ಕನಕನ ಎಣ್ಣೆ ಸಾಂಗ್‌ಗೆ ವಿಜಿ ಕುಣಿತ
Team Udayavani, Jan 6, 2018, 10:26 AM IST
ಆರ್.ಚಂದ್ರು ನಿರ್ದೇಶನದ “ಕನಕ’ ಚಿತ್ರದಲ್ಲಿನ “ಎಣ್ಣೆ ನಿಮ್ದು ಊಟ ನಮ್ದು’ ಹಾಡನ್ನು ನೀವು ಕೇಳಿರುತ್ತೀರಿ. ಈ ಹಾಡನ್ನು ಪ್ರಮೋಶನಲ್ ಸಾಂಗ್ ಆಗಿ ಬಳಸಲು ಚಿತ್ರತಂಡ ನಿರ್ಧರಿಸಿದ್ದರಿಂದ ಚಿತ್ರದ ಕಲಾವಿದರನ್ನು ಹಾಕಿಕೊಂಡು ಈ ಹಾಡನ್ನು ಚಿತ್ರೀಕರಿಸಿರಲಿಲ್ಲ. ಸಂಗೀತ ನಿರ್ದೇಶಕ ನವೀನ್ ಸಜ್ಜು ಅವರೇ ಈ ಹಾಡಿನಲ್ಲಿ ಕಾಣಿಸಿಕೊಂಡಿದ್ದರು.
ಈಗ ನಿರ್ದೇಶಕ ಆರ್.ಚಂದ್ರು, ಚಿತ್ರದ ನಾಯಕ ವಿಜಯ್ ಇತರ ಸಹಕಲಾವಿದರೊಂದಿಗೆ ಆ ಹಾಡನ್ನು ಚಿತ್ರೀಕರಿಸಿದ್ದಾರೆ. ಕಲರ್‌ಫುಲ್ ಸೆಟ್‌ನಲ್ಲಿ ವಿಜಯ್, ಬುಲೆಟ್ ಪ್ರಕಾಶ್, ಕುರಿ ಪ್ರತಾಪ್ ಸೇರಿದಂತೆ ಅನೇಕರು “ಎಣ್ಣೆ ನಿಮ್ದು ಊಟ ನಮ್ದು’ ಎಂದು ಹಾಡಿ ಕುಣಿದಿದ್ದಾರೆ. ಎಲ್ಲಾ ಓಕೆ, ಇಷ್ಟು ತಡವಾಗಿ ಈ ಹಾಡನ್ನು ಚಿತ್ರೀಕರಿಸಿದ್ದು ಯಾಕೆ ಎಂಬ ಪ್ರಶ್ನೆ ಬರುತ್ತದೆ. ಅದಕ್ಕೆ ಉತ್ತರ ಹಾಡು ಹಿಟ್ ಆಗಿದ್ದು.
ಚಿತ್ರದ ಈ ಹಾಡು ಬಿಡುಗಡೆಯಾದ ಮೇಲೆ ಹಿಟ್ ಆಗಿ ವೈರಲ್ ಆಗಿದೆ. ಸಿನಿಪ್ರಿಯರು ತಮ್ಮದೇ ಶೈಲಿಯಲ್ಲಿ ಈ ಹಾಡನ್ನು ಚಿತ್ರೀಕರಿಸಿ, ಸೋಶಿಯಲ್ ಮೀಡಿಯಾಗೆ ಅಪ್‌ಲೋಡ್ ಮಾಡುತ್ತಿದ್ದಾರೆ. ಚಿತ್ರ ಈ ಮಟ್ಟಕ್ಕೆ ಹಿಟ್ ಆಗಿದ್ದನ್ನು ನೋಡಿದ ಚಿತ್ರತಂಡ ಸಿನಿಮಾದಲ್ಲಿ ಈ ಹಾಡು ಇದ್ದರೆ ಪ್ಲಸ್ ಆಗುತ್ತದೆಂದುಕೊಂಡು ಈ ಹಾಡನ್ನು ಸೇರಿಸಿದೆ. ಆರಂಭದಲ್ಲಿ ಎರಡು ವಾರ ಬಿಟ್ಟು ಈ ಹಾಡನ್ನು ಸೇರಿಸುವ ಯೋಚನೆ ಇತ್ತಂತೆ. ಆ
ದರೆ, ಈಗ ಸಿನಿಮಾ ಬಿಡುಗಡೆಯಾಗುವಾಗಲೇ ಈ ಹಾಡು ಇರುತ್ತದೆ ಎಂಬ ಮಾಹಿತಿ ನೀಡುತ್ತಾರೆ ಆರ್.ಚಂದ್ರು. ಸತ್ಯ ಹೆಗಡೆ ಅವರ ಛಾಯಾಗ್ರಹಣವಿರುವ ಈ ಚಿತ್ರಕ್ಕೆ ನವೀನ್ ಸಜ್ಜು ಸಂಗೀತ ನೀಡಿದ್ದಾರೆ. ಚಿತ್ರದ ತಾರಾಬಳಗದಲ್ಲಿ “ದುನಿಯಾ’ ವಿಜಯ್, ಹರಿಪ್ರಿಯಾ, ಮಾನ್ವಿತ ಹರೀಶ್, ಸಾಧು ಕೋಕಿಲ, ರಂಗಾಯಣ ರಘು, ರವಿಶಂಕರ್, ಶ್ರೀನಿವಾಸಮೂರ್ತಿ, “ಉಗ್ರಂ’ ಮಂಜು, ಪದ್ಮಜಾ ರಾವ್, ಸುಧಾ ಬೆಳವಾಡಿ ಮುಂತಾದವರಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Actor Allu Arjun: ಕಾಲ್ತುಳಿತ ಪ್ರಕರಣ-ನಟ ಅಲ್ಲುಗೆ ರೆಗ್ಯುಲರ್ ಜಾಮೀನ ಮಂಜೂರು
Vijay Hazare; ವಾಸುಕಿ,ಗೋಪಾಲ್ ಬೊಂಬಾಟ್ ಬೌಲಿಂಗ್; ಸೌರಾಷ್ಟ್ರ ವಿರುದ್ದ ಗೆದ್ದ ಕರ್ನಾಟಕ
ಗದಗ: ಮಾವು ಬಂಪರ್ ಬೆಳೆ ನಿರೀಕ್ಷೆ- ಬೆಳೆಗಾರರಿಗೆ ಸಂತಸ
Congress; ಡಿನ್ನರ್ ಮೀಟಿಂಗ್ ನಲ್ಲಿ ವಿಶೇಷ ಇಲ್ಲ: ಸಚಿವ ಭೈರತಿ ಸುರೇಶ್
Test Cricket; ರೋಹಿತ್ ಆಯ್ತು, ಈಗ ವಿರಾಟ್..: ಬಿಸಿಸಿಐ ಕಳಿಸಿದ ʼಆʼ ಸಂದೇಶದಲ್ಲಿ ಏನಿದೆ?
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.