ದ್ವಾರಕೀಶ್ಗೆ ರೇಖಾ ಡ್ರೆಸ್ ಮೇಲಿನ ಆಸೆ ಎಂಥದ್ದು ಗೊತ್ತಾ?
Team Udayavani, Mar 21, 2017, 11:57 AM IST
ಮನುಷ್ಯ ಅಂದಮೇಲೆ ಆಸೆಗಳು ಸಹಜ. ಅದರಲ್ಲೂ ಒಬ್ಬೊಬ್ಬರಿಗೆ ಒಂದೊಂದು ಆಸೆಗಳು ಇದ್ದೇ ಇರುತ್ತೆ. ಅಂಥದ್ದೊಂದು ಆಸೆ ಹಿರಿಯ ನಟ, ನಿರ್ದೇಶಕ, ನಿರ್ಮಾಪಕ ದ್ವಾರಕೀಶ್ ಅವರಿಗೂ ಇತ್ತು. ಅದು ಬೇರೇನೂ ಅಲ್ಲ, ಬಾಲಿವುಡ್ ನಟಿ ರೇಖಾ ಅವರು ಹಾಕಿದ್ದ ಒಂದು ಡ್ರೆಸ್ ಮೇಲಿನ ಆಸೆಯದು!
ಹೌದು, ಸುಮಾರು ಮೂರು ದಶಕಗಳ ಹಿಂದಿನ ಸ್ವಾರಸ್ಯಕರ ಪ್ರಸಂಗವನ್ನು ಬಿಚ್ಚಿಟ್ಟರು ದ್ವಾರಕೀಶ್. ಸಂದರ್ಭ; “ಲಿಫ್ಟ್ ಮ್ಯಾನ್’ ಪತ್ರಿಕಾಗೋಷ್ಠಿ. ಅಷ್ಟಕ್ಕೂ ನಟಿ ರೇಖಾ ಹಾಕಿದ್ದ ಆ ಡ್ರೆಸ್ ಮೇಲೆ ದ್ವಾರಕೀಶ್ಗೆ ಯಾಕೆ ಆಸೆ ಬಂತು? ಅದನ್ನು ಅವರೇ ಹೇಳುತ್ತಾ ಹೋದರು.
“ನಾನು ರಜನಿಕಾಂತ್ ಮತ್ತು ಶ್ರೀದೇವಿ ಅಭಿನಯದ “ನಾನ್ ಅಡಿಮೈ ಇಲೈ’ ಎಂಬ ಸಿನಿಮಾವನ್ನು ಊಟಿಯಲ್ಲಿ ಚಿತ್ರೀಕರಿಸುತ್ತಿದ್ದೆ. ಆ ಸಂದರ್ಭದಲ್ಲಿ ಊಟಿಯಲ್ಲಿ ಗಿರೀಶ್ ಕಾರ್ನಾಡ್ ನಿರ್ದೇಶನದ ಶಶಿಕಪೂರ್ ನಿರ್ಮಾಣದ “ಉತ್ಸವ್’ ಸಿನಿಮಾ ನೋಡಿದ್ದೆ. ಆ ಚಿತ್ರದ ನಾಯಕಿ ರೇಖಾ. ಅವರು ಆ ಚಿತ್ರದಲ್ಲೊಂದು ಡ್ರೆಸ್ ಹಾಕಿದ್ದರು.
ಅವರು ಹಾಕಿದ್ದ ಆ ಡ್ರೆಸ್ ನನಗೆ ಬಹಳ ಇಷ್ಟವಾಗಿತ್ತು. ಸಿನಿಮಾ ನೋಡಿ, ರಾತ್ರಿ ಸುಮಾರು 8 ಗಂಟೆ ಹೊತ್ತಿಗೆ ನಾನು ನನ್ನ ಚಿತ್ರದ ನಾಯಕಿ ಶ್ರೀದೇವಿಗೆ ಫೋನ್ ಮಾಡಿ, “ಉತ್ಸವ್’ ಚಿತ್ರ ನೋಡಿದೆ. ಆ ಚಿತ್ರದಲ್ಲಿ ರೇಖಾ ಹಾಕಿರುವ ಡ್ರೆಸ್ ತುಂಬಾ ಚೆನ್ನಾಗಿದೆ. ನೀನು ಆ ರೀತಿಯ ಡ್ರೆಸ್ ಹಾಕಬೇಕು ಮರಿ ಅಂದೆ.
ಕೇವಲ ಎರಡೇ ದಿನದಲ್ಲಿ ರೇಖಾ ಹಾಕಿದ್ದ ಡ್ರೆಸ್ ರೀತಿಯದ್ದೇ ಒಂದು ಡ್ರೆಸ್ ರೆಡಿಯಾಗಿ ಸೆಟ್ಗೆ ಬಂತು. ಅದಾಗಿ ಎರಡೇ ನಿಮಿಷದಲ್ಲಿ ಒಬ್ಟಾತ ಪಕ್ಕ ಬಂದು ನಿಂತ. ಒಂದು ಚೀಟಿ ಕೊಟ್ಟ. ಇದೇನಪ್ಪಾ ಅಂದೆ. ಅದಕ್ಕವನು ಡ್ರೆಸ್ ಬಿಲ್ ಅಂದ. ಚೀಟಿ ನೋಡಿದರೆ 1.43 ಲಕ್ಷ ಬಿಲ್ ಇತ್ತು. ಅದೇ ಸಿನಿಮಾ’ ಎಂದು ಹೇಳಿ ಹಾಗೊಂದು ಸೆ¾„ಲ್ ಕೊಟ್ಟರು ದ್ವಾರಕೀಶ್.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.