“ನನಗೆ ಬೇಕಿರುವುದು ಪ್ರೀತಿಮಾತ್ರ, ಡೋಂಗಿ followersಗಳಲ್ಲ’
Team Udayavani, Feb 20, 2019, 10:24 AM IST
ಇತ್ತಿಚೆಗಷ್ಟೇ ನವರಸ ನಾಯಕ ಜಗ್ಗೇಶ್ ಅಭಿನಯದ “ಪ್ರೀಮಿಯರ್ ಪದ್ಮಿನಿ’ ಚಿತ್ರದ ಡಬ್ಬಿಂಗ್ ಮುಕ್ತಾಯವಾಗಿದ್ದು, ಜಗ್ಗೇಶ್ ಕೊಂಚ ಬಿಡುವಿನಲ್ಲಿದ್ದಾರೆ. ಅಲ್ಲದೇ ಜಗ್ಗೇಶ್ ಸಾಮಾಜಿಕ ಜಾಲತಾಣದಲ್ಲಿ ಸದಾ ಸಕ್ರಿಯರಾಗಿದ್ದು, ಇದೀಗ ಟ್ವೀಟರ್ ಖಾತೆಯ ನಕಲಿ ಫಾಲೋವರ್ ಗಳ ಬಗ್ಗೆ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದು, “ನನಗೆ ನನಗೆ ಡೋಂಗಿ million followers ಸಂಖ್ಯೆ ಬೇಕಿಲ್ಲಾ! ಬೇಕಿರುವುದು ಪ್ರೀತಿಯ ಆತ್ಮಗಳು’ ಎಂದು ಟ್ವೀಟ್ ಮಾಡಿದ್ದಾರೆ.
ಹೌದು, ಇತ್ತೀಚೆಗೆ ಜಗ್ಗೇಶ್, ಟ್ವೀಟರ್ ಖಾತೆಯನ್ನು ಫಾಲೋ ಮಾಡುತ್ತಿರುವ ಕೆಲವರು ಅವರ ಪ್ರತಿಯೊಂದು ಪೋಸ್ಟ್ ಬಗ್ಗೆಯೂ ಕುಹುಕದ ಮಾತುಗಳು ಮತ್ತು ವ್ಯರ್ಥ ಚರ್ಚೆ ಮಾಡುತ್ತಿರುವ ಬಗ್ಗೆ ಅಸಮಾಧಾನಗೊಂಡಿದ್ದು, ಈ ಬಗ್ಗೆ ಜಗ್ಗೇಶ್ ಸರಣಿ ಟ್ವೀಟ್ ಮಾಡಿದ್ದಾರೆ.
“ನಾನು ಸಾಮಾಜಿಕ ಜಾಲತಾಣ 2014ರಿಂದ ಬಳಸುತ್ತಿರುವೆ! ಉದ್ದೇಶ ನನ್ನ ಪ್ರೀತಿಸುವ ಆತ್ಮಗಳ ಅನ್ವೇಷಣೆಗೆ! ರಾಯರ ದಯೇ 4.8k ದೊರೆಕಿದ್ದಾರೆ ಧನ್ಯ! ಇವರ ಮದ್ಯೇ ಯಾರೋ fakeಗಳು ಸೇರಿ ನನ್ನಪ್ರತಿ twitಗು! ಅರ್ಥ! ಅಪಹಾಸ್ಯ! timepassಗೆ ಯತ್ನಿಸುತ್ತಾರೆ! ಈಗ ನನ್ನ ಆಯ್ಕೆ ಆತ್ಮೀಯರ ಉಳಿವಿಕೆ! timepassಗಳಿಂದ ದೂರ ಉಳಿಯೋದು! ಹಾಗಾಗಿ mute! blockಬಳಸುವೆ!’ ಎಂದು ಜಗ್ಗೇಶ್ ಹೇಳಿದ್ದಾರೆ.
ನಾನು ಸಾಮಾಜಿಕ ಜಾಲತಾಣ 2014ರಿಂದ ಬಳಸುತ್ತಿರುವೆ!
ಉದ್ದೇಶ ನನ್ನ ಪ್ರೀತಿಸುವ ಆತ್ಮಗಳ ಅನ್ವೇಷಣೆಗೆ!ರಾಯರ ದಯೇ 4.8k ದೊರೆಕಿದ್ದಾರೆ ಧನ್ಯ!ಇವರ ಮದ್ಯೇ ಯಾರೋ fakeಗಳು ಸೇರಿ ನನ್ನಪ್ರತಿtwit
ಗು!ಅರ್ಥ!ಅಪಹಾಸ್ಯ!timepassಗೆ ಯತ್ನಿಸುತ್ತಾರೆ!ಈಗ ನನ್ನ ಆಯ್ಕೆ ಆತ್ಮೀಯರ ಉಳಿವಿಕೆ!timepassಗಳಿಂದ
ದೂರ ಉಳಿಯೋದು!ಹಾಗಾಗಿ mute!blockಬಳಸುವೆ!— ನವರಸನಾಯಕ ಜಗ್ಗೇಶ್ (@Jaggesh2) February 19, 2019
ಅಲ್ಲದೇ “ನನಗೆ ಡೋಂಗಿ million followers ಸಂಖ್ಯೆ ಬೇಕಿಲ್ಲಾ! ಬೇಕಿರುವುದು ಪ್ರೀತಿಯ ಆತ್ಮಗಳು! ಭಾವನೆಗೆ ಬೇಕಿರುವುದು ಪ್ರೀತಿಯ ಆತ್ಮಗಳು ಮಾತ್ರ! ಅವು ನೂರಿದ್ದರು ಸಾಕು! ಕೋಟಿ ಯಾಕೆ ಬೇಕು! ಅಲ್ಲವೇ! ದುಡ್ಡು ಕೊಟ್ಟರೆ ಏನು ಬೇಕಾದರು ಸಿಗುತ್ತದೆ ! ಪ್ರೀತಿ ಒಂದುಬಿಟ್ಟು! ನನಗೆ ಬೇಕಿರುವುದು ಪ್ರೀತಿ ಮಾತ್ರ! ದುಡ್ಡು ತುಂಬ ನೋಡಿರುವೆ! ಸಂತೋಷ ಹುಡುಕುವ!’ ಎಂದು ಮತ್ತೊಂದು ಟ್ವೀಟ್ ಮಾಡಿದ್ದಾರೆ.
ಇಷ್ಟಕ್ಕೂ ಸುಮ್ಮನಾಗದ ನವರಸ ನಾಯಕ ಜಗ್ಗೇಶ್, “ನನಗೆ ಬೇಕಿರುವುದು ಪ್ರೀತಿಮಾತ್ರ! ಕಾರಣ ಬದುಕಿನ ಎಲ್ಲಾ ಮಗ್ಗಲು ಕಂಡು ಮಾಗಿದೆ ಮನಸ್ಸು! ಯಾರಿಗಾದರು ಪ್ರೀತಿಬಿಟ್ಟು ಬೇರೆ ಏನಾದರು ಬೇಕಿದ್ದರೆ! ನನ್ನ ಹಿಂಬಾಲಿಸುವುದು ವ್ಯರ್ಥ! ತಂದೆ ಹಿರಿಯನ ಪ್ರೀತಿಬೇಕಿದ್ದರೆ ಉಳಿಯಿರಿ! ವ್ಯರ್ಥ ಚರ್ಚೆ ಬೇಕಿದ್ದರೆ ಬೇರೆಜಾಗ ಹುಡುಕಿ! ನಾನು ವ್ಯೆರ್ಥ! I search fr loveable heart!idont need haters!’ ಎಂದು ಮಗದೊಂದು ಟ್ವೀಟ್‍ನಲ್ಲಿ ಬರೆದುಕೊಂಡಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Max Movie: ಸಖತ್ ರೆಸ್ಪಾನ್ಸ್ ಪಡೆದ ಕಿಚ್ಚನ ʼಮ್ಯಾಕ್ಸ್ʼ ಮೊದಲ ದಿನ ಗಳಿಸಿದ್ದೆಷ್ಟು?
Actor Health: ಸ್ವಲ್ಪ ಜರುಗಿದ ದರ್ಶನ್ ಬೆನ್ನುಮೂಳೆ; ತುರ್ತಾಗಿ ಆಪರೇಷನ್ ಇಲ್ಲ: ವೈದ್ಯರು
Prashanth Neel: ಸಲಾರ್‌ಗೆ ನಾನು ಇನ್ನಷ್ಟು ಶ್ರಮ ಹಾಕಬೇಕಿತ್ತು; ಪ್ರಶಾಂತ್ ನೀಲ್
UI Movie: ಉಪ್ಪಿ ಯುಐ ಮೆಚ್ಚಿದ ಯಶ್
Shivaraj Kumar: ಶಿವರಾಜ್ ಕುಮಾರ್ ಅವರ ಆಪರೇಷನ್ ಯಶಸ್ವಿಯಾಗಿದೆ – ಪತ್ನಿ ಗೀತಾ ಮಾಹಿತಿ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Gold Scam; ಪವಿತ್ರಾ ಸ್ನೇಹಿತೆ ಜತೆಗೆ ಕಾಣಿಸಿಕೊಂಡ ಚಿನ್ನ ವಂಚನೆ ಕೇಸ್ ಆರೋಪಿ ಶ್ವೇತಾ
Video: ತನ್ನ ಮನೆಯ ಮುಂದೆಯೇ ತನ್ನನ್ನು ಚಾಟಿಯಿಂದ ಹೊಡೆದುಕೊಂಡ ಅಣ್ಣಾಮಲೈ…
Substitutes: ರಾಜಕೀಯ ಬಿರುಗಾಳಿ ಎಬ್ಬಿಸಿದ ಮಧ್ಯಪ್ರದೇಶ ಶಿಕ್ಷಣ ಸಚಿವರ ಬದಲಿ ಹೇಳಿಕೆ
Ex PM:ಪ್ರಚಾರದಿಂದ ದೂರ- ದೇಶ ಕಂಡ ಸರಳ, ಸಜ್ಜನಿಕೆಯ ಮೊದಲ ಆರ್ಥಿಕ ತಜ್ಞ ಪ್ರಧಾನಿ
ಆನಂದಪುರ: ಬೆಳ್ಳಂಬೆಳಗ್ಗೆ ತೋಟಕ್ಕೆ ಕಾಡಾನೆಗಳ ಲಗ್ಗೆ… ಗ್ರಾಮಸ್ಥರಲ್ಲಿ ಆತಂಕ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.