“ವಿಕಿಪೀಡಿಯ” ಚಿತ್ರ ವಿಮರ್ಶೆ: ಆಧುನಿಕ ಹುಡುಗರ ಜೀವನ ಚಿತ್ರಣ
Team Udayavani, Aug 29, 2022, 2:42 PM IST
ಆಧುನಿಕ ಹುಡುಗರ ಜೀವನ ಚಿತ್ರಣ ಇಂದಿನ ಸಿಟಿ ಹುಡುಗರ ಆಸೆ, ಅಭಿರುಚಿ, ಅವರ ಲೈಫ್ ಸ್ಟೈಲ್ ಹೇಗಿರುತ್ತದೆ ಅನ್ನೋದನ್ನು ಪ್ರತಿನಿತ್ಯ ಬಹುತೇಕ ಎಲ್ಲರೂ ಗಮನಿಸಿರುತ್ತೀರಿ. ಇಂಥದ್ದೇ ಹುಡುಗರ ಪ್ರತಿರೂಪದಂತಿರುವ ಹುಡುಗ ವಿಕ್ಕಿ. ಸೆಲ್ ಫೋನ್ ಹುಟ್ಟಿದ ದಿನವೇ ಹುಟ್ಟಿದ ವಿಕ್ಕಿ, ಪೋಷಕರ ಹಂಗಿಲ್ಲದೇ ಬದುಕಬಲ್ಲೆ ಎಂಬ ಸವಾಲು ತೆಗೆದುಕೊಂಡು ಮನೆಯಿಂದ ಹೊರಬರುತ್ತಾನೆ. ಅಪ್ಪನ ದುಡಿಮೆಯಲ್ಲಿ ಆರಾಮಾಗಿದ್ದ ಹುಡುಗನೊಬ್ಬ ಇದ್ದಕ್ಕಿದ್ದಂತೆ ಬೀದಿಗೆ ಬಿದ್ದರೆ, ಅವನ ಬದುಕು ಏನಾಗುತ್ತದೆ? ಯುವಕರ ಕಲ್ಪನೆ ಮತ್ತು ವಾಸ್ತವ ಎರಡೂ ಜೀವನದಲ್ಲಿ ಹೇಗಿರುತ್ತದೆ? ಅನ್ನೋದರ ಚಿತ್ರಣ ಈ ವಾರ ತೆರೆಗೆ ಬಂದಿರುವ “ವಿಕಿಪೀಡಿಯ’ ಸಿನಿಮಾದ ಕಥಾಹಂದರ.
ಮೊದಲೇ ಹೇಳಿದಂತೆ, ಇದು ಇಂದಿನ ಜನರೇಶನ್‌ನ ಯುವಕರ ಕಥೆಯ ಸಿನಿಮಾ. ಫ್ರೆಂಡ್ಸ್, ಫ್ಯಾಮಿಲಿ, ಲವ್, ಲೈಫ್ ಸ್ಟೈಲ್, ಕಮಿಟ್‌ಮೆಂಟ್ ಹೀಗೆ ಹತ್ತಾರು ವಿಷಯಗಳನ್ನು ಜೋಡಿಸಿ ಒಂದು ನವಿರಾದ ಕಥೆಯನ್ನು ಮನಮುಟ್ಟುವಂತೆ ಸಿನಿಮಾದಲ್ಲಿ ಹೇಳಲಾಗಿದೆ. ಆದರೆ ಚಿತ್ರದ ಕಥೆಗೆ ತಕ್ಕಂತೆ, ಚಿತ್ರಕಥೆ ಮತ್ತು ನಿರೂಪಣೆ ನಿರ್ದೇಶಕರು ಇನ್ನಷ್ಟು ಗಮನ ನೀಡಿದ್ದರೆ, “ವಿಕಿಪೀಡಿಯ’ ಮತ್ತಷ್ಟು ಪರಿಣಾಮಕಾರಿಯಾಗಿ ಪ್ರೇಕ್ಷಕರನ್ನು ಮುಟ್ಟುವ ಸಾಧ್ಯತೆಗಳಿದ್ದವು.
ಉಳಿದಂತೆ ಯುವ ಪ್ರತಿಭೆಗಳಾದ ಯಶ್ವಂತ್, ಆಶಿಕಾ ಸೋಮಶೇಖರ್ ಮತ್ತು ಪೋಷಕ ಪಾತ್ರದಲ್ಲಿ ಮಂಜುನಾಥ್ ಹೆಗ್ಡೆ ಗಮನ ಸೆಳೆಯುತ್ತಾರೆ. ಒಟ್ಟಾರೆ ಸಣ್ಣ ಪುಟ್ಟ ಕೊರತೆಗಳ ಹೊರತುಪಡಿಸಿದರೆ, “ವಿಕಿಪೀಡಿಯ’ ವಾರಾಂತ್ಯದಲ್ಲಿ ಥಿಯೇಟರ್‌ನಲ್ಲಿ ಕುಳಿತು ನೋಡಿ ಆಸ್ವಾಧಿಸಬಹುದಾದ ಸಿನಿಮಾ ಎನ್ನಲು ಅಡ್ಡಿಯಿಲ್ಲ.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.