“ಕಿರು ಮಿನ್ಕಣಜ’ ಅಂದ್ರೇನು..?
Team Udayavani, Nov 28, 2019, 6:00 AM IST
“ಕಿರು’ ಎನ್ನುವದಕ್ಕೆ ಅರ್ಥ ಎಲ್ಲರಿಗೂ ತಿಳಿದಿದೆ. ಆದರೆ “ಮಿನ್ಕಣಜ’ ಎಂಬ ಪದಕ್ಕೆ ಅರ್ಥ ಸಿಗುವುದಿಲ್ಲ. ಆದರೆ ಇವರೆಡು ಸೇರಿಕೊಂಡಿರುವ “ಕಿರು ಮಿನ್ಕಣಜ’ ಎನ್ನುವ ಹೆಸರಿನ ಚಿತ್ರವೊಂದು ಈ ವಾರ ತೆರೆಗೆ ಬರಲು ಸಿದ್ಧವಾಗಿದೆ. ಹಾಗಾದರೆ, ನಿಜವಾಗಿಯೂ ಈ ಶೀರ್ಷಿಕೆ ಅರ್ಥ ಏನು ಅನ್ನೋದಕ್ಕೆ ಚಿತ್ರತಂಡ “ಪೆನ್ ಡ್ರೈವ್’ ಎನ್ನುತ್ತದೆ. ಹೌದು, ಇಂಗ್ಲಿಷ್‌ನ “ಪೆನ್ ಡ್ರೈವ್’ ಎಂಬ ಪದಕ್ಕೆ ಕನ್ನಡದಲ್ಲಿ “ಕಿರು ಮಿನ್ಕಣಜ’ ಎನ್ನುತ್ತಾರಂತೆ.
ಸಾಮಾನ್ಯವಾಗಿ ಮೀನು ಚಿಕ್ಕದಾಗಿದ್ದರೂ ಅದರ ಹೊಟ್ಟೆ ಒಳಗೆ ಎಷ್ಟು ಮೊಟ್ಟೆಗಳು ಇರುತ್ತದೆಂದು ಯಾರು ಅಂದಾಜು ಮಾಡಲಿಕ್ಕೆ ಆಗುವುದಿಲ್ಲ. ಅದೇ ರೀತಿ ಪೆನ್ ಡ್ರೈವ್ ಕೂಡ ಇರುತ್ತದೆ. ಅದರಲ್ಲಿ ಏನು ಬೇಕಾದರೂ ಇರಬಹುದು. ಇದನ್ನೆ ಮನುಷ್ಯನ ಜೀವನಕ್ಕೆ ಹೋಲಿಸಿದರೆ, ಅಲ್ಲೂ ಅನೇಕ ಸಂಗತಿಗಳು ಸಿಗುತ್ತ ಹೋಗುತ್ತದೆ. ಈ ಚಿತ್ರದಲ್ಲಿ ಕೂಡ ಇದೇ ರೀತಿ ಸನ್ನಿವೇಶಗಳು ದಾಖಲಿಸುತ್ತಾ ಹೋಗುತ್ತದೆ.
ಒಂದು ವಸ್ತುವಿನ ಮೇಲೆ ಕೇಂದ್ರಿಕೃತಗೊಂಡು, ಅಪರಾಧಗಳು ಆಗುತ್ತಾ ಹೋಗುತ್ತದೆ. ಕ್ಲೈಮಾಕ್ಸ್‌ದಲ್ಲಿ ಈ ಟೈಟಲ್ ಇಡಲು ಕಾರಣವನ್ನು ಹೇಳಲಾಗಿದೆ ಎನ್ನುತ್ತದೆ ಚಿತ್ರತಂಡ. ಅಂದಹಾಗೆ, “ಕಿರು ಮಿನ್ಕಣಜ’ ಮರ್ಡರ್ ಮಿಸ್ಟರ್ ಜೊತೆಗೆ ಪ್ರೀತಿ, ಗೆಳೆತನ, ಆಕ್ಷನ್ ಮತ್ತು ಭಾವನೆಗಳು ತುಂಬಿರುವ ಸಂಪೂರ್ಣ ಮನರಂಜನೆ ಚಿತ್ರವಾಗಿದೆಯಂತೆ. ಇಲ್ಲಿಯವರೆಗೆ ಹಲವು ಚಿತ್ರಗಳಲ್ಲಿ ಸಹ ಕಲಾವಿದನಾಗಿ ಗುರುತಿಸಿಕೊಂಡಿದ್ದ ರವಿಚಂದ್ರ ಈ ಚಿತ್ರದ ಮೂಲಕ ನಾಯಕನಾಗಿ ಬಡ್ತಿ ಹೊಂದಿದ್ದಾರೆ. ರಿಯಾಲಿಟಿ ಷೋ ಖ್ಯಾತಿಯ ಅರ್ಜುನ್ ರಮೇಶ್ ಪೋಲೀಸ್ ಇನ್ಸೆಪೆಕ್ಟರ್ ಪಾತ್ರ ನಿರ್ವಹಿಸಿದ್ದಾರೆ.
ವರ್ಷಿತಾ ಚಿತ್ರಕ್ಕೆ ನಾಯಕಿ. ಖಳನಾಯಕನಾಗಿ ಜೀವನ್ ನೀನಾಸಂ ಕಾಣಿಸಿಕೊಂಡಿದ್ದಾರೆ. ಉಳಿದಂತೆ ಶ್ರೀಧರ ನಾಯಕ್, ಹರೀಶ್ ಮುಂತಾದವರು ಚಿತ್ರದಲ್ಲಿ ನಟಿಸಿದ್ದಾರೆ. ಮಂಜು. ಎಂ ಚಿತ್ರವನ್ನು ನಿರ್ದೇಶನ ಮಾಡಿದ್ದಾರೆ. ಚಿತ್ರದಲ್ಲಿ ಐದು ಹಾಡುಗಳಿಗೆ ಧ್ರುವರಾಜ್-ಗಂಧರ್ವ ಸಂಗೀತ ಸಂಯೋಜಿಸಿದ್ದಾರೆ. ಸುರೇಶ್ ಬಾಬು ಛಾಯಾಗ್ರಹಣ, ಸುಪ್ರಿತ್ ಸಂಕಲನ ಚಿತ್ರದಲ್ಲಿದೆ. ಮಂಡ್ಯಾ, ಪಾಂಡವಪುರ ಮೊದಲಾದ ಕಡೆಗಳಲ್ಲಿ ಚಿತ್ರದ ಚಿತ್ರೀಕರಣ ನಡೆಸಲಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Vande Bharat Sleeper Train: ಪರೀಕ್ಷಾರ್ಥ ಓಡಾಟದಲ್ಲಿ ಗಂಟೆಗೆ 180 ಕಿ.ಮೀ ವೇಗ
Suraj Revanna ಎಲ್ಲೇ ಹೋದ್ರೂ ಕಿತಾಪತಿ ಮಾಡಿ ಬರ್ತಾರೆ: ಶ್ರೇಯಸ್ ಪಟೇಲ್
Karnataka Govt. : ನಾಲ್ವರು ಡಿವೈಎಸ್‌ಪಿಗಳು ವಿವಿಧೆಡೆ ವರ್ಗಾವಣೆ
Cancer ತೀವ್ರಗತಿಯಲ್ಲಿ ವ್ಯಾಪಿಸುತ್ತಿರುವದು ಕಳವಳಕಾರಿ: ರಾಷ್ಟ್ರಪತಿ ದ್ರೌಪದಿ ಮುರ್ಮು
ಎಸ್.ಎಂ.ಕೃಷ್ಣ ಸಂಸ್ಮರಣಾ ವೇದಿಕೆಯಿಂದ ಪಂಚನಮನ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.