`ನಾತಿಚರಾಮಿ’ನಿರ್ದೇಶಕಮಂಸೋರೆಬಗ್ಗೆಸಂಚಾರಿ ವಿಜಯ್ ಹೇಳಿದ್ದೇನುಗೊತ್ತಾ?
Team Udayavani, Dec 25, 2018, 5:33 PM IST
`ನಾತಿಚರಾಮಿ’ ಚಿತ್ರ ಇದೇ ವಾರತೆರೆಗೆ ಬರುತ್ತಿದೆ. ಇವತ್ತಿಗೆ ಸಂಚಾರಿ ವಿಜಯ್ ರಾಷ್ಟ್ರಪ್ರಶಸ್ತಿ ಪಡೆದು, ಹತ್ತಾರು ಸಿನಿಮಾಗಳಲ್ಲಿ ನಾಯಕನಟನಾಗಿ ನಟಿಸೋ ಮೂಲಕ ಇಡೀ ಜಗತ್ತಿಗೇ ಗೊತ್ತಾಗಿದ್ದಾರೆ. `ಹರಿವು’ ಎನ್ನುವ ರಾಷ್ಟ್ರ ಪ್ರಶಸ್ತಿ ಪುರಸ್ಕೃತ ಸಿನಿಮಾದ ನಿರ್ದೇಶಕರಾಗಿ ಮನ್ಸೋರೆ ಕೂಡಾ ಸಿನಿ ಜಗತ್ತಿಗೆ ಪರಿಚಿತರಾಗಿದ್ದಾರೆ. ಇದೇ ಸಂಚಾರಿ ವಿಜಯ್ ಮತ್ತು ಮಂಸೋರೆ ಪರಸ್ಪರ ಪರಿಚಯವಾಗಿದ್ದು ಹೇಗೆ? ಅನ್ನುವುದರ ಕುತೂಹಲಕಾರಿ ಘಟನೆಯನ್ನು ಸ್ವತಃ ವಿಜಯ್ಹೀ ಗೆ ವಿವರಿಸುತ್ತಾರೆ:
ಸುಮಾರು 6 ವರ್ಷಗಳ ಹಿಂದೆ 11/11/11 ಎನ್ನುವ ಒಂದು ಚಿತ್ರಕ್ಕೆ ಎಲ್ಲರ ಹಾಗೆ ನಾನೂ ಸಹ ಸರದಿಯಲ್ಲಿ ನಿಂತು ಆಡಿಷನ್ ಕೊಡೋಕೆ ಅಂತ ಹೋಗಿದ್ದೆ, ಕಾರಣಾಂತರಗಳಿಂದ ಆಯ್ಕೆ ಆಗಲಿಲ್ಲ, ಬದಲಿಗೆ ಅದೇ ಜಾಗದಲ್ಲಿ ಮತ್ತೊಂದು ಚಿತ್ರಕ್ಕೆ ಅವಕಾಶ ಸಿಕ್ತು. ಆಗ ನಾನು ನೋಡೋಕೆ ಇನ್ನೂ ಕಾಲೇಜು ಹುಡುಗನ ಹಾಗೆ ಕಾಣುತ್ತಿದ್ದೆ ಅಂತ ಕೆಲವರು ಹೇಳೋರು. ಅಲ್ಲಿದ್ದ ಕಾಸ್ಟಿಂಗ್ ಡೈರೆಕ್ಟರ್ ಒಂದ್ ನಾಲಕ್ಕು ಸಾಲು ಸಂಭಾಷಣೆ ಕೊಟ್ಟು ಬೇರೆ ಬೇರೆ ರೀತಿಯಲ್ಲಿ ನಟನೆ ಮಾಡಿ ಅಂದ್ರು ನಾನು ಕಷ್ಟಪಟ್ಟು ಕಲಿತು ಅವರ ಮುಂದೆ ಮಾಡಿ ತೋರಿಸಿ ಏನು ಹೇಳ್ತಾರೋ ಅಂತ ಜಾತಕ ಪಕ್ಷಿಯ ಹಾಗೆ ಕಾಯ್ತಾ ಕೂತಿದ್ದೆ, ಇವರು ಒಳಗಡೆ ಏನೇನೋ ಲೆಕ್ಕಾಚಾರ ಹಾಕಿ ಬಂದವರೆ ‘ನೋಡಿ ವಿಜಯ್ ನಾನೊಂದು ಸಿನಿಮಾ ಮಾಡ್ತಾ ಇದ್ದೀನಿ ಅದರಲ್ಲಿ ಒಂದು ಪ್ರಮುಖ ಪಾತ್ರ ಇದೆ ನೀವು ಮಾಡ್ತೀರಿ ಅನ್ನೋ ನಂಬಿಕೆ ನನಗಿದೆ, ಮಾಡ್ತೀರಾ?’ ಅಂದ್ರು, ಮೊದಲೇ ಯಾವ್ದಾದ್ರು ಒಂದು ಪಾತ್ರ ಸಿಕ್ರೆ ಸಾಕಪ್ಪಾ ಅಂತ ಕಾಯ್ತಾ ಇದ್ದವನಿಗೆ ಸ್ವರ್ಗನೇ ಕೈಗೆ ಸಿಕ್ಕಷ್ಟು ಖುಷಿಯಾಗಿ ಹಿಂದೆ ಮುಂದೆ ನೋಡ್ದೇನೆ `ಹೂ’ ಅಂದೆ. ಅವರು ಕತೆ ಹೇಳ್ತಾ ‘ಇದರಲ್ಲಿ ನೀವು ಮಾಡಬೇಕಿರುವುದು ಉತ್ತರ ಕರ್ನಾಟಕದಲ್ಲಿನ ಬಡ ಕುಟುಂಬದ ರೈತ ಅದರಲ್ಲೂ ಏಳು ವರ್ಷದ ಮಗುವಿನ ತಂದೆಯ ಪಾತ್ರ’ ಅಂದರು, ನನಗೆ ಒಳಗೊಳಗೇ ಖುಷಿಯಾದರೂ ಸಹ ಯಾವ ಆಂಗಲ್ನಲ್ಲೀ ನಾನು ಏಳು ವರ್ಷದ ಮಗುವಿನ ತಂದೆಯ ಹಾಗೆ ಕಾಣಿಸುತ್ತೇನೆ ಅಂತ ಅವರನ್ನ ಕೇಳಿಯೇ ಬಿಟ್ಟೆ. ‘ನಿಮಗ್ಯಾಕೆ ನಾನು ನಿಮ್ಮತ್ರ ಮಾಡಿಸುತ್ತೇನೆ’ ಅಂತ ಹೇಳಿ ಮೊದಲನೇ ಬಾರಿಗೆ ಒಂದು ಮುಖ್ಯ ಪಾತ್ರಕ್ಕೆ ಅವಕಾಶ ಕೊಟ್ಟು ಕೊನೆಗೂ ಆ ಪಾತ್ರ ನನ್ನ ಹತ್ತಿರ ಮಾಡಿಸಿ ಪ್ರೇಕ್ಷಕರಿಗೆ ಹತ್ತಿರಾವಾಗುವಂತೆ ಮಾಡಿದರು, ಜೊತೆಗೆ ಸಿನಿಮಾಕ್ಕೆ ರಾಷ್ಟ್ರಪ್ರಶಸ್ತಿ, ರಾಜ್ಯಪ್ರಶಸ್ತಿ ಎರಡನ್ನೂ ಪಡೆದುಕೊಂಡರು, ಆ ಚಿತ್ರ ಬಹಳಷ್ಟು ಪ್ರೇಕ್ಷಕರ ಮನಸ್ಸನ್ನು ಕಲಕಿದ್ದು ಯೂಟ್ಯೂಬ್ನಲ್ಲಿ 2 ಲಕ್ಷಕ್ಕೂ ಹೆಚ್ಚು ಜನ ನೋಡಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ, ಆದರೆ ಥಿಯೇಟಗರ್ೆ ತರಬೇಕು ಅಂತ ಶತಪ್ರಯತ್ನ ಮಾಡಿ ಕೊನೆಗೂ ಆಗದೆ ಕೈಚೆಲ್ಲಿ ಕೂರಬೇಕಾಯ್ತು ಆ ಕೊರಗು ಈಗಲೂ ಇದೆ. ಇಷ್ಟು ಪೀಠಿಕೆ ಯಾಕೆ? ಯಾರಿಗೆ? ಅಂತೀರ ಅವರು ಮತ್ಯಾರು ಅಲ್ಲ ‘ಹರಿವು’ ಖ್ಯಾತಿಯ ‘ನಾತಿಚರಾಮಿ’ ಚಿತ್ರದ ನಿರ್ದೇಶಕ ‘ಮಂಸೋರೆ’.
ಸೂಕ್ಷ್ಮ ಸಂವೇದನೆಯ ಮನಸ್ಸಿನ ವ್ಯಕ್ತಿ ಇವರ ನನ್ನ ಪರಿಚಯ ಗೆಳೆತನ ಸುಮಾರು 6 ವರ್ಷಗಳಷ್ಟು ಹಳೆಯದ್ದು ‘ಹರಿವು’ ಸಿನಿಮಾ ಮಾಡುವಾಗ ನಾವು ಪಟ್ಟ ಕಷ್ಟ ಅನುಭವಿಸಿದ ನೋವು, ನಿಮರ್ಾಪಕರು ಸಿಗದೇ ಪರದಾಡಿದ ದಿನಗಳು ಕೊನೆಗೆ ನಮ್ಮ ಸ್ನೇಹಿತರನ್ನೇ ಕಾಡಿ ಬೇಡಿ ನಾವು ದಿನಗೂಲಿ ಕೆಲಸ ಮಾಡಿಯಾದರೂ ನಿಮ್ಮ ಹಣ ವಾಪಸ್ಸು ಕೊಡ್ತೀವಿ ಅಂತ ಮಾತು ಕೊಟ್ಟು ಹಣ ಹಾಕಿಸಿ ಸಿನಿಮಾ ಮಾಡಿದ ದಿನಗಳು ಇನ್ನೂ ಮನಸ್ಸಿನಲ್ಲಿ ಹಸಿಯಾಗಿವೆ. ಇಂಥ ಈ ‘ಮಂಸೋರೆ’ಯವರಿಗೆ ಈಗಲೂ ಸಹ ಅದೇ ತಾಳ್ಮೆ, ಅದೇ ಹಠ, ಅದೇ ಸಿನಿಮಾ ಧ್ಯಾನ ಎಳ್ಳಷ್ಟೂ ಬದಲಾಗಿಲ್ಲ ಮುಂದೆಯೂ ಹೀಗೆಯೇ ಇರಿ ಮತ್ತಷ್ಟು ಮಗದಷ್ಟು ಒಳ್ಳೆಯ ಚಿತ್ರಗಳನ್ನು ಮಾಡಿ ಅದರಲ್ಲಿ ನಮಗೊಂದು ಅವಕಾಶ ಕೊಡಿ.
ಈಗ ‘ಹರಿವು’ ನಂತರ ಮತ್ತೆ ‘ನಾತಿಚರಾಮಿ’ಯಲ್ಲಿ ಒಂದಾಗಿದ್ದೇವೆ ನಿಮಗೆಲ್ಲರಿಗೂ ಈ ಸಿನಿಮಾ ಖಂಡಿತ ಇಷ್ಟವಾಗುತ್ತೆ ಅನ್ನೋ ನಂಬಿಗೆ ಬಲವಾಗಿದೆ. ನಮ್ಮ ಮುಂದಿನ ಯೋಜನೆ ಯೋಚನೆಗಳಿಗೆ ನಿಮ್ಮ ಸಹಕಾರ ಕೊಡಿ ಅಂತ ಕೇಳ್ಕೋಳ್ತೇನೆ. ಇದು ಸಂಚಾರಿ ವಿಜಯ್ ಮಂಸೋರೆ ಮತ್ತು ತಮ್ಮ ಸಿನಿಮಾ ನಂಟಿನ ಬಗ್ಗೆ ಹೇಳುವ ಮಾತು. ಈ ವಾರ ತೆರೆಗೆ ಬರುತ್ತಿರುವ ನಾತಿಚರಾಮಿ ನಿರೀಕ್ಷೆಯಂತೆಯೇ ಪ್ರೇಕ್ಷಕರ ಮನ ಗೆದ್ದರೆ ಈ ಜೋಡಿ ಮತ್ತೊಂದು ಸಿನಿಮಾದಲ್ಲಿ ಒಂದಾಗೋದು ಖಚಿತ!
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.