆ.
ಟ್ವಿಟರ್ ನಲ್ಲಿ ನೋವು ಹೊರ ಹಾಕಿದ ವಿಜಯ್ ದೇವರಕೊಂಡ: “ಗೀತ ಗೋವಿಂದಂ’ ಚಿತ್ರದ ಕೆಲ ಸೀನ್ಗಳು ಲೀಕ್ ಆಗಿರುವುದು ನಟ ವಿಜಯ್ ದೇವರಕೊಂಡ ಅವರಿಗೆ ಬೇಸರ ಮೂಡಿಸಿದ್ದು, ತಮಗಾದ ನೋವನ್ನು ಟ್ವಿಟ್ಟರ್ ನಲ್ಲಿ ಹೊರ ಹಾಕಿದ್ದಾರೆ. “ಗೀತ ಗೋವಿಂದಂ’ ಚಿತ್ರದ ವಿಡಿಯೋ ಲೀಕ್ ಆಗಿರುವುದು ನನಗೆ ಅತೀವ ನೋವನ್ನುಂಟು ಮಾಡಿದೆ. ಒಂದು ಕ್ಷಣ ಕೋಪ ಬರುತ್ತೆ, ಮತ್ತೊಮ್ಮೆ ಅಳು ಬರುತ್ತೆ ಎಂದು ವಿಜಯ್ ಟ್ವೀಟ್ ಮಾಡಿದ್ದಾರೆ.
ಟಾಲಿವುಡ್ನ ಬಹುನಿರೀಕ್ಷಿತ “ಗೀತ ಗೋವಿಂದಂ’ ಚಿತ್ರದ ಕೆಲ ಸೀನ್ಗಳು ಲೀಕ್ ಆಗಿ ವೈರಲ್ ಆಗಿದ್ದು, ಬಿಡುಗಡೆಯ ಮುನ್ನವೇ ಚಿತ್ರದಲ್ಲಿನ ಕೆಲ ಇಂಟಿಮೇಟ್ ಸೀನ್ಗಳು ಸಾಮಾಜಿಕ ಜಾಲತಾಣದಲ್ಲಿ ಹರಿದಾಡಿದ್ದು, ಇದು ಚಿತ್ರತಂಡಕ್ಕೆ ತಲೆ ನೋವು ತಂದಿತ್ತು. ಕೂಡಲೇ ಕಾರ್ಯಪ್ರವೃತ್ತರಾದ ಚಿತ್ರತಂಡ ಪೊಲೀಸರಿಗೆ ದೂರು ನೀಡಿ, ಲೀಕ್ ಆದ ವಿಡಿಯೋಗಳನ್ನು ಹಿಂತೆಗೆದುಕೊಂಡಿದೆ. ಜತೆಗೆ ರಾಜೇಶ್ ಎಂಬಾತನನ್ನು ಬಂಧಿಸಿಲಾಗಿದೆ.
ಯುಟ್ಯೂಬ್ನಲ್ಲಿ ಕಿಸ್ಸಿಂಗ್ ವಿಡಿಯೋ: “ಗೀತ ಗೋವಿಂದಂ’ ಚಿತ್ರದ ಲೀಕ್ ಆಗಿರುವ ಎಲ್ಲ ವಿಡಿಯೋಗಳನ್ನು ಈಗಾಗಲೇ ಡಿಲಿಟ್ ಮಾಡಿದ್ದರು ಕೂಡಾ, ನಟಿ ರಶ್ಮಿಕಾ ಹಾಗೂ ನಟ ವಿಜಯ್ ದೇವರಕೊಂಡ ಲಿಪ್ಲಾಕ್ ವಿಡಿಯೋವೊಂದು ಯುಟ್ಯೂಬ್ನಲ್ಲಿ ಲಭ್ಯವಿದೆ. ಇನ್ನು ಚಿತ್ರ ಪರಶುರಾಮ್ ನಿರ್ದೇಶನದಲ್ಲಿ ಮೂಡಿಬಂದಿದ್ದು, ಗೋಪಿ ಸುಂದರ್ ಸಂಗೀತ ಚಿತ್ರಕ್ಕಿದೆ.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.