ಅಮರಾವತಿ ಟ್ರೇಲರ್ ವೈರಲ್
Team Udayavani, Jan 30, 2017, 11:32 AM IST
ನಿರ್ದೇಶಕ “ಜಟ್ಟ’ ಗಿರಿರಾಜ್ ಈಗ ಮತ್ತೆ ಸುದ್ದಿಯಲ್ಲಿದ್ದಾರೆ. ಅವರು ಸುದ್ದಿಯಾಗೋಕೆ ಕಾರಣ, “ಅಮರಾವತಿ’ ಚಿತ್ರ. ಹೌದು, ಈ ಸಿನಿಮಾವನ್ನು ಸದ್ದಿಲ್ಲದೆಯೇ ಮಾಡಿ ಮುಗಿಸಿರುವ ಗಿರಿರಾಜ್, ಇದೀಗ ರಿಲೀಸ್ ಮಾಡೋಕೆ ಅಣಿಯಾಗುತ್ತಿದ್ದಾರೆ. ಇದಷ್ಟೇ ವಿಷಯ ಆಗಿದ್ದರೆ, ಅವರು ಸುದ್ದಿಯಾಗುತ್ತಿರಲಿಲ್ಲ. ಅವರು ಹರಿಬಟ್ಟಿರುವ “ಅಮರಾವತಿ’ ಚಿತ್ರದ ಟ್ರೇಲರ್ ಎಲ್ಲೆಡೆ ಜೋರು ಸದ್ದು ಮಾಡಿದ್ದರಿಂದಲೇ ಗಿರಿರಾಜ್ ಪುನಃ ಸುದ್ದಿಯಾಗಿದ್ದಾರೆಂಬುದು ವಿಶೇಷ.
ಈಗಾಗಲೇ “ಅಮರಾವತಿ’ ಚಿತ್ರದ ಟ್ರೇಲರ್ ನೋಡಿದವರೆಲ್ಲರೂ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಯೂ ಟ್ಯೂಬ್ ಸೇರಿದಂತೆ ಫೇಸ್ಬುಕ್ನಲ್ಲೂ ಹೆಚ್ಚು ಹಿಟ್ ಆಗಿರುವ ಟ್ರೇಲರ್ನಿಂದಾಗಿ ಗಿರಿರಾಜ್ಗೆ ಸಹಜವಾಗಿಯೇ ಖುಷಿ ಇದೆಯಂತೆ. ಅವರೇ ಹೇಳುವಂತೆ, “ನನ್ನ ನಿರ್ದೇಶನದಲ್ಲಿ ಮೂಡಿಬಂದ ಚಿತ್ರಗಳ ಪೈಕಿ “ಅಮರಾವತಿ’ ಚಿತ್ರದ ಟ್ರೇಲರ್ಗೆ ಸಾಕಷ್ಟು ಉತ್ತಮ ಪ್ರತಿಕ್ರಿಯೆಗಳು ಬಂದಿವೆ. ಅದರಲ್ಲೂ ಮೊದಲ ಹಿಟ್ ಟ್ರೇಲರ್ ಇದು.
ಹಾಗಂತ ಇದೇನೋ, ಲಕ್ಷಾಂತರ ಮಂದಿ ನೋಡಿದ ದಾಖಲೆಯಂತೂ ಅಲ್ಲ, ಆದರೆ, ನನ್ನ ಮಟ್ಟಿಗೆ ಇದು ಪಾಸಿಟಿವ್ ಬೆಳವಣಿಗೆ ಎನ್ನುತ್ತಾರೆ ಗಿರಿರಾಜ್. ಸಿನಿಮಾದಲ್ಲಿ ಅಚ್ಯುತ ಹೈಲೆಟ್. ಅವರಿಲ್ಲಿ ಪಾಲಿಕೆಯ ಕಾರ್ಮಿಕರಾಗಿ ಕಾಣಿಸಿಕೊಂಡಿದ್ದಾರೆ. ಅಷ್ಟಕ್ಕೂ ಈ ಕಥೆಯ ಯೋಚನೆ ಬಂದಿದ್ದು ಎಲ್ಲಿಂದ ಗೊತ್ತಾ? ಗಿರಿರಾಜ್ ಅವರು, ಏಳೆಂಟು ವರ್ಷಗಳಿಂದ “ಕಸ’ ಸಮಸ್ಯೆ ಬಗ್ಗೆ ತಿಳಿದಿದ್ದರಂತೆ.
ಕೊನೆಗೆ ಆ ಕುರಿತು ಹಲವು ಬಾರಿ ಬೀದಿನಾಟಕಗಳನ್ನು ಮಾಡಿದ್ದರು. ಕಸ ಸಮಸ್ಯೆ ಕುರಿತಂತೆ ಸಾಕಷ್ಟು ಪ್ರತಿಭಟನೆಗಳೂ ನಡೆದಿದ್ದವು. ಆದರೆ, ಅದು ಸಮಸ್ಯೆಯಾಗಿಯೇ ಉಳಿದಿದೆ. ಹೊರತು, ಯಾವುದೇ ಪರಿಹಾರ ಸಿಕ್ಕಿಲ್ಲ. ಕಾರ್ಮಿಕರು ಇಲ್ಲದಿರುವುದೇ ಮೂಲ ಸಮಸ್ಯೆ. ಆ ಲೇಬರ್ ಸಮಸ್ಯೆ, ಅದಕ್ಕೊಂದು ಕಾಂಟ್ರ್ಯಾಕ್ಟ್ ಮಾಫಿಯಾ ಸೇರಿದಂತೆ ಇತರೆ ಘಟನೆಗಳನ್ನು ಇಟ್ಟುಕೊಂಡು ಕಥೆ ಹೆಣೆದು ಚಿತ್ರ ಮಾಡಲಾಗಿದೆಯಂತೆ.
ಗಿರಿರಾಜ್ ಕಥೆ, ಚಿತ್ರಕಥೆ ಬರೆದು ನಿರ್ದೇಶಿಸಿದರೆ, ಮಾಧವ್ರೆಡ್ಡಿ ಈ ಸಿನಿಮಾಗೆ ಹಣ ಹಾಕಿದ್ದಾರೆ. ಸಾಮಾಜಿಕ ಸಮಸ್ಯೆಗಳ ಕುರಿತ ಸಿನಮಾ ಮಾಡುಬೇಕು ಅಂದುಕೊಂಡಿದ್ದ ಅವರಿಗೆ ಈ ಕಥೆ ಇಷ್ಟವಾಗಿ, ಸಿನಿಮಾ ಮಾಡಿದ್ದಾರೆ. ಚಿತ್ರಕ್ಕೆ ಕಿರಣ್ ಹಂಪಾಪುರ್ ಕ್ಯಾಮೆರಾ ಹಿಡಿದರೆ, ಜೋಯಲ್ ಹಾಗೂ ಅಭಿಲಾಶ್ ಸಂಗೀತ ನೀಡಿದ್ದಾರೆ. ಚಿತ್ರದಲ್ಲಿ ವೈಶಾಲಿ ದೀಪಕ್, ಹೇಮಂತ್ ಸುಶೀಲ್ ಮತ್ತು ರಂಗಭೂಮಿಯ 18 ಪ್ರತಿಭೆಗಳು ನಟಿಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Toxic Movie: ʼಟಾಕ್ಸಿಕ್ʼನಲ್ಲಿ ನಟಿಸಲು ಯಶ್ ಪಡೆದ ಸಂಭಾವನೆ ಎಷ್ಟು?
Toxic Movie: ಕೇವಲ 13ಗಂಟೆಯಲ್ಲೇ ʼಪುಷ್ಪ-2ʼ ದಾಖಲೆ ಉಡೀಸ್ ಮಾಡಿದ ಯಶ್ ʼಟಾಕ್ಸಿಕ್ʼ
Teertharoopa Tandeyavarige: ತೀರ್ಥರೂಪರ ಜೊತೆ ರಚನಾ
Sathish Ninasam: ಅಶೋಕನಿಗೆ ನೀನಾಸಂ ಸತೀಶ್ ಸಾಥ್
Sandalwood: ಉಪ್ಪಿ ʼಯುಐʼ ಓಟಿಟಿ ರಿಲೀಸ್ ಯಾವಾಗ?; ಚಿತ್ರತಂಡದಿಂದ ಸಿಕ್ತು ಸ್ಪಷ್ಟನೆ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.