ಟಗರುಗೆ ಯಶ್ ಮೆಚ್ಚುಗೆ
Team Udayavani, Mar 12, 2018, 11:18 AM IST
ಶಿವರಾಜಕುಮಾರ್ ಅಭಿನಯದ “ಟಗರು’ ಚಿತ್ರವನ್ನು ಕೆಲ ದಿನಗಳ ಹಿಂದೆ ನಟ ಸುದೀಪ್ ಅವರು ನೋಡಿ ಮೆಚ್ಚಿಕೊಂಡಿದ್ದರು. ಸೂರಿಯ ಹೊಸ ಬಗೆಯ ನಿರೂಪಣೆ, ಶಿವರಾಜಕುಮಾರ್ ಅವರ ನಟನೆ, ಚಿತ್ರದಲ್ಲಿ ಬರುವ ವಿಭಿನ್ನ ಪಾತ್ರಗಳನ್ನು ಶ್ಲಾಘಿಸಿದ್ದರು. ಈಗ ಮತ್ತೂಬ್ಬ ನಟನ ಸರದಿ. ಹೌದು, “ಟಗರು’ ಚಿತ್ರವನ್ನು ನಟ ಯಶ್ ಶನಿವಾರ ನೋಡಿದ್ದಾರೆ.
ಒರಾಯನ್ ಮಾಲ್‌ನಲ್ಲಿ “ಟಗರು’ ಚಿತ್ರವನ್ನು ಯಶ್ ವೀಕ್ಷಿಸಿ ಸಿನಿಮಾ ಬಗ್ಗೆ ಮೆಚ್ಚುಗೆಯ ಮಾತುಗಳನ್ನಾಡಿದ್ದಾರೆ. “ಸಿನಿಮಾ ಕಥೆ, ನಿರೂಪಣೆ ವಿಭಿನ್ನವಾಗಿದೆ. ಈ ತರಹದ ಒಂದು ಸಿನಿಮಾ ಮಾಡಲು ಧೈರ್ಯಬೇಕು. ಆ ತರಹದ ಒಂದು ವಿಭಿನ್ನ ಸ್ಕ್ರಿಪ್ಟ್. ಸೂರಿಯವರು ಅದ್ಭುತವಾಗಿ ಕಟ್ಟಿಕೊಟ್ಟಿದ್ದಾರೆ. ಚಿತ್ರದ ಪ್ರತಿ ಪಾತ್ರಗಳು ವಿಭಿನ್ನವಾಗಿವೆ.
ಅದರಲ್ಲೂ ಶಿವಣ್ಣ ಅವರನ್ನು ಈ ತರಹದ ಪಾತ್ರದಲ್ಲಿ ಈ ಹಿಂದೆ ಯಾವತ್ತೂ ನೋಡಿಲ್ಲ. ಸುಮಾರು ಕಡೆ ನನಗೆ ಅಣ್ಣಾವ್ರ ತರಹ ಕಾಣಿಸಿದರು. ಇದು ಕೇವಲ ಕನ್ನಡ ಪ್ರೇಕ್ಷಕರನ್ನು ಗಮನದಲ್ಲಿಟ್ಟುಕೊಂಡು ಮಾಡಿದ ಕಥೆಯಲ್ಲ. ವರ್ಲ್ಡ್ಕ್ಲಾಸ್ ಸಿನಿಮಾ ಎನ್ನಬಹುದು. ಪ್ರತಿಯೊಂದು ಸಿನಿಮಾವನ್ನು ಹೊಸ ಮೈಂಡ್‌ಸೆಟ್‌ನಿಂದ ನೋಡಬೇಕು.
ಈ ತರಹ ಸಿನಿಮಾ ನೋಡಲು ನಾವು ಒಂಚೂರು ಬೇರೆ ತರಹದ ಮೈಂಡ್ ಸೆಟ್‌ನಲ್ಲಿ ಬರಬೇಕು. ನಾನಂತೂ “ಟಗರು’ನ ತುಂಬಾ ಎಂಜಾಯ್ ಮಾಡಿದೆ’ ಎನ್ನುವ ಮೂಲಕ ಚಿತ್ರದ ಬಗ್ಗೆ ಮೆಚ್ಚುಗೆ ಸೂಚಿಸಿದ್ದಾರೆ. ಇನ್ನು, ಚಿತ್ರ ಈಗಾಗಲೇ ಅಮೆರಿಕಾದಲ್ಲೂ ಬಿಡುಗಡೆಯಾಗಿದ್ದು, ಅಲ್ಲೂ ಕುಡಾ ಚಿತ್ರಕ್ಕೆ ಮೆಚ್ಚುಗೆ ವ್ಯಕ್ತವಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.