ಯಾನ ಮುಂದುವರೆಸಿದ ಅನಂತ್‌ನಾಗ್-ಸುಹಾಸಿನಿ
Team Udayavani, Dec 11, 2017, 9:00 PM IST
ವಿಜಯಲಕ್ಷ್ಮಿ ಸಿಂಗ್ ನಿರ್ದೇಶನದ “ಯಾನ’ ಚಿತ್ರದ ಮೂಲಕ ಅನಂತ್‌ನಾಗ್ ಮತ್ತು ಸುಹಾಸಿನಿ ಮತ್ತೂಮ್ಮೆ ಒಟ್ಟಾಗಿ ನಟಿಸುತ್ತಿದ್ದಾರೆ. ಒಂದು ಕಾಲದ ಮೆಚ್ಚಿನ ಜೋಡಿ ಎಂದೇ ಗುರುತಿಸಿಕೊಂಡಿದ್ದ ಅನಂತ್‌ನಾಗ್ ಹಾಗೂ ಸುಹಾಸಿನಿ ಅವರ ಅಭಿನಯದ ಚಿತ್ರೀಕರಣಕ್ಕೆ ಈಗಾಗಲೇ ಚಾಲನೆ ಸಿಕ್ಕಿದೆ. ಇವರೊಂದಿಗೆ ವೈಭವಿ ಕೂಡ ಕಾಣಿಸಿಕೊಳ್ಳುತ್ತಿರುವುದು ವಿಶೇಷ.
ಈ ಹಿಂದೆ ನಿರ್ದೇಶಕರು ಕಥೆ ಬರೆಯುವಾಗಲೇ ಸುಹಾಸಿನಿ ಅವರನ್ನು ಮನಸ್ಸಲ್ಲಿಟ್ಟುಕೊಂಡು ಪಾತ್ರ ಹೆಣೆದಿದ್ದರಂತೆ. ದಶಕಗಳ ಕನಸು ಈಗ ಈಡೇರಿದ ಖುಷಿಯಲ್ಲಿ ನಿರ್ದೇಶಕರಿದ್ದಾರೆ. ವಿಜಯಲಕ್ಷ್ಮೀಸಿಂಗ್ ಹಾಗು ಸುಹಾಸಿನಿ ಅವರದು ಬಹುಕಾಲದ ಗೆಳೆತನ. ಹಾಗಿದ್ದರೂ ಅವರ ಮನಸ್ಸಿಗೆ ತೃಪ್ತಿ ಎನಿಸುವ ಪಾತ್ರ ಸೃಷ್ಟಿಸಿ, ತಮ್ಮ ಚಿತ್ರದಲ್ಲಿ ನಟಿಸುವಂತೆ ಮಾಡಲು ಅವರಿಗೆ ಸಾಧ್ಯವಾಗಿರಲಿಲ್ಲ.
ಈ ಹಿಂದೆ ಸುಹಾಸಿನಿ ಅವರೇ, “ಎಲ್ಲರಿಗೂ ಅವಕಾಶ ಕೊಡ್ತೀಯ. ನನ್ನನ್ನು ಹಾಕಿಕೊಂಡು ಸಿನಿಮಾ ಮಾಡೋದ್ಯಾವಾಗ’ ಅಂತ ಸಿಕ್ಕಾಗೆಲ್ಲಾ ಹೇಳುತ್ತಿದ್ದರಂತೆ. “ನಿನಗಾಗಿ ಒಳ್ಳೆಯ ಪಾತ್ರ ಹೆಣೆದಾಗ, ಖಂಡಿತ ನನ್ನ ಸಿನಿಮಾದಲ್ಲಿ ನೀನು ನಟಿಸುತ್ತೀಯ’ ಅಂದಿದ್ದರಂತೆ ವಿಜಯಲಕ್ಷ್ಮೀಸಿಂಗ್. ಈಗ “ಯಾನ’ ಮೂಲಕ ಅಂಥದ್ದೊಂದು ಅವಕಾಶ ಸಿಕ್ಕಿದೆ.
ಈ ಹಿಂದೆ “ಹೊಸ ನೀರು’ ಚಿತ್ರದಲ್ಲಿ ಅನಂತ್‌ನಾಗ್ ಅವರೊಂದಿಗೆ ಸುಹಾಸಿನಿ ನಟಿಸಿದ್ದರು. ಆ ಚಿತ್ರದಲ್ಲಿ ಇವರಿಬ್ಬರ ಜೋಡಿ ಮೋಡಿ ಮಾಡಿತ್ತು. ಆ ನಂತರವೂ ಒಂದಷ್ಟು ಸಿನಿಮಾಗಳಲ್ಲಿ ಈ ಜೋಡಿ ನಟಿಸಿತ್ತು. ಹಲವು ವರ್ಷಗಳ ಬಳಿಕ ಈಗ ಈ ಜೋಡಿ ಪುನಃ “ಯಾನ’ ಮೂಲಕ ಒಟ್ಟಿಗೆ ನಟಿಸುತ್ತಿದೆ. ವಿಶೇಷವೆಂದರೆ, ನಿರ್ದೇಶಕಿ ವಿಜಯಲಕ್ಷ್ಮಿ ಸಿಂಗ್ ನಟಿಸಿದ ಮೊದಲ ಸಿನಿಮಾ “ಶ್ರೀಮಾನ್’ನಲ್ಲಿ ಅನಂತ್‌ನಾಗ್ ನಾಯಕರಾಗಿದ್ದರು.
ಸುಹಾಸಿನಿ ಹಾಗೂ ಅನಂತ್‌ನಾಗ್ ಅವರಿಬ್ಬರ ಡೇಟ್ ಹೊಂದಿಸಿಕೊಂಡು ಇದೀಗ ಕ್ಯಾಮೆರಾ ಮುಂದೆ ನಿಲ್ಲಿಸುವಲ್ಲಿ ನಿರ್ದೇಶಕರು ಯಶಸ್ವಿಯಾಗಿದ್ದಾರೆ. ಅಂದಹಾಗೆ, “ಯಾನ’ ಅನಂತ್‌ನಾಗ್ ಮತ್ತು ಸುಹಾಸಿನಿ ಜೋಡಿಯಾಗಿ ನಟಿಸುತ್ತಿರುವ ಒಂಭತ್ತನೇ ಚಿತ್ರ. ಈ ಚಿತ್ರದಲ್ಲಿ ಇವರಿಬ್ಬರ ಪಾತ್ರವನ್ನು ನಿರ್ದೇಶಕರು ವಿಶೇಷವಾಗಿ ಹೆಣೆದಿದ್ದಾರಂತೆ.
ಹರೀಶ್ ಶೇರಿಗಾರ್, ಶರ್ಮಿಳಾ ಶೇರಿಗಾರ್, ವೈಭವಿ, ವೈನಿಧಿ, ವೈಸಿರಿ ಈ ಚಿತ್ರದ ನಿರ್ಮಾಪಕರು. ಸುನಿ ಹಾಗೂ ಮಧು.ಬಿ.ಎ ಸಂಭಾಷಣೆ ಬರೆದಿದ್ದಾರೆ. ಜೋಶ್ವಾ ಶ್ರೀಧರ್ ಸಂಗೀತ ನೀಡಿದ್ದಾರೆ. ಕರ್ಮ್ ಚಾವ್ಲಾ ಕ್ಯಾಮೆರಾ ಹಿಡಿದಿದ್ದಾರೆ. “ಯಾನ’ ಚಿತ್ರದಲ್ಲಿ ವೈಭವಿ, ವೈನಿಧಿ, ವೈಸಿರಿ, ಚಕ್ರವರ್ತಿ, ಸುಮುಖ, ಅಭಿಷೇಕ್, ಸಾಧುಕೋಕಿಲ, ರಂಗಾಯಣ ರಘು, ಚಿಕ್ಕಣ್ಣ, ರಾಮಕೃಷ್ಣ, ಸುಂದರರಾಜ್, ಸುಂದರ್, ವೀಣಾಸುಂದರ್, ಎಂ.ಎನ್.ಲಕ್ಷ್ಮೀದೇವಿ ಇತರರು ಇದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Davanagere: ಕಾಂತರಾಜ್ ವರದಿ ಸ್ವೀಕರಿಸಿ ಬಹಿರಂಗಪಡಿಸಿ: ಸಿಎಂಗೆ ಆಂಜನೇಯ ಮನವಿ
ಬೆಳಗಾವಿ: ಮಾನವ ಕಳ್ಳ ಸಾಗಾಣಿಕೆ-ಜೀತ ಪದ್ಧತಿ ದೊಡ್ಡ ಸಮಸ್ಯೆ
Belagavi: ಸಿಎಂ ಸಿದ್ದರಾಮಯ್ಯ ರಾಜೀನಾಮೆ ಕೊಡುವ ಸ್ಥಿತಿ ಬರಲಿದೆ: ಈರಣ್ಣ ಕಡಾಡಿ
Shimoga; ವಿಜಯೇಂದ್ರರನ್ನು ಕಟ್ಟಿ ಹಾಕಲು ಕಾಂಗ್ರೆಸ್ ನಿಂದ ಸುಳ್ಳು ಆರೋಪ: ರಾಘವೇಂದ್ರ
Anandapura: ಸಾಲ ಬಾಧೆ ತಾಳಲಾರದೆ ರೈತ ಆತ್ಮಹ*ತ್ಯೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.