ಸಮಯ ಬಂದಾಗ ನಾನೇ ವಿವರ ಕೊಡುತ್ತೇನೆ: ದರ್ಶನ್
Team Udayavani, Oct 9, 2017, 4:03 PM IST
ದರ್ಶನ್ ಅವರ 50ನೇ ಚಿತ್ರವಾದ “ಕುರುಕ್ಷೇತ್ರ’ದ ಚಿತ್ರೀಕರಣ ಹೈದರಾಬಾದ್‌ನಲ್ಲಿ ಭರದಿಂದ ಸಾಗುತ್ತಿದೆ. ಚಿತ್ರ ಮುಂದಿನ ವರ್ಷ ಬಿಡುಗಡೆಯಾಗಲಿದೆ. ಈ ಮಧ್ಯೆ ದರ್ಶನ್ ಅವರ 51 ಮತ್ತು 52 ಚಿತ್ರಗಳ ಬಗ್ಗೆ ಸಾಕಷ್ಟು ಚರ್ಚೆಯಾಗುತ್ತಿದೆ. ಈ ಹಿಂದೆ ದರ್ಶನ್ ಅವರ 51ನೇ ಚಿತ್ರವಾಗಿ ಸಂದೇಶ್ ನಾಗರಾಜ್ ನಿರ್ಮಾಣದ “ಒಡೆಯರ್’ ಬರಲಿದೆ ಎಂದು ಹೇಳಲಾಗಿತ್ತು.
ಈ ಮಧ್ಯೆ ದರ್ಶನ್ ಅವರ 51ನೇ ಚಿತ್ರವನ್ನು ಬಿ. ಸುರೇಶ ಮತ್ತು ಶೈಲಜಾ ನಾಗ್ ನಿರ್ಮಿಸುತ್ತಾರೆ ಎಂದು ಹೇಳಲಾಯಿತು. ಈಗ ಪುನಃ ದರ್ಶನ್ ಅವರ 51ನೇ ಚಿತ್ರವನ್ನು ಸಂದೇಶ್ ನಾಗರಾಜ್ ನಿರ್ಮಿಸುತ್ತಿದ್ದಾರೆ ಮತ್ತು ಅದನ್ನು ಎಂ.ಡಿ. ಶ್ರೀಧರ್ ನಿರ್ದೇಶಿಸಲಿದ್ದಾರೆ ಎಂಬ ಸುದ್ದಿ ಬಂದಿದೆ. ಈ ಊಹಾಪೋಹಗಳ ಬಗ್ಗೆ ಮಾತನಾಡಿರುವ ದರ್ಶನ್, “ಗಾಳಿಸುದ್ದಿಗಳು ಸದ್ಯಕ್ಕೆ ಬೇಡ.
ಸಮಯ ಬಂದಾಗ ಅದರ ಸಂಪೂರ್ಣ ವಿವರಗಳನ್ನು ಎಲ್ಲರಿಗೂ ತಿಳಿಸುತ್ತೇನೆ’ ಎಂದು ಟ್ವೀಟ್ ಮಾಡಿದ್ದಾರೆ. ಊಹಾಪೋಹಗಳ ಕುರಿತು ಟ್ವೀಟ್ ಮಾಡಿರುವ ಅವರು, “ತಾರಕ್’ ಚಿತ್ರವನ್ನು ಇಷ್ಟು ಪ್ರೀತಿಯಿಂದ ದೊಡ್ಡ ಮಟ್ಟದ ಯಶಸ್ಸು ನೀಡಿ ಒಪ್ಪಕೊಂಡಿರುವುದಕ್ಕೆ ಎಲ್ಲರಿಗೂ ನಮ್ಮ ತಂಡದಿಂದ ಕೃತಜ್ಞತೆಗಳು. ನಿಮ್ಮ ಪ್ರೀತಿ-ಪ್ರೋತ್ಸಾಹ ನಮ್ಮಂಥ ಚಿಕ್ಕ ಕಲಾವಿದರ ಮೇಲೆ ಸದಾ ಇರಲಿ.
“ತಾರಕ್’ ಆದಮೇಲೆ ನನ್ನ 50ನೇ ಚಿತ್ರ “ಕುರುಕ್ಷೇತ್ರ’. ಅದರ ವಿವರ ಕೆಲವು ತಿಂಗಳ ನಂತರ ನಾನೇ ತಿಳಿಸುವೆ. ನಾನು ಕಂಡ ಹಾಗೆ ಮೀಡಿಯಾದಲ್ಲಿ, ಸಾಮಾಜಿಕ ತಾಣಗಳಲ್ಲಿ ನನ್ನ 51, 52. 53ನೇ ಚಿತ್ರಗಳ ಬಗ್ಗೆ ಅನವಶ್ಯಕ ಚರ್ಚೆಗಳು ಮತ್ತು ಗಾಳಿಸುದ್ದಿಗಳು ಸದ್ಯಕ್ಕೆ ಬೇಡ. ಸಮಯ ಬಂದಾಗ ಅದರ ಸಂಪೂರ್ಣ ವಿವರಗಳನ್ನು ಎಲ್ಲರಿಗೂ ತಿಳಿಸುತ್ತೇನೆ.
ಈಗ “ತಾರಕ್’ ಚಿತ್ರಕ್ಕೆ ಬೆನ್ನುತಟ್ಟಿ ನೀವು ತೋರುತ್ತಿರುವ ಪ್ರೀತಿಗೆ ನಾವು ಸದಾ ಚಿರಋಣಿ, ಎಲ್ಲರೂ ತಾರಕ್ ನೋಡಿ ಹರಸಿ – ನಿಮ್ಮ ದಾಸ ದರ್ಶನ್’ ಎಂದು ದರ್ಶನ್ ಟ್ವೀಟ್ ಮಾಡಿದ್ದಾರೆ. ದರ್ಶನ್ ಅವರೇ ಊಹಾಪೋಹಗಳಿಗೆ ಇತಿಶ್ರಿ ಹಾಡಿರುವಾಗ, ಇನ್ನಾದರೂ ಅವರ ಮುಂದಿನ ಚಿತ್ರಗಳ ಕುರಿತಾದ ಗಾಳಿಸುದ್ದಿಗಳು ನಿಲ್ಲುತ್ತವಾ ಎಂಬುದನ್ನು ಕಾದು ನೋಡಬೇಕು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಉಡುಪಿ ಶ್ರೀ ಕೃಷ್ಣ ಮಠದಲ್ಲಿ ಬೃಹತ್ ಗೀತೋತ್ಸವಕ್ಕೆ ಅದ್ದೂರಿ ಚಾಲನೆ|
ಹೊಸ ಸೇರ್ಪಡೆ
Surathkal: ಎಐಯಿಂದ ಉದ್ಯೋಗ, ನಂಬಿಕೆಗೆ ಕುತ್ತು: ಪ್ರೊ| ಗೋವಿಂದನ್ ರಂಗರಾಜನ್
Result: ಮಹಾರಾಷ್ಟ್ರದಲ್ಲಿ ಎನ್‌ಡಿಎಗೆ ಜಯಭೇರಿ; ಮೋದಿ ನಾಯಕತ್ವಕ್ಕೆ ಮನ್ನಣೆ: ನಳಿನ್
Mangaluru: ಗೊಂದಲ ಮೂಡಿಸುವ ಬಿಜೆಪಿಗೆ ತಕ್ಕ ಪಾಠ: ಕೆಪಿಸಿಸಿ ಪ್ರ.ಕಾರ್ಯದರ್ಶಿ ಪದ್ಮರಾಜ್
Putturu: ಬಜೆಟ್‌ನಲ್ಲಿ ಹೊರಡಿಸಿರುವ ಆದೇಶ ಅನುಷ್ಠಾನಿಸದೆ ಕೃಷಿಕರಿಗೆ ವಂಚನೆ: ಮಠಂದೂರು
Udupi: ಪೇಜಾವರ ಶ್ರೀವಿಶ್ವಪ್ರಸನ್ನತೀರ್ಥ ಸ್ವಾಮೀಜಿ -ಗೃಹ ಸಚಿವ ಅಮಿತ್ ಶಾ ಭೇಟಿ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.