ಎವರ್ ರಿಮೇಕ್ ನಲ್ಲಿ ದಿಗಂತ್ ನಟಿಸ್ತಾರಾ ?
Team Udayavani, Apr 10, 2020, 1:02 PM IST
ಸ್ಪ್ಯಾನಿಷ್ನ ದಿ ಇನ್ವಿಸಿಬಲ್ ಗೆಸ್ಟ್ ಚಿತ್ರದಿಂದ ಸ್ಫೂರ್ತಿ ಪಡೆದು ಮಾಡಲಾದ ತೆಲುಗು ಚಿತ್ರ ಎವರು ಈಗ ಕನ್ನಡದಲ್ಲಿ ಮೂಡಿಬರುತ್ತದೆ ಎನ್ನಲಾಗುತ್ತಿದೆ. ಅಂದಹಾಗೆ, ತೆಲುಗಿನಲ್ಲಿ ಅದ್ವಿ ಸೇಶ್ ನಾಯಕ ನಟನಾಗಿ ಕಾಣಿಸಿಕೊಂಡ ಈ ಚಿತ್ರದ ಕನ್ನಡ ರಿಮೇಕ್ ನಲ್ಲಿ ನಟ ದಿಗಂತ್ ಕಾಣಿಸಿಕೊಳ್ಳಲಿದ್ದಾರೆ ಎಂಬ ಮಾತು ಗಾಂಧಿನಗರದಲ್ಲಿ ಜೋರಾಗಿ ಹರಿದಾಡುತ್ತಿದೆ.
ಹೌದು, ತೆಲುಗಿನಲ್ಲಿ ವೆಂಕಟ್ ರಾಮ್ ಜಿ ನಿರ್ದೇಶನದ ಕ್ರೈಮ್ -ಥ್ರಿಲ್ಲರ್ ಕಥಾಹಂದರದ ಎವರು 2019ರಲ್ಲಿ ತೆರೆಗೆ ಬಂದಿದ್ದು, ಈ ಚಿತ್ರ ಈಗ ಕನ್ನಡದಲ್ಲಿ ರಿಮೇಕ್ ಆಗಲಿದೆ ಎಂದು ಹೇಳಲಾಗುತ್ತಿದೆ. ಈ ಚಿತ್ರದ ಮೂಲಕ ತೆಲುಗಿನ ದೊಡ್ಡ ಚಿತ್ರ ನಿರ್ಮಾಣ ಸಂಸ್ಥೆಯೊಂದು ಕನ್ನಡ ಚಿತ್ರರಂಗ ಪ್ರವೇಶಿಸುತ್ತದೆ ಎಂದೂ ಹೇಳಲಾಗುತ್ತಿದೆ. ಬಹತೇಕ ತೆಲುಗಿನ ತಂತ್ರಜ್ಞರೇ ಈ ಚಿತ್ರದ ಕನ್ನಡ ಆವೃತ್ತಿಯಲ್ಲೂ ಕೆಲಸ ಮಾಡುತ್ತಿದ್ದು, ಈಗಾಗಲೇ ಈ ಚಿತ್ರದ ಪ್ರೀ-ಪ್ರೊಡಕ್ಷನ್ ಕೆಲಸಗಳು ತೆರೆಮರೆಯಲ್ಲಿ ನಡೆಯುತ್ತಿದೆ. ಎಲ್ಲ ಅಂದುಕೊಂಡಂತೆ ಆಗಿದ್ದರೆ, ಇಷ್ಟೊತ್ತಿಗಾಗಲೇ ಈ ಚಿತ್ರದ ಕುರಿತು ಅಧಿಕೃತ ಪ್ರಕಟಣೆ ಹೊರಬರ ಬೇಕಿತ್ತು. ಆದರೆ ಸದ್ಯಕ್ಕೆ ಕೋವಿಡ್ 19 ಕಾರಣದಿಂದಾಗಿ ಈ ಸುದ್ದಿ ಮುಂದೂಡಿದೆ ಎನ್ನಲಾಗಿದೆ.
ರೆಡ್ ಚಿಲ್ಲೀಸ್ ಎಂಟರ್ ಟೈನ್ಮೆಂಟ್ ಮತ್ತು ಅಜುರೆ ಎಂಟರ್ ಟೈನ್ಮೆಂಟ್ ಜಂಟಿ ಯಾಗಿ ನಿರ್ಮಿಸಿದ್ದ ಅಮಿತಾಬ್ ಬಚ್ಚನ್ ಮತ್ತು ತಾಪ್ಸಿ ಪನ್ನು ಅಭಿನಯದ ಹಿಂದಿ ಚಿತ್ರ ಬದ್ಲಾ ಕೂಡ ಇದೇ ಕಥೆಯನ್ನ ಆಧರಿಸಿದ ಚಿತ್ರವಾಗಿತ್ತು. ಇನ್ನು ಸದ್ಯಕ್ಕೆ ನಟ ದಿಗಂತ್, ಯೋಗರಾಜ್ ಭಟ್ ನಿರ್ದೇಶನದ ಗಾಳಿಪಟ-2, ಹುಟ್ಟುಹಬ್ಬದ ಶುಭಾಶಯ ಗಳು, ಮಾರಿಗೋಲ್ಡ್ ಸೇರಿದಂತೆ, ಇನ್ನೂ ಹೆಸರಿಡದ ಎರಡು – ಮೂರು ಚಿತ್ರಗಳಲ್ಲಿ ಅಭಿನಯಿಸುತ್ತಿದ್ದಾರೆ. ಒಟ್ಟಾರೆ ಈ ಚಿತ್ರ ಯಾವಾಗ ಶುರುವಾಗುತ್ತದೆ, ಚಿತ್ರದಲ್ಲಿ ದಿಗಂತ್ ಜೊತೆ ಯಾರೆಲ್ಲ ಇರುತ್ತಾರೆ ಅನ್ನೊದು ಇನ್ನಷ್ಟೇ ಗೊತ್ತಾಗ ಬೇಕಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.