ಪುಸ್ತಕವೇ ಆಹ್ವಾನ ಪತ್ರಿಕೆ!
Team Udayavani, Aug 31, 2017, 5:27 PM IST
ಈ ಕಾಲದಲ್ಲಿ ಆಹ್ವಾನ ಪತ್ರಿಕೆಗಳು ಅದೆಷ್ಟು ಡಿಫರೆಂಟ್ ಆಗಿರುತ್ತದೆ ಎಂದು ನಿಮಗೆ ಗೊತ್ತೇ ಇದೆ. ಅದೇ ರೀತಿ, “ಅನಂತು ವರ್ಸಸ್ ನುಸ್ರತ್’ ತಂಡವು ಒಂದು ಹೊಸ ಪ್ರಯೋಗ ಮಾಡಿದೆ. ಚಿತ್ರದ ಮುಹೂರ್ತವು ಮುಂದಿನ ಸೋಮವಾರ ಅಂದರೆ ಸೆಪ್ಟೆಂಬರ್ 4ರಂದು ಕಂಠೀರವ ಸ್ಟುಡಿಯೋದಲ್ಲಿ ನಡೆಯಲಿದೆ. ಆ ಮುಹೂರ್ತ ಸಮಾರಂಭಕ್ಕೆಂದು ಚಿತ್ರತಂಡವು, ಕಾನೂನು ಪುಸ್ತಕದ ರೂಪದಲ್ಲಿ ಆಹ್ವಾನ ಪತ್ರಿಕೆಯನ್ನು ಮಾಡಿಸಿದೆ.
ಹೌದು, “ಅನಂತು ವರ್ಸಸ್ ನುಸ್ರತ್’ ಚಿತ್ರದ ಆಹ್ವಾನ ಪತ್ರಿಕೆಯು ಲಾ ಬುಕ್ ಶೈಲಿಯಲ್ಲಿದೆ. ಚಿತ್ರತಂಡವು ಹಾಗೆ ಆಹ್ವಾನ ಪತ್ರಿಕೆ ಮಾಡಿಸುವುದಕ್ಕೂ ಕಾರಣವಿದೆ. ಅದೇನೆಂದರೆ, ಚಿತ್ರದಲ್ಲಿ ನಾಯಕ ಮತ್ತು ನಾಯಕಿ ಇಬ್ಬರೂ ಲಾಯರ್ ಪಾತ್ರ ಮಾಡುತ್ತಿದ್ದು, ನ್ಯಾಯಾಲಯದಲ್ಲಿ ಅವರಿಬ್ಬರ ಲವ್ ಆಗುತ್ತದಂತೆ. ಅದೇ ಕಾರಣಕ್ಕೆ ಆಹ್ವಾನ ಪತ್ರಿಕೆಯನ್ನೂ ಕಾನೂನು ಪುಸ್ತಕದ ರೀತಿ ಡಿಸೈನ್ ಮಾಡಲಾಗಿದೆ. ಅಂದ ಹಾಗೆ, ಈ ಮುಹೂರ್ತ ಸಮಾರಂಭಕ್ಕೆ ಶಿವರಾಜಕುಮಾರ್, ರಾಘವೇಂದ್ರ ರಾಜಕುಮಾರ್ ಮತ್ತು ಪುನೀತ್ ರಾಜಕುಮಾರ್ ವಿಶೇಷ ಆಹ್ವಾನಿತರಾಗಿ ಆಗಮಿಸಲಿದ್ದಾರೆ. ಮಿಕ್ಕಂತೆ ಡಾ. ರಾಜ್ ಕುಟುಂಬದ ಹಲವು ಸದಸ್ಯರು ಈ ಮುಹೂರ್ತದಲ್ಲಿ ಭಾಗವಹಿಸಲಿದ್ದಾರೆ.
ಚಿತ್ರದಲ್ಲಿ ಅನುಂತು ಪಾತ್ರವನ್ನು ವಿನಯ್ ರಾಜಕುಮಾರ್ ಮಾಡಿದರೆ, ನುಸ್ರತ್ ಪಾತ್ರಕ್ಕೆ ಇನ್ನೂ ನಾಯಕಿಯ ಹುಡುಕಾಟ ನಡೆಯುತ್ತಿದ್ದು, ಸದ್ಯದಲ್ಲೇ ಆಯ್ಕೆ ಮಾಡಲಾಗುವುದು ಎನ್ನುತ್ತಾರೆ ಚಿತ್ರದ ನಿರ್ದೇಶಕ ಸುಧೀರ್ ಶಾನುಭೋಗ್. ಚಿತ್ರದ ಚಿತ್ರೀಕರಣ ಸೆಪ್ಟೆಂಬರ್ ಕೊನೆ ಅಥವಾ ಅಕ್ಟೋಬರ್ ನಿಂದ ನಡೆಯಲಿದೆ. ಚಿತ್ರಕ್ಕೆ ಸುನಾದ್ ಗೌತಮ್ ಸಂಗೀತ ಸಂಯೋಜಿಸಿದರೆ, ಅಭಿಷೇಕ್ ಕಾಸರಗೋಡು ಛಾಯಾಗ್ರಹಣ ಮಾಡುತ್ತಿದ್ದಾರೆ.
“ಅನಂತು ವರ್ಸಸ್ ನುಸ್ರತ್’ ಚಿತ್ರಕ್ಕೂ ಮುನ್ನ ಸುದ್ದಿಯಾದ ಇನ್ನೊಂದು ಚಿತ್ರವೆಂದರೆ, ಅದು “ಅಚ್ಚರಿ’. ವಿನಯ್ ರಾಜಕುಮಾರ್ ಅಭಿನಯದ ಈ ಚಿತ್ರ ಇಷ್ಟರಲ್ಲಾಗಲೇ ಶುರುವಾಗಬೇಕಿತ್ತು. ಆದರೆ, ಈ ಚಿತ್ರ ನಿಂತಿದೆ ಎಂಬಂತಹ ಸುದ್ದಿಯೊಂದು ಗಾಂಧಿನಗರದಲ್ಲಿ ಓಡಾಡುತ್ತಿದೆ. ಆದರೆ, ಈ ಸುದ್ದಿ ಸುಳ್ಳು ಎನ್ನುತ್ತಾರೆ ಆ ಚಿತ್ರದ ನಿರ್ದೇಶಕ ಸುನೀಲ್ ತಾಳ್ಯ.
“ನಮ್ಮ ಚಿತ್ರ ವಿನಯ್ ರಾಜಕುಮಾರ್ ಅವರ ಮೂರನೆಯ ಚಿತ್ರವಾಗಿ ಇಷ್ಟರಲ್ಲಾಗಲೇ ಶುರುವಾಗಬೇಕಿತ್ತು. ಆದರೆ, ಕಾರಣಾಂತರದಿಂದ ಸ್ವಲ್ಪ ತಡವಾಗಿದೆ ಅಷ್ಟೇ. “ಅನಂತು ವರ್ಸಸ್ ನುಸ್ರತ್’ ನಂತರ ನಮ್ಮ ಚಿತ್ರ ರಂಭವಾಗಲಿದ್ದು, “ಅಚ್ಚರಿ’ಯು ವಿನಯ್ ರಾಜಕುಮಾರ್ ಅವರ 4ನೇ ಚಿತ್ರವಾಗಲಿದೆ’ ಎಂದು ಸ್ಪಷ್ಟಪಡಿಸುತ್ತಾರೆ ಸುನೀಲ್ ತಾಳ್ಯ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Kannada Cinema: ‘ನಾ ನಿನ್ನ ಬಿಡಲಾರೆ’ ಟ್ರೇಲರ್ ಬಂತು: ನ.29ಕ್ಕೆ ಸಿನಿಮಾ ತೆರೆಗೆ
Suri Loves Sandhya: ಟೀಸರ್‌ನಲ್ಲಿ ಸೂರಿ ಲವ್ ಸ್ಟೋರಿ
Baaghi 4: ಟೈಗರ್ ಶ್ರಾಫ್ ʼಬಾಘಿ – 4ʼ ಗೆ ಕನ್ನಡದ ಎ.ಹರ್ಷ ಆ್ಯಕ್ಷನ್ ಕಟ್; ಪೋಸ್ಟರ್ ಔಟ್
BBK11: ಇಷ್ಟು ಬೇಗ ಬರುತ್ತೇನೆ ಅನ್ಕೊಂಡಿರಲಿಲ್ಲ- ಬಿಗ್ ಬಾಸ್ ಜರ್ನಿ ಮುಗಿಸಿದ ಅನುಷಾ
Kantara Chapter 1: ರಿಷಬ್ ಶೆಟ್ಟಿ ʼಕಾಂತಾರ ಚಾಪ್ಟರ್ -1ʼ ರಿಲೀಸ್ ಗೆ ಡೇಟ್ ಫಿಕ್ಸ್
MUST WATCH
ಹೊಸ ಸೇರ್ಪಡೆ
Bidar: ದೇಶದ ಆರ್ಥಿಕತೆಗೆ ‘ಸಹಕಾರʼದ ಕೊಡುಗೆ ಶ್ರೇಷ್ಠ: ಸಚಿವ ಈಶ್ವರ ಖಂಡ್ರೆ
BGT 2024: ಐಪಿಎಲ್ ಹರಾಜಿನ ಕಾರಣಕ್ಕೆ ತಂಡ ತೊರೆದ ಆಸ್ಟ್ರೇಲಿಯಾದ ಸಹಾಯಕ ಕೋಚ್!
Manipal: ಆರ್ಯಭಟ ಪ್ರಶಸ್ತಿ ಪುರಸ್ಕೃತ, ಯಕ್ಷಗಾನ ಕಲಾವಿದ ಚೇರ್ಕಾಡಿ ಕಮಲಾಕ್ಷ ಪ್ರಭು ನಿಧನ
Hosanagar: ಶೈಕ್ಷಣಿಕ ಪ್ರವಾಸಕ್ಕೆ ತೆರಳುತ್ತಿದ್ದ ಬಸ್ ಅಪಘಾತ: 29 ಮಂದಿಗೆ ಗಾಯ
ಸವದತ್ತಿ:ರೈಲು ಮಾರ್ಗ- ಸವದತ್ತಿಗೇ ಜಾಸ್ತಿ ಲಾಭ! ಆರ್ಥಿಕ ಅಭಿವೃದ್ಧಿಗೆ ನೆರವು…
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.