ಕಿಟ್ಟಿ ಅಭಿನಯದ ಚಿತ್ರಗಳಿಗೆ ಮುಕ್ತಿ ಎಂದು?


Team Udayavani, Jun 7, 2017, 12:42 PM IST

kitty.jpg

ಸುಮಾರು ಎರಡು ವರ್ಷಗಳೇ ಆಗಿತ್ತು, ಶ್ರೀನಗರ ಕಿಟ್ಟಿ ಅಭಿನಯದ ಚಿತ್ರವೊಂದು ಬಿಡುಗಡೆಯಾಗಿ. ಬಿಡುಗಡೆಯಾದ ಕೊನೆಯ ಚಿತ್ರ ಎಂದರೆ ಅದು “ನಮಸ್ತೇ ಮೇಡಮ್‌’. ಅದಾದ ನಂತರ ಅವರ ಅಭಿನಯದ ಯಾವ ಚಿತ್ರವೂ ಬಿಡುಗಡೆಯಾಗಿರಲಿಲ್ಲ. ಈಗ ಇದೇ ತಿಂಗಳ 16ರಂದು ಕಿಟ್ಟಿ ಅಭಿನಯದ “ಸಿಲಿಕಾನ್‌ ಸಿಟಿ’ ಬಿಡುಗಡೆಯಾಗುತ್ತಿದೆ. ಇಷ್ಟಕ್ಕೂ ಈ ಗ್ಯಾಪ್‌ನಲ್ಲಿ ಕಿಟ್ಟಿ ಏನು ಮಾಡುತ್ತಿದ್ದರು ಎಂದರೆ, “ಬೈಟೆ ಕೊ ಕಾಮ್‌ ನಹೀ, ದೋ ರುಪಾಯಿ ಕಾ ಕಮಾಯಿ ನಹಿ …’ ಎಂದು ನಗುತ್ತಾರೆ ಅವರು.

ಕಿಟ್ಟಿ ಕಳೆದೆರೆಡು ವರ್ಷಗಳಿಂದ ಬಿಝಿಯಾಗಿದ್ದರು. ಅವರ ಅಭಿನಯದ ಒಂದಲ್ಲ ಒಂದು ಸಿನಿಮಾಗಳು ಸೆಟ್ಟೇರುತ್ತಲೇ ಇದ್ದವು. ಚಿತ್ರೀಕರಣ ನಡೆಯುತ್ತಲೇ ಇದ್ದವು. ಆದರೆ, ಯಾವೊಂದು ಚಿತ್ರ ಬಿಡುಗಡೆ ಮಾತ್ರ ಆಗಲಿಲ್ಲ ಎಂಬ ವಿಚಿತ್ರ. ಲೆಕ್ಕ ಹಾಕಿದರೆ, ಕಿಟ್ಟಿ ಅಭಿನಯದ ಎಂಟು ಚಿತ್ರಗಳು ವಿವಿಧ ಹಂತಗಳಲ್ಲಿ ನಿಂತಿವೆ. “ಅನಾರ್ಕಲಿ’, “ಪಾಪು’, “ಸುಬ್ರಹ್ಮಣಿ’, “ದ್ರೋಹ’, “ಶಂಕ್ರ’, “ಏ ರಾಮ್‌’, “ಕೆಟ್ಟವನು’ ಮತ್ತು “ಗೀತಾಂಜಲಿ’ ಚಿತ್ರಗಳು ಶುರುವಾಗಿ ಕಾರಣಾಂತರಗಳಿಂದ ಬಿಡುಗಡೆಯಾಗಿಲ್ಲ.

ಕೆಲವು ಚಿತ್ರಗಳ ಒಂದು ಹಾಡು ಚಿತ್ರೀಕರಣಗೊಂಡರೆ ಮುಗಿದಂತೆ. ಇನ್ನೂ ಕೆಲವು ಚಿತ್ರಗಳಿಗೆ ಕೆಲವು ದಿನಗಳ ಚಿತ್ರೀಕರಣ ಬಾಕಿ ಇದೆ. ಒಟ್ಟಾರೆ ಒಂದಲ್ಲ ಒಂದು ಕಾರಣಗಳಿಗೆ ಈ ಚಿತ್ರಗಳು ನಿಂತಿವೆ. ಈ ಎಲ್ಲಾ ಚಿತ್ರಗಳಿಂದ ಕಚ್ಚಿಕೊಂಡಿರುವ ಮೊತ್ತವೇ ಸುಮಾರು 16 ಕೋಟಿಯಷ್ಟು ಆಗಬಹುದು ಎಂದು ಅಂದಾಜಿಸುತ್ತಾರೆ ಅವರು. ಈ ಮಧ್ಯೆ ಅವರೇನು ಮಾಡುತ್ತಿದ್ದರು? ಎಂಬ ಪ್ರಶ್ನೆ ಸಹಜ. “ಬೈಟೆ ಕೊ ಕಾಮ್‌ ನಹೀ, ದೋ ರುಪಾಯಿ ಕಾ ಕಮಾಯಿ ನಹಿ ಎನ್ನುತ್ತಾರಲ್ಲ ಹಾಗೆ ಪರಿಸ್ಥಿತಿ.

ಒಂದಲ್ಲ ಒಂದು ಕೆಲಸಗಳಿವೆ. ಆದರೆ, ಹೊಸ ಚಿತ್ರಗಳನ್ನ ಒಪ್ಪೋಣ ಅಂದರೆ, ಬಾಕಿ ಇರುವ ಚಿತ್ರಗಳ ತಂಡದವರು ಬಂದು ಚಿತ್ರೀಕರಣ ಮಾಡೋಣ ಎಂದು ಬಿಟ್ಟರೆ? ಅದೊಂಥರಾ ಹಿಂಸೆ. ಒಂದೊಂದು ಚಿತ್ರಕ್ಕೆ ಒಂದೊಂದು ತರಹ ಗೆಟಪ್‌ಗ್ಳಿರುತ್ತವೆ. ಅದನ್ನು ಮೇಂಟೇನ್‌ ಮಾಡಬೇಕು. ಬದಲಾದರೆ ಆ ಚಿತ್ರಗಳಿಗೆ ಸಮಸ್ಯೆ. ಅದೇ ಕಾರಣಕ್ಕೆ ಹೊಸ ಚಿತ್ರಗಳನ್ನು ಒಪ್ಪಲಿಕ್ಕೂ ಆಗದೆ, ಹಳೆಯ ಚಿತ್ರಗಳನ್ನು ಬಿಡಲಿಕ್ಕೂ ಆಗದೆ ಸುಮ್ಮನೆ ಕೂತಿದ್ದೆ. ಗೆಲುವು-ಸೋಲು ಆಮೇಲೆ, ಮೊದಲು ಚಿತ್ರಗಳನ್ನು ಮುಗಿಸಿದರೆ ಸಾಕು’ ಎನ್ನುತ್ತಾರೆ ಅವರು.

ಹಾಗಾದರೆ, ಆ ಚಿತ್ರಗಳ ಗತಿಯೇನು ಎಂದರೆ? “ಒಬ್ಬೊಬ್ಬರನ್ನೇ ಕರೆದು ಮಾತಾಡಿಸುತ್ತೇನೆ. ಹೇಗಾದರೂ ಮಾಡಿ ಬಿಡುಗಡೆ ಮಾಡಿಸುವ ಪ್ರಯತ್ನ ಮಾಡುತ್ತೇನೆ’ ಎನ್ನುತ್ತಾರೆ ಅವರು. ಈ ಗ್ಯಾಪ್‌ನಲ್ಲಿ ಅವರು ಒಂದಿಷ್ಟು ಸುತ್ತಾಟ ನಡೆಸಿದರಂತೆ. ಅದರ ಜೊತೆಗೆ “ಮೋಡ ಕವಿದ ವಾತಾವರಣ’ ಎಂಬ ಹೊಸ ಚಿತ್ರವನ್ನು ಒಪ್ಪಿಕೊಂಡಿದ್ದಾರೆ. ಆ ಚಿತ್ರಕ್ಕಾಗಿಯೇ ಉದ್ದಗೂದಲು, ಗಡ್ಡ ಬಿಟ್ಟಿದ್ದಾರೆ. “ಚಿತ್ರ ತಡವಾಗುವುದಕ್ಕೆ ಸ್ವಲ್ಪ ಸಮಯವಿದೆ. ಟೆಸ್ಟ್‌ ಶೂಟ್‌ ಮಾಡುವ ಯೋಚನೆ ಇದೆ. ಪೂರ್ಣಚಂದ್ರ ತೇಜಸ್ವಿ ಸಂಗೀತ ಸಂಯೋಜಿಸುತ್ತಿದ್ದಾರೆ’ ಎಂದು ವಿವರ ಕೊಡುತ್ತಾರೆ ಕಿಟ್ಟಿ.

ಟಾಪ್ ನ್ಯೂಸ್

CT-Ravi

Congress: ಗ್ಯಾರಂಟಿಗಳ ಹಿಂಭಾರ, ಮುಂಭಾರ ಹೆಚ್ಚಾಗಿ ಮುಗ್ಗರಿಸುತ್ತಿದೆ ಸರಕಾರ: ಸಿ.ಟಿ.ರವಿ

Higher-Edu

Higher Education: ಕಾಲೇಜು ಸಿಬಂದಿ ರಜೆ ಹಾಕದೆ ಕೇಂದ್ರ ಕಚೇರಿಗೆ ಬರುವಂತಿಲ್ಲ

BJP_Cong

Local Bodies: ಸ್ಥಳೀಯ ಸಂಸ್ಥೆ ಉಪಚುನಾವಣೆ: ಕಾಂಗ್ರೆಸ್‌ 8, ಬಿಜೆಪಿ 3, ಪಕ್ಷೇತರ 1

newspaper

Medical Asist: ಪತ್ರಿಕಾ ವಿತರಕರಿಗೆ ವೈದ್ಯ ನೆರವು: 70 ವರ್ಷಕ್ಕೆ ವಯೋಮಿತಿ ಹೆಚ್ಚಳ

CM-Siddu-High-Court

MUDA Case: ಮುಡಾ ನಿವೇಶನ ಹಗರಣ ಸಿಬಿಐಗೆ: ಡಿ. 10ಕ್ಕೆ ವಿಚಾರಣೆ ಮುಂದೂಡಿಕೆ

High-Court

Order: ಮಗು ಆರೈಕೆ ರಜೆ: ಸಿಎಟಿ ಆದೇಶ ಎತ್ತಿಹಿಡಿದ ಹೈಕೋರ್ಟ್‌

Tamil-tahala

Pro Kabaddi: ಯೋಧಾಸ್‌ಗೆ ತಲೈವಾಸ್‌ ಆಘಾತ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

BBK11: ನಿಮ್ಮನ್ನು ಆಚೆ ಕಳ್ಸಿಯೇ ನಾನು ಹೋಗೋದು ಚೈತ್ರಾ ವಿರುದ್ಧ ಗುಡುಗಿದ ರಜತ್

BBK11: ನಿಮ್ಮನ್ನು ಆಚೆ ಕಳ್ಸಿಯೇ ನಾನು ಹೋಗೋದು ಚೈತ್ರಾ ವಿರುದ್ಧ ಗುಡುಗಿದ ರಜತ್

58758

Renukaswamy Case: ದರ್ಶನ್‌ ಜಾಮೀನು ಅರ್ಜಿ ವಿಚಾರಣೆ ನ.28ಕ್ಕೆ ಮುಂದೂಡಿದ ಹೈಕೋರ್ಟ್

Pani movie: ಕನ್ನಡದಲ್ಲಿ ಜೋಜು ಜಾರ್ಜ್‌ ಪಣಿ

Pani movie: ಕನ್ನಡದಲ್ಲಿ ಜೋಜು ಜಾರ್ಜ್‌ ಪಣಿ

Dasarahalli Kannada Movie: ದಾಸರಹಳ್ಳಿಯಲ್ಲಿ ಧರ್ಮ ಸಂಘರ್ಷ

Dasarahalli Kannada Movie: ದಾಸರಹಳ್ಳಿಯಲ್ಲಿ ಧರ್ಮ ಸಂಘರ್ಷ

9

Renukaswamy Case: ದರ್ಶನ್‌ ಜಾಮೀನಿಗೆ ಪ್ರಬಲ ವಾದ; ಸಂಜೆ 4ಗಂಟೆಗೆ ಮತ್ತೆ ವಿಚಾರಣೆ

MUST WATCH

udayavani youtube

ಬಳಂಜದ ಪುಟ್ಟ ಪೋರನ ಕೃಷಿ ಪ್ರೇಮ | ಕಸಿ ಕಟ್ಟುವಿಕೆಯಲ್ಲಿ ಬಲು ಪರಿಣಿತ ಈ 6 ನೇ ತರಗತಿ ಬಾಲಕ

udayavani youtube

ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು

udayavani youtube

ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು

udayavani youtube

ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?

udayavani youtube

ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್‌ |

ಹೊಸ ಸೇರ್ಪಡೆ

ban

Kumble: ಹೆತ್ತವರನ್ನೇ ಕೊಠಡಿಯಲ್ಲಿ ಕೂಡಿ ಹಾಕಿದ ಪುತ್ರಿ

CT-Ravi

Congress: ಗ್ಯಾರಂಟಿಗಳ ಹಿಂಭಾರ, ಮುಂಭಾರ ಹೆಚ್ಚಾಗಿ ಮುಗ್ಗರಿಸುತ್ತಿದೆ ಸರಕಾರ: ಸಿ.ಟಿ.ರವಿ

Higher-Edu

Higher Education: ಕಾಲೇಜು ಸಿಬಂದಿ ರಜೆ ಹಾಕದೆ ಕೇಂದ್ರ ಕಚೇರಿಗೆ ಬರುವಂತಿಲ್ಲ

BJP_Cong

Local Bodies: ಸ್ಥಳೀಯ ಸಂಸ್ಥೆ ಉಪಚುನಾವಣೆ: ಕಾಂಗ್ರೆಸ್‌ 8, ಬಿಜೆಪಿ 3, ಪಕ್ಷೇತರ 1

newspaper

Medical Asist: ಪತ್ರಿಕಾ ವಿತರಕರಿಗೆ ವೈದ್ಯ ನೆರವು: 70 ವರ್ಷಕ್ಕೆ ವಯೋಮಿತಿ ಹೆಚ್ಚಳ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.