ವಿಶ್ವಾಸಂ ರೀಮೇಕ್‌ನಲ್ಲಿ ನಟಿಸುತ್ತಿಲ್ಲ: ಶಿವಣ್ಣ
Team Udayavani, May 20, 2019, 3:00 AM IST
ಶಿವರಾಜಕುಮಾರ್ ದೊಡ್ಡ ಗ್ಯಾಪ್‌ನ ಬಳಿಕ ಒಪ್ಪಿಕೊಂಡ ರೀಮೇಕ್ ಚಿತ್ರ “ಕವಚ’. ಈ ಚಿತ್ರದಲ್ಲಿ ಅಂಧನಾಗಿ ಕಾಣಿಸಿಕೊಂಡಿದ್ದಲ್ಲದೇ, ಪಾತ್ರಕ್ಕೆ ನ್ಯಾಯ ಒದಗಿಸಿದ್ದರು. ಅದರ ಬೆನ್ನಲ್ಲೇ ಮತ್ತೂಂದು ರೀಮೇಕ್ ಚಿತ್ರದ ಸುದ್ದಿ ಶಿವಣ್ಣ ಸುತ್ತ ಓಡಾಡತೊಡಗಿತ್ತು. ತಮಿಳಿನ “ವಿಶ್ವಾಸಂ’ ಚಿತ್ರದ ರೀಮೇಕ್‌ನಲ್ಲಿ ಶಿವಣ್ಣ ನಟಿಸುತ್ತಾರೆಂಬ ಸುದ್ದಿ ಕೇಳಿಬಂದಿತ್ತು. ಈ ಸುದ್ದಿಯನ್ನು ಶಿವಣ್ಣ ತಳ್ಳಿ ಹಾಕಿದ್ದಾರೆ. ತಾನು “ವಿಶ್ವಾಸಂ’ ರೀಮೇಕ್‌ನಲ್ಲಿ ನಟಿಸುತ್ತಿಲ್ಲ ಎಂದಿದ್ದಾರೆ.
“ನಾನು “ವಿಶ್ವಾಸಂ’ ಸೇರಿದಂತೆ ಸದ್ಯ ಯಾವುದೇ ರೀಮೇಕ್ ಚಿತ್ರಗಳಲ್ಲಿ ನಟಿಸುತ್ತಿಲ್ಲ. ಆ ಸುದ್ದಿ ಹೇಗೆ ಹಬ್ಬಿಕೊಂಡಿತ್ತೋ ಗೊತ್ತಿಲ್ಲ’ ಎನ್ನುತ್ತಾರೆ. ಸದ್ಯ ಪಿ.ವಾಸು ನಿರ್ದೇಶನದ ಚಿತ್ರದಲ್ಲಿ ಬಿಝಿಯಾಗಿರುವ ಶಿವರಾಜಕುಮಾರ್ ಅವರ ಕೈ ತುಂಬಾ ಸಿನಿಮಾಗಳಿವೆ. “ದ್ರೋಣ’, ಎ.ಪಿ.ಅರ್ಜುನ್ ನಿರ್ದೇಶನದ “ರಾಯಲ್ ಎನ್‌ಫೀಲ್ಡ್’, ಹರ್ಷ ನಿರ್ದೇಶನದ “ಭಜರಂಗಿ-2′ … ಹೀಗೆ ಶಿವಣ್ಣ ಕೈಯಲ್ಲಿರುವ ಚಿತ್ರಗಳು ಒಂದಕ್ಕಿಂತ ಒಂದು ಭಿನ್ನವಾಗಿವೆಯಂತೆ.
“ಎಲ್ಲಾ ಸಿನಿಮಾಗಳ ಕಥೆಗಳು ತುಂಬಾ ಚೆನ್ನಾಗಿವೆ. ಹರ್ಷ ಕಥೆಯೂ ಭಿನ್ನವಾಗಿದ್ದು, ಸಾಮಾಜಿಕ ವಿಷಯವೊಂದನ್ನು ಇಟ್ಟುಕೊಂಡು ಈ ಸಿನಿಮಾ ಮಾಡಲಾಗುತ್ತಿದೆ. ಇವತ್ತಿನ ಸಮಾಜಕ್ಕೆ ಈ ಕಥೆ ಸಖತ್ ಹೊಂದಿಕೆಯಾಗುತ್ತದೆ’ ಎಂದು ಖುಷಿಯಿಂದ ಹೇಳುತ್ತಾರೆ. ಇನ್ನು, ಶಿವರಾಜಕುಮಾರ್ ಅವರಿಗೆ ಒಂದು ಬೇಸರವಿದೆ. ಅದೇನೆಂದರೆ ತಾನು ಇಷ್ಟಪಟ ನಟಿಸಿದ “ಕವಚ’ ಚಿತ್ರ ದೊಡ್ಡ ಮಟ್ಟದಲ್ಲಿ ಪ್ರೇಕ್ಷಕರನ್ನು ತಲುಪಲಿಲ್ಲ ಎಂಬುದು.
“ಕವಚ’ ಒಂದು ಹೊಸ ಪ್ರಯೋಗದ ಚಿತ್ರವಾಗಿ ಎಲ್ಲರ ಮೆಚ್ಚುಗೆ ಪಡೆದಿತ್ತು. ಆದರೆ, ಚಿತ್ರ ದೊಡ್ಡ ಮಟ್ಟದಲ್ಲಿ ಜನರಿಗೆ ತಲುಪಲಿಲ್ಲ. ಅದಕ್ಕೆ ಕಾರಣವೇನೆಂದು ಗೊತ್ತಿಲ್ಲ. ಬಹುಶಃ ರಿಲೀಸ್ ವಿಷಯದಲ್ಲಿ ಸ್ವಲ್ಪ ಗೊಂದಲವಿತ್ತು. ಆ ಕಾರಣವೂ ಇರಬಹುದು’ ಎನ್ನುವುದು ಶಿವಣ್ಣ ಮಾತು. ಶಿವರಾಜಕುಮಾರ್ ಅವರಿಗೆ ಮತ್ತಷ್ಟು ಹೊಸ ಪ್ರಯೋಗದ ಕಥೆಗಳು ಹುಡುಕಿಕೊಂಡು ಬರುತ್ತಿವೆಯಂತೆ. ಎಲ್ಲಾ ಕಥೆಗಳನ್ನು ಕೇಳುತ್ತಿದ್ದು, ಇಷ್ಟವಾಗಿದ್ದನ್ನು ಒಪ್ಪಿಕೊಳ್ಳುವುದಾಗಿ ಹೇಳುತ್ತಾರೆ ಶಿವಣ್ಣ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಹೊಸ ಸೇರ್ಪಡೆ
ಕಡಬ, ಬೆಳ್ತಂಗಡಿ ಸೇರಿದಂತೆ ಹಲವೆಡೆ ಮಾದಕವಸ್ತು, ಅಕ್ರಮ ಮದ್ಯ ಮಾರಾಟ ವಿರುದ್ಧ ಕಾರ್ಯಾಚರಣೆ
IPL Mega Auction: ಮೊದಲ ದಿನದ ಹರಾಜಿನ ಬಳಿಕ ಎಲ್ಲಾ 10 ತಂಡಗಳು ಹೀಗಿವೆ ನೋಡಿ
Rashmika Mandanna: ಸಾವಿರಾರು ಜನರ ಮುಂದೆ ಮದುವೆ ಆಗುವ ಹುಡುಗನ ಬಗ್ಗೆ ಮಾತನಾಡಿದ ರಶ್ಮಿಕಾ
Stock Market: ಷೇರುಪೇಟೆ ಸೂಚ್ಯಂಕ 1,300 ಅಂಕ ಜಿಗಿತ; ಅದಾನಿ ಗ್ರೂಪ್ ಷೇರು ಮೌಲ್ಯ ಏರಿಕೆ
Bidar: ವಕ್ಫ್ ಹೋರಾಟ ಆರಂಭಿಸಿದ ಯತ್ನಾಳ್- ಜಾರಕಿಹೊಳಿ ತಂಡ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.