WWW.ಮೀನಾ ಬಜಾರ್.COM ಬಹು ನಿರೀಕ್ಷಿತ ಟ್ರೇಲರ್ ರಿಲೀಸ್ !
Team Udayavani, Feb 15, 2020, 3:15 PM IST
ಸ್ಯಾಂಡಲ್ ವುಡ್ ನಲ್ಲಿ ಟೈಟಲ್ ಮೂಲಕವೇ ಅಚ್ಚರಿ ಮೂಡಿಸಿದ್ದ ಚಿತ್ರ WWW.ಮೀನಾ ಬಜಾರ್. COM. ಈ ಚಿತ್ರದ ಕುತೂಹಲಕಾರಿ ಟ್ರೇಲರ್ ಬಿಡುಗಡೆ ಮಾಡಿದೆ ಚಿತ್ರತಂಡ. ಇಂಟ್ರಸ್ಟಿಂಗ್ ಸ್ಟೋರಿ ಲೈನ್ ಹೊಂದಿರುವ WWW.ಮೀನಾ ಬಜಾರ್.COM ಚಿತ್ರದ ಟ್ರೇಲರ್ ಗೆ ಪ್ರೇಕ್ಷಕರು ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ.
ರಾಣಾ ಸುನೀಲ್ ಕುಮಾರ್ ಸಿಂಗ್ ಈ ಚಿತ್ರಕ್ಕೆ ಆಕ್ಷನ್ ಕಟ್ ಹೇಳಿದ್ದಾರೆ. ಹೊಸದೇನನ್ನೋ ಹೇಳ ಹೊರಟಿರುವ WWW.ಮೀನಾ ಬಜಾರ್.COM ಮೀನಾ ಬಜಾರ್ ವಿಭಿನ್ನ ಜಾನರ್ ಸಿನಿಮಾವಾಗಿದ್ದು, ಇಲ್ಲಿ ಕ್ರೈಮ್, ಲವ್, ಸೆಂಟಿಮೆಂಟ್ ಹೀಗೆ ಎಲ್ಲಾ ಕಮರ್ಶಿಯಲ್ ಎಲಿಮೆಂಟ್ ಗಳು ಚಿತ್ರದಲ್ಲಿವೆ. ಏಕಕಾಲದಲ್ಲಿ ಕನ್ನಡ ಮತ್ತು ತೆಲುಗು ಭಾಷೆಯಲ್ಲಿ ಸಿನಿಮಾ ನಿರ್ಮಾಣವಾಗಿದ್ದು ಶೂಟಿಂಗ್ ಮುಗಿಸಿ ಸೆನ್ಸಾರ್ ಕೆಲಸವನ್ನೂ ಮುಗಿಸಿರುವ ಮೀನಾ ಬಜಾರ್ ಸದ್ಯದಲ್ಲೇ ತೆರೆಗೆ ಬರಲಿದೆ.
ವೈಭವಿ ಜೋಷಿ, ಶ್ರೀಜಿತಾ ಘೋಷ್, ಆ್ಯಂಡ್ರೇಡ್ ಮೂವರು ನಾಯಕಿಯರು ಚಿತ್ರದಲ್ಲಿ ನಟಿಸಿದ್ದಾರೆ. ರಾಜೇಶ್ ನಟರಂಗ, ಅರವಿಂದ್ ರಾವ್, ಚಿತ್ರದ ತಾರಾಬಳಗದಲ್ಲಿದ್ದಾರೆ. ನಿರ್ದೇಶಕ ರಾಣಾ ಸುನೀಲ್ ಕುಮಾರ್ ಸಿಂಗ್ ಕೂಡ ಚಿತ್ರದ ಪ್ರಮುಖ ಪಾತ್ರಕ್ಕೆ ಬಣ್ಣಹಚ್ಚಿರೋದು ವಿಶೇಷ. ಸಿಂಗ್ ಸಿನಿಮಾಸ್ ಬ್ಯಾನರ್ನಡಿ ನಿರ್ಮಾಣವಾಗಿರೋ ಈ ಚಿತ್ರಕ್ಕೆ ನಾಗೇಂದ್ರ ಸಿಂಗ್ ಬಂಡವಾಳ ಹೂಡಿದ್ದಾರೆ. ಮ್ಯಾಥಿವ್ ಕ್ಯಾಮೆರಾ ಕೈಚಳಕ, ಕದ್ರಿ ಮಣಿಕಾಂತ್ ಮ್ಯೂಸಿಕ್ ಚಿತ್ರಕ್ಕಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
BBK11: ಟಾಸ್ಕ್ ವಿಚಾರದಲ್ಲಿ ಫೈಯರ್ ಚೈತ್ರಾ ಠುಸ್.. ಮನೆಮಂದಿ ಸುಸ್ತು
BBK11: ಮತ್ತೆ ಬಿಗ್ ಬಾಸ್ ಮನೆಗೆ ಗೋಲ್ಡ್ ಸುರೇಶ್..? ವಿಡಿಯೋದಲ್ಲಿ ಸುಳಿವು
Sandalwood: ಕಣ್ಣಾ ಮುಚ್ಚೆ ಕಾಡೇ ಗೂಡೇ ತೆರೆಗೆ ಸಿದ್ಧ
Adhipatra Movie: ರೂಪೇಶ್ ಅಧಿಪತ್ರ ಫೆ.7ಕ್ಕೆ ಬಿಡುಗಡೆ
ShivaRajkumar: ಅಮೆರಿಕಾಕ್ಕೆ ತೆರಳುವ ಮುನ್ನ ಶಿವಣ್ಣನ ಮನೆಯಲ್ಲಿ ವಿಶೇಷ ಪೂಜೆ; ಕಿಚ್ಚ ಭಾಗಿ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.